Kingdom X Review: ವಿಜಯ್ ದೇವರಕೊಂಡ ಗೆದ್ರಾ? ಸೋತ್ರಾ? 'ಕಿಂಗ್‌ಡಮ್' ನೋಡಿ ನೆಟ್ಟಿಗರು ಏನಂದ್ರು?

ಸತತ ಸೋಲುಗಳಿಂದ ಕಂಗೆಟ್ಟಿದ್ದ ತೆಲುಗು ನಟ ವಿಜಯ್ ದೇವರಕೊಂಡ ಗೆಲುವಿಗಾಗಿ ಪರಿತಪಿಸುತ್ತಿದ್ದಾರೆ. ನಾಲ್ಕೈದು ಫ್ಲಾಪ್ ಸಿನಿಮಾಗಳ ಬಳಿಕ ವಿಜಯ್ ಅಳೆದು ತೂಗಿ 'ಕಿಂಗ್‌ಡಮ್' ಸ್ಕ್ರಿಪ್ಟ್ ಅನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಇದುವರೆಗೂ ಸಿನಿಮಾ ತಂಡ ರಿಲೀಸ್ ಮಾಡಿರುವ ತುಣುಕುಗಳಿಂದ ಹೈಪ್ ಕ್ರಿಯೇಟ್ ಆಗಿದೆ. ಆಂಧ್ರ ಹಾಗೂ ತೆಲಂಗಾಣದಲ್ಲಿ ಈ ಸಿನಿಮಾ ಭರ್ಜರಿಯ ಓಪನಿಂಗ್ ಸಿಗುತ್ತೆ. ಮುಂದೆ ಪ್ರೇಕ್ಷಕರು ಕೊಡುವ ಅಭಿಪ್ರಾಯದ ಮೇಲೆ ನಿಂತಿದೆ.

ವಿಜಯ್ ದೇವರಕೊಂಡ 'ಕಿಂಗ್‌ಡಮ್' ಸಿನಿಮಾವನ್ನು ತೆಲುಗಿನ ಜೊತೆಗೆ ತಮಿಳು ಹಾಗೂ ಹಿಂದಿ ಭಾಷೆಗೆ ಡಬ್ ಮಾಡಿ ಬಿಡುಗಡೆ ಮಾಡಲಾಗಿದೆ. ಇಂದು (ಜುಲೈ 30) ತೆರೆಕಂಡಿರುವ ಈ ಸಿನಿಮಾವನ್ನು ಈಗಾಗಲೇ ನೋಡಿ ಪ್ರೇಕ್ಷಕರು ಪ್ರತಿಕ್ರಿಯೆ ನೀಡುವುದಕ್ಕೆ ಶುರು ಮಾಡಿದ್ದಾರೆ. 'ಕಿಂಗ್‌ಡಮ್' ಈ ಸಿನಿಮಾವಾದರೂ ವಿಜಯ್ ದೇವರಕೊಂಡಗೆ ಗೆಲುವು ಕೊಡುತ್ತಾ? ಅನ್ನೋದು ಕುತೂಹಲದಲ್ಲಿ ಅವರ ಅಭಿಮಾನಿಗಳು ಇದ್ದಾರೆ.

Kingdom X Review  Vijay Deverakonda Shines Despite Slow Screenplay

ಈ ಸಿನಿಮಾದಲ್ಲಿ ವಿಜಯ್ ದೇವರಕೊಂಡ ಸ್ಪೈ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಸಿನಿಮಾವನ್ನು ಬಿಗ್ ಬಜೆಟ್‌ನಲ್ಲಿ ನಿರ್ಮಾಣ ಮಾಡಿದ್ದು, ವಿಜಯ್ ಬೀಸ್ಟ್ ಲುಕ್ ಕೊಟ್ಟಿದ್ದಾರೆ. ಶ್ರೀಲಂಕಾದ ಬ್ಯಾಕ್‌ಡ್ರಾಪ್‌ನಲ್ಲಿ ಸಿನಿಮಾದ ಕತೆಯನ್ನು ಹೆಣೆಯಲಾಗಿದೆ ಎಂದೂ ಹೇಳಲಾಗಿದೆ. ಹಾಗಿದ್ದರೆ, ಈಗಾಗಲೇ ಕಿಂಗ್‌ಡಮ್ ಸಿನಿಮಾವನ್ನು ನೋಡಿದವರು ಏನಂತಾರೆ? ನೆಟ್ಟಿಗರ ಅಭಿಪ್ರಾಯವೇನು? ವಿಜಯ್ ದೇವರಕೊಂಡಗೆ ಗೆಲುವು ಸಿಗುತ್ತಾ? ತಿಳಿಯುವುದಕ್ಕೆ ಮುಂದೆ ಓದಿ.

ಟೆಕ್ನಿಕಲಿ ಸಖತ್ ಸ್ಟ್ರಾಂಗ್

"ಕಿಂಗ್‌ಡಮ್ ಸಿನಿಮಾ ಆಕ್ಷನ್ ಡ್ರಾಮಾ ಸಿನಿಮಾ. ಟೆಕ್ನಿಕಲಿ ಸಿಕ್ಕಾಪಟ್ಟೆ ಸ್ಟ್ರಾಂಗ್ ಆಗಿದೆ. ಡ್ರಾಮಾ ತುಂಬಾನೇ ಚೆನ್ನಾಗಿದೆ. ಭಾವನಾತ್ಮಕವಾಗಿ ಈ ಸಿನಿಮಾ ಪ್ಲಾಟ್ ಆಗಿದೆ. ನಿರ್ದೇಶಕ ಗೌತಮ್ ತಿನ್ನನೂರಿ ಸಿನಿಮಾವನ್ನು ಎಂಗೇಜಿಂಗ್ ಆಗಿ ಇಡುವಲ್ಲಿ ಯಶಸ್ವಿಯಾಗಿದ್ದಾರೆ."

ಸಿನಿಮಾ ನೋಡೋವರೆಗೂ ನಿರೀಕ್ಷೆಯಿತ್ತು

" ವಿಜಯ್ ದೇವರಕೊಂಡ ಸಿನಿಮಾ ನೋಡುವವರೆಗೂ ನಿರೀಕ್ಷೆಯಿತ್ತು. ನಾನು ಗೌತಮ್ ತಿನ್ನನೂರಿ ಹೆಸರು ಕೇಳಿದಾಗಿನಿಂದ ಈ ಸಿನಿಮಾಗಾಗಿ ನಾನು ಕಾಯುತ್ತಿದ್ದೆ. ಈ ಸಿನಿಮಾವನ್ನು ನೋಡುವವರೆಗೂ ನಾನು ನಿರೀಕ್ಷಿಸಿದಂತೆ ಹೈಪ್ ಇತ್ತು. ಆದರೆ, ಸಿನಿಮಾ ನೋಡಿದ ಬಳಿಕ ಅದೆಲ್ಲ ತಲೆಕೆಳಗಾಯ್ತು. ತೀರಾ ಕೆಟ್ಟ ಸಿನಿಮಾ ಅನ್ನೋ ಹಾಗಿಲ್ಲ. ಆದರೆ, ನಾನು ಹೆಚ್ಚು ನಿರೀಕ್ಷೆಯನ್ನು ಮಾಡಿದ್ದೆ. ವಿಜಯ್ ದೇವರಕೊಂಡ ಚೆನ್ನಾಗಿ ನಟಿಸಿದ್ದಾರೆ. ಸತ್ಯದೇವ್ ನಟನೆ ಚೆನ್ನಾಗಿದೆ.


'ಕಿಂಗ್‌ಡಮ್' ಆವರೇಜ್ ಸಿನಿಮಾ

"ಕಿಂಗ್‌ಡಮ್ ಸಿನಿಮಾ ನನಗೆ ಆವರೇಜ್ ಸಿನಿಮಾ ಅಂತ ಅನಿಸಿತು. ನನಗೆ ಈ ಸಿನಿಮಾವನ್ನು ಇಷ್ಟ ಪಡುವುದಕ್ಕೆ ಪ್ರಯತ್ನ ಪಟ್ಟೆ ಆದರೆ, ಇಷ್ಟ ಆಗಲಿಲ್ಲ. ಅನಿರುದ್ಧ್‌ಗೆ ಏನಾಗಿದೆ. ಕೆಲವೇ ಬಿಟ್‌ಗಳು ಚೆನ್ನಾಗಿವೆ. ವಿಜಯ್ ದೇವರಕೊಂಡ ಚೆನ್ನಾಗಿ ನಟಿಸಿದ್ದಾರೆ. ಅದ್ಭುತವಾಗಿ ತೆರೆಮೇಲೆ ಕಾಣಿಸಿಕೊಂಡರೂ ಕ್ರೇಜಿ ಎನ್ನುವಂತಹದ್ದನ್ನು ಏನೂ ನಿರೀಕ್ಷಿಸುವುದಕ್ಕೆ ಆಗುವುದಿಲ್ಲ."

ವಿಜಯ್ ಕ್ರೇಜಿ ಪರ್ಫಾಮೆನ್ಸ್

"ದ್ವಿತಿಯಾರ್ಧದಲ್ಲಿ ಬೋಟ್ ಸೀನ್ ಬೆಂಕಿಯಾಗಿದೆ. ವಿಜಯ್ ದೇವರಕೊಂಡ ಪರ್ಫಾಮೆನ್ಸ್ ಅಂತೂ ಮ್ಯಾಡ್‌ನೆಸ್‌ನಿಂದ ಕೂಡಿದೆ. ಕ್ಯಾಮರಾಮ್ಯಾನ್ ಅಂತೂ ಅತ್ಯದ್ಬುತ. ಅನಿರುದ್ಧ್ ಈ ಸಿನಿಮಾವನ್ನು ವೈಯಕ್ತಿಕವಾಗಿ ತೆಗೆದುಕೊಂಡಿದ್ದು, ಬಿರುಗಾಳಿಯನ್ನೇ ಎಬ್ಬಿಸಿದ್ದಾರೆ. ಎರಡೂ ತೆಲುಗು ರಾಜ್ಯಗಳಲ್ಲಿ ಧಗೆ ಹೊತ್ತಿಸೋದು ಕನ್ಫರ್ಮ್" ಎಂದು ಮತ್ತೊಬ್ಬರು ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಕಿಂಗ್ ಪರ್ಫಾಮೆನ್ಸ್ ಅದ್ಭುತ

"ಕಿಂಗ್‌ಡಮ್ ಸಿನಿಮಾದಲ್ಲಿ ಕಿಂಗ್ ವಿಜಯ್ ದೇವರಕೊಂಡ ಪರ್ಫಾಮೆನ್ಸ್ ಅದ್ಭುತವಾಗಿದೆ. ಅನಿರುದ್ಧ್ ಹಿನ್ನೆಲೆ ಸಂಗೀತ ಅದ್ಭುತವಾಗಿದೆ. ದ್ವಿತಿಯಾರ್ಧದಲ್ಲಿ ಬೋಟ್‌ ಸೀನ್ ಸಿಕ್ಕಾಪಟ್ಟೆ ಸಖತ್ ಆಗಿದೆ. ಕಿಂಗ್‌ಡಮ್ ಅದ್ಬುತ ಸಿನಿಮಾ" ಎಂದು ವಿಜಯ್ ದೇವರಕೊಂಡ ಸಿನಿಮಾಗೆ 5ಕ್ಕೆ 4 ಅಂಕಗಳನ್ನು ಕೊಟ್ಟಿದ್ದಾರೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X