Sidlingu 2 Review:ಕಾರು.. ಟೀಚರು.. ಆಂಡಾಳಮ್ಮ ಜೊತೆ ಮತ್ತೆ ಬಂದ 'ಸಿದ್ಲಿಂಗು'; ಈಗ ಹೇಗಿದ್ದಾನೆ?

Rating:
3.0/5
Star Cast: Loose Mada Yogi, Sonu Gowda,
Director: Vijay Prasad

'ತೋತಾಪುರಿ', 'ಪೆಟ್ರೋಮ್ಯಾಕ್ಸ್' ಅಂತಹ ಸಿನಿಮಾ ನೋಡಿ ಡಬಲ್‌ ಮೀನಿಂಗು ಅಂತ ನಿರ್ದೇಶಕ ವಿಜಯ್ ಪ್ರಸಾದ್‌ಗೆ ಒಂದಿಷ್ಟು ಶಾಪ ಹಾಕಿದ್ರು. ಅದೇ ಸೀರಿಯಸ್ ಆಗಿ ತೆಗೆದುಕೊಂಡು ವಿಜಯ್ ಪ್ರಸಾದ್ ಡಬಲ್ ಮೀನಿಂಗ್ ಡೈಲಾಗ್ ಬರೆಯೋದಿಲ್ಲ ಅಂತ ಶಪತ ಮಾಡಿದ್ದರು. ಆದರೂ ಎಲ್ಲೋ ಒಂದ್ಕಡೆ ಅನುಮಾನ ಇದ್ದೇ ಇತ್ತು. ಆದರೆ, ವಿಜಯ್ ಪ್ರಸಾದ್ ನುಡಿದಂತೆ ನಡೆದಿದ್ದಾರೆ. 'ಸಿದ್ಲಿಂಗು 2' ಪ್ರೇಕ್ಷಕರಿಗೆ ಸಿಕ್ಕಿರೋ ಮೊದಲ ಭರವಸೆ.

ಎರಡು ಸಿನಿಮಾದಲ್ಲಿ ತಪ್ಪಾಗಿದ್ದರೂ ಇದೇ ನಿರ್ದೇಶಕ 'ಸಿದ್ಲಿಂಗು', 'ನೀರ್ ದೋಸೆ' ಅಂತಹ ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ ಅನ್ನೋ ಮರೆಯೋ ಹಾಗಿಲ್ಲ. ಈಗ ಮತ್ತೆ ಹಳೇ ಟ್ರ್ಯಾಕ್‌ಗೆ ಮರಳಿರೋ ನಿರ್ದೇಶಕರು ಮತ್ತೆ 'ಸಿದ್ದಿಂಗು'ನ ಕರ್ಕೊಂಡು ಬಂದಿದ್ದಾರೆ. 13 ವರ್ಷಗಳ ಹಿಂದೆ 'ಸಿದ್ಲಿಂಗು' ಎರಡು ಆಸೆಗಳು ಈಡೇರಿಸುವುದಕ್ಕೆ ನಿರ್ದೇಶಕರು ಬಿಟ್ಟಿರಲಿಲ್ಲ. ಪಾರ್ಟ್‌ 2ನಲ್ಲಾದರೂ ಅದು ಈಡೇರುತ್ತಾ? ಅನ್ನೋ ಕುತೂಹಲವಂತೂ ಇದ್ದೇ ಇದೆ.

Loose Mada Yogesh Sonu Gowda film Sidlingu 2 Review in Kannada and Rating

ಈ ಎಲ್ಲಾ ಕುತೂಹಲಕ್ಕೆ ಈಗ ತೆರೆಬಿದ್ದಿದೆ. ಪಾರ್ಟ್ 1 ನಲ್ಲಿ ಸಿದ್ಲಿಂಗು ಇಷ್ಟ ಪಟ್ಟ ಕಾರು ಸಿಕ್ಕಿರಲಿಲ್ಲ. ಟೀಚರು ಸಿಕ್ಕಿರಲಿಲ್ಲ. ಅದೇ ಗುಂಗಿನಲ್ಲಿರೋ 'ಸಿದ್ಲಿಂಗು'ಗೆ ಪಾರ್ಟ್‌ 2 ನಲ್ಲಿ ಮತ್ತೆ ಕಾರು, ಟೀಚರು ಆಸೆ ತೋರಿಸಿ ಕರ್ಕೊಂಡು ಬಂದು ಥಿಯೇಟರ್‌ಗೆ ಬಿಟ್ಟಿದ್ದಾರೆ. ಹಾಗಿದ್ದರೆ, 'ಸಿದ್ಲಿಂಗು 2' ಕಥೆಯೇನು? ಈ ಬಾರಿ ಪ್ಲಸ್ ಏನಿದೆ? ಮೈನಸ್ ಏನಿದೆ? ಡೈಲಾಗ್ ಹೇಗಿದೆ? ಹಾಡುಗಳು ಹೇಗಿವೆ? ಇವೆಲ್ಲನ್ನು ಈ ವಿಮರ್ಶೆಯಲ್ಲಿ ನೋಡೋಣ.

ಹೆಂಗವ್ನೆ 'ಸಿದ್ಲಿಂಗು'?

13 ವರ್ಷಗಳ ಹಿಂದೆ ನೀವು ನೋಡಿದ್ದ ಸಿದ್ಲಿಂಗು ಈಗ ಹೇಗಿದ್ದಾನೆ? ತಿಳಿದಕೊಳ್ಳೋ ಕುತೂಹಲ ಯಾಕಿರಲ್ಲ. ಅಂದು ಪ್ರೇಕ್ಷಕರಿಗೆ ಆ ಮಟ್ಟಿಗೆ ಇಷ್ಟ ಆಗಿದ್ದ. ಈಗ ಮತ್ತೆ ಸಿದ್ಲಿಂಗು ಪ್ರತ್ಯಕ್ಷ ಆಗಿದ್ದಾನೆ. ಅವನ ಕನಸು ಕೂಡ ಜಾಗೃತಗೊಂಡಿದೆ. ಕಾರು ಮತ್ತು ಟೀಚರ್ ಇಬ್ಬರೂ ಕಳ್ಕೊಂಡು ಮೆತ್ತಗಾಗಿದ್ದ 'ಸಿದ್ಲಿಂಗು'. ಅವನಿಗೆ ಈಗ ಮತ್ತೆ ಅದೇ ಹಳೆ ಕಾರು ಕಣ್ಣಿಗೆ ಬಿದ್ದಿದ್ದೆ. ಅದನ್ನು ಪಡೆದುಕೊಳ್ಳಬೇಕು ಅನ್ನೋ ಕನಸು ಮತ್ತೆ ಚಿರುಗಿದೆ. ಹೋರಾಟನೂ ಮುಂದುವರೆದಿದೆ. ಈ ಹಂತದಲ್ಲಿ ಮಂಗಳ ಟೀಚರ್ ಮರೆಸುವುದಕ್ಕೆ ನಿವೇದಿತಾ ಟೀಚರ್ ಸಿಕ್ಕಿದ್ದಾರೆ. ಒಂದಿಷ್ಟು ಹೊಸ ಪಾತ್ರಗಳ ಪರಿಚಯ ಆಗಿದೆ. ಅಂದ್ಹಾಗೆ, ಈ ಬಾರಿಯಾದರೂ ಕನಸಿನ ಕಾರು, ಟೀಚರ್ ಸಿದ್ಲಿಂಗುಗೆ ಸಿಗ್ತಾರಾ? ಅದಕ್ಕೆ ಥಿಯೇಟರ್‌ಗೆ ಹೋಗಲೇಬೇಕು.

Loose Mada Yogesh Sonu Gowda film Sidlingu 2 Review in Kannada and Rating

ವಿಜಯ್ ಪ್ರಸಾದ್-ಯೋಗಿ ಕಾಂಬಿನೇಷನ್

ತೆರೆಮೇಲೆ ಇರಲಿ.. ತೆರೆ ಹಿಂದೆ ಇರಲ್ಲಿ ಇಬ್ಬರೂ ಚೇಷ್ಠೆ-ಪೋಲಿ ಮಾಡುವುದರಲ್ಲಿ ಎಕ್ಸ್‌ಪರ್ಟ್. ಇದು ಕೆಲವೊಮ್ಮೆ ಅವರಿಗೆ ಉಲ್ಟಾ ಹೊಡೆದಿದ್ದೂ ಇದೆ. ಇಲ್ಲಿ ಇಬ್ಬರೂ ಪೆಟ್ಟು ತಿಂದು ಮಾಗಿದವರಂತೆ ಕಂಡಿದ್ದಾರೆ. ವಿಜಯ್ ಪ್ರಸಾದ್ ಡಬಲ್ ಮೀನಿಂಗ್ ಡೈಲಾಗ್‌ಗಳನ್ನು ಬಿಟ್ಟು ನೀಟ್ ಸಿನಿಮಾ ಮಾಡುವ ಯತ್ನ ಮಾಡಿದ್ದಾರೆ. ಇತ್ತ ಲೂಸ್ ಮಾದ ಯೋಗಿ ಪ್ರಬುದ್ಧ ನಟನೆ ಎದ್ದು ಕಾಣುತ್ತೆ. 13 ವರ್ಷಗಳ ಹಿಂದಿನ 'ಸಿದ್ಲಿಂಗು'ಗಿಂತಲೂ ಪ್ರಬುದ್ಧ ಎನ್ನಬಹುದು.

'ಸಿದ್ಲಿಂಗು' ಜೊತೆ ಹೊಸ ಪಾತ್ರ ಪರಿಚಯ

'ಸಿದ್ಲಿಂಗು' ಸಿನಿಮಾ ಇಷ್ಟ ಆಗಿದ್ದಕ್ಕೆ ಇದ್ದ ಹಲವು ಕಾರಣಗಳಲ್ಲಿ ಒಂದು ಪಾತ್ರಗಳು. ಸಿದ್ಲಿಂಗು ಜೊತೆ ತಳುಕು ಹಾಕೊಂಡಿದ್ದ ವಿಶಿಷ್ಠ ಪಾತ್ರಗಳು ಇಂದಿಗೂ ನೆನೆಪಿನಲ್ಲಿ ಉಳಿದಿವೆ. ಹಾಗೇ ಪಾರ್ಟ್ 2ನಲ್ಲೂ ಕೆಲವು ಹೊಸ ಪಾತ್ರಗಳ ಪರಿಚಯವನ್ನು ಮಾಡಿಸಲಾಗಿದೆ. ವಿಶಾಲು, ಸೀತಮ್ಮ, ಹಳೇ ಬೇವರ್ಸಿ, ಮಿಣಿ ಮಿಣಿ ಅಂತಹ ಪಾತ್ರಗಳ ಪರಿಚಯ ಆಗಿದೆ. ಜೊತೆಗೆ ಸಿನಿ ರಸಿಕರ ಫೇವರಿಟ್ ಆಂಡಾಳಮ್ಮನೂ ಬಂದು ಬಂದು ಹೋಗುತ್ತಾರೆ.

'ಸಿದ್ಲಿಂಗು' ಪ್ಲಸ್ ಏನು?

ಮತ್ತೆ 'ಸಿದ್ಲಿಂಗು' ನೋಡಬೇಕು ಅನ್ನೋರಿಗೆ ಈ ಸಿನಿಮಾ ಇಷ್ಟ ಆಗುತ್ತೆ. ಪೋಲಿ ಮಾತುಗಳಿಲ್ಲ.. ಕುಚೇಷ್ಠೆಗಳಿಲ್ಲ. ಹೀಗಾಗಿ ಕುಟುಂಬದ ಜೊತೆ ಹೋಗಿ ಸಿನಿಮಾ ನೋಡಬಹುದು. ಲೂಸ್ ಮಾದ ಯೋಗಿ, ಸೋನು ಗೌಡ, ಪದ್ಮಜಾ ರಾವ್, ಬಿ.ಸುರೇಶ್, ಮಹಾಂತೇಶ್ ಹಿರೇಮಠ್, ಮಂಜುನಾಥ್ ಹೆಗಡೆ, ಹೇಮಾ ಪಾತ್ರಗಳು ಮೆಚ್ಚುಗೆ ಪಡೆದುಕೊಳ್ಳಲು ಅರ್ಹ. ನೀಟ್ ಸಿನಿಮಾ ಕಟ್ಟಿ ಕೊಡುವ ಪ್ರಯತ್ನ ಮಾಡಿದ್ದಾರೆ ಎನ್ನಬಹುದು.

ಸಿದ್ಲಿಂಗು ಮೈನಸ್ ಏನು?

'ಸಿದ್ಲಿಂಗು' ಸಿನಿಮಾ ಮೇಕಿಂಗ್ ಕೆದುಕಿ ಹೇಳುವಂತಹದ್ದು ಏನು ಇಲ್ಲ. ಆದರೆ, ಗುರಿ ಮಾಡಿ ತೆಗಳುವಂತಹದ್ದೂ ಏನೂ ಇಲ್ಲ. ಇಂತಹ ಸಂದರ್ಭದಲ್ಲಿ ಅನೂಪ್ ಸೀಳಿನ್ ಸಂಗೀತ ಪ್ರೇಕ್ಷಕರಿಗೆ ವಿಶೇಷ ಅನುಭವ ನೀಡಬಹುದಿತ್ತು ಅನಿಸದೆ ಇರದು. ಸಿದ್ಲಿಂಗು ಪಾರ್ಟ್‌ 1ರಲ್ಲಿ ಇನ್ನೂ ಗುನುಗುವಂತಹ ಹಾಡುಗಳನ್ನು ನೀಡಿದ್ದ ಅನೂಪ್ ಈ ಬಾರಿ ನಿರಾಸೆ ಮೂಡಿಸಿದ್ದಾರೆ. ಇವರ ಜೊತೆ ಪ್ರೇಕ್ಷಕರ ಮುಖದಲ್ಲಿ ನಗು ತರಿಸುವುದಕ್ಕೆ ವಿಜಯ್ ಪ್ರಕಾಶ್ ಪರದಾಡಿದ್ದಾರೆ. ಡಬಲ್ ಮೀನಿಂಗ್ ಡೈಲಾಗ್ ಕೈ ಬಿಟ್ಟು ಪರದಾಡಿದ್ದಾರೇನೋ ಅಂತ ಅನಿಸುತ್ತೆ. ಹಾಗಂತ ತೆಗೆದು ಹಾಕುವಂತಹ ಸಿನಿಮಾ ಅಲ್ಲ. ಭಯ ಬಿಟ್ಟು ಕುಟುಂಬದೊಂದಿಗೆ ಹೋಗಿ ಸಿನಿಮಾ ನೋಡಬಹುದು.

More from Filmibeat

English summary
Loose Mada Yogesh Sonu Gowda film Sidlingu 2 Review in Kannada and Rating;
Read more about: yogesh review sandalwood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X