Guntur Kaaram Twitter Review: ಸ್ಪೈಡರ್ ಬಳಿಕ ಕೆಟ್ಟ ಸಿನಿಮಾ; ಮಹೇಶ್ ಫ್ಯಾನ್ಸ್ ಹೀಗ್ಯಾಕೆ ಅಂದ್ರು?
ಟಾಲಿವುಡ್ ಸೂಪರ್‌ಸ್ಟಾರ್ ಮಹೇಶ್ ಬಾಬು ಸಿನಿಮಾ 'ಗುಂಟೂರು ಖಾರಂ' ಅದ್ಧೂರಿಯಾಗಿ ಬಿಡುಗಡೆಯಾಗಿದೆ. ಮಹೇಶ್ ಬಾಬು ಫ್ಯಾನ್ಸ್ ಕೂಡ ಬಹಳ ನಿರೀಕ್ಷೆ ಇಟ್ಟುಕೊಂಡು ಸಿನಿಮಾ ನೋಡಿದ್ದಾರೆ. ಇದೇ ಮೊದಲ ಬಾರಿಗೆ ಪ್ರಿನ್ಸ್ ಜೊತೆ ಶ್ರೀಲೀಲಾ ಹೆಜ್ಜೆ ಹಾಕಿದ್ದಾರೆ. 10 ವರ್ಷಗಳ ಬಳಿಕ ಮಹೇಶ್ ಬಾಬುಗೆ ತ್ರಿವಿಕ್ರಮ್ ಆಕ್ಷನ್ ಕಟ್ ಹೇಳಿದ್ದಾರೆ.
ಮಹೇಶ್ ಬಾಬು ಜೊತೆಗೆ ರಮ್ಯಾ ಕೃಷ್ಣ, ಜಗಪತಿ ಬಾಬು, ಪ್ರಕಾಶ್ ರಾಜ್, ಜಯರಾಮ್ ಅಂತಹ ದಿಗ್ಗಜರು ನಟಿಸಿದ್ದಾರೆ. ಇಂದು (ಜನವರಿ 12) ವಿಶ್ವದಾದ್ಯಂತ 'ಗುಂಟೂರು ಖಾರಂ' ಸಿನಿಮಾ ಅದ್ಧೂರಿಯಾಗಿ ಬಿಡುಗಡೆಯಾಗಿದೆ. ಆಂಧ್ರ ಪ್ರದೇಶ, ತೆಲಂಗಾಣದಲ್ಲಿ ಸಿನಿಮಾಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ.

'ಗುಂಟೂರು ಕಾರಂ' ಸಿನಿಮಾ ನೋಡಿ ಬಂದವರು ಸೋಶಿಯಲ್ ಮೀಡಿಯಾಗಳಲ್ಲಿ ಪ್ರತಿಕ್ರಿಯೆ ನೀಡುವುದಕ್ಕೆ ಶುರು ಮಾಡಿದ್ದಾರೆ. ಆದರೆ, ಈ ಸಿನಿಮಾವನ್ನು ನೋಡಿದವರು ಗೊಂದಲದಲ್ಲಿದ್ದಾರೆ ಎಂದೆನಿಸುತ್ತಿದೆ. "ಮಹೇಶ್ ಬಾಬು ಒನ್ ಮ್ಯಾನ್ ಶೋ" ಎಂದಷ್ಟೇ ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ. 'ಗುಂಟೂರು ಕಾರಂ' ನೋಡಿ ನೆಟ್ಟಿಗರು ಏನಂದ್ರು? ತಿಳಿಯಲು ಮುಂದೆ ಓದಿ.
"ಮಹೇಶ್ ಬಾಬು ಫುಲ್ ಪ್ಲೋ"
"ಗುಂಟೂರು ಖಾರಂ ಸಿನಿಮಾ ಸೂಪರ್ ಅಗಿದೆ. ಮಹೇಶ್ ಬಾಬು ಫುಲ್ ಸ್ವಿಂಗ್‌ನಲ್ಲಿದ್ದಾರೆ. ಕುರ್ಚಿ ಹಾಡು ಮತ್ತು ನೆಕ್ಕೆಲಿಸು ಗೊಲಿಸು ಸಾಂಗ್‌ಗೆ ಇಡೀ ಥಿಯೇಟರ್ ಶೇಕ್ ಆಗುತ್ತೆ" ಎಂದು ನೆಟ್ಟಿಗರೊಬ್ಬರು ಕಮೆಂಟ್ ಮಾಡಿದ್ದಾರೆ.
"ಮಹೇಶ್ ಬಾಬು ಒನ್ ಮ್ಯಾನ್ ಶೋ"
" ಗುಂಟೂರು ಖಾರಂ ಅದ್ಭುತವಾಗಿದೆ. ಈ ಸಿನಿಮಾದಲ್ಲಿ ಮಹೇಶ್ ಬಾಬಿ ಅದ್ಭುತವಾಗಿ ನಟಿಸಿದ್ದಾರೆ. ಮಹೇಶ್ ಬಾಬು ಅವರದ್ದು ಒನ್ ಮ್ಯಾನ್ ಶೋ. ಇದು ಬ್ಲಾಕ್ ಬಸ್ಟರ್ ಸಿನಿಮಾ" ಎಂದು ಮತ್ತೊಬ್ಬ ನೆಟ್ಟಿಗರು ಕಮೆಂಟ್ ಮಾಡಿದ್ದಾರೆ.
"ಮಹೇಶ್ ಬಾಬು ರಕ್ತವನ್ನೇ ಸುರಿದಿದ್ದಾರೆ"
" ಗುಂಟೂರು ಖಾರಂ ಸಿನಿಮಾದಲ್ಲಿ ಮಹೇಶ್ ಬಾಬು ಅವರದ್ದು ಒನ್ ಮ್ಯಾನ್ ಶೋ. ನಿಜಕ್ಕೂ ಈ ಸಿನಿಮಾಗಾಗಿ ರಕ್ತವನ್ನೇ ಸುರಿಸಿದ್ದಾರೆ. ಇಡೀ ಸಿನಿಮಾವನ್ನು ತನ್ನ ಹೆಗಲ ಮೇಲೆ ಹೊತ್ತುಕೊಂಡು ಸಾಗಿದ್ದಾರೆ." ಎಂದು ಮತ್ತೊಬ್ಬರು ಕಮೆಂಟ್ ಮಾಡಿದ್ದಾರೆ.
"ಅತ್ಯಂತ ಕೆಟ್ಟ ಜಡ್ಜ್‌ಮೆಂಟ್"
ಸೈಡರ್ ಸಿನಿಮಾ ಬಳಿಕ ಅತ್ಯಂತ ಕೆಟ್ಟ ಜಡ್ಜ್‌ಮೆಂಟ್. ಕನಿಷ್ಠ ಕೆಂಟೆಂಟ್ ಕೂಡ ಇಲ್ಲ. ಸೆಂಟಿಮೆಂಟ್ ಕೂಡ ವರ್ಕ್‌ಔಟ್ ಆಗುತ್ತಿಲ್ಲ. ಅಣ್ಣ ಇಂತಹ ಸಿನಿಮಾವನ್ನು ಅದ್ಹೇಗೆ ಆಯ್ಕೆ ಮಾಡಿಕೊಂಡ್ರಿ" ಎಂದು ಮಹೇಶ್ ಬಾಬು ಫ್ಯಾನ್ಸ್ ಒಬ್ಬರು ಟ್ವೀಟ್ (ಎಕ್ಸ್) ಮಾಡಿದ್ದಾರೆ.
"ತ್ರಿವಿಕ್ರಮ್ ಅದೇ ಹಳೇ ಸ್ಟೋರಿ"
"ಗುಂಟೂರು ಖಾರಂ ಸಿನಿಮಾದ ಉದ್ದಕ್ಕೂ ಮಹೇಶ್ ಬಾಬು ಒನ್ ಮ್ಯಾನ್ ಆರ್ಮಿಯಾಗಿ ತೆಗೆದುಕೊಂಡು ಹೋಗಿದ್ದಾರೆ. ಅವರ ಚಾರ್ಮ್, ಮ್ಯಾನರಿಸಂ ತೆರೆಮೇಲೆ ಎದ್ದು ಕಾಣುತ್ತದೆ. ಈ ಸಿನಿಮಾದಲ್ಲಿ ಮಹೇಶ್ ಬಾಬು ಅತ್ಯದ್ಭುತ ಡ್ಯಾನ್ಸ್ ಮಾಡಿದ್ದಾರೆ. ಶ್ರೀಲೀಲಾ ಬ್ಯೂಟಿಫುಲ್ ಆಗಿ ಕಾಣಿಸಿಕೊಳ್ಳುತ್ತಾರೆ. ಇದು ತ್ರಿವಿಕ್ರಮ್ ಸಿನಿಮಾ ಅಂತ ಅನಿಸುತ್ತಿಲ್ಲ. ಅದೇ ಹಳೆ ಕಥೆ ಹೇಳಿದ್ದಾರೆ." ಎಂದು ಇನ್ನೊಬ್ಬ ನೆಟ್ಟಿಗರು ಹೇಳಿದ್ದಾರೆ. 5ಕ್ಕೆ 2.5 ರೇಟಿಂಗ್ ಕೊಡಬಹುದು. ಒಂದು ಭಾರಿ ಕುಟುಂಬದ ಜೊತೆ ನೋಡಬಹುದು" ಎಂದು ಇನ್ನೊಬ್ಬ ನೆಟ್ಟಿಗರು ಕಮೆಂಟ್ ಮಾಡಿದ್ದಾರೆ.


Click it and Unblock the Notifications











