'ನಾರಾಯಣ ನಾರಾಯಣ' ಎಲ್ಲವೂ ನಿಧಿಯಾಟ; ಗೌಡರು, ಪುರೋಹಿತರು, ಮೇಸ್ಟ್ರು ಜೊತೆ ಸುಂದರಿಯ ಪರದಾಟ
ನಾರಾಯಣ ನಾರಾಯಣ ಈ ವಾರ ತೆರೆಗೆ ಬಂದಿರೋ ಸಿನಿಮಾ. ಸಿನಿಮರಂಗ ಅಂದ್ಮೇಲೆ ಹೊಸಬರ ಸಿನಿಮಾಗಳು ಹೊಸ ರೀತಿ ಕಾನ್ಸೆಪ್ಟ್‌ಗಳು ಬರುತ್ತಲೇ ಇರುತ್ತವೆ. ಆದರೆ, ಈ ವಾರ ತೆರೆಗೆ ಬಂದಿರೋ 'ನಾರಾಯಣ ನಾರಾಯಣ' ಸಿನಿಮಾದ ಕಥೆ ಕಾಮನ್ ಆಗಿದೆ. ಆದರೆ, ಅದನ್ನು ಪ್ರಸೆಂಟ್ ಮಾಡಿರೋ ರೀತಿ ಮಾತ್ರ ವಿಭಿನ್ನ. 'ನಾರಾಯಣ ನಾರಾಯಣ' ಕಾಮಿಡಿ ಎಂಟರ್ಟೈನ್ಮೆಂಟ್ ಸಿನಿಮಾ ಆಗಿದ್ದು, ವೀಕ್ಷಕರಿಗೆ ಕಿಕ್ ಕೊಡುತ್ತೆ.
ನಾರಾಯಣಪುರ ಅನ್ನೋ ಒಂದು .ಈ ಊರು ಪೌರಾಣಿಕ ನಾಟಕಕ್ಕೆ ಫೇಮಸ್ಸು. ಸಾಮಾನ್ಯವಾಗಿ ಎಲ್ಲಾ ಹಳ್ಳಿಯಲ್ಲಿ ಇರುವಂತೆಯೇ ಊರಿಗೆ ಒಬ್ಬರು ಗೌಡರು, ದೇವಸ್ಥಾನ ಪುರೋಹಿತರು, ಅವರ ಜೊತೆ ನಾಟಕ ಕಲಿಸೋ ಮೇಸ್ಟ್ರು. ಮೇಸ್ಟ್ರುಗೆ ತಕ್ಕಂತೆ ನಾಲ್ಕು ಜನ ನಾಯಕರು. ಇಡೀ ನಾರಾಯಣಪುರಕ್ಕೆ ಒಬ್ಬಳೇ ಸುಂದರಿ. ಆಕೆಯೇ ನಾಯಕಿ. ಹೀಗೆ ಸಾಮಾನ್ಯ ಸಿನಿಮಾದಂತೆ ನಡೆಯೋ ಕಥೆ ಮಧ್ಯೆ ನಿಧಿ ವಿಚಾರ ಎಂಟ್ರಿ ಕೊಟ್ಮೇಲೆ ಏನೆಲ್ಲಾ ಅವಾಂತರವಾಗುತ್ತೆ ಅನ್ನೋದೇ ಸಿನಿಮಾ ಕಥೆ. ಅದರ ಮಧ್ಯೆ ಸೂಪರ್ ಆಗಿರೋ ಒಂದು ಮೆಸೇಜ್ ಕೂಡ ಇಟ್ಟಿದ್ದಾರೆ ನಿರ್ದೇಶಕ ಶ್ರೀಕಾಂತ್ ಕೆಂಚಪ್ಪ.

'ನಾರಾಯಣ ನಾರಾಯಣ' ಕಥೆ ಏನು?
'ನಾರಾಯಣ ನಾರಾಯಣ' ಶ್ರೀಕಾಂತ್ ಕೆಂಚಪ್ಪ ನಿರ್ದೇಶನ ಮಾಡಿರೋ ಸಿನಿಮಾದಲ್ಲಿ ಮಜಾ ಟಾಕೀಸ್ ಪವನ್, ದರ್ಶನ್, ಕೀರ್ತಿ ಕೃಷ್ಣ, ಪುನೀತ್ ಇನ್ನು ಹಲವು ಕಲಾವಿದರು ಅಭಿನಯ ಮಾಡಿದ್ದಾರೆ. ನಾರಾಯಣಪುರದ ಹುಡುಗರ ಜೀವನ ಹಾಗೂ ಅವರ ಲವ್ ಸ್ಟೋರಿ, ಅದರ ಜೊತೆಗೆ ನಿಧಿಗಾಗಿ ಈ ಹುಡುಗರ ಹುಡುಕಾಟ, ಈ ಹುಡುಗರ ಕಣ್ತಪ್ಪಿಸಿ ನಿಧಿ ಹೊಡೆಯೋ ಪ್ಲಾನ್ ಮಾಡೋದು ಯಾರು? ಇಡೀ ಊರಿನವರ ದಾರಿ ತಪ್ಪಿಸೋದು ಯಾರು? ನಿಧಿ ಊರ ಜನರ ಕೈ ಸಿಗುತ್ತಾ ಅಥವಾ ನಾಯಕರ ಕೈಗೆ ಸಿಗುತ್ತಾ? ನಿಧಿ ವಿಚಾರವಾಗಿ ಇರೋ ಅದ್ಬುತ ಮೆಸೇಜ್ ಏನು ಅನ್ನೋದೇ 'ನಾರಾಯಣ ನಾರಾಯಣ' ಸಿನಿಮಾದ ಕಥೆ.
ಹೇಗಿದೆ ಅಭಿನಯ?
'ನಾರಾಯಣ ನಾರಾಯಣ' ಸಿನಿಮಾದಲ್ಲಿ ಅಭಿನಯಿಸಿರೋದು ಬಹುತೇಕ ಹೊಸಬರೇ ಆಗಿದ್ದು ನಟ ದರ್ಶನ್, ಪುನೀತ್ ಕೆಲ ಸಿನಿಮಾದಲ್ಲಿ ಈಗಾಗಲೇ ಅಭಿನಯ ಮಾಡಿದ್ದು ಇಲ್ಲಿಯೂ ತಮ್ಮ ಪಾತ್ರಕ್ಕೆ ತಕ್ಕಂತೆ ನಟಿಸಿದ್ದಾರೆ. ಇನ್ನು ಕೃಷ್ಣನ ಪಾತ್ರದಲ್ಲಿ ನಟ ಪವನ್ ಇಡೀ ಸಿನಿಮಾ ಅದ್ಬುತವಾಗಿ ಅಭಿನಯಿಸಿದ್ದಾರೆ. ಇನ್ನು ನಾಯಕಿ ಬಿಗ್ ಸ್ಕ್ರೀನ್ ಮೇಲೆ ಮುದ್ದಾಗಿ ಕಾಣಿಸಿಕೊಳ್ಳುತ್ತಾರೆ.
ಸಿನಿಮಾದ ಫ್ಲಸ್ ಏನು?
'ನಾರಾಯಣ ನಾರಾಯಣ' ಕಾಮಿಡಿ ಎಂಟರ್ಟೈನ್ಮೆಂಟ್ ಚಿತ್ರವಾಗಿದ್ದು ಸಿನಿಮಾದಲ್ಲಿ ಪವನ್ ಅಭಿನಯ ಇರೋದ್ರಿಂದ ಪ್ರೇಕ್ಷಕರು ಪವನ್ ಕಡೆಯಿಂದ ಕಾಮಿಡಿ ಸೀನ್ಸ್ ಇರುತ್ತೆ ಅನ್ನೋ ನಿರೀಕ್ಷೆ ಇದೆ ಆದ್ರೆ ಇಲ್ಲಿ ಪವನ್ ಕಾಮಿಡಿ ಕ್ಯಾರೆಕ್ಟರ್ ಬಿಟ್ಟು ದೇವರ ಪಾತ್ರದಲ್ಲಿ ಮಿಂಚಿದ್ದಾರೆ...ನಿಧಿ ಆಸೆಯಿಂದಾಗಿ ಬೇರೆಯವರ ಜೀವನ ಹೇಗೆ ಆಳಾಗುತ್ತೆ ಅನ್ನೋಮೆಸೆಜ್ ಜನರಿಗೆ ಹತ್ತಿರವಾಗುತ್ತೆ...ಕಾಮಿಸಿ ಸಿನಿಮಾದಲ್ಲಿಯೀ ಕ್ಲೈಮ್ಯಾಕ್ಸ್ ನಲ್ಲಿರೋ ಎಮೋಷನಲ್ ಸ್ಟೋರಿ ಜನರಿಗೆ ಹತ್ತಿರವಾಗುತ್ತೆ..ಚಿತ್ರದ ಎಡರು ಹಾಡುಗಳು ಜನರನ್ನ ಥಿಯೇಟರ್ ನಲ್ಲಿ ಕೂರಿಸುತ್ತವೆ.

ಸಿನಿಮಾದ ಮೈನಸ್?
ನಾರಾಯಣ ನಾರಾಯಣ ಕಾಮಿಡಿ ಸಿನಿಮಾ ಆಗಿದ್ದು ಸಂಭಾಷಣೆಯಲ್ಲಿ ಒಂದಿಷ್ಟು ಗಟ್ಟಿತನ ಬೇಕಿತ್ತು...ಹಿನ್ನಲೆ ಸಂಗೀತ ಮತ್ತಷ್ಟು ಬೆಟರ್ ಆಗಬಹುದಿತ್ತು...ನಿರ್ದೇಶಕರಿಗೆ ಇದು ಚೊಚ್ಚಲ ಸಿನಿಮಾ ಆಗಿರೋದ್ರಿಂದ ಮತ್ತಷ್ಟು ಪಳಗಬೇಕು ಅನ್ನೋದು ಸ್ಕ್ರೀನ್ ಮೇಲೆ ಕಾಣುತ್ತೆ.
ಫೈನಲ್ ಹೇಗಿದೆ ಸಿನಿಮಾ?
ನಾರಾಯಣ ನಾರಾಯಣ ಸಿನಿಮಾ ಪ್ರೇಕ್ಷಕರನ್ನ ಸಖತ್ ಎಂಟರ್ಟೈನ್ ಮಾಡದೇ ಇದ್ದರು ವಾರಾಂತ್ಯದಲ್ಲಿ ಸಿನಿಮಾ ನೋಡಲೇಬೇಕು ಅನ್ನೋ ಪ್ರೇಕ್ಷಕರಿಗೆ ಒಂದು ಆಯ್ಕೆ ಆಗಬಹುದು ಈ ಹಿಂದೆ ಕನ್ನಡದಲ್ಲಿಯೇ ಬಂದಿರೋ ಭೂಮಿಗೆ ಬಂದ ಭಗವಂತ , ಮುಕುಂದ ಮುರಾರಿ ಸಿನಿಮಾ ರೀತಿಯಲ್ಲಿಯೇ ನಾರಾಯಣ ನಾರಾಯಣ ಸಿನಿಮಾ ಕೂಡ ನಿಲ್ಲಲಿದ್ದು ಒಂದೊಳ್ಳೆ ಬಜೆಟ್ ಹಾಕಿದ್ರೆ ಒಳ್ಳೇ ಕ್ವಾಲಿಟಿ ಮೇಕಿಂಗ್ ಸಿನಿಮಾ ಆಗ್ತಿತ್ತು ಅನ್ನೋದ್ರಲ್ಲಿ ಡೌಟೇ ಇಲ್ಲ.


Click it and Unblock the Notifications











