Empuraan Twitter Review:ಮೋಹನ್‌ಲಾಲ್-ಪೃಥ್ವಿರಾಜ್ ಸಿನಿಮಾ 'ಎಂಪುರಾನ್' ಮಾಸ್ಟರ್ ಆಗ್ತಿತ್ತು; ಮಿಸ್ ಆಗಿದ್ದು ಎಲ್ಲಿ?

ಮಲಯಾಳಂ ಚಿತ್ರರಂಗದಲ್ಲಿ ಟ್ರೆಂಡ್ ಹುಟ್ಟಾಕಿದ ಸಿನಿಮಾ 'ಲೂಸಿಫರ್'. ಮಲಯಾಳಂ ಸೂಪರ್‌ಸ್ಟಾರ್ ಮೋಹನ್‌ಲಾಲ್ ನಟಿಸಿ, ಫೃಥ್ವಿರಾಜ್ ಸುಕುಮಾರನ್ ನಿರ್ದೇಶಿಸಿರುವ ಈ ಸಿನಿಮಾ ಬಾಕ್ಸಾಫೀಸ್‌ನಲ್ಲಿಯೂ ಸಖತ್ ಆಗಿಯೇ ಸದ್ದು ಮಾಡಿತ್ತು. ಈಗ ಇದೇ 'ಲೂಸಿಫರ್' ಸಿನಿಮಾದ ಸೀಕ್ವೆಲ್ ರಿಲೀಸ್ ಆಗಿದೆ. ಕರ್ನಾಟಕದಲ್ಲಿ ಹೊಂಬಾಳೆ ಫಿಲ್ಮ್ಸ್ ಈ ಸಿನಿಮಾವನ್ನು ಬಿಡುಗಡೆ ಮಾಡಿದೆ.

ಈಗಾಗಲೇ 'ಲೂಸಿಫರ್ 2' (ಎಂಪುರಾನ್) ಸಿನಿಮಾ ನೋಡಿ ಪ್ರೇಕ್ಷಕರು ಹೊರಬಂದಿದ್ದಾರೆ. ಮೋಹನ್‌ಲಾಲ್ ಹಾಗೂ ಪೃಥ್ವಿರಾಜ್ ಸುಕುಮಾರನ್ ಜೋಡಿಯ ಈ ಸಿನಿಮಾ ಬಿಡುಗಡೆಗೂ ಮುನ್ನವೇ ಸಿಕ್ಕಾಪಟ್ಟೆ ಕ್ರೇಜ್ ಹುಟ್ಟಾಕಿತ್ತು. ಫಸ್ಟ್ ಡೇ ಫಸ್ಟ್ ಶೋ ನೋಡಿದ ಪ್ರೇಕ್ಷಕರು ತಮ್ಮ ಟ್ವಿಟರ್ (ಎಕ್ಸ್) ಖಾತೆಯಲ್ಲಿ ಸಿನಿಮಾ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಕೆಲವರಿಗೆ ಈ ಸಿನಿಮಾ ಇಷ್ಟ ಆಗಿದೆ. ಮತ್ತೆ ಕೆಲವರಿಗೆ ಇಷ್ಟ ಆಗಿಲ್ಲ. ಹಾಗಿದ್ದರೆ, ಈ ಸಿನಿಮಾ ಬಗ್ಗೆ ಟ್ವಿಟರ್‌ನಲ್ಲಿ ಹೇಗಿದೆ ರೆಸ್ಪಾನ್ಸ್ ಅಂತ ನೋಡೋಣ.

Malayalam actor Mohanlal Prithviraj Sukumaran film L2 Empuraan twitter review and response

ಕಥೆಯ ಕೊರತೆ

"ಮೊದಲಾರ್ಧ ನಿಧಾನಗತಿಯಲ್ಲಿ ಸಾಗುತ್ತೆ. ಪಾತ್ರಗಳನ್ನು ಪರಿಚಯ ಮಾಡಿಸುವುದರಲ್ಲಿಯೇ ಕಳೆದು ಹೋಗುತ್ತೆ. ಮೋಹನ್‌ಲಾಲ್ ಎಂಟ್ರಿ ಕೊಟ್ಟ ಬಳಿಕ ಸ್ವಲ್ಪ ಮಟ್ಟಿಗೆ ಎಂಗೇಜ್ ಆಗುತ್ತೆ. ದ್ವಿತೀಯಾರ್ಧ ಬೇರೆ ಬೇರೆ ಲೋಕೇಶ್‌ಗಳಿಗೆ ಶಿಫ್ಟ್‌ ಆಗುತ್ತೆ. ಆದರೆ, ಭಾವನಾತ್ಮಕವಾಗಿ ಕನೆಕ್ಟ್ ಆಗುವುದಕ್ಕೆ ಹಿಂದೆ ಬೀಳುತ್ತೆ. ಬರವಣಿಗೆ ಚೆನ್ನಾಗಿಲ್ಲ, ಕಳಪೆ ಸ್ಕ್ರೀನ್‌ಪ್ಲೇ, ಸಿನಿಮಾವನ್ನು ಸುಮ್ಮನೆ ಎಳೆದಿದ್ದಾರೆ ಎನಿಸುತ್ತೆ. ಇದು ಕೇವಲ ಬಿಲ್ಡಪ್ ಸಿನಿಮಾ ಅಷ್ಟೇ. ಈ ಸಿನಿಮಾಗೊಂದು ಅಡಿಪಾಯವೇ ಇಲ್ಲ. ಈ ಸಿನಿಮಾ ಹೈಪ್ ಸಿಕ್ಕಷ್ಟು ಸಿನಿಮಾವನ್ನು ಕೊಟ್ಟಿಲ್ಲ. ಇದೊಂದು ಆವರೇಜ್ ಸಿನಿಮಾ." ಎಂದು ರಿವ್ಯೂ ಕೊಟ್ಟಿದ್ದು 5ಕ್ಕೆ 2.75 ಸ್ಟಾರ್ ಕೊಟ್ಟಿದ್ದಾರೆ.

ಲೂಸಿಫರ್ ಮಾಸ್ಟರ್ ಪೀಸ್

ನೆಟ್ಟಿಗರೊಬ್ಬರು ಲೂಸಿಫರ್ ಸಿನಿಮಾ ಇಷ್ಟ ಹಾಗೂ ಕಷ್ಟಗಳನ್ನು ಪಟ್ಟಿ ಮಾಡಿದ್ದಾರೆ. " ಇಷ್ಟಗಳೆಂದರೆ, ಮೇಕಿಂಗ್‌ನಲ್ಲಿ ಕ್ಯಾಮರಾವರ್ಕ್ ಅದ್ಭುತವಾಗಿದೆ. ಕಾಡಿನ ದೃಶ್ಯಗಳ ಸಖತ್ ಆಗಿದ್ದು ಮೈಝುಂ ಎನಿಸುತ್ತವೆ. ಇನ್ನು ಕಷ್ಟಗಳೆಂದರೆ, ಮ್ಯೂಸಿಕ್ ಚೆನ್ನಾಗಿಲ್ಲ. ಸ್ಟೋರಿ ವೀಕ್ ಇದೆ. ಲೂಸಿಫರ್ ಮಾಸ್ಟರ್‌ಪೀಸ್" ಎಂದು ಮತ್ತೊಬ್ಬರು ಬರೆದುಕೊಂಡಿದ್ದಾರೆ.

ಹಿನ್ನೆಲೆ ಸಂಗೀತ ಕೆಟ್ಟದಾಗಿದೆ

"ಲೂಸಿಫರ್ ಸಿನಿಮಾ ಬೇರೆ ಲೆವೆಲ್‌ನಲ್ಲಿ ಇದೆ, ಕಿಕ್ ಕೊಡದೇ ಇದ್ದರೂ ಘಟನೆಗಳು ಮಾತ್ರ ಎಲ್ಲರೂ ಇಷ್ಟ ಪಡುವಂತಿವೆ. ಆದರೆ, ಹಿನ್ನೆಲೆ ಸಂಗೀತ ಮಾತ್ರ ಕೆಟ್ಟದಾಗಿದೆ. ಬಿಜಿಎಂ ತೀರಾ ಕೆಟ್ಟದಾಗಿದ್ದು ಏನೂ ಪರಿಣಾಮ ಬೀರುವುದಿಲ್ಲ." ಎಂದಿದ್ದಾರೆ.

ಶಿಳ್ಳೆ ಹೊಡೆಯುವ ಸೀನ್‌ಗಳಿವೆ

"ಎಂಪುರಾನ್ ಸಿನಿಮಾದಲ್ಲಿ ಜಂಗಲ್ ಸೀನ್‌ ಅನ್ನು ಹೊರತು ಪಡಿಸಿ, ಪ್ರಶಂಸಿಸುವುದು ಇನ್ನೂ ಕೆಲವು ಇದೆ. ಎಂಪುರಾನ್‌ಗಾಗಿ ಎಜಿ ಅನಿರೀಕ್ಷಿತವಾಗಿ ಹಳೆಯ ಹಾದಿಯಲ್ಲಿಯೇ ಸಾಗಿದ್ದು ದೊಡ್ಡ ತಿರುವು, ಆದರೆ, ಎಸ್‌ಟಿ ನಿರೀಕ್ಷೆಗಳ ಹತ್ತಿರಕ್ಕೂ ಹೋಗಲಿಲ್ಲ. ಆದರೆ, ಶಿಳ್ಳೆಗಳನ್ನು ಗಿಟ್ಟಿಸಿಕೊಳ್ಳುವಂತಹ ಮೋಹನ್‌ಲಾಲ್ ಸೀನ್‌ಗಳಿವೆ. ಇದೊಂದು ಒಳ್ಳೆಯ ಸಿನಿಮಾ" ಎಂದು ಇನ್ನೊಬ್ಬರು ಬರೆದುಕೊಂಡಿದ್ದಾರೆ.

ಲೂಸಿಫರ್ ಸೀಕ್ವೆಲ್ ಅಂತ ನಂಬಲು ಅಸಾಧ್ಯ

"ಮಾಲಿವುಡ್‌ಗೆ ಲ್ಯಾಂಡ್‌ಮಾರ್ಕ್ ಆಗಬಹುದಾದ ಎಲ್ಲಾ ಸಾಧ್ಯತೆಗಳು ಎಂಪುರಾನ್‌ಗೆ ಇತ್ತು. ಆದರೆ, ಅದನ್ನು ಕಳೆದುಕೊಂಡಿದೆ. ಮೊದಲಾರ್ಧಕ್ಕಿಂತ ದ್ವಿತೀಯಾರ್ಧ ಅದ್ಭುತವಾಗಿದೆ. ಅದೂ ಆರಂಭದ 20 ರಿಂದ 30 ನಿಮಿಷ ಏನೋ ದೊಡ್ಡದು ನಡೆಯುತ್ತೆ ಅಂತ ಅನಿಸುತ್ತೆ. ಆದರೆ, ಮುಂದುವರೆದಂತೆ ಆ ನಿರೀಕ್ಷೆ ನಶಿಸುತ್ತಾ ಹೋಗುತ್ತೆ. ಎಲ್ಲಿವರೆಗೆ ಅಂದರೆ, ನಮಗೆ ಇದು ಲೂಸಿಫರ್ ಸೀಕ್ವೆಲ್ ಅನ್ನೋದನ್ನು ನಂಬುವುದಕ್ಕೆ ಕಷ್ಟ ಆಗುವವರೆಗೆ." ಎಂದು ಇನ್ನೊಬ್ಬರು ಹೇಳಿದ್ದಾರೆ.

ಮಂಜು ವಾರಿಯರ ಅದ್ಭುತ

"ಮಂಜು ವಾರಿಯರ್ ನನಗೆ ಪ್ರಿಯದರ್ಶಿನಿ ರಾಮದಾಸ್ ಆಗಿ ಸರ್ಪ್ರೈಸ್ ಕೊಟ್ಟರು. ತೆರೆಮೇಲೆ ಹೆಚ್ಚು ಹೊತ್ತು ಕಾಣಿಸುತ್ತಾರೆ. ಎಂತಹ ಅದ್ಭುತ ಅಭಿನಯ ನೀಡಿದ್ದಾರೆ. ತಮ್ಮ ಪಾತ್ರವನ್ನು ಸಖತ್ ಆಗಿಯೇ ಬ್ಯಾಲೆನ್ಸ್ ಮಾಡಿದ್ದಾರೆ." ಎಂದು ಇನ್ನೊಬ್ಬರು ಹೇಳಿದ್ದಾರೆ.

More from Filmibeat

English summary
Malayalam actor Mohanlal, Prithviraj Sukumaran film L2 Empuraan twitter review and response
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X