Malli Pelli Twitter Review: 'ಇದೊಂದು ಮೋಸದ ಪ್ರೇಮಕಥೆ'.. ನರೇಶ್-ಪವಿತ್ರಾ ಸ್ಟೋರಿಗೆ ನೆಟ್ಟಿಗರು ಏನಂದ್ರು?

ಟಾಲಿವುಡ್ ಹಿರಿಯ ನಟ ನರೇಶ್ ಹಾಗೂ ಪವಿತ್ರಾ ಲೋಕೇಶ್ ಜೋಡಿಯ ಸಿನಿಮಾ 'ಮಳ್ಳಿ ಪೆಳ್ಳಿ' ತೆಲುಗು ಹಾಗೂ ಕನ್ನಡಿಗರಲ್ಲಿ ಕುತೂಹಲ ಕೆರಳಿಸಿತ್ತು. ಇನ್ನೊಂದು ಕಡೆ ಹಲವು ದಿನಗಳಿಂದ ಈ ಸಿನಿಮಾ ಬಗ್ಗೆ ಇಬ್ಬರೂ ಭರ್ಜರಿ ಪ್ರಚಾರ ಮಾಡಿದ್ದರು. ಇದೇ ಸಿನಿಮಾವೀಗ ತೆಲುಗು ರಾಜ್ಯಗಳಲ್ಲಿ ಗ್ರ್ಯಾಂಡ್ ಆಗಿ ರಿಲೀಸ್ ಆಗಿದೆ.

ಗುಟ್ಟಾಗಿದ್ದ ನರೇಶ್ ಹಾಗೂ ಪವಿತ್ರಾ ಲೋಕೇಶ್ ಸಂಬಂಧವನ್ನು ಮೂರನೇ ಪತ್ನಿ ರಮ್ಯಾ ರಘುಪತಿ ಬೆಳಕಿಗೆ ತಂದಿದ್ದರು. ಅಲ್ಲಿಂದ ಇವರಿಬ್ಬರ ಮೇಲೆ ತೆಲುಗು ಹಾಗೂ ಕನ್ನಡದ ಪ್ರೇಕ್ಷಕರು ಕಣ್ಣಿಟ್ಟಿದ್ದರು. ಇನ್ನು ಸಿನಿಮಾ, ಟೀಸರ್ ಹಾಗೂ ಟ್ರೈಲರ್ ನೋಡಿದಾಗ, ಇದು ಇವರದ್ದೇ ಕಥೆಯೇನೋ ಅಂತಲೂ ಭಾವಿಸಿದ್ದರು.

Malli Pelli Twitter Review : What Netizens Have To Say About Naresh Pavitra Lokesh Movie

ಮೈಸೂರಿನಲ್ಲಿ ನರೇಶ್ ಹಾಗೂ ಪವಿತ್ರಾ ಒಂದೇ ಹೋಟೆಲ್‌ನಲ್ಲಿ ತಂಗಿದ್ದಾಗ ರಮ್ಯಾ ರಘುಪತಿ ಮಾಡಿದ ಗಲಾಟೆಯ ದೃಶ್ಯ ಸಿನಿಮಾದಲ್ಲೂಇದೆ. ಹಾಗೇ ಮೂರನೇ ಪತ್ನಿಯ ಬಗ್ಗೆ ಉಲ್ಲೇಖವಿದೆ. ಈ ಎಲ್ಲಾ ಕಾರಣಕ್ಕೆ 'ಮಳ್ಳಿ ಪೆಳ್ಳಿ' ಇಬ್ಬರದ್ದೇ ಕಥೆ ಎಂದು ಪ್ರೇಕ್ಷಕರು ಭಾವಿಸಿದ್ದರು. ಹೀಗಾಗಿ ಈ ಸಿನಿಮಾ ತೆಲುಗು ಮಂದಿಯಲ್ಲಿ ಕುತೂಹಲ ಮೂಡಿಸಿತ್ತು. ಈಗ ಈ ಸಿನಿಮಾ ನೋಡಿದ ಬಳಿಕ ಪ್ರೇಕ್ಷಕರು ಟ್ವಿಟರ್‌ನಲ್ಲಿ ಯಾವ ರೀತಿ ಪ್ರತಿಕ್ರಿಯೆ ನೀಡಿದ್ದಾರೆ? ಅವರ ಅಭಿಪ್ರಾಯವೇನು? ಅನ್ನೋದನ್ನು ತಿಳಿಯಲು ಮುಂದೆ ಓದಿ.

ಪ್ರಬುದ್ಧ ನಟನೆ

ನರೇಶ್ ಹಾಗೂ ಪವಿತ್ರಾ ಲೋಕೇಶ್ ಸಿನಿಮಾ 'ಮಳ್ಳಿ ಪೆಳ್ಳಿ' ಸಿನಿಮಾ ನೋಡಿ ಬಂದವರು ಟ್ವಿಟರ್‌ನಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಒಬ್ಬರು "ಮಳ್ಳಿಪೆಳ್ಳಿ ಹೊಸ ತಲೆಮಾರಿನ ಭಾವನಾತ್ಮಕ ಸಿನಿಮಾ ಅಂತ ಅನಿಸಿತ್ತು. ಬಿಜಿಎಂ ಹಿಡಿದಿಡುತ್ತೆ. ನರೇಶ್ ಹಾಗೂ ಪವಿತ್ರಾ ಲೋಕೇಶ್ ನಟನೆ ಪ್ರಬುದ್ಧವಾಗಿದೆ" ಎಂದು ಕಮೆಂಟ್ ಮಾಡಿದ್ದಾರೆ.

ನರೇಶ್ ಕರಿಯರ್‌ನ ಬೆಸ್ಟ್ ಸಿನಿಮಾ

"ಮಳ್ಳಿ ಪೆಳ್ಳಿ' ನರೇಶ್ ವೃತ್ತಿ ಬದುಕಿನ ಬೆಸ್ಟ್ ಸಿನಿಮಾ. ಒಳ್ಳೆಯ ಸಿನಿಮಾ ಅನ್ನಬಹುದು. ಫಸ್ಟ್ ಹಾಫ್‌ನಲ್ಲಿ ಇವರ ಪರ್ಫಾಮೆನ್ಸ್ ಮಾಮೂಲಿಯಾಗಿ ಇಲ್ಲ. ಪವಿತ್ರಾ ಅವರು ಕೂಡ ಅದ್ಭುತವಾಗಿಯೇ ನಟಿಸಿದ್ದಾರೆ. ಎಡಿಟಿಂಗ್ ಚೆನ್ನಾಗಿದೆ. ಪ್ರತಿಯೊಂದು ಫ್ರೇಮ್ ಕೂಡ ಚೆನ್ನಾಗಿದೆ. ಮಿಸ್ ಮಾಡಿಕೊಳ್ಳಬೇಡಿ" ಅಂತ ಮತ್ತೊಬ್ಬರು ಟ್ವೀಟ್ ಮಾಡಿದ್ದಾರೆ.


ಚೆನ್ನಾಗಿ ಅಂತಿದ್ದಾರೆ ನಿಜವೇ?

'ಮಳ್ಳಿಪೆಳ್ಳಿ' ಸಿನಿಮಾ ನೋಡಿದವರಿಂದ ಪಾಸಿಟಿವ್ ರೆಸ್ಪಾನ್ಸ್ ಸಿಗುತ್ತಿದೆ. "ನರೇಶ್ ಮತ್ತು ಪವಿತ್ರಾ ಅವರ ಅಭಿನಯ ತುಂಬಾ ಚೆನ್ನಾಗಿದೆ.. ಮಳ್ಳಿ ಪೆಲ್ಲಿ ಸಿನಿಮಾ ದೃಶ್ಯಗಳು ತುಂಬಾ ಚೆನ್ನಾಗಿವೆ." ಎಂದು ಮತ್ತೊಬ್ಬರು ಟ್ವೀಟ್ ಮಾಡಿದ್ದಾರೆ. ಇನ್ನೊಬ್ಬರು " ಈ ಸಿನಿಮಾ ಚೆನ್ನಾಗಿದೆ ಅಂತಿದ್ದಾರೆ ನಿಜವೇ?" ಎಂದು ಟ್ವೀಟ್ ಮಾಡಿ ಪ್ರಶ್ನೆ ಮಾಡುತ್ತಿದ್ದಾರೆ.

'ಮಳ್ಳಿಪೆಳ್ಳಿ' ಇದೊಂದು ಅನ್ಯಾಯದ ಪ್ರೇಮಕಥೆ

"ಮಳ್ಳಿಪೆಳ್ಳಿ ಸಿನಿಮಾ ರಿಯಲ್ ಲೈಫ್ ಕಥೆಯನ್ನೇ ಹೇಳಿದಂತೆ ಇದೆ. ಪವಿತ್ರಾ ಹಾಗೂ ನರೇಶ್ ಹಿಂದಿನ ಸಂಬಂಧ, ಪ್ರಸ್ತುತ ಹೇಗೆ ಅನ್ನೋದು ಈ ಸಿನಿಮಾದಲ್ಲಿದೆ" ಎಂದು ನೆಟ್ಟಿಗರೊಬ್ಬರು ಟ್ವೀಟ್ ಮಾಡಿದ್ದಾರೆ. ಮತ್ತೊಂದು ಕಡೆ "ಇದೊಂದು ಅಫೇರ್ ಅನ್ಯಾಯದ ಪ್ರೇಮಕಥೆ" ಎಂದು ಟ್ವೀಟ್ ಮಾಡಿದ್ದಾರೆ. ಈ ಎಲ್ಲಾ ಟ್ವೀಟ್‌ಗಳೂ ವೈರಲ್ ಆಗುತ್ತಿವೆ.

ಮಾಧ್ಯಮಗಳು ಏನು ಹೇಳುತ್ತಿವೆ?

ಟ್ವಿಟರ್‌ನಲ್ಲಿ ಪಾಸಿಟಿವ್ ರಿವ್ಯೂ ಬಂದಿದ್ದರೂ, ತೆಲುಗು ಮಾಧ್ಯಮಗಳು ಸಿನಿಮಾ ಬಗ್ಗೆ ನೆಗೆಟಿವ್ ವಿಮರ್ಶೆ ಮಾಡಿವೆ. ಸಿನಿಮಾದಲ್ಲಿ ಹೇಳಿಕೊಳ್ಳುವಂತಹ ವಿಷಯವೇನೂ ಇಲ್ಲ. ನರೇಶ್ ಹಾಗೂ ಪವಿತ್ರಾ ಲೋಕೇಶ್ ಅವರ ರಿಯಲ್ ಲೈಫ್ ಸ್ಟೋರಿಯನ್ನೇ ತೆರೆ ಮೇಲೆ ತರಲಾಗಿದೆ ಎಂದು ವರದಿ ಮಾಡಿವೆ. ಅಲ್ಲದೆ 1.75 ರಿಂದ 2.5ರವರೆಗೆ ಪಾಯಿಂಟ್ಸ್ ಅನ್ನು ನೀಡಿದ್ದಾರೆ.

More from Filmibeat

English summary
Malli Pelli Twitter Review in Kannada : Check out What Netizens Have To Say About Jayasudha, Ananya Nagalla, Pavitra Lokesh Starrer Malli Pelli Movie directed by M.S. Raju. who has already watched the movie and posted their feedback on their twitter handles.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X