Governor Review: ಭಾರತದ ಆರ್ಥಿಕ ಬಿಕ್ಕಟ್ಟಿನ ರೋಚಕ ಚರಿತ್ರೆಯಲ್ಲಿ 'ಗವರ್ನರ್'; ಆದರೆ ಏನೋ ಮಿಸ್ ಆಗಿದೆ!
ಇತ್ತೀಚೆಗೆ ಓಟಿಟಿಯ ಸೂಪರ್‌ಸ್ಟಾರ್ ಎನಿಸಿಕೊಂಡಿರುವ ಬಾಲಿವುಡ್ ನಟ ಮನೋಜ್ ಬಾಜಪೇಯಿ ಸಿನಿಮಾಗಳಿಗೆ ಪ್ರತ್ಯೇಕ ಫ್ಯಾನ್ ಫಾಲೋವಿಂಗ್ ಇದೆ. ಇವರ ಸಿನಿಮಾಗಳನ್ನು ಮುಗಿಬಿದ್ದು ಓಟಿಟಿಯಲ್ಲಿ ನೋಡುವವರ ಸಂಖ್ಯೆಗಳಿಗೇನು ಕಮ್ಮಿಯಿಲ್ಲ. ಇವರ ಸಿನಿಮಾಗಳು ಥಿಯೇಟರ್‌ಗಳಲ್ಲಿ ಸದ್ದು ಮಾಡದೇ ಹೋದರೂ, ಓಟಿಟಿಯಲ್ಲಿ ಗದ್ದಲ ಎಬ್ಬಿಸೋದು ಗ್ಯಾರಂಟಿ. ಆ ಮಟ್ಟಿಗೆ ನಿರ್ಮಾಪಕರಿಗೆ ನಂಬಿಕೆ. ಈಗ ಮನೋಜ್ ಬಾಜಪೇಯಿ ಪ್ರಮುಖ ಪಾತ್ರದಲ್ಲಿ ನಟಿಸಿರುವ ಹೊಸ ಸಿನಿಮಾ 'ಗವರ್ನರ್' ಈಗ ರಿಲೀಸ್ ಆಗಿದೆ.
ಮನೋಜ್ ಬಾಜಪೇಯಿ ಸವಾಲಿನ ಪಾತ್ರಗಳಲ್ಲಿಯೇ ಪ್ರೇಕ್ಷಕರನ್ನು ರಂಜಿಸುತ್ತಿದ್ದಾರೆ. ಈ ಬಾರಿ 1992ರಲ್ಲಿ ಭಾರತದ ಆರ್ಥಿಕತೆ ಅತ್ಯಂತ ಕಠಿಣ ಪರಿಸ್ಥಿತಿಯನ್ನು ಎದುರಿಸಿತ್ತು. ಈ ವೇಳೆ ರಿಸರ್ವ್ ಬ್ಯಾಂಕ್ (RBI) ಗವರ್ನರ್ ಆಗಿದ್ದ ಎಸ್. ವೆಂಕಟರಮಣನ್ ಅವರ ಜೀವನದಿಂದ ಪ್ರೇರಿತವಾದ ಸಿನಿಮಾವೇ ಈ 'ಗವರ್ನರ್'. ಈ ಸಿನಿಮಾದಲ್ಲಿ ಎಸ್. ವೆಂಕಟರಮಣನ್ ಅವರನ್ನು ಪ್ರತಿನಿಧಿಸುವ ಎ. ರಮಣನ್ ಎಂಬ ಪಾತ್ರದಲ್ಲಿ ಮನೋಜ್ ಬಾಜಪೇಯಿ ನಟಿಸಿದ್ದಾರೆ.

1991ರ ಭಾರತದ ಆರ್ಥಿಕ ಬಿಕ್ಕಟ್ಟಿನ ಸುತ್ತ ಹೆಣೆಯಲಾದ 'ಗವರ್ನರ್: ದಿ ಸೈಲೆಂಟ್ ಸೇವಿಯರ್' ಸಿನಿಮಾ ಕಥೆಯೇನು? ಪ್ಲಸ್ ಪಾಯಿಂಟ್ ಏನು? ಮೈನಸ್ ಪಾಯಿಂಟ್ ಏನು? ತಿಳಿಯುವುದಕ್ಕೆ ಮುಂದೆ ಓದಿ.
'ಗವರ್ನರ್' ಕಥೆಯೇನು?
ಈ ಸಿನಿಮಾ 1991ರಲ್ಲಿನ ಭಾರತ ಎದುರಿಸಿದ್ದ ಆರ್ಥಿಕ ಮುಗ್ಗಟ್ಟ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಕಥೆಯನ್ನು ಹೆಣೆಯಲಾಗಿದೆ. 2022ರಲ್ಲಿ ಶ್ರೀಲಂಕಾದ ಆರ್ಥಿಕ ದಿವಾಳಿತನದ ಸ್ಥಿತಿಯ ವಿವರಣೆ ನೀಡುವ ಮೂಲಕ ಸಿನಿಮಾ ಆರಂಭ ಆಗುತ್ತೆ. ಬಳಿಕ ಫ್ಲ್ಯಾಶ್‌ಬ್ಯಾಕ್‌ಗೆ ಜಾರುವ ಕಥೆ, ಹಿರಿಯ ಪತ್ರಕರ್ತೆ ಅದಿತಿ ವರ್ಮಾ (ಅದಾ ಶರ್ಮಾ) ತನ್ನ ಮೊಮ್ಮಗನಿಗೆ 90ರ ದಶಕದಲ್ಲಿ ಭಾರತ ಎದುರಿಸಿದ್ದ ಇಂತಹದ್ದೇ ಆರ್ಥಿಕ ಬಿಕ್ಕಟ್ಟಿನ ಸನ್ನಿವೇಶವನ್ನು ವಿವರಿಸುತ್ತಾ ಹೋಗುತ್ತಾರೆ. 1991ರಲ್ಲಿ ದೇಶ ದಿವಾಳಿಯಾಗುವ ಸನ್ನಿವೇಶ ತಲುಪಿರುತ್ತೆ. ಆಗ ಆರ್‌ಬಿಐ ಗವರ್ನರ್ ರಮಣನ್ (ಮನೋಜ್ ಬಾಜಪೇಯಿ) ಬರೋಬ್ಬರಿ 60 ಟನ್‌ಗೂ ಹೆಚ್ಚು ಚಿನ್ನವನ್ನು ರಹಸ್ಯವಾಗಿ ವಿದೇಶಿ ಬ್ಯಾಂಕುಗಳಲ್ಲಿ ಅಡ ಇಡುವ ಸಾಹಸಕ್ಕೆ ಕೈ ಹಾಕುತ್ತಾರೆ. ಭಾರತದಲ್ಲಿ ಎದ್ದು ಆರ್ಥಿಕ ಮುಗ್ಗಟ್ಟನ್ನು ಹೇಗೆ ನಿಭಾಯಿಸಿದರು ಅನ್ನೋದೇ ಕಥೆ.
'ಗವರ್ನರ್' ಪ್ಲಾಸ್ ಪಾಯಿಂಟ್
'ಗವರ್ನರ್' ಸಿನಿಮಾ ಮನೋಜ್ ಬಾಜಪೇಯಿ ಅವರ ಒನ್-ಮ್ಯಾನ್ ಶೋ. ಇಲ್ಲಿ ಸಿನಿಮಾದ ಬಹುದೊಡ್ಡ ಪ್ಲಸ್ ಪಾಯಿಂಟ್ ಎಂದರೆ ಅದು ಮನೋಜ್ ಬಾಜಪೇಯಿ. ಆರ್‌ಬಿಐ ಮುಖ್ಯಸ್ಥನಾಗಿ ಅವರ ಗಾಂಭೀರ್ಯ, ದೇಶಭಕ್ತಿ ಹಾಗೂ ಗೊಂದಲಗಳನ್ನು ವ್ಯಕ್ತಪಡಿಸುವಲ್ಲಿ ಗೆದ್ದಿದ್ದಾರೆ. ಇವರ ಕೆಲವು ದೃಶ್ಯಗಳು ಪ್ರೇಕ್ಷಕರ ಗಮನ ಸೆಳೆಯುತ್ತವೆ. ಸರಳತೆ, ದೇಶಭಕ್ತಿಯನ್ನು ಮೂಡಿಸುವಲ್ಲಿ ಯಶಸ್ವಿಯಾಗಿದ್ದಾರೆ.
1991ರ ಆರ್ಥಿಕ ಬಿಕ್ಕಟ್ಟಿನ ಪರಿಸ್ಥಿತಿಯ ಬಗ್ಗೆ ಇಂದಿನ ತಲೆಮಾರಿಗೆ ಗೊತ್ತೇ ಇಲ್ಲ. ಆ ಕರಾಳ ಪುಟಗಳನ್ನು ತೆರೆದಿಡುತ್ತೆ. ಅಲ್ಲದೇ ಆ ಸಂದರ್ಭದಲ್ಲಿ ದೇಶವನ್ನು ಬಚಾವ್ ಮಾಡಿದ ರಿಯಲ್ ಹೀರೊಗಳ ಅನಾವಣ ಮಾಡುತ್ತೆ. ರಾಜಕೀಯ, ರಹಸ್ಯ ಕಾರ್ಯಾಚರಣೆಗಳ ದೃಶ್ಯಗಳು ಕಿಕ್ ಕೊಡುತ್ತವೆ. ಮನೋಜ್ ಬಾಜಪೇಯಿ ಜೊತೆ ಪತ್ರಕರ್ತೆಯಾಗಿ ಅದಾ ಶರ್ಮಾ, ಗವರ್ನರ್ ಬೆಂಬಲಕ್ಕೆ ನಿಲ್ಲುವ ನಟಿ ಮಧೂ ಅವರ ಪಾತ್ರಗಳು ಸಿನಿಮಾಗೆ ಬಲ ನೀಡಿವೆ.

'ಗವರ್ನರ್' ಮೈನಸ್ ಪಾಯಿಂಟ್
ಈ ಸಿನಿಮಾದ ನೈಜ ಘಟನೆಗಳು ಹಾಗೂ ರೋಚಕ ಸತ್ಯಗಳನ್ನು ಆಧರಿಸಿದ್ದರೂ, ಸಿನಿಮಾವನ್ನು ಎಫೆಕ್ಟಿವ್ ಆಗಿ ಕಟ್ಟಿಕೊಡುವಲ್ಲಿ ನಿರ್ದೇಶಕ ಚಿನ್ಮಯಿ ಮಂಡ್ಲೇಕರ್ ಹಿಂದೆ ಬಿದ್ದಿದ್ದಾರೆ. ಒಂದು ವೇಳೆ ಈ ಚಿತ್ರಕಥೆಯಲ್ಲಿ ಸ್ವಲ್ಪ ವೇಗ ಹೆಚ್ಚಿಸಿದ್ದರೆ, ಪ್ರೇಕ್ಷಕರನ್ನು ಹಿಡಿದು ಕೂರಿಸುತ್ತಿತ್ತು. ವಿಷಯ ಗಂಭೀರ ಇರುವ ಅತಿಯಾಗಿ ಸಂಭಾಷಣೆಗಳನ್ನು ಬರೆದಿದ್ದು ಸಿನಿಮಾ ಮೈನಸ್ ಪಾಯಿಂಟ್‌ಗಳಲ್ಲಿ ಒಂದು. ಮನೋಜ್ ಬಾಜಪೇಯಿ, ಅದಾ ಶರ್ಮಾ, ಮಧೂ ಪಾತ್ರಗಳು ಬಿಟ್ಟರೆ, ಬೇರೆ ಯಾವುದೇ ಪಾತ್ರಗಳು ಕನೆಕ್ಟ್ ಆಗುವುದಿಲ್ಲ. ಈ ಬಗ್ಗೆ ನಿರ್ದೇಶಕರು ಗಮನ ಹರಿಸಬೇಕಿತ್ತು.
ಕೊನೆಯಲ್ಲಿ..
ದಕ್ಷಿಣ ಭಾರತದ ಆಡಿಯನ್ಸ್ ಮೈಂಡ್ ಸೆಟ್ ಬೇರೆನೇ. ಇಲ್ಲಿ ಹೈ-ವೋಲ್ಟೇಜ್ ಕಮರ್ಷಿಯಲ್ ಸಿನಿಮಾಗಳನ್ನು ಇಷ್ಟಪಡುತ್ತಾರೆ. ಹಾಗಂತ ದೇಶಭಕ್ತಿಯನ್ನು ಉಕ್ಕಿಸುವ ಸಿನಿಮಾಗಳನ್ನು ಎಂದಿಗೂ ಕೈ ಬಿಟ್ಟಿಲ್ಲ. ಆದರೆ, ಈ ಸಿನಿಮಾ ತೀರಾ ಗಂಭೀರವಾದ ರಾಜಕೀಯ ಹಿನ್ನೆಲೆಯುಳ್ಳ ಸಿನಿಮಾ. ಮಾಸ್ ಎಂಟರ್‌ಟೈನ್‌ಮೆಂಟ್ ನಿರೀಕ್ಷೆಯಲ್ಲಿ ಹೋದರೆ ಬೋರ್ ಹೊಡೆಸಬಹುದು. ಭಾರತದ ಇತಿಹಾಸ, ಜಾಗತಿಕ ರಾಜಕೀಯ ವಿದ್ಯಮಾನಗಳಂತಹ ವಿಷಯಗಳಲ್ಲಿ ಆಸಕ್ತಿ ಇದ್ದರೆ, ಮನೋಜ್ ಬಾಜಪೇಯಿ 'ಗವರ್ನರ್' ಇಷ್ಟ ಆಗಬಹುದು.


Click it and Unblock the Notifications