Drishyam 3; ಬಂದೇ ಬಿಡ್ತು 'ದೃಶ್ಯಂ 3' ಟ್ರೈಲರ್.. ಸಿಕ್ಕೇ ಬಿಡ್ತು ಭಯಂಕರ ಟ್ವಿಸ್ಟ್

ಮಲಯಾಳಂ ಚಿತ್ರರಂಗದ ಮೋಸ್ಟ್ ಎಕ್ಸ್‌ಪೆಕ್ಟೆಡ್ ಸಿನಿಮಾ 'ದೃಶ್ಯಂ 3'. ಕಳೆದ ಎರಡೂ ಸೀಕ್ವೆಲ್‌ಗಳು ಭಾರತೀಯ ಚಿತ್ರರಂಗದಲ್ಲಿಯೇ ಹೊಸ ಚರಿತ್ರೆಯನ್ನೇ ಬರೆದಿತ್ತು. ಜಾರ್ಜ್ ಕುಟ್ಟಿ ಪಾತ್ರದಲ್ಲಿ ಮೋಹನ್‌ಲಾಲ್ ಪ್ರೇಕ್ಷಕರನ್ನು ಸಸ್ಪೆನ್ಸ್, ಥ್ರಿಲ್ಲರ್ ಅಲೆಯಲ್ಲಿ ತೇಲಿಸಿಬಿಟ್ಟಿದ್ದರು. ಈ ಫ್ಯಾಮಿಲಿ ಡ್ರಾಮಾ, ಸಸ್ಪೆನ್ಸ್ ಸಿನಿಮಾ ಹಲವು ಭಾಷೆಗಳಿಗೆ ರಿಮೇಕ್ ಆಗಿತ್ತು. ಅದರಲ್ಲಿ ಕನ್ನಡ ಕೂಡ ಒಂದು.

ಕೆಲವು ದಿನಗಳ ಹಿಂದಷ್ಟೇ 'ದೃಶ್ಯಂ 3' ಸಿನಿಮಾದ ತುಣುಕುಗಳು ಸದ್ದು ಮಾಡಿದ್ದವು. ಅದೇ ಗುಂಗಿನಲ್ಲಿದ್ದ ಸಿನಿಮಾ ಪ್ರೇಮಿಗಳಿಗೆ ಟ್ರೈಲರ್ ಕಿಕ್ ಕೊಟ್ಟಿದೆ. ಇಂದು (ಮೇ 9) ರಿಲೀಸ್ ಆಗಿರೋ ಟ್ರೈಲರ್ ಕುತೂಹಲವನ್ನು ಮತ್ತಷ್ಟು ದುಪ್ಪಟ್ಟು ಮಾಡಿದೆ. ಸಿನಿಮಾ ನೋಡುವುದಕ್ಕಿಂತ ಕಾಯುವುದಕ್ಕೆ ಸಾಧ್ಯವೇ ಇಲ್ಲ ಅನ್ನೋ ಹಾಗೆ ಮಾಡಿಬಿಟ್ಟಿದೆ. 'ದೃಶ್ಯಂ 3' ಟ್ರೈಲರ್ ಅಂತೂ ಎಮೋಷನಲ್ ಕಿಕ್ ಕೊಟ್ಟಿದೆ.

Mohanlal Meena starrer Malayalam movie Drishyam 3 trailer hints major twists

2013ರಲ್ಲಿ ತೆರೆಕಂಡಿದ್ದ 'ದೃಶ್ಯಂ' ಭಾರತೀಯ ಚಿತ್ರರಂಗದಲ್ಲಿ ಹೊಸ ಟ್ರೆಂಡ್ ಹುಟ್ಟಾಕಿತ್ತು. ಇಲ್ಲಿಗೆ ಕಥೆ ಮುಗೀತು ಅಂದುಕೊಂಡವರಿಗೆ 2021ರಲ್ಲಿ 'ದೃಶ್ಯಂ 2' ಅಚ್ಚರಿ ಮೂಡಿಸಿತ್ತು. ಜಾರ್ಜ್ ಕುಟ್ಟಿಯ ಜಾಣ್ಮೆ, ಮುಂದಾಲೋಚನೆಯ ಪರಿಚಯ ಮಾಡಿಸಲಾಗಿತ್ತು. 2026ರಲ್ಲಿ 'ದೃಶ್ಯಂ 3' ರಿಲೀಸ್‌ಗೆ ರೆಡಿಯಾಗಿದೆ. ಟ್ರೈಲರ್ ನೋಡಿದರೆ, ಈ ಬಾರಿ ಜಾರ್ಜ್ ಕುಟ್ಟಿಯ ಎಮೋಷನ್ಸ್, ಫ್ಯಾಮಿಲಿಯನ್ನು ಟಾರ್ಗೆಟ್ ಮಾಡಿದಂತೆ ಇದೆ. ಅಷ್ಟಕ್ಕೂ 'ದೃಶ್ಯಂ 3' ಟ್ರೈಲರ್ ಕೊಟ್ಟ ಸುಳಿವೇನು? ತಿಳಿಯುವುದಕ್ಕೆ ಮುಂದೆ ಓದಿ.

ಜಾರ್ಜ್ ಕುಟ್ಟಿಯ ಟೆನ್ಷನ್‌ನಿಂದಲೇ 'ದೃಶ್ಯಂ 3' ಟ್ರೈಲರ್ ಆರಂಭ ಆಗುತ್ತೆ. ಈ ಬಾರಿ ನಿರ್ದೇಶಕ ಜೀತು ಜೋಸೆಫ್ ಸಂಕೀರ್ಣವಾದ ಚಿತ್ರಕಥೆಯನ್ನು ಹೆಣೆದಿರುವಂತೆ ತೋರುತ್ತಿದೆ. ಜಾರ್ಜ್ ಕುಟ್ಟಿಯ ಭಾವನೆ, ತಾಳ್ಮೆಯನ್ನು ಇಟ್ಟುಕೊಂಡು ಕಥೆಯನ್ನು ಹೆಣೆದಂತೆ ತೋರುತ್ತಿದೆ. ಜಾರ್ಜ್ ಕುಟ್ಟಿಯ ಮೌನ, ತಾಳ್ಮೆ, ಅವಮಾನವನ್ನು ಹೈಲೈಟ್ ಮಾಡಿರುವ ಸಾಧ್ಯತೆಯಿದೆ. ಟ್ರೈಲರ್‌ನಲ್ಲಿ ಮೋಹನ್‌ಲಾಲ್ ಈ ಎಲ್ಲಾ ಭಾವನೆಗಳನ್ನು ಹೊರ ಹಾಕಿದ್ದಾರೆ.

Also Read
ನೆಟ್‌ಫ್ಲಿಕ್ಸ್‌ನಲ್ಲಿ ಮೋಡಿ ಮಾಡ್ತಿದೆ ಮಲಯಾಳಂನ ಈ ಬ್ಲಾಕ್‌ ಬಸ್ಟರ್ ಸಿನಿಮಾ
ನೆಟ್‌ಫ್ಲಿಕ್ಸ್‌ನಲ್ಲಿ ಮೋಡಿ ಮಾಡ್ತಿದೆ ಮಲಯಾಳಂನ ಈ ಬ್ಲಾಕ್‌ ಬಸ್ಟರ್ ಸಿನಿಮಾ

ಜಾರ್ಜ್ ಕುಟ್ಟಿಯ ಕೃತ್ಯವನ್ನು ಸಾಬೀತು ಮಾಡುವುದಕ್ಕೆ ಪೊಲೀಸರು ಒಂದಲ್ಲ ಒಂದು ಬಲೆಯನ್ನು ಬೀಸುತ್ತಲೇ ಇದ್ದಾರೆ. ಕಳೆದ ಎರಡೂ ಪಾರ್ಟ್‌ಗಳಲ್ಲೂ ಅದು ಪ್ರೇಕ್ಷಕರಿಗೆ ಮನವರಿಕೆಯಾಗಿದೆ. ಪೊಲೀಸರು ಮಾಸ್ಟರ್‌ಪ್ಲಾನ್‌ಗಿಂತೂ ಅಡ್ವಾನ್ಸ್ ಮಾಡುವ ಜಾರ್ಜ್ ಕುಟ್ಟಿ ಮೇಲೆ ಈ ಬಾರಿ ಎಮೋಷನಲ್ ಬಲೆ ಬೀಸಿದಂತೆ ಇದೆ. ತನ್ನ ಕುಟುಂಬವೇ ತನ್ನ ವಿರುದ್ಧ ತಿರುಗಿಬಿದ್ದರೆ, ಅದನ್ನು ಜಾರ್ಜ್ ಕುಟ್ಟಿ (ಮೋಹನ್‌ಲಾಲ್) ಹೇಗೆ ಸ್ವೀಕರಿಸಬಹುದು? ಕುಟುಂಬ ದೂರವಾಗುವ ದು:ಖದಲ್ಲಿ ತನ್ನ ಸತ್ಯವನ್ನು ಒಪ್ಪಿಕೊಳ್ಳಬಹುದಾ? ಇದು ಸದ್ಯದ ಕುತೂಹಲ.

Mohanlal Meena starrer Malayalam movie Drishyam 3 trailer hints major twists

'ದೃಶ್ಯಂ 3' ಟ್ರೈಲರ್‌ನಲ್ಲಿ ಕಥೆಯ ಬಗ್ಗೆ ಚಿಕ್ಕದೊಂದು ಸುಳಿವನ್ನು ಬಿಟ್ಟುಕೊಟ್ಟಿಲ್ಲ. ಆದರೆ, ಈ ಬಾರಿಗೆ ಎಲ್ಲರೂ ಜಾರ್ಜ್ ಕುಟ್ಟಿ (ಮೋಹನ್‌ಲಾಲ್) ಕುಟುಂಬದ ಮೇಲೆ ಟಾರ್ಗೆಟ್ ಮಾಡಿರುವಂತೆ ಬಿಂಬಿಸಲಾಗಿದೆ. ಆದರೆ, ನಿರ್ದೇಶಕ ಜೀತು ಜೋಸೆಫ್ ಪ್ರತಿ ಬಾರಿ ಹೀಗೆ ಆಗುತ್ತೆ ಎಂದು ಗೆಸ್ ಮಾಡಿ ಕೂರುವ ಆಡಿಯನ್ಸ್‌ಗೆ ಚಮಕ್ ಕೊಟ್ಟಿರೋದೇ ಹೆಚ್ಚು. ಹೀಗಾಗಿ 3ನೇ ಪಾರ್ಟ್‌ ಕೂಡ ಅಂತಹದ್ದೇ ಏನೋ ಟ್ವಿಸ್ಟ್ ಇರುತ್ತೆ ಅಂತ ಊಹಿಸಿಕೊಳ್ಳಬಹುದು.

ಇನ್ನು ಕೀ ರೋಲ್‌ಗಳನ್ನು ಹಾಗೇ ಉಳಿಸಿಕೊಳ್ಳಲಾಗಿದೆ. ಮೋಹನ್‌ಲಾಲ್, ಮೀನಾ, ಅನ್ಸಿಬಾ ಹಸನ್, ಎಸ್ತರ್ ಅನಿಲ್ ಅವರನ್ನು 3ನೇ ಪಾರ್ಟ್‌ನಲ್ಲಿಯೂ ನೋಡಬಹುದಾಗಿದೆ. ಹಾಗೇ ಉಳಿದ ಪ್ರಮುಖ ಪಾತ್ರಗಳಲ್ಲಿ ಸಿದ್ಧಿಕಿ, ಆಶಾ ಶರತ್, ಮುರಳಿ ಗೋಪಿ ನಟಿಸಿದ್ದಾರೆ. ಇಡೀ ಭಾರತವೇ ಎದುರು ನೋಡುತ್ತಿರುವ 'ದೃಶ್ಯಂ 3' ಇದೇ ತಿಂಗಳು ಅಂದರೆ, ಮೇ 21ರಂದು ಭಾರತದ ಸೇರಿದಂತೆ ವಿಶ್ವದ ಹಲವು ಭಾಗಗಳಲ್ಲಿ ರಿಲೀಸ್ ಆಗುತ್ತಿದೆ. ಸದ್ಯ ಟ್ರೈಲರ್ ಪ್ರೇಕ್ಷಕರಿಗಂತೂ ಸರಿಯಾಗೇ ಕಿಕ್ ಕೊಟ್ಟಿದೆ.

English summary
Mohanlal Meena starrer Malayalam movie Drishyam 3 trailer hints major twists.
Read more about: mohanlal meena malayalam film
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X