Ondu Sarala Prema Kathe Review: ಈ ಲವ್‌ಸ್ಟೋರಿ ಅಷ್ಟೊಂದು ಸರಳ ಅಲ್ಲ.. ಇದೊಂದು ವಿರಳ ಪ್ರೇಮಕಥೆ!

Rating:
3.0/5
Star Cast: Vinay Rajkumar, Swathishta Krishnan, Mallika Singh,
Director: Simple Suni

ಇಲ್ಲಿವರೆಗೂ ವಿನಯ್ ರಾಜ್‌ಕುಮಾರ್ ಹೆಚ್ಚಾಗಿ ಸಾಫ್ಟ್ ಕ್ಯಾರೆಕ್ಟರ್‌ಗಳಲ್ಲಿ ಕಂಡಿದ್ದೇ ಹೆಚ್ಚು. ಲವರ್ ಬಾಯ್ ಆಗಿಯೇ ಹೆಚ್ಚಾಗಿ ಕಾಣಿಸಿಕೊಂಡಿದ್ದಾರೆ. ಅತ್ತ ಸಿಂಪಲ್ ಸುನಿ ಸರಳವಾಗಿ ಪ್ರೇಮಕಥೆಗಳನ್ನು ತೆರೆಮೇಲೆ ತೋರಿಸುವುದಕ್ಕೆ ಫೇಮಸ್. ಹೆಚ್ಚು ಕಡಿಮೆ ಇಬ್ಬರೂ ತೆರೆ ಹಿಂದೆ ಮೃದು ಸ್ವಭಾವದವರೇ.. ಇನ್ನು ಇವರಿಬ್ಬರೂ ಜೊತೆಗೂಡಿ ಇದೇ ಮೊದಲ ಬಾರಿಗೆ ಮಾಡಿದ ಸಿನಿಮಾದ ಹೆಸರು ಕೂಡ 'ಒಂದು ಸರಳ ಪ್ರೇಮಕಥೆ'. ಆದರೆ, ಸಿನಿಮಾ ಇವರು ಹೇಳಿದಷ್ಟು ಸರಳವಾಗಿದೆಯೇ..?

ಸಿಂಪಲ್ ಸುನಿ ನಿರೂಪಣೆ ಶೈಲಿಯೇ ಸಾಮಾನ್ಯ ಪ್ರೇಕ್ಷಕರಿಗೆ ಇಷ್ಟ ಆಗುತ್ತೆ. ಅದರಲ್ಲೂ ಪ್ರೇಮಕಥೆಗಳನ್ನು ತೆರೆಮೇಲೆ ಹೇಳುವಾಗ ಪ್ರೇಕ್ಷಕರನ್ನು ರಂಜಿಸುವುದಕ್ಕೆ ಬೇಕಿರೋ ಎಲ್ಲಾ ಸರಕುಗಳು ಇರುತ್ತವೆ. ಹಾಸ್ಯ ಕೇಳುವವರಿಗೆ ತಿಳಿ ಹಾಸ್ಯ, ಎಮೋಷನ್ಸ್ ಕೇಳುವವರಿಗೆ ಎಮೋಷನ್ಸ್, ಟ್ವಿಸ್ಟ್ ಕೇಳುವವರಿಗೆ ಟ್ವಿಸ್ಟ್. 'ಒಂದು ಸರಳ ಪ್ರೇಮಕಥೆ'ಯಲ್ಲೂ ಇಂತಹದ್ದೇ ಅಂಶಗಳು ಇವೆಯೇ..

Ondu Sarala Prema Kathe Movie Review in Kannada

'ಒಂದು ಸರಳ ಪ್ರೇಮಕಥೆ' ವಿನಯ್ ರಾಜ್‌ಕುಮಾರ್‌ಗೆ ಬ್ರೇಕ್ ಕೊಡುತ್ತಾ? ಸಿಂಪಲ್ ಸುನಿ ಮತ್ತೊಂದು ಪ್ರೇಮಕಥೆಯನ್ನು ಪ್ರೇಕ್ಷಕರಿಗೆ ಕೊಡುವಲ್ಲಿ ಯಶಸ್ವಿಯಾಗಿದ್ದಾರಾ? ಇದು ಸರಳ ಪ್ರೇಮಕಥೆನಾ? ಇಲ್ಲಾ ವಿರಳ ಪ್ರೇಮಕಥೆನಾ? ಅನ್ನೋದನ್ನು ತಿಳಿಯಲು ಮುಂದೆ ಓದಿ..

'ಒಂದು ಸರಳ ಪ್ರೇಮಕಥೆ' ಏನು?

ಸಿನಿಮಾದ ನಾಯಕ ಅತಿಶಯ್ (ವಿನಯ್ ರಾಜ್‌ಕುಮಾರ್). ಜೀವನದಲ್ಲಿ ಒಂದೆರಡು ಕನಸು ಇಟ್ಟುಕೊಂಡಿರೋ ವ್ಯಕ್ತಿ. ಒಬ್ಬ ಒಳ್ಳೆಯ ಸಂಗೀತ ನಿರ್ದೇಶಕನಾಗಬೇಕು ಅನ್ನೋದು ಒಂದು ಕನಸಾದರೆ, ಇನ್ನೊಂದು ಮನಮೆಚ್ಚಿನ ಹುಡುಗಿಯನ್ನು ಮದುವೆ ಆಗೋದು. ನಾಯಕ ಈ ಎರಡೂ ಕನಸುಗಳು ಈಡೇರುತ್ತಾ? ಕನಸುಗಳು ಈಡೇರುವ ಹಾದಿಯಲ್ಲಿ ನಾಯಕನಿಗೆ ಎದುರಾಗುವ ಟ್ವಿಸ್ಟ್ ಅಂಡ್ ಟರ್ನ್ ಏನು? ಕನಸುಗಳು ಈಡೇರುತ್ತಾ? ಇಲ್ವಾ? ಅನ್ನೋದೇ 'ಒಂದು ಸರಳ ಪ್ರೇಮಕಥೆ'.

ಸರಳವಾಗಿದೆಯೇ ಪ್ರೇಮಕಥೆ?

'ಒಂದು ಸರಳ ಪ್ರೇಮಕಥೆ' ಟೈಟಲ್‌ನಷ್ಟು ಸಿಂಪಲ್ ಆಗೇನು ಇಲ್ಲ. ಫಸ್ಟ್ ಹಾಫ್ಟ್ ತಿಳಿ ಹಾಸ್ಯ, ಒನ್‌ಲೈನರ್ ಡೈಲಾಗ್‌ಗಳು ಮಜ ಕೊಡುತ್ತಾ ಸಾಗುತ್ತೆ. ಆದರೆ, ನಾಯಕ ಲವ್‌ಸ್ಟೋರಿ ಸರಳವಾಗಿಲ್ಲ ಅಂತ ಅನಿಸೋದು ಸೆಕೆಂಡ್ ಹಾಫ್‌ನಲ್ಲಿ. ದಿಢೀರನೇ ಎದುರಾಗುವ ಟ್ವಿಸ್ಟ್ ಅಂಡ್ ಟರ್ನ್‌ಗಳು ಪ್ರೇಕ್ಷಕನಿಗೆ ಥ್ರಿಲ್ ಕೊಡುತ್ತವೆ. ಜೊತೆ ಎಮೋಷನಲ್ ಸೀನ್‌ಗಳು ಕಿಕ್ ಕೊಡುತ್ತವೆ. ಸಿನಿಮಾ ಕೊನೆಯ ಹಂತಕ್ಕೆ ಬರುವಾಗ ಇದು ಸರಳ ಪ್ರೇಮಕಥೆ ಅಲ್ಲ. ವಿರಳ ಪ್ರೇಮಕಥೆ ಅನಿಸಿಬಿಡುತ್ತೆ.

ಪಾತ್ರಧಾರಿಗಳ ಪಾತ್ರ ಹೇಗಿದೆ?

ಇದೂವರೆಗೂ ನೋಡಿರದ ವಿನಯ್ ರಾಜ್‌ಕುಮಾರ್ ಇಲ್ಲಿ ಕಾಣಿಸುತ್ತಾರೆ. ಪಾತ್ರಗಳಲ್ಲಿ ಪ್ರಯೋಗಗಳನ್ನು ಮಾಡುತ್ತಿರುವ ವಿನಯ್‌ಗೆ 'ಒಂದು ಸರಳ ಪ್ರೇಮಕಥೆ' ಹೊಸ ಇಮೇಜ್ ಕೊಡಬಹುದು. ವಿನಯ್ ನಟನೆಯಲ್ಲೂ ಸುಧಾರಣೆ ಕಂಡಿದೆ. ಈ ಸಿನಿಮಾದಲ್ಲಿ ವಿನಯ್ ರಾಜ್‌ಕುಮಾರ್ ಖಂಡಿತಾ ಇಷ್ಟ ಆಗುತ್ತಾರೆ. ಇನ್ನು ಕನ್ನಡದವರೇ ಆಗಿರೋ ತಮಿಳು ನಟಿ ಸ್ವಾತಿಷ್ಠ ಕೃಷ್ಣನ್ ಇಷ್ಟ ಆಗುತ್ತಾರೆ. ಕನ್ನಡದಲ್ಲಿ ಇನ್ನು ಹೆಚ್ಚು ಸಿನಿಮಾಗಳನ್ನು ಮಾಡಬಹುದು. ಇನ್ನು ಮಲ್ಲಿಕಾ ಸಿಂಗ್ ಕ್ಯೂಟ್ ಆಗಿ ಕಾಣಿಸುತ್ತಾರೆ. ರಿಯಲ್‌ಲೈಫ್ ಕ್ಯಾರೆಕ್ಟರ್‌ನಲ್ಲಿ ಸಾಧು ಕೋಕಿಲಾ ತೆರೆಮೇಲೆ ಎದುರಾಗುತ್ತಾರೆ. ರಾಜೇಶ್ ನಟರಂಗ ತಂದೆಯ ಪಾತ್ರದಲ್ಲಿ ಮಿಂಚಿದ್ದಾರೆ.

Ondu Sarala Prema Kathe Movie Review in Kannada

ನಿರ್ದೇಶನ-ಸಂಗೀತದ ಜುಗಲ್‌ಬಂಧಿ

ಸಿಂಪಲ್ ಸುನಿ ಸಿನಿಮಾಗಳಿಗೂ ಮ್ಯೂಸಿಕ್‌ಗೂ ಒಂದು ನಂಟಿದೆ. ಸಿಂಪಲ್ ಸುನಿ ಲವ್‌ಸ್ಟೋರಿ ಹೇಳುವುದಕ್ಕೆ ಹೊರಟರೆ, ಅದರ ಜೊತೆ ಸಂಗೀತ ಕೂಡ ಅಷ್ಟೇ ಸಲೀಸಾಗಿ ಟ್ರಾವೆಲ್ ಮಾಡುತ್ತೆ. ಇಲ್ಲೂ ಅದೇ ಆಗಿದೆ. ಸಿಂಪಲ್ ಸುನಿಯ ವಿರಳ ಪ್ರೇಮಕಥೆಗೆ ವೀರ್ ಸಮರ್ಥ್ ಟ್ಯೂನ್‌ಗಳು ಹೊಂದಿಕೊಂಡಿವೆ. ಇವರಡೂ ಪ್ರೇಕ್ಷಕರನ್ನು ರಂಜಿಸುವುದರಲ್ಲಿ ಮಹತ್ವದ ಪಾತ್ರವಹಿಸಿದೆ.

ಸಿನಿಮಾ ಪ್ಲಸ್ ಏನು?

ವಿನಯ್ ರಾಜ್‌ಕುಮಾರ್, ಸ್ವಾತಿಷ್ಠ ಕೃಷ್ಣನ್ ಹಾಗೂ ಮಲ್ಲಿಕಾ ಸಿಂಗ್ ಪಾತ್ರಗಳು ನೀಟ್ ಆಗಿ ಸಿಂಕ್ ಆಗಿವೆ. ಹಾಗೇ ಸಿಂಪಲ್ ಸುನಿ ಕತೆನೂ ಇಷ್ಟ ಆಗುತ್ತೆ. ಜೊತೆಗೆ ಸಿನಿಮಾದ ಸಂಗೀತ ಕೂಡ ಇಷ್ಟ ಆಗುತ್ತೆ. ಎಲ್ಲಕ್ಕಿಂತ ಕಥೆಯಲ್ಲಿ ಸಿಗುವ ಟ್ವಿಸ್ಟ್ ಅಂಡ್ ಟರ್ನ್ ಮತ್ತಷ್ಟು ಮಜಾ ಕೊಡುತ್ತವೆ.

ಸಿನಿಮಾದ ಮೈನಸ್ ಏನು?

ಸಿಂಪಲ್ ಸುನಿ ಸ್ಕ್ರೀನ್‌ ಪ್ಲೇಯಲ್ಲಿ ಮತ್ತಷ್ಟು ಹಿಡಿತ ಸಾಧಿಸಿದ್ದರೆ 'ಒಂದು ಸರಳ ಪ್ರೇಮಕಥೆ' ಜನರಿಗೆ ಮತ್ತಷ್ಟು ಹತ್ತಿರವಾಗುತ್ತಿತ್ತು. ಹಾಗಂತ ಈಗೇನು ತಳ್ಳಿ ಹಾಕುವಂತಿಲ್ಲ. ಅಲ್ಲಲ್ಲಿ ಒಂದಿಷ್ಟು ಕುಂದುಕೊರತೆಗಳು ಕಾಣುತ್ತವೆಯಾದರೂ, ಕತೆಯಲ್ಲಿ ಸಿಗುವ ಟ್ವಿಸ್ಟ್ ಅಂಡ್ ಟರ್ನ್ ಊಫಿ ಮಾಡುತ್ತೆ.

More from Filmibeat

English summary
Vinay Rajkumar Starrer Ondu Sarala Prema Kathe Movie Review In Kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X