OG Movie Review: ಹೇಗಿದೆ 'ಓಜಿ' ಸ್ವ್ಯಾಗ್? ಆಂಧ್ರ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್‌ಗೆ ಗೆಲುವು ಸಿಗುತ್ತಾ?
'ಹರಿಹರ ವೀರಮಲ್ಲು' ಸೋಲಿನ ಬಳಿಕ ಪವನ್ ಕಲ್ಯಾಣ್ ನಟಿಸಿರುವ ಮತ್ತೊಂದು ಸಿನಿಮಾ ರಿಲೀಸ್ ಆಗಿದೆ. ಅದುವೇ 'ಓಜಿ'. ದಾನಯ್ಯ ನಿರ್ಮಾಣದ ಹಾಗೂ ಸುಜಿತ್ ನಿರ್ದೇಶನದ ಈ ಸಿನಿಮಾ ಬಿಡುಗಡೆಗೂ ಮುನ್ನವೇ ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟಾಕಿತ್ತು. ಮಾಸ್ ಅವತಾರದಲ್ಲಿ ಮತ್ತೆ ಪವನ್ ಕಲ್ಯಾಣ್ ಕಾಣಿಸಿಕೊಂಡಿರೋದು ಅವರ ಅಭಿಮಾನಿಗಳಿಗೆ ಮತ್ತೆ ಕುತೂಹಲವನ್ನು ದುಪ್ಪಟ್ಟು ಮಾಡಿತ್ತು.
'ಸಾಹೋ' ಸೋಲಿನ ಬಳಿಕ ಕಣ್ಮರೆಯಾಗಿದ್ದ ನಿರ್ದೇಶಕ ಸುಜಿತ್‌ಗೆ 'ಓಜಿ' ಕಮ್ ಬ್ಯಾಕ್ ಸಿನಿಮಾ. ಹಾಗೇ ರಾಜಕೀಯದಲ್ಲಿ ಮುಳುಗಿ ಹೋಗಿದ್ದ ಪವನ್ ಕಲ್ಯಾಣ್‌ಗೂ 'ಓಜಿ' (OG) ವಿಭಿನ್ನ ಅನುಭವ ನೀಡಿದೆ. ಪವನ್ ಕಲ್ಯಾಣ್ ಮತ್ತೊಮ್ಮೆ ಮಾಸ್ ಅವತಾರದಲ್ಲಿ ಅಭಿಮಾನಿಗಳ ಮುಂದೆ ಬರುತ್ತಿರೋದು ಸಿನಿಮಾದ ಕ್ರೇಜ್ ಅನ್ನು ದುಪ್ಪಟ್ಟು ಮಾಡಿದೆ. ಕೊನೆಗೂ ನಿರೀಕ್ಷಿಸಿದ ಸಿನಿಮಾ ರಿಲೀಸ್ ಆಗಿದ್ದು, 'ಓಜಿ'ಯ ಕಥೆಯೇನು? ಸಿನಿಮಾದ ಪ್ಲಸ್ ಏನು? ಮೈನಸ್ ಏನು? ತಿಳಿಯುವುದಕ್ಕೆ ಮುಂದೆ ಓದಿ.

'ಓಜಿ' ಕಥೆಯೇನು?
ಓಜಸ್ ಗಂಭೀರ್ (ಪವನ್ ಕಲ್ಯಾಣ್) ಜಪಾನಿನ ಸಮುರಾಯ್ ಕುಲದ ಕೊನೆಯ ವಂಶಸ್ಥ. ಓಜಿಯನ್ನು ಸತ್ಯದೇವ್ (ಪ್ರಕಾಶ್ ರಾಜ್) ದತ್ತು ಪಡೆದಿದ್ದರಿಂದ ಅವನು ಮುಂಬೈಗೆ ಬರುತ್ತಾನೆ. ಸತ್ಯದೇವ್ ಕುಟುಂಬವನ್ನು ರಕ್ಷಿಸುವುದೇ ಓಜಿಯ ಬಹುಮುಖ್ಯ ಕೆಲಸ ಆಗುತ್ತೆ. ಸತ್ಯದೇವ್ ಅಥವಾ ಸತ್ಯದಾದ ಜಪಾನ್‌ನಿಂದ ತಂದ ಅಪಾರ ಚಿನ್ನವನ್ನು ವ್ಯಾಪಾರದಲ್ಲಿ ತೊಡಗಿಸಿ, ತನ್ನಿಬ್ಬರು ಮಕ್ಕಳು ವೆಂಕಟ್ ಮತ್ತು ಶ್ಯಾಮ್ ಜೊತೆ ದೊಡ್ಡ ಸಾಮ್ರಾಜ್ಯವನ್ನು ಕಟ್ಟುತ್ತಾರೆ. ಒಂದು ದಿನ ಸತ್ಯದೇವ್‌ಗೆ ಮುಂಬೈನ ಬಂದರಿನಲ್ಲಿ ಆರ್‌ಡಿಎಕ್ಸ್ ಸಿಗುತ್ತೆ. ಇದು ಹೇಗೆ ಬಂತು? ಇದನ್ನು ತಂದವರು ಯಾರು? ಸತ್ಯದೇವ್ ಹಿರಿಯ ಮಗನನ್ನು ಓಜಿ ಕೊಂದಿದ್ದೇಕೆ? ಸಿನಿಮಾದ ಕಥೆ ಈ ಪ್ರಶ್ನೆಗಳ ಸುತ್ತ ಸಾಗುತ್ತಾ ಮುಂದೆ ಹೋಗುತ್ತೆ?
ಓಜಿ ಅಲಿಯಾಸ್ ಪವನ್ ಕಲ್ಯಾಣ್
ಪವನ್ ಕಲ್ಯಾಣ್ ಸ್ಟೈಲ್ ಹಾಗೂ ಮ್ಯಾನರಿಸಂಗೆ ಅಭಿಮಾನಿಗಳಿದ್ದಾರೆ. 'ಓಜಿ' ಆ ಸ್ವ್ಯಾಗ್ ಅನ್ನು ಮತ್ತೆ ನೋಡುವುದಕ್ಕೆ ಸಿಗುತ್ತೆ. ಈ ಸಿನಿಮಾದಲ್ಲಿ ಪವನ್ ಕಲ್ಯಾಣ್ ಮ್ಯಾನರಿಸಂ, ಡೈಲಾಗ್ ಡಿಲೇವರಿ ಹಾಗೂ ಸಾಹಸ ದೃಶ್ಯಗಳು ಗಮನ ಸೆಳೆಯುತ್ತವೆ. ಇಂತಹ ಚಿತ್ರಕ್ಕಾಗಿ ಇಷ್ಟು ದಿನ ಕಾಯುತ್ತಿದ್ದ ಅಭಿಮಾನಿಗಳಿಗೆ ಪವರ್ ಸ್ಟಾರ್ ಭರ್ಜರಿ ಮನರಂಜನೆ ಕೊಟ್ಟಿದ್ದಾರೆ. ಲವ್ ಸೀನ್‌ಗಳು ಹಾಗೂ ಸೆಂಟಿಮೆಂಟ್ ದೃಶ್ಯಗಳಲ್ಲಿ ಪವನ್ ಕಲ್ಯಾಣ್‌ರನ್ನು ವಿಭಿನ್ನವಾಗಿ ನೋಡಬಹುದು.
ಡೈರೆಕ್ಷನ್ ಹೇಗಿದೆ?
'ಸಾಹೋ' ಸೋಲಿನ ಬಳಿಕ ಸುಜಿತ್ ನಿರ್ದೇಶಿಸಿರುವ ಸಿನಿಮಾ 'ಓಜಿ' ಸ್ಟೈಲಿಶ್ ಆಗಿದೆ. ಸ್ಟೈಲಿಶ್, ಮಾಸ್ ಕಥೆಯನ್ನು ಹೆಣೆದಿದ್ದರೂ, ಚಿತ್ರಕಥೆಯ ಬಗ್ಗೆ ಇನ್ನಷ್ಟು ಗಮನ ಹರಿಸಬೇಕಿತ್ತು. ಪಾತ್ರಗಳನ್ನು ಪರಿಚಯಿಸುವುದಕ್ಕೆ ಸುಜಿತ್ ಸ್ವಲ್ಪ ಸಮಯ ತೆಗೆದುಕೊಂಡಿದ್ದಾರೆ ಅನಿಸುತ್ತೆ. ಪವನ್ ಎಂಟ್ರಿ ಬಳಿಕ 'ಓಜಿ' ಇಂಟ್ರೆಸ್ಟಿಂಗ್ ಅಂತ ಅನಿಸಿಕೊಳ್ಳುತ್ತೆ. ಆಕ್ಷನ್ ದೃಶ್ಯಗಳು, ಇಂಟರ್‌ವಲ್ ಬ್ಲಾಕ್ ಬ್ಯಾಂಗ್ ಆಗಿದೆ. ಫಸ್ಟ್ ಹಾಫ್ ಚೆನ್ನಾಗಿದೆ, ದ್ವಿತೀಯಾರ್ಧ ಸ್ವಲ್ಪ ಸ್ಲೋ ಅನಿಸುತ್ತೆ.

'ಓಜಿ' ಪ್ಲಸ್ ಏನು?
ಪವನ್ ಕಲ್ಯಾಣ್ ಎಂಟ್ರಿ ಜೋರಾಗಿದೆ. ಸಿನಿಮಾ ಮೊದಲಾರ್ಧ ಎಂಗೇಜಿಂಗ್ ಆಗಿದೆ. ಇಂಟವರ್‌ವಲ್ ಈ ಸಿನಿಮಾದ ಹೈಲೈಟ್. ಈ ಹಿಂದೆ ಪವನ್ ಕಲ್ಯಾಣ್ ನಟಿಸಿದ ಸಿನಿಮಾಗಳಿಗಿಂತ ಆಕ್ಷನ್ ಸೀನ್ ಜಬರ್ದಸ್ತ್ ಆಗಿವೆ. ಸ್ಟೈಲಿಶ್ ಆಕ್ಷನ್ ಸೀಕ್ವೆನ್ಸ್ ಅದ್ಬುತವಾಗಿದೆ. ಇಂಟ್ರುಡಕ್ಷನ್ ಫೈಟಿಂಗ್ ಕಿಲ್ಲಿಂಗ್ ಆಗಿದೆ. ಇಮ್ರಾನ್ ಹಶ್ಮಿ ಎಂಟ್ರಿ ಕೂಡ ಸಖತ್ ಆಗಿದೆ.
ಮೈನಸ್ ಏನು?
ಸುಚಿತ್ ಸ್ಟೈಲಿಶ್ ಕಥೆಯನ್ನು ಹೆಣೆದಿದ್ದರೂ, ಚಿತ್ರಕಥೆಯಲ್ಲಿ ಹೆಣೆದಿದ್ದಾರೆ. ಮೊದಲಾರ್ಧ ಇಷ್ಟ ಆಗಿದ್ದರೂ, ದ್ವಿತೀಯಾರ್ಧ ಎಳೆದಿದ್ದಾರೆ ಎನಿಸುತ್ತೆ. ಎಡಿಟಿಂಗ್ ಇನ್ನೂ ಶಾರ್ಫ್ ಆಗಿರಬೇಕಿತ್ತು. ನಾಯಕಿ ಪ್ರಿಯಾಂಕಾ ಮೋಹನ್ ಪಾತ್ರ ಇನ್ನಷ್ಟು ಇರಬೇಕಿತ್ತು. ಭಜರಂಗಿ ಲೋಕಿಗೆ ಒಳ್ಳೆಯ ಪಾತ್ರ ಸಿಕ್ಕಿದ್ದರೂ, ಸ್ಕ್ರೀನ್ ಸ್ಪೇಸ್ ಕಮ್ಮಿಯಿದೆ. ಪ್ರಕಾಶ್ ರಾಜ್ ಹಾಗೂ ಅರ್ಜುನ್ ದಾಸ್ ಇಬ್ಬರೂ ಹೆಚ್ಚಾಗಿ ಬಳಸಿಕೊಂಡಿಲ್ಲ.
ಕೊನೆಯಲ್ಲಿ ಏನು?
ಪವನ್ ಕಲ್ಯಾಣ 'OG' ಸಿನಿಮಾ ಅಭಿಮಾನಿಗಳಿಗೆ ನಿರ್ಮಾಣ ಆಗಿರುವ ಸಿನಿಮಾ. ಪವನ್ ಕಲ್ಯಾಣ್ ಫ್ಯಾನ್ಸ್‌ಗೆ ಸಿಕ್ಕಾಪಟ್ಟೆ ಇಷ್ಟ ಆಗುತ್ತೆ. ತಮ್ಮ ನಟನನ್ನು ಸ್ಟೈಲಿಶ್ ಮಾಸ್ ಅವತಾರದಲ್ಲಿ ನೋಡಿ ಎಂಜಾಯ್ ಮಾಡುತ್ತಾರೆ. ಕಥೆ ಹಾಗೂ ಚಿತ್ರಕಥೆ ಕಡೆಗೆ ಇನ್ನಷ್ಟು ಗಮನ ಕೊಟ್ಟಿದ್ದರೆ, ಮಾಸ್ ಆಡಿಯನ್ಸ್‌ಗೆ ಇನ್ನಷ್ಟ ಇಷ್ಟ ಆಗುತ್ತಿತ್ತು. ಒಟ್ನಲ್ಲಿ ಪವನ್ ಫ್ಯಾನ್ಸ್ ಥಿಯೇಟರ್‌ನಲ್ಲಿ ಹಬ್ಬದೂಟ ಅಂತಲೇ ಹೇಳಬಹುದು.


Click it and Unblock the Notifications











