OG Movie Twitter Review: ಪವನ್ 'ಓಜಿ' ನೋಡಿ "ಆಂಟಿಯರಿಗೆ ನಿರಾಸೆ ಮಾಡಿದ್ದಕ್ಕೆ ಥಾಂಕ್ಯೂ ಸುಜಿತ್" ಎಂದ ನೆಟ್ಟಿಗರು
ಟಾಲಿವುಡ್ ಪವರ್‌ಸ್ಟಾರ್ ಪವನ್ ಕಲ್ಯಾಣ್ ಸ್ಟೈಲಿಶ್ ಮಾಸ್ ಅವತಾರದಲ್ಲಿ ಕಾಣಿಸಿಕೊಂಡಿರುವ 'ಓಜಿ' ಅದ್ಧೂರಿಯಾಗಿ ರಿಲೀಸ್ ಆಗಿದೆ. 'ಸಾಹೋ' ನಿರ್ದೇಶಕ ಸುಜಿತ್ ಆಕ್ಷನ್ ಕಟ್ ಹೇಳಿರುವ ಈ ಸಿನಿಮಾ ಈಗಾಗಲೇ ಪ್ರೀಮಿಯರ್ ಶೋ ಮಾಡಲಾಗಿದೆ. ಪವನ್ ಕಲ್ಯಾಣ್ ಅಭಿಮಾನಿಗಳು ಮುಗಿಬಿದ್ದು ಸಿನಿಮಾವನ್ನು ನೋಡಿದ್ದಾರೆ. ಮತ್ತೆ ಮಾಸ್ ಲುಕ್‌ನಲ್ಲಿ ಪವನ್ ಕಲ್ಯಾಣ್ ನೋಡಿ ಥ್ರಿಲ್ ಆಗಿದ್ದಾರೆ.
ಸುಜಿತ್ ಆಕ್ಷನ್ ಕಟ್ ಹೇಳಿದರುವ ಈ ಸಿನಿಮಾ ಬಗ್ಗೆ ಟ್ವಿಟರ್ (ಎಕ್ಸ್) ಸಖತ್ ರೆಸ್ಪಾನ್ಸ್ ಸಿಗುತ್ತಿದೆ. ಸ್ಟೈಲಿಶ್ ಲುಕ್‌ನಲ್ಲಿ ಮತ್ತೆ ಪವನ್ ಕಲ್ಯಾಣ್‌ರನ್ನು ನೋಡಿ ಥ್ರಿಲ್ ಆಗಿದ್ದಾರೆ. 'ಆರ್‌ಆರ್‌ಆರ್' ಸಿನಿಮಾ ನಿರ್ಮಾಣ ಮಾಡಿದ್ದ ದಾನಯ್ಯ ಡಿವಿವಿ 175 ಕೋಟಿ ವೆಚ್ಚದಲ್ಲಿ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ಹೀಗಾಗಿ ಈ ಸಿನಿಮಾ ಮೇಲೆ ನಿರೀಕ್ಷೆ ದುಪ್ಪಟ್ಟಾಗಿತ್ತು.

ಪವನ್ ಕಲ್ಯಾಣ್ ಜೊತೆಯಲ್ಲಿ ಬಾಲಿವುಡ್ ನಟ ಇಮ್ರಾನ್ ಹಶ್ಮಿ ಕೂಡ ಓಜಿಯಲ್ಲಿ ಮಿಂಚಿದ್ದಾರೆ. ಖಳನಾಯಕನಾಗಿ ನಟಿಸಿರುವ ಇಮ್ರಾನ್ ಹಶ್ಮಿ ಪ್ರೇಕ್ಷಕರಿಗೆ ಕಿಕ್ ಕೊಟ್ಟಿದ್ದಾರೆ. ಇವರಿಬ್ಬರ ಸೇಡು, ಕಿತ್ತಾಟಗಳು ಕಿಕ್ ಕೊಡುತ್ತವೆ. ಪವನ್ ಕಲ್ಯಾಣ್‌ಗೆ ನಾಯಕಿಯಾಗಿ ಪ್ರಿಯಾಂಕಾ ಮೋಹನ್ ಕೂಡ ಕಾಣಿಸಿಕೊಂಡಿದ್ದಾರೆ. ಹಾಗಿದ್ದರೆ, ಸಿನಿಮಾ ನೋಡಿದ್ಮೇಲೆ ನೆಟ್ಟಿಗರಿಗೆ ಏನು ಅನಿಸಿತು? ಸಿನಿಮಾ ಬಗ್ಗೆ ಎಕ್ಸ್ ಬಳಸುವವರು ಏನಂತಾರೆ? ನೋಡೋಣ ಬನ್ನಿ.
ರಕ್ತದಲ್ಲಿಯೇ ಸ್ನಾನ
"ರಕ್ತದಲ್ಲಿಯೇ ಸ್ನಾನ ಮಾಡಿಸಿದ್ದಾರೆ. ಇದು ಸಂಪೂರ್ಣವಾಗಿ ಓಜಸ್ ಗಂಭೀರ್ ಶೋ. 3.5/5 ಕೊಡುತ್ತೇನೆ. ವಿಂಟೇಜ್ ಅಲ್ಟ್ರಾ ಸ್ಟೈಲ್‌ನಲ್ಲಿ ಬಿಂಕಿ ಉಗುಳಿದಿದ್ದಾರೆ ಪವರ್‌ಸ್ಟಾರ್ ಪವನ್ ಕಲ್ಯಾಣ್. ಇವರು ಚಿತ್ರರಂಗಕ್ಕೆ ಓಜಿ. ಡೈರೆಕ್ಟರ್ ಸುಜಿತ್ ಫ್ಯಾನಿಂದ ತೋರಿಸಿದರೆ, ಈ ರೇಂಜ್‌ನಲ್ಲಿ ಇರಬೇಕು. ತಮನ್ ಬಿಜಿಎಂ ಹಾಗೂ ಮ್ಯೂಸಿಕ್ ಹೀಗಿರಬೇಕು. ಅಭಿಮಾನಿಗಳಿಗೆ ಹಬ್ಬ." ಎಂದು ವಿಮರ್ಶೆ ಮಾಡಲಾಗಿದೆ.
ಇದು ಸುಜಿತ್ ಸಿನಿಮಾ
"ಇಂಟರ್‌ವಲ್ ಆದ ಬಳಿಕ 30 ನಿಮಿಷವಿದೆ. ಅದು ಮಾತ್ರ ಕಲ್ಟ್. ಲೋಕಿನೂ ಇಲ್ಲ. ಪ್ರಶಾಂತ್ ನೀಲ್ ಕೂಡ ಇಲ್ಲ. ಎಸ್ ಎಸ್ ರಾಜಮೌಳಿನೂ ಇಲ್ಲ. ಇದು ಬರೀ ಸುಜಿತ್‌ನಿಂದ ನಡೆದಿದ್ದು ಅಷ್ಟೇ" ಎಂದು ನೆಟ್ಟಿಗರೊಬ್ಬರು ಸಿನಿಮಾ ನೋಡಿ ಖುಷಿಯಾಗಿ ಕಮೆಂಟ್ ಮಾಡಿದ್ದಾರೆ.
ಟಿಪಿಕಲ್ ಗ್ಯಾಂಗ್‌ಸ್ಟರ್ ಸಿನಿಮಾ
"ಮೊದಲಾರ್ಧ ಟಿಪಿಕಲ್ ಗ್ಯಾಂಗ್‌ಸ್ಟರ್ ಸಿನಿಮಾ ರೀತಿ ಇದೆ. ಮೊದಲಾರ್ಧದಲ್ಲಿ ಹಲವು ಪಾತ್ರಗಳನ್ನು ಪರಿಚಯ ಮಾಡಿಕೊಡುವುದೇ ಇದೆ. ಇಂಟರ್‌ವಲ್ ಬ್ಲಾಕ್ ಬರುವವರೆಗೂ ಫ್ಲಾಟ್ ಅಂತ ಅನಿಸಿತ್ತು. ಇಂಟರ್‌ವಲ್ ಅದ್ಭುತವಾಗಿದೆ. ಇಂಟ್ರೋ ಹಾಗೂ ಇಂಟರ್‌ವಲ್‌ನಲ್ಲಿ ಪವನ್ ಕಲ್ಯಾಣ್ ಚಿಂದಿ ಅಂತ ಅನಿಸುತ್ತಾರೆ. ತಮನ್ ಹಿನ್ನೆಲೆ ಸಂಗೀತ ಮಸ್ತ್ ಆಗಿದೆ." ಎಂದು ಕಮೆಂಟ್ ಮಾಡಿದ್ದಾರೆ.
ಆಂಟಿಯರಿಗೆ ನಿರಾಸೆ
'ಓಜಿ' ಸಿನಿಮಾ ನೋಡಿ ತೆಲುಗು ನೆಟ್ಟಿಗರೊಬ್ಬರು ವಿಚಿತ್ರವಾಗಿ ಕಮೆಂಟ್ ಮಾಡಿದ್ದಾರೆ. ನಿರ್ದೇಶಕ ಸುಜಿತ್‌ಗೆ ಧನ್ಯವಾದಗಳನ್ನು ಅರ್ಪಿಸಿದ್ದಾರೆ. "ಆಂಟಿಯರಿಗೆ ನಿರಾಸೆ ಮಾಡಿದ್ದಕ್ಕೆ ಥಾಂಕ್ಯೂ ಸುಜಿತ್" ಎಂದು ನೆಟ್ಟಿಗರೊಬ್ಬರು ಕಮೆಂಟ್ ಮಾಡಿದ್ದಾರೆ.


Click it and Unblock the Notifications











