Ustaad Bhagat Singh X Review: ಉಸ್ತಾದ್ ಭಗತ್ ಸಿಂಗ್.. ಲಾಜಿಕ್ ಹುಡುಕ್ಬೇಡಿ.. ಪವನ್ ದಯವಿಟ್ಟು ಸಿನಿಮಾ ನಿಲ್ಲಿಸ್ಬೇಡಿ
ಯುಗಾದಿ ಹಬ್ಬಕ್ಕೆ ಸಿನಿಮಾ ದೊಡ್ಡ ದೊಡ್ಡ ಸಿನಿಮಾಗಳನ್ನು ರಿಲೀಸ್ ಮಾಡಿದ್ದಾರೆ. ಕನ್ನಡದಲ್ಲಿ 'ಲವ್ ಮಾಕ್ಟೇಲ್ 3' ರಿಲೀಸ್ ಆಗಿದ್ದರೆ, ಅತ್ತ ರಣ್‌ವೀರ್ ಸಿಂಗ್ ನಟನೆಯ 'ಧುರಂಧರ್ 2' ಸಿನಿಮಾ ರಿಲೀಸ್ ಆಗಿದ್ದರೆ, ಇನ್ನೊಂದು ಕಡೆ ಪವರ್‌ಸ್ಟಾರ್ ಪವನ್ ಕಲ್ಯಾಣ್ ನಟಿಸಿರುವ 'ಉಸ್ತಾದ್ ಭಗತ್ ಸಿಂಗ್' ಸಿನಿಮಾ ರಿಲೀಸ್ ಆಗಿದೆ. ಈ ಎರಡೂ ಸಿನಿಮಾಗಳು ಈ ವಾರದ ಟಾಪ್ ಸಿನಿಮಾಗಳು.
'ಧುರಂಧರ್ 2' ಸಿನಿಮಾ ಬಿಡುಗಡೆಗೂ ಮುನ್ನ ಹೈಪ್ ಕ್ರಿಯೇಟ್ ಮಾಡಿತ್ತು. ಇದರ ವಿರುದ್ಧ ದಕ್ಷಿಣ ಭಾರತದಲ್ಲಿ ಪವನ್ ಕಲ್ಯಾಣ್ ಸಿನಿಮಾ 'ಉಸ್ತಾದ್ ಭಗತ್ ಸಿಂಗ್' ರಿಲೀಸ್ ಆಗಿದೆ. ಪವನ್ ಕಲ್ಯಾಣ್ ಆಂಧ್ರದ ಡಿಸಿಎಂ ಆದ ಬಳಿಕ ರಿಲೀಸ್ ಆಗುತ್ತಿರುವ 2ನೇ ಸಿನಿಮಾವಿದು. ಹೀಗಿ ಸಿನಿಮಾ ಬಗ್ಗೆ ಅವರ ಅಭಿಮಾನಿಗಳಲ್ಲಿ ನಿರೀಕ್ಷೆಯಿದೆ. ಪವನ್ ಕಲ್ಯಾಣ್ ಸಿನಿಮಾಗಾಗಿ ಎದುರು ನೋಡುತ್ತಿದ್ದವರು ಸಿನಿಮಾವನ್ನು ಕಣ್ತುಂಬಿಕೊಂಡಿದ್ದಾರೆ.

ಪವನ್ ಕಲ್ಯಾಣ್ ಸಿನಿಮಾದಲ್ಲಿ ಮ್ಯಾನರಿಸಂ, ಆಕ್ಷನ್, ಮಾಸ್ ಎಲಿಮೆಂಟ್‌ಗಳಿಗೇನು ಕಮ್ಮಿ ಇರೋದಿಲ್ಲ. ಅದರಲ್ಲೂ ನಿರ್ದೇಶಕ ಹರೀಶ್ ಶಂಕರ್ ಆಕ್ಷನ್ ಕಟ್ ಹೇಳಿದ್ದಾರೆ. ಹೀಗಾಗಿ ತೆಲುಗು ಮಂದಿ ಪವನ್ ಸಿನಿಮಾವನ್ನು ಎದುರು ನೋಡುತ್ತಿದ್ದರು. ನಿರೀಕ್ಷೆಯಂತೆ ಇಂದು (ಮಾರ್ಚ್ 19) ಸಿನಿಮಾ ಅದ್ಧೂರಿಯಾಗಿ ರಿಲೀಸ್ ಆಗಿದೆ. ಹಾಗಿದ್ದರೆ, ಈ ಸಿನಿಮಾ ನೋಡಿದವರು ಎಕ್ಸ್ (ಟ್ವಿಟರ್)ನಲ್ಲಿ ಏನು ಹೇಳುತ್ತಿದ್ದಾರೆ. ಸಿನಿಮಾ ಹಿಡಿಸಿತೇ? ಇಲ್ಲವೇ? ಅನ್ನೋದನ್ನು ತಿಳಿಯುವುದಕ್ಕೆ ಮುಂದೆ ಓದಿ.
ಲಾಜಿಕ್ ಹುಡುಕಬೇಡಿ
"ಉಸ್ತಾದ್ ಭಗತ್ ಸಿಂಗ್ ಕಂಪ್ಲೀಟ್ ಕಾಮಿಡಿ ಎಂಟರ್‌ಟೈನರ್. ಈ ಸಿನಿಮಾವನ್ನು ಲಾಜಿಕ್ ಹುಡುಕಿಕೊಂಡು ಹೋಗಬೇಡಿ. ಒಂದು ಅನುಭವಕ್ಕಾಗಿ ಹೋಗಿ. ಬಹಳ ದಿನಗಳ ಬಳಿಕ ಪವನ್ ಕಲ್ಯಾಣ್ ಸಿನಿಮಾ ರಿಲೀಸ್ ಆಗಿದ್ದು, ಇದೊಂದು ತೆಲುಗು ಚಿತ್ರರಂಗದ ಪಕ್ಕಾ ಮಾಸ್ ಕಮರ್ಷಿಯಲ್ ಹೀರೋ ಸಿನಿಮಾ ಆಗಿದೆ. ಹಾಗೆ ಸುಮ್ಮನೆ ಸಿನಿಮಾವನ್ನು ಎಂಜಾಯ್ ಮಾಡಿ." ಎಂದು ನೆಟ್ಟಿಗರೊಬ್ಬರು ಸಿನಿಮಾ ನೋಡಿ ಹೇಳಿದ್ದಾರೆ.
ಪವನ್ ಕಲ್ಯಾಣ್-ಶ್ರೀಲೀಲಾ ಕೆಮಿಸ್ಟಿ ಸೂಪರ್
"ಇದು ಉಸ್ತಾದ್ ಭಗತ್ ಸಿಂಗ್ ಸಿನಿಮಾದ ಅತ್ಯುತ್ತಮ ಭಾಗ. ಈ ಸಿನಿಮಾದಲ್ಲಿ ಶ್ರೀಲೀಲಾರನ್ನು ಮುದ್ದಾಗಿರುವಂತೆ ತೋರಿಸಲಾಗಿದೆ. ಅದರಲ್ಲೂ ಪವನ್ ಕಲ್ಯಾಣ್ ಹಾಗೂ ಅವರ ಕೆಮಿಸ್ಟಿ ಅಂತೂ ಸಿಕ್ಕಾಪಟ್ಟೆ ಇಷ್ಟ ಆಗುತ್ತೆ. ಈ ಇಡೀ ಸೀಕ್ವೆನ್ಸ್ ಅಂತಲೂ ಹೃದಯವನ್ನು ಸ್ಪರ್ಷಿಸುತ್ತದೆ. ಇದು ಅವರ ವೃತ್ತಿ ಬದುಕಿನ ಬೆಸ್ಟ್ ಸಿನಿಮಾಗಳಲ್ಲಿ ಒಂದು" ಎಂದು ಇನ್ನೊಬ್ಬ ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.
"ಪವನ್ ಕಲ್ಯಾಣ್ ದಯವಿಟ್ಟು ಸಿನಿಮಾ ನಿಲ್ಲಿಸಬೇಡಿ"
"ಈಗ ತಾನೇ ಉಸ್ತಾದ್ ಭಗತ್ ಸಿಂಗ್ ಸಿನಿಮಾವನ್ನು ನೋಡಿದೆ. ಪವನ್ ಕಲ್ಯಾಣ್ ಅವರ ಬಗ್ಗೆ ಪ್ರೀತಿಯನ್ನು ತೋರಿದ್ದಕ್ಕಾಗಿ ನಿರ್ದೇಶಕ ಹರೀಶ್ ಅವರಿಗೆ ಧನ್ಯವಾದಗಳನ್ನು ಅರ್ಪಿಸುತ್ತಿದ್ದೇನೆ. ಇದೊಂದು ಅದ್ಭುತ ಸಿನಿಮಾ. ಈ ಸಿನಿಮಾವನ್ನು ನಿರ್ಮಾಣ ಮಾಡುವುದಕ್ಕೆ ಹಾರ್ಡ್‌ವರ್ಕ್ ಮಾಡಿದವರಿಗೆಲ್ಲ ಧನ್ಯವಾದಗಳು. ನೀವಿಲ್ಲದೆ ಉಸ್ತಾದ್ ಭಗತ್ ಸಿಂಗ್ ಆಗುತ್ತಿರಲಿಲ್ಲ. ಪವನ್ ಕಲ್ಯಾಣ್ ದಯವಿಟ್ಟು ಸಿನಿಮಾ ಮಾಡುವುದನ್ನು ನಿಲ್ಲಿಸಬೇಡಿ" ಎಂದು ಮತ್ತೊಬ್ಬರ ನೆಟ್ಟಿಗರು ಮನವಿ ಮಾಡಿಕೊಂಡಿದ್ದಾರೆ.
"ಪವನ್ ಕಲ್ಯಾಣ್ ಮ್ಯಾನರಿಸಂ ಮಸ್ತಾಗಿದೆ"
"ಈ ಸಿನಿಮಾದಲ್ಲಿ ಪವನ್ ಕಲ್ಯಾಣ್ ಪಾತ್ರ ಬಾಲ್ಯದಿಂದ ಶುರುವಾಗಿ ಭಾವನಾತ್ಮಕವಾಗಿ ಕನೆಕ್ಟ್ ಆಗುತ್ತೆ. ಅವರ ಮುಗ್ಧತೆಯನ್ನು ಸರಿಯಾದ ರೀತಿಯಲ್ಲಿ ಸಿನಿಮಾದ ಉದ್ದಕ್ಕೂ ತೆಗೆದುಕೊಂಡು ಹೋಗಿದ್ದಾರೆ. ಪ್ರೀ ಇಂಟರ್‌ವಲ್‌ನಲ್ಲಿ ಬಿಲ್ಡಪ್ ನಿಧಾನಗತಿಯಲ್ಲಿದೆ ಎಂದು ಎನಿಸುತ್ತೆ. ಆದರೆ, ಕೊನೆಯಲ್ಲಿ ಪೀಕ್‌ನಲ್ಲಿದೆ ಎಂದು ಎನಿಸುತ್ತೆ. ಇಂಟರ್‌ವಲ್‌ನಲ್ಲಿ ಪವನ್ ಕಲ್ಯಾಣ್ ಸ್ಟೈಲ್, ಮ್ಯಾನರಿಸಂ ಎಲ್ಲವೂ ಸಖತ್ ಆಗಿದೆ" ಎಂದು ಅಭಿಮಾನಿಯೊಬ್ಬರು ಕಮೆಂಟ್ ಮಾಡಿದ್ದಾರೆ.


Click it and Unblock the Notifications











