Raja Saab First Review: ಹೊರಬಿತ್ತು 'ದಿ ರಾಜಾ ಸಾಬ್' ಮೊದಲ ವಿಮರ್ಶೆ; ರೊಮ್ಯಾಂಟಿಕ್ ಪ್ರಭಾಸ್ ಇಷ್ಟ ಆಗ್ತಾರಾ?

ತೆಲುಗಿನ ರೆಬಲ್ ಸ್ಟಾರ್ ಪ್ರಭಾಸ್ ಸಿನಿಮಾ 'ದಿ ರಾಜಾ ಸಾಬ್' ಬಿಡುಗಡೆಗೆ ವೇದಿಕೆ ಸಿದ್ಧವಾಗಿದೆ. 'ಕಲ್ಕಿ' ಬಳಿಕ ರಿಲೀಸ್ ಆಗುತ್ತಿರುವ ಈ ಸಿನಿಮಾವನ್ನು ಕಣ್ತುಂಬಿಕೊಳ್ಳುವುದಕ್ಕೆ ಪ್ರಭಾಸ್ ಅಭಿಮಾನಿಗಳು ಎದುರು ನೋಡುತ್ತಿದ್ದಾರೆ. 'ದಿ ರಾಜಾ ಸಾಬ್' ಸಿನಿಮಾವನ್ನು ಯುವ ನಿರ್ದೇಶಕ ಮಾರುತಿ ನಿರ್ದೇಶನ ಮಾಡಿದ್ದು, ಸಂಕ್ರಾಂತಿ ಹಬ್ಬದಲ್ಲಿ ಯಾವೆಲ್ಲ ದಾಖಲೆಗಳನ್ನು ಮುರಿಯುತ್ತೆ ಅನ್ನೋದನ್ನು ಇಡೀ ಚಿತ್ರರಂಗವೇ ಎದುರು ನೋಡುತ್ತಿದೆ.

'ದಿ ರಾಜಾ ಸಾಬ್' ಸಿನಿಮಾವನ್ನು ಪೀಪಲ್ಸ್ ಮೀಡಿಯಾ ಫ್ಯಾಕ್ಟರಿ, ಐವಿವೈ ಎಂಟರ್‌ಟೈನ್‌ಮೆಂಟ್ ಬ್ಯಾನರ್‌ಗಳ ಮೂಲಕ ಟಿಜಿ ವಿಶ್ವಪ್ರಸಾದ್, ವಿವೇಕ್ ಕೂಚಿಭೋಟ್ಲ ಮತ್ತು ಇಶಾನ್ ಸಕ್ಸೇನಾ ನಿರ್ಮಾಣ ಮಾಡಿದ್ದಾರೆ. ಪ್ಯಾನ್ ಇಂಡಿಯಾ ಸೂಪರ್‌ಸ್ಟಾರ್ ಪ್ರಭಾಸ್‌ ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವುದರಿಂದ 2026ರಲ್ಲಿ ರಿಲೀಸ್ ಆಗುತ್ತಿರುವ ತೆಲುಗಿನ ಬಹು ನಿರೀಕ್ಷಿತ ಸಿನಿಮಾಗಳಲ್ಲಿ ಒಂದಾಗಿದೆ.

Prabhas Malavika Mohanan Sanjay Dutt starrer Raja Saab movie First review in Kannada

ಅಂದ್ಹಾಗೆ 'ದಿ ರಾಜಾ ಸಾಬ್' ಸಿನಿಮಾ ಜನವರಿ 9ರಂದು ಸಂಕ್ರಾಂತಿ ಹಬ್ಬಕ್ಕೆಂದು ರಿಲೀಸ್ ಆಗುತ್ತಿದೆ. ಪ್ರಭಾಸ್ ಪ್ಯಾನ್ ಇಂಡಿಯಾ ಸ್ಟಾರ್ ಆದ್ಮೇಲೆ ಹಾರರ್ ಮಿಶ್ರಿತ ಹಾಸ್ಯ ಪ್ರಧಾನ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಹೀಗಾಗಿ ಈ ಸಿನಿಮಾ 2026ರ ಆರಂಭದಲ್ಲಿಯೇ ತೆಲುಗು ಚಿತ್ರರಂಗಕ್ಕೆ ದೊಡ್ಡ ಸಕ್ಸಸ್ ತಂದುಕೊಡುವ ಎಲ್ಲಾ ಸಾಧ್ಯತೆಗಳೂ ಇವೆ. ಹಾಗೇ ಇತ್ತೀಚೆಗೆ ಈ ಸಿನಿಮಾವನ್ನು ವೀಕ್ಷಿಸಿದ ಸೆನ್ಸಾರ್ ಬೋರ್ಡ್‌ ತಮ್ಮ ಅಭಿಪ್ರಾಯವನ್ನು ತಿಳಿಸಿದೆ. ಅದೇನು ಅಂತ ನೋಡುವುದಕ್ಕೆ ಮುಂದೆ ಓದಿ..

'ದಿ ರಾಜಾ ಸಾಬ್' ಸಿನಿಮಾದಲ್ಲಿ ಪ್ರಭಾಸ್ ಜೊತೆಗೆ ಸಂಜಯ್ ದತ್, ಬೊಮನ್ ಇರಾನಿ, ಮಾಳವಿಕಾ ಮೋಹನನ್, ನಿಧಿ ಅಗರವಾಲ್, ರಿಧಿ ಕುಮಾರ್ ಹಾಗೂ ಜರೀನಾ ವಹಾಬ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಜೊತೆಗೆ ತಮನ್ ಮ್ಯೂಸಿಕ್ ಈ ಸಿನಿಮಾದ ಹೈಲೈಟ್. ಸೆನ್ಸಾರ್ ಮಂಡಳಿ ಸಿನಿಮಾ ವೀಕ್ಷಿಸಿದ್ದು, ಕೆಲವು ಚಿಕ್ಕ-ಪುಟ್ಟ ಸಲಹೆಗಳನ್ನು ನೀಡಿ ಕ್ಲಿಯರೆನ್ಸ್ ಕೊಟ್ಟಿದೆ ಎಂದು ಹೇಳಲಾಗುತ್ತಿದೆ.

ಇನ್ನು 'ದಿ ರಾಜಾ ಸಾಬ್' ಸ್ಟೋರಿ ಬಗ್ಗೆ ಸಣ್ಣ ಸುಳಿವು ಸಿಕ್ಕಿದ್ದು, ಈ ಸಿನಿಮಾದಲ್ಲಿ ಪ್ರಭಾಸ್ ರಾಜವಂಶದ ಉತ್ತರಾಧಿಕಾರಿಯಾಗಿರುತ್ತಾರೆ. ಅಜ್ಜಿ ಗಂಗಾದೇವಿ ಉರ್ಫ್ ಗಂಗವ್ವ (ಜರೀನಾ ವಹಾಬ್) ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ಸಾಮಾನ್ಯರಲ್ಲಿ ಒಬ್ಬರಂತೆ ಬದುಕುತ್ತಿರುತ್ತಾರೆ. ತಮ್ಮ ಪೂರ್ವಜರ ಪುರಾತನ ಕಟ್ಟಡವಾದ 'ಮಾಯಾಸಭಾ' ಪ್ರವೇಶಿಸಿದಾಗ ಅಲ್ಲಿ ನಡೆಯುವ ಘಟನೆಗಳು, ರಾಜಾ ಸಾಬ್ ಆಸ್ತಿ ಮರಳಿ ಪಡೆಯಲು ಮಾಡುವ ಸಾಹಸಗಳು, ಅಜ್ಜನನ್ನು ಒಪ್ಪಿಸಲು ಮಾಡುವ ಪ್ರಯತ್ನಗಳು ಸಿನಿಮಾ ಕಥೆಯ ತಿರುಳು. ಇಲ್ಲಿ ತಾತ-ಮೊಮ್ಮಗ ಹಾಗೂ ಅಜ್ಜಿ-ಮೊಮ್ಮಗನ ಭಾವನಾತ್ಮಕ ಸಂಬಂಧವೇ ರಾಜಾ ಸಾಬ್ ಜೀವಾಳ.

ಹಾರರ್, ಥ್ರಿಲ್ಲರ್, ಕಾಮಿಡಿ ಹಾಗೂ ಭಾವನಾತ್ಮಕ ಹಿನ್ನೆಲೆಯುಳ್ಳ ಈ ಸಿನಿಮಾವನ್ನು ಸೆನ್ಸಾರ್ ಮಂಡಳಿ ಅಧಿಕಾರಿಗಳು ಇತ್ತೀಚೆಗೆ ವೀಕ್ಷಿಸಿದ್ದಾರೆ. ಹಾಗೇ ಕೆಲವು ದೃಶ್ಯಗಳು ಹಾಗೂ ಸಂಭಾಷಣೆಗಳಲ್ಲಿ ಸಣ್ಣ-ಪುಟ್ಟ ಬದಲಾವಣೆಗಳನ್ನು ಮಾಡುವಂತೆ ಸಲಹೆ ನೀಡಿದ್ದರು. ಅಂದರಂತೆ ಚಿತ್ರತಂಡ ತಿದ್ದುಪಡಿಗಳನ್ನು ಮಾಡಿದೆ. ಹೀಗಾಗಿ ಯಾವುದೇ ಆಕ್ಷೇಪಣೆ ಇಲ್ಲದೆ ಕ್ಲಿಯರೆನ್ಸ್ ಸಿಕ್ಕಿದೆ ಎನ್ನಲಾಗಿದೆ.

Prabhas Malavika Mohanan Sanjay Dutt starrer Raja Saab movie First review in Kannada

ಪ್ರಭಾಸ್ ಸಿನಿಮಾ ಬಗ್ಗೆ ಸೆನ್ಸಾರ್ ಮಂಡಳಿ ಮೆಚ್ಚುಗೆ ವ್ಯಕ್ತಪಡಿಸಿದ್ದು, 'UA (UA16+)' ಸರ್ಟಿಫಿಕೇಟ್ ನೀಡಿದೆ. ಪ್ರಭಾಸ್ ಇಲ್ಲಿವರೆಗೂ ಮಾಸ್ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದೇ ಹೆಚ್ಚು. ಆದರೆ, 'ದಿ ರಾಜಾ ಸಾಬ್' ಅವರ ವೃತ್ತಿ ಬದುಕಿಗೆ ಹೊಸತು. ಈ ಸಿನಿಮಾದಲ್ಲಿ ಪ್ರಭಾಸ್ ಸಂಪೂರ್ಣವಾಗಿ ವಿಭಿನ್ನವಾಗಿ ಕಾಣಿಸಿಕೊಳ್ಳುತ್ತಾರೆ. ಅದರಲ್ಲೂ ಮನರಂಜನೆಯನ್ನು ಕಿಂಚಿತ್ತೂ ಕಡಿಮೆ ಮಾಡದೆ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ಸಿನಿಮಾ ಪ್ರೀ-ಕ್ಲೈಮ್ಯಾಕ್ಸ್ ಹಾಗೂ ಕ್ಲೈಮ್ಯಾಕ್ಸ್ ಪಾರ್ಟ್ ಸುಮಾರು 45 ನಿಮಿಷಗಳಷ್ಟಿದೆ. ಒಟ್ಟಾರೆ ಸಿನಿಮಾದ ಅವಧಿ ಸುಮಾರು 3 ಗಂಟೆ 10 ನಿಮಿಷಗಳು ಎಂದು ಚಿತ್ರತಂಡ ಸ್ಪಷ್ಟಪಡಿಸಿದೆ.

'ದಿ ರಾಜಾ ಸಾಬ್' ಸಿನಿಮಾದಲ್ಲಿ ಭವ್ಯ ಸೆಟ್‌ಗಳು, ಅದ್ಭುತ ವಿಎಫ್‌ಎಕ್ಸ್ ಪ್ರಮುಖ ಆಕರ್ಷಣೆ ಎನ್ನಲಾಗಿದೆ. ಹಾಗೇ ಸಿನಿಮಾ ಸ್ಟೋರಿ ಕೂಡ ಇಂಟ್ರೆಸ್ಟಿಂಗ್ ಆಗಿದೆ ಎನ್ನಲಾಗಿದೆ. ಈ ಸಿನಿಮಾ ಪ್ರೇಕ್ಷಕರನ್ನು ಆರಂಭದಿಂದ ಕೊನೆಯವರೆಗೂ ಹಿಡಿದಿಟ್ಟುಕೊಳ್ಳುತ್ತದೆ. 'ಬಾಹುಬಲಿ' ನಂತರ ಆಕ್ಷನ್ ಹೀರೋ ಆಗಿ ಮಾತ್ರ ನೋಡಿದ್ದ ಪ್ರಭಾಸ್‌ರನ್ನು ರೊಮ್ಯಾಂಟಿಕ್ ಅವತಾರದಲ್ಲಿ ಅಭಿಮಾನಿಗಳು ನೋಡಲಿದ್ದಾರೆ. ಸಂಕ್ರಾಂತಿ ಹಬ್ಬದ ಪ್ರೇಕ್ಷಕರ ಸಂಭ್ರಮವನ್ನು ಇಮ್ಮಡಿಗೊಳಿಸುವಂತೆ ಮಾರುತಿ ಈ ಸಿನಿಮಾವನ್ನು ನಿರ್ಮಿಸಿದ್ದಾರೆಂದು ಸೆನ್ಸಾರ್ ಮಂಡಳಿಯಿಂದ ಬಹಿರಂಗಗೊಂಡಿದೆ ಎಂದು ಫಿಲ್ಮಿಬೀಟ್ ತೆಲುಗು ವರದಿ ಮಾಡಿದೆ.

More from Filmibeat

English summary
Prabhas Malavika Mohanan Sanjay Dutt starrer Raja Saab movie First review in Kannada.
Read more about: prabhas sanjay dutt telugu movie
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X