Gandhada Gudi Twitter Review: ಅಪ್ಪು ಕರೆದುಕೊಂಡು ಹೋಗುವ ಗುಡಿಯೇ 'ಗಂಧದ ಗುಡಿ'!

ಇಷ್ಟು ದಿನ ಆದು ಕೂತಿದ್ದ ಕ್ಷಣ ಬಂದೇ ಬಿಟ್ಟಿದೆ. ಪುನೀತ್ ರಾಜ್‌ಕುಮಾರ್ ಕನಸನ್ನು ಈಗಾಗಲೇ ಹಲವು ಮಂದಿ ಕಣ್ತುಂಬಿಕೊಂಡಿದ್ದಾರೆ. 'ಗಂಧದ ಗುಡಿ' ಪ್ರೀಮಿಯರ್ ಶೋಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಎಲ್ಲೆಲ್ಲಿ ಸಿನಿಮಾ ನೋಡಿದ್ದಾರೋ ಅಲ್ಲೆಲ್ಲಾ ಪಾಸಿಟಿವ್ ರೆಸ್ಪಾನ್ಸ್ ಸಿಗುತ್ತಿದೆ.

90 ನಿಮಿಷ ತೆರೆಮೇಲೆ ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರನ್ನು ನೋಡಿ ಫ್ಯಾನ್ಸ್ ಭಾವಕರಾಗಿದ್ದಾರೆ. ಮತ್ತೆ ಕೆಲವರು ಹೆಮ್ಮೆ ವ್ಯಕ್ತಪಡಿಸಿದ್ದಾರೆ. ಒಬ್ಬೊಬ್ಬ ಅಭಿಮಾನಿಗೆ ಒಂದೊಂದು ರೀತಿಯ ಅನುಭವ ಆಗಿದೆ. ಆ ಎಲ್ಲಾ ಅನುಭವಗಳನ್ನು ಟ್ವೀಟ್ ಮೂಲಕ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

'ಹೊಸ ಯುಗ ಆರಂಭ ಆಗಿದೆ'

'ಹೊಸ ಯುಗ ಆರಂಭ ಆಗಿದೆ'

ಪವರ್‌ಸ್ಟಾರ್ ವಿನೂತನ ಪ್ರಯತ್ನಕ್ಕೆ ಅಭಿಮಾನಿಗಳು ಭಾವುಕರಾಗಿದ್ದಾರೆ. ಕನ್ನಡದ ಬಗ್ಗೆ, ಕರ್ನಾಟಕದ ಬಗ್ಗೆ ಜನರು ಹೆಮ್ಮೆಪಡುವಂತೆ ಮಾಡುವಲ್ಲಿ ಅಪ್ಪು ಯಶಸ್ವಿಯಾಗಿದ್ದಾರೆ. " ಹೊಸ ಯುಗ ಆರಂಭ ಆಗಿದೆ. ಅಪ್ಪು ಸರ್ ಹುಟ್ಟಿದ ಯುಗದಲ್ಲಿ ನಾನು ಹುಟ್ಟಿದ್ದೇನೆ ಅಂತ ನಾನು ಹೆಮ್ಮೆಯಿಂದ ಹೇಳಿಕೊಳ್ಳುತ್ತೇನೆ. ಕನ್ನಡ ಕರ್ನಾಟಕ ಇರುವವರೆಗೂ ಅಪ್ಪು ಸರ್ ಸಾರ್ವಭೌಮ." ಎಂದು ಮನೋಜ್ ಎಂಬುವವರು ಟ್ವೀಟ್ ಮಾಡಿದ್ದಾರೆ.

'ಇದು ಹೃದಯ ಸ್ಪರ್ಷಿಸುವ ಅನುಭವ'

'ಇದು ಹೃದಯ ಸ್ಪರ್ಷಿಸುವ ಅನುಭವ'

" ಗಂಧದ ಗುಡಿ ಇದೊಂದು ಹೃದಯ ಸ್ಪರ್ಷಿಸುವ ಅನುಭವ. ಪುನೀತ್ ಸರ್ ಇಲ್ಲಿ ತುಂಬಾನೇ ಎಂಜಾಯ್ ಮಾಡಿದ್ದಾರೆ. ಇಲ್ಲಿ ಹಂಚಿಕೊಂಡಿರುವ ಅವರ ಖುಷಿ ಹಾಗೂ ಭಯಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ನಮ್ಮದೇ ಭೂಮಿಯನ್ನು ಬೇರೆಯದ್ದೇ ರೀತಿಯಲ್ಲಿ ನೋಡುತ್ತಿದ್ದೇನೆ. ವಿಶ್ವದರ್ಜೆಯ ಮಟ್ಟದಲ್ಲಿ ಈ ಸಿನಿಮಾವನ್ನು ಚಿತ್ರೀಕರಿಸಿ ನಮಗೆ ನೀಡಿರುವುದು ಅದ್ಭುತ. ಇಡೀ ತಂಡಕ್ಕೆ ನಾನು ಧನ್ಯವಾದಗಳನ್ನು ಅರ್ಪಿಸುತ್ತೇನೆ."

'ಈ ಕಂಗಳು ಮಾಡಿದ ಪುಣ್ಯವೋ'

'ಈ ಕಂಗಳು ಮಾಡಿದ ಪುಣ್ಯವೋ'

'ಗಂಧದ ಗುಡಿ' ನೋಡಿ ಹೊರಬಂದವರಿಗೆ ಈ ಸಿನಿಮಾ ಹೊಸ ಅನುಭವವನ್ನು ನೀಡುತ್ತಿದೆ. ಕೆಲವರಿಗೆ ಮತ್ತೆ ಅಣ್ಣಾವ್ರು ನಟಿಸಿದ 'ಗಂಧದ ಗುಡಿ' ಸಿನಿಮಾನೇ ಇಷ್ಟ ಆಗಿದೆ. ಅವರ ಸಿನಿಮಾದ ಹಾಡುಗಳು ನೆನಪಿಗೆ ಬಂದಿದೆ. " ಇದು ಯಾರ ತಪಸಿನ ಫಲವೋ.. ಈ ಕಂಗಳು ಮಾಡಿದ ಪುಣ್ಯವೋ..! ಕರ್ನಾಟಕದ ಭವ್ಯ ಪ್ರಕೃತಿಯನ್ನು ಅದ್ಭುತವಾಗಿ ಅನ್ವೇಷಣೆ ಮಾಡಿ, ಸರಳವಾಗಿ ತೆರೆಮೇಲೆ ತೋರಿಸಲಾಗಿದೆ." ಎಂದು ಶ್ರೇಯಸ್ ಪ್ರಕಾಶ್ ಎಂಬುವವರು ಅಭಿಪ್ರಾಯ ಹಂಚಿಕೊಂಡಿದ್ದಾರೆ.

'ಗಂಧದ ಗುಡಿ ಇದು ನಮ್ಮ ಹೆಮ್ಮೆ'

'ಗಂಧದ ಗುಡಿ ಇದು ನಮ್ಮ ಹೆಮ್ಮೆ'

"ನನ್ನ ಬದುಕಿನಲ್ಲೇ ಅತ್ಯಂತ ಅದ್ಭುತ ಅನುಭವ ಕೊಟ್ಟ ಸಿನಿಮಾವಿದು. ಎಪಿಕ್ ಸಿನಿಮಾವನ್ನು ನೀಡಿದ್ದಕ್ಕೆ ಡಾ.ಪುನೀತ್ ರಾಜ್‌ಕುಮಾರ್ ಸರ್, ಅಮೋಘವರ್ಷ ಸರ್ ಹಾಗೂ ತಂಡಕ್ಕೆ ಧನ್ಯವಾದಗಳು. ಈ ಸಿನಿಮಾವನ್ನು 4K ಸ್ಕ್ರೀನ್‌ನಲ್ಲಿಯೇ ನೋಡಬೇಕು. ಗಂಧದ ಗುಡಿ ಇದು ನಮ್ಮ ಹೆಮ್ಮೆ." ಎಂದು ಸಿದ್ದೇಶ್ ಎಂಬುವವರು ಟ್ವೀಟ್ ಮಾಡಿ, ಸಿನಿಮಾ ಬಗ್ಗೆ ತಿಳಿಸಿದ್ದಾರೆ. ಅಪ್ಪು ಕೊನೆಯ ಸಿನಿಮಾದಲ್ಲೂ ಸಮಾಜಕ್ಕೆ ಸಂದೇಶ ನೀಡಿ ಹೋಗಿದ್ದಾರೆ. ಟ್ವಿಟರ್‌ ರಿವ್ಯೂಗಳನ್ನು ನೋಡಿದರೆ ಅದು ಜನರಿಗೆ ತಲುಪುವಲ್ಲಿ ಯಶಸ್ವಿಯಾಗುತ್ತೆ ಅನ್ನುವುದರಲ್ಲಿ ಅನುಮಾನವೇ ಇಲ್ಲ.

More from Filmibeat

English summary
Puneeth Rajkumar Last Movie Gandhada Gudi Twitter Review, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X