James First Half Review: 'ಜೇಮ್ಸ್' ಮೊದಲಾರ್ಧ ಭರ್ಜರಿ ಆಕ್ಷನ್.. ಭರ್ಜರಿ ಟ್ವಿಸ್ಟ್

ಪವರ್‌ಸ್ಟರ್ ಪುನೀತ್ ರಾಜ್‌ಕುಮಾರ್ ಅಭಿಯದ ಕೊನೆಯ ಸಿನಿಮಾ 'ಜೇಮ್ಸ್'. ಈ ಕಾರಣಕ್ಕೆ ಈ ಚಿತ್ರ ಹಲವು ನಿರೀಕ್ಷೆಗಳನ್ನು ಹುಟ್ಟಾಕಿದೆ. 'ರಾಜಕುಮಾರ್' ಸಿನಿಮಾದ ಬಳಿಕ ಮತ್ತೆ ಅಪ್ಪು ಜೊತೆ ಪ್ರಿಯಾ ಆನಂದ್ ಕಾಣಿಸಿಕೊಂಡಿದ್ದಾರೆ. 'ಭರ್ಜರಿ' ಸಿನಿಮಾದ ನಿರ್ದೇಶಕ ಚೇತನ್ ಕುಮಾರ್ ಆಕ್ಷನ್ ಕಟ್ ಹೇಳಿದ್ದಾರೆ. ಚರಣ್ ರಾಜ್ ಮ್ಯೂಸಿಕ್ ಇದೆ. ಶಿವಣ್ಣ ಮತ್ತು ರಾಘಣ್ಣ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ತಿದ್ದಾರೆ. ವಿಶೇಷ ಅಂದ್ರೆ, ಇದೇ ಮೊದಲ ಬಾರಿಗೆ ಅಪ್ಪು ಸೈನಿಕನಾಗಿ ತೆರೆಮೇಲೆ ಕಾಣಿಸಿಕೊಳ್ಳಲಿದ್ದಾರೆ.

Rating:
3.0/5

Recommended Video

James Craze | ದೇವರ ಜಾಗವನ್ನು ಆಕ್ರಮಿಸಿಕೂಂಡ ಅಪ್ಪು, ಇದು ಅಭಿಮಾನಿಗಳ ಪ್ರೀತಿ | Puneeth Rajkumar

ಪವರ್‌ಸ್ಟಾರ್ ಸಿನಿಮಾ ಅಂದ್ಮೇಲೆ ಪವರ್‌ಫುಲ್ ಆಗಿಯೇ ಇರಬೇಕು. ಭರ್ಜರಿ ಆಕ್ಷನ್ ಸೀನ್‌ಗಳು, ಪವರ್‌ಫುಲ್ ಡೈಲಾಗ್, ಭರ್ಜರಿ ಕಾಮಿಡಿ ಇರಬೇಕು. 'ಜೇಮ್ಸ್' ಸಿನಿಮಾ ಮೊದಲಾರ್ಧದಲ್ಲಿ ಎಲ್ಲಾ ಅಂಶ 'ಜೇಮ್ಸ್' ಸಿನಿಮಾದಲ್ಲಿ ಇದೆಯಾ? ಪುನೀತ್ ರಾಜ್‌ಕುಮಾರ್ ಎಂಟ್ರಿ ಸಿನಿಮಾದಲ್ಲಿ ಹೇಗಿರುತ್ತೆ? ಮೊದಲಾರ್ಧದಲ್ಲಿ ಪ್ರೇಕ್ಷಕರಿಗೆ ಅಪ್ಪು ಅಭಿಮಾನಿಗಳಿಗೆ ನೋಡಲು ಸಿಕ್ಕಿದ್ದು ಏನು? ಈ ಎಲ್ಲಾ ಅಂಶಗಳು ಕುತೂಹಲ ಕೆರಳಿಸಿವೆ. ಹಾಗಿದ್ದರೆ, 'ಜೇಮ್ಸ್' ಫಸ್ಟ್ ಹಾಫ್ ಹೇಗಿದೆ? ತಿಳಿಯಲು ಮುಂದೆ ಓದಿ.

ಫಸ್ಟ್ ಹಾಫ್ ಆಕ್ಷನ್+ಟ್ವಿಸ್ಟ್

ಫಸ್ಟ್ ಹಾಫ್ ಆಕ್ಷನ್+ಟ್ವಿಸ್ಟ್

'ಜೇಮ್ಸ್' ಯಾರು? ಅವರನ ಕೆಲಸ ಏನು? ಸೈನಿಕ ಪಾತ್ರಕ್ಕೂ ಅಪ್ಪುಗೂ ಏನು ಸಂಬಂಧ? ಇವೆಲ್ಲಾ ಕುತೂಹಲಗಳಿಗೆ ಮೊದಲಾರ್ಧದಲ್ಲಿಯೇ ಉತ್ತರ ಸಿಗುತ್ತಾ? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಸಿನಿಮಾದ ಕೊನೆಯಲ್ಲಿ ಸಿಗುತ್ತೆ. 'ಜೇಮ್ಸ್' ಸಿನಿಮಾ ಆರಂಭವೇ ಪವರ್‌ಫುಲ್ ಆಗಿದೆ. ಕಾರ್​ ಚೇಸಿಂಗ್​ ಮೂಲಕ ಪುನೀತ್​ ರಾಜ್​ಕುಮಾರ್ ಪವರ್‌ಫುಲ್ ಆಗಿ​ ಎಂಟ್ರಿ ಕೊಡುತ್ತಾರೆ. ಅಪ್ಪು ಎಂಟ್ರಿನೇ ಮಾಸ್ ಮತ್ತು ಪವರ್‌ಫುಲ್ ಆಗಿರುವುದರಿಂದ ಅಭಿಮಾನಿಗಳ ಕಣ್ಣಿಗೆ ಇದು ಭರ್ಜರಿ ಹಬ್ಬ.

ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಈ ಸಿನಿಮಾದಲ್ಲಿ ಸಂತೋಷ್ ಎಂಬ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸೆಕ್ಯೂರಿಟಿ ಎಜೆನ್ಸಿಯೊಂದನ್ನು ನಡೆಸುತ್ತಿರುತ್ತಾರೆ. ಆರಂಭದಲ್ಲಿಯೇ ಮಾಸ್ ಎಂಟ್ರಿ ಜೊತೆ ವಿಲನ್‌ಗಳ ಎಂಟ್ರಿ ಕೂಡ ಆಗುತ್ತೆ. ಆಕ್ಷನ್ ಸೀನ್‌ಗಳು ಬರುವಾಗಲೇ ಇದು ಡ್ರಗ್ ಮಾಫಿಯಾಗೆ ಸಂಬಂಧಿಸಿದ ಕಥೆ ಎಂಬುದು ಗೊತ್ತಾಗುತ್ತೆ. ಇಂಟರ್ ನ್ಯಾಷನಲ್ ಡ್ರಗ್ ಗ್ಯಾಂಗ್ ಗಳ ನಡುವೆ ಕಿತ್ತಾಟದ ಕಥೆ ಎಂಬುವುದು ಮನವರಿಕೆ ಆಗುತ್ತೆ.

ಫಸ್ಟ್ ಹಾಫ್ ಬಳಿಕ ಟ್ವಿಸ್ಟ್

ಫಸ್ಟ್ ಹಾಫ್ ಬಳಿಕ ಟ್ವಿಸ್ಟ್

ಎರಡನೇ ಭಾಗದಲ್ಲಿ 'ಜೇಮ್ಸ್' ಸಿನಿಮಾದ ಅಸಲಿ ಕಥೆ ರಿವೀಲ್ ಆಗುತ್ತೆ. ಅಪ್ಪುಯೋಧನಾಗಿ ಕಾಣಿಸಿಕೊಳ್ಳುವುದೂ ಕೂಡ ಎರಡನೇ ಭಾಗದಲ್ಲಿಯೇ. ಹೀಗಾಗಿ ಮೊದಲಾರ್ಧ ಮಜಾ ಕೊಟ್ಟಷ್ಟೇ ಸೆಕೆಂಡ್ ಹಾಫ್ ಕೂಡ ಕೊಡಬಹುದು. ಅಸಲಿಗೆ ನಿರ್ದೇಶಕ ಚೇತನ್ ಕುಮಾರ್ ಇಂಟರ್‌ವೆಲ್‌ನಲ್ಲಿಯೇ ಭರ್ಜರಿ ಟ್ವಿಸ್ಟ್ ಕೊಟ್ಟಿದ್ದಾರೆ. ಹಾಗಂತ ಪುನೀತ್ ಮಾಸ್ ಎಂಟ್ರಿ, ಆಕ್ಷನ್‌ಗಷ್ಟೇ ಫಸ್ಟ್ ಹಾಫ್ ಸೀಮಿತವಾಗಿಲ್ಲ. ಇನ್ನೂ ಇಂಟ್ರೆಸ್ಟಿಂಗ್ ವಿಷಯಗಳಿವೆ.

ಸೂಟ್ ಆಗಿದೆ ಶಿವಣ್ಣನ ಧ್ವನಿ

ಸೂಟ್ ಆಗಿದೆ ಶಿವಣ್ಣನ ಧ್ವನಿ

'ಜೇಮ್ಸ್' ಸಿನಿಮಾ ತಂಡಕ್ಕೆ ಎದುರಾಗಿದ್ದ ದೊಡ್ಡ ಆತಂಕ ಅಂದರೆ, ಅದು ವಾಯ್ಸ್. ನಿರ್ದೇಶಕ ಚೇತನ್ ಸೇರಿದಂತೆ ಇಡೀ ಅಪ್ಪು ಧ್ವನಿಯನ್ನೇ ಉಳಿಸಿಕೊಳ್ಳಲು ಪ್ರಯತ್ನಿಸಿದ್ದರು. ಆದರೆ, ಅದು ಸಾಧ್ಯವಾಗದೇ ಇದ್ದಿದ್ದರಿಂದ ಶಿವಣ್ಣ 'ಜೇಮ್ಸ್' ಸಿನಿಮಾ ಡಬ್ಬಿಂಗ್ ಮಾಡಿದ್ದರು. ಈ ವಾಯ್ಸ್ ಅಪ್ಪುಗೆ ಸೂಟ್ ಆಗುತ್ತಾ? ಪ್ರೇಕ್ಷಕರಿಗೆ ಧ್ವನಿ ಹಿಡಿಸುತ್ತಾ? ಅನ್ನೋ ಅನುಮಾನಗಳಿಗೂ ತೆರೆಬಿದ್ದಿದೆ. ಶಿವಣ್ಣನ ಧ್ವನಿ ಚೆನ್ನಾಗಿಯೇ ಸೂಟ್ ಆಗಿದೆ.

ಸಾಧು ಕಾಮಿಡಿ ಓಕೆ ಓಕೆ

ಸಾಧು ಕಾಮಿಡಿ ಓಕೆ ಓಕೆ

'ಜೇಮ್ಸ್' ಮೊದಲಾರ್ಧದಲ್ಲಿ ಸಾಧು ಕೋಕಿಲಾ ಕಾಮಿಡಿ ಇದೆ. ಪವರ್‌ಫುಲ್ ಕಥೆಯ ಜೊತೆಗೆ ಸಾಧು ಕಾಮಿಡಿ ಕೂಡ ಸೂಪರ್‌ ಆಗಿ ಸಾಗುತ್ತೆ. ಕಾಮಿಡಿ ದೃಶ್ಯಗಳು ಅದ್ಭುತ ಅಂತ ಅನಿಸದೆ ಹೋದರೂ, ಸಿನಿಮಾ ವೇಗಕ್ಕೆ ಕುಂದು ತರುವುದಿಲ್ಲ. ಇನ್ನು ಫೈಟ್ ಸೀನ್‌ಗಳು ಸಿನಿಮಾದ ಹೈಲೈಟ್. ಈ ಮಾಸ್ ಸೀನ್‌ಗಳನ್ನು ಭರ್ಜರಿ ಸೆಟ್‌ಗಳಲ್ಲಿ ಅದ್ದೂರಿಯಾಗಿ ಚಿತ್ರೀಕರಿಸಲಾಗಿದೆ. ಅಂದ್ಹಾಗೆ ಇಂಟರ್‌ವಲ್ ಬಳಿಕ ಸೈನ್ಯದ ಕಥೆ ರಿವೀಲ್ ಆಗುತ್ತೆ.

More from Filmibeat

English summary
Puneeth Rajkumar Starrer James Kannada Movie First half Review and Rating. Movie directed by Chethan Kumar.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X