Su From So Review: ಅದೆಷ್ಟು ದಿನಗಳಾಗಿತ್ತೋ ಕಣ್ಣಲ್ಲಿ ನೀರು ಬರುವಂತೆ ನಕ್ಕು.. ಇದು ಸೂಪರ್ ಸಿನಿಮಾ ಫ್ರಮ್ ಸೌತ್ ಇಂಡಿಯಾ!

Rating:
4.0/5

ಒಂದು ಸಿನಿಮಾ ಹೇಗಿರಬೇಕು..? ಬೇಸಿಕಲಿ ಹೇಳೋದಾದರೆ, ಒಂದೋ ನಗಿಸಬೇಕು.. ಇಲ್ಲವೇ ಅಳಿಸಬೇಕು. ಇತ್ತೀಚೆಗಿನ ಸಿನಿಮಾಗಳು ಇವೆರಡನ್ನು ಬಿಟ್ಟು ಬೇರೆಯದ್ದೇ ದಾರಿ ಹಿಡಿದಿವೆ. ಆಕ್ಷನ್, ಮಾಸ್, ಕ್ಲಾಸ್ ಅಂತ ವಿಭಾಗ ಮಾಡಿಕೊಂಡು ಸಿನಿಮಾ ಮಾಡುತ್ತಾ? ತಮ್ಮ ಗುಂಡಿಯನ್ನು ತಾವೇ ತೋಡಿಕೊಂಡು ಅದರೊಳಗೆ ಬಿದ್ದಿದ್ದೂ ಆಗಿವೆ. ಈಗ ಆ ಗುಂಡಿಯಿಂದ ಎದ್ದು ಬರೋದು ಹೇಗೆ? ಈ ಪ್ರಶ್ನೆಗೆ ಉತ್ತರ ತಗೊಂಡು ರಾಜ್ ಬಿ ಶೆಟ್ಟಿ ಬಂದಿದ್ದಾರೆ.

ಇಂದು (ಜುಲೈ 25) ತೆರೆಕಂಡಿರುವ 'ಸು ಫ್ರಮ್ ಸೋ' ಸಿನಿಮಾವೇ ಸ್ಯಾಂಡಲ್‌ವುಡ್ ಫಿಲ್ಮ್‌ ಮೇಕರ್‌ಗಳಿಗೆ ಸಿಕ್ಕಿರುವ ಉತ್ತರ. ಈ ಸಿನಿಮಾದಲ್ಲಿ ಯಾರೂ ಸೂಪರ್‌ಸ್ಟಾರ್‌ಗಳಿಲ್ಲ. ಇರೋರೆಲ್ಲರೂ ಅಪ್ಪಟ ಕಲಾವಿದರು. ಅನಗತ್ಯ ಬಿಲ್ಡಪ್‌ ಇಲ್ಲ. ಓಹೋ ಎನ್ನುವಂತಹ ಆಕ್ಷನ್ ಸೀಕ್ವೆನ್ಸ್ ಇಲ್ಲ. ಬೇಕಂತೆಲೇ ತುರುಕಿರೊ ಹಾಡುಗಳಿಲ್ಲ. ಒಳ್ಳೆಯ ಕಂಟೆಂಟ್‌, ಜೊತೆಗೆ ಹೊಟ್ಟೆ ಹುಣ್ಣಾಗಿಸುವಷ್ಟು ನಗು. ಪ್ರೇಕ್ಷಕನಿಗೆ ನಗೆಗಡಲಲ್ಲಿ ತೇಲಿಸಿಬಿಟ್ಟಿದೆ.

Raj B Shetty produced Su From So Kannada movie review and Rating

ಒಳ್ಳೊಳ್ಳೆ ಕಂಟೆಂಟ್ ಹುಡುಕಾಟದಲ್ಲಿರುವ ರಾಜ್‌ ಬಿ ಶೆಟ್ಟಿಗೆ ಒಂದೊಂದು ಸಿನಿಮಾ ಸಿಕ್ಕಿದೆ. ಈ ಸಿನಿಮಾದಲ್ಲಿ ಅವರು ಹೀರೋ ಅಲ್ಲದೇ ಹೋದರೂ, ಒಂದು ಚಿಕ್ಕ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಾರೆ. ಈ ಸಿನಿಮಾದಲ್ಲಿ ರಾಜ್ ಬಿ ಶೆಟ್ಟಿ ನಟ ಅನ್ನೋದಕ್ಕಿಂತ ಹೆಚ್ಚಾಗಿ ನಿರ್ಮಾಪಕನಾಗಿ ಕಾಣಿಸಿಕೊಂಡಿದ್ದಾರೆ. ಹಾಗಿದ್ದರೆ, 'ಸು ಫ್ರಮ್ ಸೋ' ಸಿನಿಮಾದ ಹೈಲೈಟ್ ಏನು? ಈ ಸಿನಿಮಾ ಪ್ರೇಕ್ಷಕರಿಗೆ ಯಾಕೆ ಇಷ್ಟ ಆಗುತ್ತೆ? ಈ ಸಿನಿಮಾದ ಪ್ಲಸ್ ಏನು? ಮೈನಸ್ ಏನು? ತಿಳಿಯುವುದಕ್ಕೆ ಮುಂದೆ ಓದಿ.

'ಸು ಫ್ರಮ್ ಸೋ' ಏನಿದು ಕಥೆ?

ಕರಾವಳಿ ಭಾಗದ ಒಂದು ಊರು. ಅಲ್ಲೊಂದಿಷ್ಟು ಯುವಕರ ಹಿಂಡು. ಅದರಲ್ಲೊಬ್ಬ ಅಶೋಕ (ಜೆಪಿ ತುಮಿನಾಡ್). ಈ ಊರಿಗೆ ಒಬ್ಬ ನಾಯಕ. ಅವನೇ ರವಿ ಅಣ್ಣ (ಶನೀಲ್ ಗೌತಮ್). ಊರಿನವರಿಗೆ ಅದೇನೇ ಸಮಸ್ಯೆ ಆದರೂ ಅಲ್ಲಿಗೆ ರವಿಯಣ್ಣ ಬರಬೇಕು. ಅಲ್ಲಿಗೆ ಬಂದರೆ, ಆ ಸಮಸ್ಯೆ ಇತ್ಯರ್ಥ ಆದಂತೆ. ಹೀಗಿರುವಾಗ ಅಶೋಕನ ಮೈ ಮೇಲೆ ಪಕ್ಕದ ಊರಿನ ಸುಲೋಚನಾಳ ದೆವ್ವ ಬರುತ್ತೆ. ಸುಲೋಚನಾ ಯಾರು? ಅಶೋಕನ ಮೈ ಮೇಲೆ ಯಾಕೆ ಬಂದಳು? ಅಶೋಕನ ಸಮಸ್ಯೆಯನ್ನು ರವಿಯಣ್ಣ ಬಗೆ ಹರಿಸುವುದಕ್ಕೆ ಪರದಾಡಿದ್ದು ಯಾಕೆ? ಈ ಎಲ್ಲ ಪ್ರಶ್ನೆಗಳಿಗೆ ಸಿನಿಮಾದಲ್ಲಿ ಉತ್ತರ ಸಿಗುತ್ತೆ. ಜೊತೆಗೆ ಹೊಟ್ಟೆ ಹುಣ್ಣಾಗಿಸುವಷ್ಟು ನಗು ಕೂಡ ಸಿಗುತ್ತೆ.

Raj B Shetty produced Su From So Kannada movie review and Rating

ಕ್ಲೀನ್ ಕಾಮಿಡಿ ಕಂಟೆಂಟ್ ಸಿನಿಮಾ

ಹಾಸ್ಯ ಅಂದರೆ, ಡಬಲ್ ಮೀನಿಂಗ್ ಇರಲೇಬೇಕು. ಇಲ್ಲದೇ ಹೋದರೆ ಯುವಕರನ್ನು ಸಿನಿಮಾ ಕಡೆಗೆ ಸೆಳೆಯುವುದಕ್ಕೆ ಆಗುವುದಿಲ್ಲ ಎನ್ನುವ ಆಲೋಚನೆಯನ್ನು ಬದಲಿಸುವ ಸಿನಿಮಾ. 'ಸು ಫ್ರಮ್ ಸೋ' ಸಿನಿಮಾದ ಉದ್ದಕ್ಕೂ ಕ್ಲೀನ್ ಕಾಮಿಡಿ ಹೊಟ್ಟೆ ಹುಣ್ಣಾಗಿಸುವಷ್ಟು ನಗಿಸುತ್ತೆ. ಸಿನಿಮಾದ ದೃಶ್ಯಗಳ ಜೊತೆಗೆ ಸಂಭಾಷಣೆ ಕೂಡ ಪ್ರೇಕ್ಷಕನ ಬಿದ್ದು ಎದ್ದು ನಗುವುದಕ್ಕೆ ಪ್ರಮುಖ ಪಾತ್ರವನ್ನು ವಹಿಸಿದೆ.

ಸಿನಿಮಾದ ಪ್ಲಸ್ ಪಾಯಿಂಟ್ ಏನು?

ರಾಜ್ ಬಿ ಶೆಟ್ಟಿ ಹಾಗೂ ಸ್ನೇಹಿತರು ಸೇರಿ ನಿರ್ಮಿಸಿರುವ ಈ ಸಿನಿಮಾ ಪ್ರೇಕ್ಷಕನ ಮನಗೆಲ್ಲುತ್ತೆ. ಅದಕ್ಕೆ ಸಾಕಷ್ಟು ಪಾಸಿಟಿವ್ ಅಂಶಗಳು ಇವೆ. ಜೆಪಿ ತುಮಿನಾಡ್ ಅವರ ರಚನೆ ಮತ್ತು ನಿರ್ದೇಶನ ಮೆಚ್ಚುಗೆಯಾಗುತ್ತೆ. ಪ್ರೇಕ್ಷಕರಿಗೆ ಹಾಸ್ಯದ ಭರಪೂರ ಮನರಂಜನೆ ನೀಡುವಲ್ಲಿ ಯಶಸ್ವಿಯಾಗಿದ್ದಾರೆ. ಬಹಳ ದಿನಗಳ ಬಳಿಕ ಕನ್ನಡ ಸಿನಿಮಾವೊಂದರಲ್ಲಿ ನೆಗೆಟಿವ್ ಅಂಶಗಳಿಗಿಂತ ಪಾಸಿಟಿವ್ ಅಂಶಗಳೇ ಎದ್ದು ಕಾಣುತ್ತಿವೆ.

ಸಿನಿಮಾದ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಅದ್ಭುತವಾಗಿದೆ.
ಪ್ರತಿಯೊಬ್ಬ ಕಲಾವಿದನೂ ನೆನಪಿನಲ್ಲಿ ಉಳಿಯುತ್ತಾನೆ
ಸಣ್ಣ ಸಣ್ಣ ಹಾಸ್ಯದ ಸನ್ನಿವೇಶಗಲೂ ಜನರನ್ನು ನಗಿಸುತ್ತವೆ
ಕರುಣಾಕರ ಗುರೂಜಿ ಪಾತ್ರದಲ್ಲಿ ರಾಜ್‌ ಬಿ ಶೆಟ್ಟಿ ಅದ್ಭುತ
ಶನೀಲ್ ಗೌತಮ್, ಪ್ರಕಾಶ್ ಕೆ ತುಮಿನಾಡ, ದೀಪಕ್ ರೈ ಪಣಜೆ ಇಷ್ಟ ಆಗುತ್ತೆ
ಜೆಪಿ ತುಮಿನಾಡು ನಿರ್ದೇಶನಕ್ಕೆ ಫುಲ್ ಮಾರ್ಕ್ಸ್

ಸಂಗೀತ, ಹಿನ್ನಲೆ ಸಂಗೀತ ಅದ್ಭುತ

ಹಾಸ್ಯ ಪ್ರಧಾನ ಸಿನಿಮಾಗಳಲ್ಲಿ ಸಹಜವಾಗಿ ಚಾಲೆಂಜಿಂಗ್ ಅಂತ ಅನಿಸೋದು ಸಂಗೀತ ಹಾಗೂ ಹಿನ್ನೆಲೆ ಸಂಗೀತ. ಕೇಳುವುದಕ್ಕೆ, ನೋಡುವುದಕ್ಕೆ ಸಿಂಪಲ್ ಅಂತ ಅನಿಸಿದರೂ ಸನ್ನಿವೇಶಕ್ಕೆ, ಸಂದರ್ಭಕ್ಕೆ ತಕ್ಕಂತೆ ಹಾಡುಗಳು ಬೇಕು, ಹಿನ್ನೆಲೆ ಸಂಗೀತವೂ ಬೇಕು. ಇಲ್ಲಿ ಸುಮೇಧ್ ಕೆ ಅವರ ಟ್ಯೂನ್‌ಗಳು ಸಿನಿಮಾದ ಜೊತೆ ಚೆನ್ನಾಗಿ ಸೇರಿಕೊಂಡಿದೆ. ಎಲ್ಲಕ್ಕಿಂತ ಹೆಚ್ಚಾಗಿ ಗಮನ ಸೆಳೆಯೋದು ಸಂದೀಪ್ ತುಳಸಿದಾಸ್ ಅವರ ಹಿನ್ನಲೆ ಸಂಗೀತ. ಕಾಮಿಡಿ, ಎಮೋಷನಲ್, ಹಾರರ್ ಎಲ್ಲಾ ಸೀನ್‌ಗಳನ್ನೂ ಸಂದೀಪ್ ತುಳಸಿದಾಸ್ ಜೀವಂತವಾಗಿ ಇಡುವುದಕ್ಕೆ ಶ್ರಮಿಸಿದ್ದಾರೆ.

ಸಿನಿಮಾದ ಪ್ಲಸ್ ಪಾಯಿಂಟ್ ಏನು?

'ಸು ಫ್ರಮ್ ಸೋ'ನಲ್ಲಿ ಪಾಸಿಟಿವ್ ಪಾಯಿಂಟ್‌ಗಳೇ ಎದ್ದು ಕಾಣುತ್ತವೆ. ಹೀಗಾಗಿ ನೆಗೆಟಿವ್ ಪಾಯಿಂಟ್ ಹುಡುಕುವುದು ಕಷ್ಟ. ಆದರೂ ಯಾರೂ ಪರ್ಫೆಕ್ಟ್ ಸಿನಿಮಾ ಮಾಡೋಕೆ ಸಾಧ್ಯವಿಲ್ಲ. ಅಶೋಕನ ಪಾತ್ರದಲ್ಲಿ ಜೆಪಿ ತುಮಿನಾಡ್ ಚೆನ್ನಾಗಿ ನಟಿಸಿದ್ದರೂ, ಇನ್ನೂ ಪವರ್‌ಫುಲ್ ಆಗಿ ಈ ಪಾತ್ರ ಬರಬೇಕಿತ್ತು ಅಂತ ಅನಿಸುತ್ತೆ. ಇಡೀ ಕಥೆಯ ಜೀವಾಳವೇ ಈ ಪಾತ್ರ ಆಗಿದ್ದರಿಂದ ಕೆಲವು ಸನ್ನಿವೇಶಗಳಲ್ಲಿ ಸಪ್ಪೆಯಾದರು ಅನಿಸುವುದು ಉಂಟು. ಉದಾಹರಣೆಗೆ ಸುಲೋಚನಾಳಾಗಿ ಬದಲಾಗಿ ಆಕೆಯ ಮನೆಗೆ ಹೊರಟಾಗ ಅದ್ಭುತವಾಗಿ ಕಾಣಿಸುವ ಅಶೋಕ, ಆಕ್ಷನ್ ಸನ್ನಿವೇಶಗಳಲ್ಲಿ ಡಲ್ ಎನಿಸುತ್ತಾನೆ. ಹುಡುಗಿಯನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡುವ ದೃಶ್ಯದಲ್ಲಿ ಇನ್ನೂ ಸ್ವಲ್ಪ ರೊಮ್ಯಾನ್ಸ್ ಹೊರ ಹಾಕಬಹುದಿತ್ತು ಎನಿಸುತ್ತೆ. ಆದರೆ, ಇದೆಲ್ಲವೂ ಚಿಕ್ಕ ಪುಟ್ಟ ನ್ಯೂನ್ಯತೆಗಳು ಅಷ್ಟೇ.

ಕೊನೆಯಲ್ಲಿ ಏನು?

ಈ ವೀಕೆಂಡ್‌ನಲ್ಲಿ ಓಟಿಟಿ ಗುಂಗಿನಿಂದ ಹೊರ ಬಂದು, ಫ್ಯಾಮಿಲಿ ಸಮೇತ ಸಿನಿಮಾ ಧೈರ್ಯವಾಗಿ ಸಿನಿಮಾ ನೋಡಬಹುದು. ಕಳೆ ಕಳೆದುಕೊಂಡಿದ್ದ ಕನ್ನಡ ಸಿನಿಮಾ ಮತ್ತೆ ಮಿಂಚುತ್ತಿದೆ. ಹಾಸ್ಯವನ್ನು ಇಷ್ಟ ಪಡುವವರಾದರೆ, ಮಿಸ್ ಮಾಡದೇ ಒಂದಲ್ಲ ಮೂರು ಬಾರಿ ನೋಡಬಹುದು. ಖಂಡಿತಾ ಬೋರ್ ಆಗೋದಿಲ್ಲ.

More from Filmibeat

English summary
Raj B Shetty produced Su From So Kannada movie review and Rating.
Read more about: kannada movie review raj b shetty
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X