Baahubali The Epic Twitter Review: ಹೀಗೆ 10 ವರ್ಷಕ್ಕೊಮ್ಮೆ ರೀ-ರಿಲೀಸ್ ಮಾಡುತ್ತೀರಿ..ನೆಟ್ಟಿಗರ ಕ್ರೇಜಿ ರಿಯಾಕ್ಷನ್
ಪ್ಯಾನ್ ಇಂಡಿಯಾ ಬಾಕ್ಸಾಫೀಸ್‌ನಲ್ಲಿ ಹೊಸ ಟ್ರೆಂಡ್ ಹುಟ್ಟು ಹಾಕಿದ್ದ ಸಿನಿಮಾ 'ಬಾಹುಬಲಿ'. ಎಸ್.ಎಸ್. ರಾಜಮೌಳಿ ತನ್ನ ವೃತ್ತಿ ಬದುಕಿನಲ್ಲೇ ಬಿಗ್ ಬಜೆಟ್ ಸಿನಿಮಾಗೆ ಕೈ ಹಾಕಿದ್ದರು. ಇದು ದಕ್ಷಿಣ ಭಾರತದ ಸಿನಿಮಾ ರಂಗಕ್ಕೆ ಹೊಸ ಮಾರುಕಟ್ಟೆಯನ್ನು ಸೃಷ್ಟಿಸಬಹುದೆಂದು ಚಿಕ್ಕ ಸುಳಿವೂ ಇರಲಿಲ್ಲ. ಪ್ರಭಾಸ್, ರಾಣಾ ದಗ್ಗುಬಾಟಿ, ಅನುಷ್ಕಾ ಶೆಟ್ಟಿ, ತಮನ್ನಾ ಭಾಟಿಯಾ, ರಮ್ಯಾ ಕೃಷ್ಣನ್ ಸೇರಿದಂತೆ ಹಲವರು ಪ್ರಮುಖ ಪಾತ್ರಗಳಲ್ಲಿ ನಟಿಸಿ ಸಿನಿಪ್ರಿಯರ ಮನಗೆದ್ದಿದ್ದರು.
'ಬಾಹುಬಲಿ' ಹಾಗೂ 'ಬಾಹುಬಲಿ 2' ಎರಡೂ ಸಿನಿಮಾಗಳೂ ಬಾಕ್ಸಾಫೀಸ್‌ನಲ್ಲಿ ಹೊಸ ದಾಖಲೆಗಳನ್ನು ಸೃಷ್ಟಿ ಮಾಡಿದ್ದರು. ಇಂದು ದಕ್ಷಿಣ ಭಾರತದ ಸಿನಿಮಾಗಳು ಪ್ಯಾನ್ ಇಂಡಿಯಾ ಬಾಕ್ಸಾಫೀಸ್‌ನಲ್ಲಿ ಅಬ್ಬರಿಸುತ್ತಿರುವುದಕ್ಕೆ 'ಬಾಹುಬಲಿ' ಸೀರಿಸ್ ಪ್ರಮುಖ ಕಾರಣ. ಗಲ್ಲಾಪಟ್ಟಿಯಲ್ಲಿ ಕಂಡ ದೊಡ್ಡ ಯಶಸ್ಸು ಸಿನಿಮಾ ಮಂದಿಗೆ ಪ್ರೇರಣೆಯಾಗಿದೆ. ಈ ಸಿನಿಮಾ ತೆರೆ ಕಂಡು ಈಗ 10 ವರ್ಷ.

ಒಂದು ದಶಕದ ಈ ಸಂಭ್ರಮದಲ್ಲಿ ಎಸ್.ಎಸ್. ರಾಜಮೌಳಿ ಹೊಸ ಪ್ರಯತ್ನಕ್ಕೆ ಮುಂದಾಗಿದ್ದಾರೆ. 'ಬಾಹುಬಲಿ'ಯ ಎರಡೂ ಪಾರ್ಟ್‌ಗಳನ್ನು ಸೇರಿಸಿ, ಒಂದಿಷ್ಟು ಹೊಸ ಸೀಸನ್‌ಗಳನ್ನು ಇಟ್ಟು 'ಬಾಹುಬಲಿ: ದಿ ಎಪಿಕ್' ಅನ್ನು ರಿಲೀಸ್ ಮಾಡಿದ್ದಾರೆ. ಸುಮಾರು 3 ಗಂಟೆ 44 ನಿಮಿಷಗಳ ಈ ಸಿನಿಮಾ ನೋಡಿ ಟ್ವಿಟರ್‌ನಲ್ಲಿ (ಎಕ್ಸ್) ಪ್ರೇಕ್ಷಕರ ರೆಸ್ಪಾನ್ಸ್ ಹೇಗಿದೆ? 10 ವರ್ಷಗಳ ಬಳಿಕ ಸಿನಿಮಾ ನೋಡಿ ಏನಂತಿದ್ದಾರೆ? ತಿಳಿಯುವುದಕ್ಕೆ ಮುಂದೆ ಓದಿ.
ಪ್ರಭಾಸ್ ಮುಂದೆ ಯಾರೂ ಇಲ್ಲ
"ಎಷ್ಟೋ ಮಂದಿ ಹೀರೋಗಳು ಇದ್ದಾರೆ. ಅವರು ಥಿಯೇಟರ್‌ಗೆ ಬರುತ್ತಾರೆ. ಆದರೆ, ಪ್ರಭಾಸ್ ಕಟ್‌ಔಟ್ ಅನ್ನು ಬೀಟ್ ಮಾಡುವಂತಹ ಹೀರೋ ಯಾರೂ ಇಲ್ಲ. ಇದು ವರ್ಲ್ಡ್ ಸಿನಿಮಾದ ಅತ್ಯುನ್ನತ ಕಟ್‌ಔಟ್" ಎಂದು ಪ್ರಭಾಸ್ ಅಭಿಮಾನಿಯೊಬ್ಬರು ಸಿನಿಮಾ ನೋಡಿ ಥಿಯೇಟರ್ ಒಳಗಿನ ದೃಶ್ಯವನ್ನು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಬಾಹುಬಲಿ ಒಂದು ಅದ್ಭುತ ಸೃಷ್ಟಿ
"ಬಾಹುಬಲಿ ದಿ ಎಪಿಕ್ ಸಿನಿಮಾವನ್ನು ನೋಡಿದ ಒಂದಂತೂ ಪ್ರೂವ್ ಆಗಿದೆ. ಭಾರತೀಯ ಸಿನಿಮಾರಂಗದಲ್ಲಿ ಒಂದು ಬಾಹುಬಲಿ ಅದ್ಭುತ ಸೃಷ್ಟಿ. ಸಿನಿಮಾ ಮೇಲಿನ ಹುಚ್ಚುನ ಹಾಗೂ ಪ್ಯಾಷನ್‌ನಿಂದ ಕ್ರಿಯೇಟ್ ಮಾಡಿದ ಮಾಸ್ಟರ್ ಪೀಸ್" ಎಂದು ಫಿಲ್ಮ್ ಟ್ರೇಟ್ ಅನಲಿಸ್ಟ್ ಸಮಿತ್ ಕಡೆಲ್ ತನ್ನ ಎಕ್ಸ್ ಖಾತೆಯಲ್ಲಿ ಅಭಿಪ್ರಾಯ ಪಟ್ಟಿದ್ದಾರೆ.
ಇತಿಹಾಸ ಸೃಷ್ಟಿಸಿದ ಮಹಾಕಾವ್ಯ
"ಬಾಹುಬಲಿ ಸಿನಿಮಾ ಇತಿಹಾಸವನ್ನು ಸೃಷ್ಟಿಸಿದ ಒಂದು ಮಹಾನ್ ದೃಶ್ಯ ಹಾಗೂ ಮಹಾಕಾವ್ಯ. ಇದು ಚರಿತ್ರೆಯಲ್ಲಿ ಶಾಶ್ವತವಾಗಿ ಉಳಿಯುವ ತೆಲುಗು ಚಿತ್ರರಂಗದ ಯಶಸ್ಸಿನ ಕಥೆ." ಎಂದು ನೆಟ್ಟಿಗರೊಬ್ಬರು ಬಣ್ಣಿಸಿದ್ದಾರೆ.
10 ವರ್ಷಕ್ಕೊಮ್ಮೆ ರೀ-ರಿಲೀಸ್ ಮಾಡುತ್ತೀರಿ
"ತಲೆಮಾರುಗಳನ್ನು ಮೀರಿಸಲಿರುವ ಸಿನಿಮಾವಿದು. ಐಮ್ಯಾಕ್ಸ್‌ನಲ್ಲಿ ಅತ್ಯಂತ ಅದ್ಭುತ ಹಾಗೂ ಅವಾಸ್ತವಿಕ ಅನುಭವ ನೀಡುವುದಕ್ಕಾಗಿ ಚೆನ್ನಾಗಿ ಟ್ರಿಮ್ ಮಾಡಲಾಗಿದೆ. 10 ವರ್ಷಗಳ ನಂತರವೂ ಈ ಸಿನಿಮಾಗೆ ಅದೇ ಆವೇಗ, ಅದೇ ಉತ್ತುಂಗದಲ್ಲಿದೆ. ಪ್ರತಿ 10 ವರ್ಷಗಳಿಗೊಮ್ಮೆ ಹೀಗೆ ರಿ-ರಿಲೀಸ್ ಮಾಡುತ್ತಿರಿ. ನಾವು ನೋಡುತ್ತಲೇ ಇರುತ್ತೇವೆ." ಎಂದು ಮತ್ತೊಬ್ಬರು ನೆಟ್ಟಿಗರು ಕಮೆಂಟ್ ಮಾಡಿದ್ದಾರೆ.


Click it and Unblock the Notifications










