Coolie Review:'ಕೂಲಿ'ಯಲ್ಲಿ ರಜನಿಕಾಂತ್ ಪಾಸ್.. ಲೋಕೇಶ್ ಫೇಲ್.. ಶಿವಣ್ಣನಂತೆ ಉಪ್ಪಿ.. ರಚಿತಾ ಸರ್ಪ್ರೈಸ್

Rating:
3.0/5
Star Cast: Rajinikanth, Nagarjuna Akkineni, Aamir Khan, Upendra, Shruti Haasan, Soubin Shahir
Director: Lokesh Kanagaraj

ಸೂಪರ್‌ಸ್ಟಾರ್ ರಜನಿಕಾಂತ್ ಅಭಿನಯದ ಮತ್ತೊಂದು ಮೋಸ್ಟ್ ಎಕ್ಸ್‌ಪೆಕ್ಟೆಡ್ ಸಿನಿಮಾ 'ಕೂಲಿ' ಗ್ರ್ಯಾಂಡ್ ಆಗಿ ರಿಲೀಸ್ ಆಗಿದೆ. 'ಜೈಲರ್' ಬಳಿಕ ಮತ್ತೆ ರಜನಿಯನ್ನು ಮಾಸ್, ಸ್ಟೈಲಿಶ್ ಲುಕ್‌ನಲ್ಲಿ ನೋಡುವುದಕ್ಕೆ ಕಾತುರದಿಂದ ಕಾಯುತ್ತಿದ್ದರು. ಅಂದುಕೊಂಡಂತೆ ಮಾಸ್, ಮಲ್ಟಿಸ್ಟಾರರ್ ಸಿನಿಮಾ ಇಂದು (ಆಗಸ್ಟ್ 14) ವಿಶ್ವದಾದ್ಯಂತ ತೆರೆಕಂಡಿದೆ. ರಜನಿ ಅಭಿಮಾನಿಗಳು ಮುಗಿಬಿದ್ದು ಸಿನಿಮಾ ನೋಡುತ್ತಿದ್ದಾರೆ.

ವಿಶ್ವದಾದ್ಯಂತ 'ಕೂಲಿ' ಮೇನಿಯಾ ಶುರುವಾಗಿದೆ. 'ಕಬಾಲಿ' ಬಳಿಕ ರಜನಿಕಾಂತ್ ಸಿನಿಮಾ ಡಬಲ್ ಕ್ರೇಜ್‌ನಲ್ಲಿ ಥಿಯೇಟರ್‌ಗೆ ಎಂಟ್ರಿ ಕೊಟ್ಟಿದೆ. ಸೂಪರ್‌ಸ್ಟಾರ್ ಜೊತೆ ಕಿಂಗ್ ನಾಗಾರ್ಜುನ, ರಿಯಲ್ ಸ್ಟಾರ್ ಉಪೇಂದ್ರ, ಶ್ರುತಿ ಹಾಸನ್, ಸತ್ಯರಾಜ್, ರಚಿತಾ ರಾಮ್, ಶೌಬಿನ್ ಶಾಹೀರ್ ಸೇರಿದಂತೆ ದೊಡ್ಡ ತಾರಾಗಣವೇ ಈ ಸಿನಿಮಾದಲ್ಲಿದೆ. ಇವೆಲ್ಲವುಗಳ ಜೊತೆ ಈ ಮಟ್ಟಿಗೆ ಕ್ರೇಜ್ ಹುಟ್ಟಾಕಿದ್ದಕ್ಕೆ ಕಾರಣ ರಜನಿಕಾಂತ್ ಹಾಗೂ ಲೋಕೇಶ್ ಕನಕರಾಜ್ ಕಾಂಬಿನೇಷನ್.

Rajinikanth  Nagarjuna  Upendra starrer Coolie review and Rating in Kannada

ಕಳೆದೆರಡು ವಾರಗಳಿಂದ 'ಕೂಲಿ' ಕೂಗಿ ಕೇಳಿಸುತ್ತಲೇ ಇತ್ತು. ಸಿನಿಮಾ ತೆರೆಕಂಡ್ಮೇಲೆ ಅದೇ ಕ್ರೇಜ್ ಇರುತ್ತಾ? ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ. ಅದಕ್ಕೂ 'ಕೂಲಿ' ಸಿನಿಮಾ ಹೇಗಿದೆ? ಸಿನಿಮಾದ ಕಥೆಯೇನು? ಸಿನಿಮಾದಲ್ಲಿ ಪ್ಲಸ್ ಏನು? ಮೈನಸ್ ಏನು? ತಿಳಿಯುವುದಕ್ಕೆ ಮುಂದೆ ಓದಿ.

'ಕೂಲಿ' ಕಥೆಯೇನು?

'ಕೂಲಿ' ಕಥೆ ಮೂರು ಪ್ರಮುಖ ಪಾತ್ರಗಳ ಮೇಲೆ ನಿಂತಿದೆ. ಮಾಜಿ ಯೂನಿಯನ್ ಲೀಡರ್ ದೇವ (ರಜನಿಕಾಂತ್) ಸ್ಮಗ್ಲರ್ ಕಿಂಗ್ ಸೈಮನ್ (ನಾಗಾರ್ಜುನ), ಹಾಗೂ ಸೈಮನ್‌ ಆದೇಶಗಳನ್ನು ಪಾಲಿಸೋ ದಯಾಳ್ (ಶೌಬಿನ್ ಶಾಹೀರ್). ದೇವ ಹೊಡೆದಾಟ, ಕಿತ್ತಾಟಗಳನ್ನೆಲ್ಲ ಬಿಟ್ಟು ಸೈಲೆಂಟ್ ಆಗಿ ತನ್ನಷ್ಟಕ್ಕೆ ತಾನು ಬದುಕು ಸಾಗಿಸುತ್ತಿರುತ್ತಾನೆ. ಆದರೆ, ಆತನ ಗೆಳೆಯ ರಾಜಶೇಖರ್ (ಸತ್ಯರಾಜ್) ಕೊಲೆ ಮತ್ತೆ ದೇವನನ್ನು ಸ್ಲಗ್ಮರ್ ಕಿಂಗ್ ಸೈಮನ್ ಅಖಾಡಕ್ಕೆ ಇಳಿಯುವಂತೆ ಮಾಡುತ್ತೆ. ಆಗ ದೇವನ 30 ವರ್ಷಗಳ ಹಿಂದಿನ ಕಥೆ ತೆರೆದುಕೊಳ್ಳುತ್ತೆ. ಆಗಲೇ ಒಬ್ಬರೊಬ್ಬರೇ ರಜನಿ ಅಡ್ಡಾದೊಳಗೆ ಎಂಟ್ರಿ ಕೊಡುತ್ತಾರೆ. ರಾಜಶೇಖರ್ ಹಾಗೂ ದೇವ ಇಬ್ಬರು ಬೇರೆಯಾಗಿದ್ದು ಯಾಕೆ? ರಾಜಶೇಖರ್ ಕೊಲೆ ಬಳಿಕ ದೇವ ಸೇಡು ತೀರಿಸಿಕೊಂಡಿದ್ದೇಕೆ? 30 ವರ್ಷಗಳ ಹಿಂದೆ ನಡೆದ ಘಟನೆ ಏನು? ಕಾಲೇಶ (ಉಪೇಂದ್ರ) ಹಾಗೂ ದಹಾ (ಆಮಿರ್ ಖಾನ್) ಇಬ್ಬರ ಎಂಟ್ರಿ ಯಾಕಾಯ್ತು? ಇದೆಲ್ಲದಕ್ಕೂ ಸಿನಿಮಾದಲ್ಲಿಯೇ ಉತ್ತರ ಸಿಗುತ್ತೆ.

ರಜನಿ ಒನ್‌ಮ್ಯಾನ್ ಶೋ

ಸೂಪರ್‌ಸ್ಟಾರ್ ರಜನಿಕಾಂತ್ ಈ ಸಿನಿಮಾ ಜೀವಾಳ. 74ರ ವಯಸ್ಸಿನಲ್ಲೂ ಅವರ ಎನರ್ಜಿ ಎದ್ದು ಕಾಣುತ್ತೆ. ಆ ಸೈಲು, ಮ್ಯಾನರಿಸಂಗೆ ಶಿಳ್ಳೆ ಹಾಕದೆ ಸುಮ್ಮನೆ ಇರುವುದಕ್ಕೆ ಆಗಲ್ಲ. ಕಾಮಿಡಿ ಟೈಮಿಂಗ್, ಡೈಲಾಗ್ ಡಿಲೇವರಿಯಲ್ಲಿ ಪ್ರೇಕ್ಷಕರಿಂದ ಚಪ್ಪಾಳೆ ಗಿಟ್ಟಿಸಿಕೊಳ್ಳುತ್ತಾರೆ. ನಿರೀಕ್ಷೆಗಿಂತ ರಜನಿಕಾಂತ್ ಎಂಟ್ರಿ ತಡವಾಗಿ ಆದರೂ, ಎಂಟ್ರಿ ಕೊಟ್ಮೇಲೆ ಇಡೀ ಸಿನಿಮಾವನ್ನು ರಜನಿಯೇ ಆವರಿಸಿಕೊಳ್ಳುತ್ತಾರೆ.

Rajinikanth  Nagarjuna  Upendra starrer Coolie review and Rating in Kannada

ಗೊಂದಲಕ್ಕೆ ಬಿದ್ದ ಕನಕರಾಜ್

ಕಥೆ ಹೇಳುವುದರಲ್ಲಿ ಲೋಕೇಶ್ ಕನಕರಾಜ್ ನಿಸ್ಸೀಮರು. ಆದರೆ, 'ಕೂಲಿ' ಕಥೆ ಹೆಣೆಯುವಲ್ಲಿ ಗೊಂದಲಕ್ಕೆ ಬಿದ್ದಂತೆ ಕಾಣುತ್ತಿದೆ. ತಾನು ಬರೆದ ಕಥೆಯನ್ನು ಸ್ಕ್ರೀನ್‌ಗೆ ಇಳಿಸುವಲ್ಲಿ ಎಡವಿದ್ದಾರೆ ಅನ್ನೋದು ಬಹುಬೇಗನೇ ಗೊತ್ತಾಗಿ ಬಿಡುತ್ತೆ. ರಜನಿಕಾಂತ್ ಅಂತಹ ಸೂಪರ್‌ಸ್ಟಾರ್‌ಗೆ ಚಿತ್ರಕಥೆ ಮಾಡುವಲ್ಲಿ ಸೋತಿರೋದು ಸ್ಪಷ್ಟವಾಗಿ ಕಾಣುಸುತ್ತೆ. ಲೋಕೇಶ್ ಕನಕರಾಜ್ ಎರಡನೇ ಬಾರಿ ಮೆಗಾ ಬ್ಲಾಕ್‌ಬಸ್ಲರ್ ಸಿನಿಮಾ ಕೊಡುವಲ್ಲಿ ಸೋತಿದ್ದಾರೆ.

ಉಪ್ಪಿ ಸೂಪರ್.. ರಚಿತಾ ಸಖತ್

ಥಿಯೇಟರ್‌ನಲ್ಲಿ ರಜನಿಕಾಂತ್ ಬಿಟ್ಟರೆ, ಅತೀ ಹೆಚ್ಚು ಶಿಳ್ಳೆಗಳು ಬೀಳೋದು ಕಾಲೇಶ್‌ನಾಗಿ ಎಂಟ್ರಿ ಕೊಡುವ ಉಪ್ಪಿಗೆ. 'ಕೂಲಿ'ಯಲ್ಲಿ ಉಪೇಂದ್ರ ಎಂಟ್ರಿ. ಅದಕ್ಕೆ ರಜನಿ ಬಿಡುವ ಬಿಲ್ಡಪ್ ಡೈಲಾಗ್‌ಗೆ ಶಿಳ್ಳೆಗಳೇನು ಕಮ್ಮಿ ಬೀಳುವುದಿಲ್ಲ. ಎಲ್ಲಕ್ಕಿಂತ ಸರ್ಪ್ರೈಸ್ ಅನ್ನೋದು ರಚಿತಾ ರಾಮ್ ಪಾತ್ರ. ಟ್ರೈಲರ್‌ನಲ್ಲಿ ಈ ಪ್ರಾತ್ರಕ್ಕೆ ಪ್ರಾಮುಖ್ಯತೆ ಇಲ್ಲವೇನೋ ಅಂದುಕೊಂಡವರಿಗೆ ಬಿಗ್ ಸರ್ಪ್ರೈಸ್ ಸಿಗುತ್ತೆ.

Rajinikanth  Nagarjuna  Upendra starrer Coolie review and Rating in Kannada

'ಕೂಲಿ' ಪ್ಲಸ್ ಏನು?

'ಕೂಲಿ' ಔಟ್ ಅಂಡ್ ಔಟ್ ರಜನಿಕಾಂತ್ ಸಿನಿಮಾ. ಮ್ಯಾನರಿಸಂ, ಸ್ಟೈಲ್, ಆಕ್ಷನ್, ಕಾಮಿಡಿ, ಡೈಲಾಗ್ ಎಲ್ಲದರಲೂ ರಜನಿ ಪಾಸ್. ಅನಿರುದ್ಧ್ ಟ್ಯೂನ್ ಹಾಕಿದ ಎರಡು ಹಾಡುಗಳು ಥಿಯೇಟರ್‌ ನಡುಗಿಸುತ್ತವೆ. ಹಿನ್ನೆಲೆ ಸಂಗೀತ ಸನ್ನಿವೇಶಕ್ಕೆ ತಕ್ಕಂತಿದೆ. ಅತಿಥಿ ಪಾತ್ರಗಳಲ್ಲಿ ಉಪೇಂದ್ರ, ರಚಿತಾ ರಾಮ್ ಗಮನ ಸೆಳೆಯುತ್ತಾರೆ. ಆಕ್ಷನ್ ಸೀನ್‌ಗಳು, ಕೆಲವು ಪಂಚಿಂಗ್ ಡೈಲಾಗ್‌ಗಳು ಪ್ರೇಕ್ಷಕರನಿಗೆ ಕಿಕ್ ಕೊಡುತ್ತವೆ. ಶ್ರುತಿ ಹಾಸನ್ ಸ್ಕ್ರೀನ್‌ನಲ್ಲಿ ಹೆಚ್ಚು ಹೊತ್ತು ಕಾಣಿಸಿಕೊಳ್ಳುತ್ತಾರೆ. ಸತ್ಯರಾಜ್ ತಮ್ಮ ಪಾತ್ರವನ್ನು ನೀರು ಕುಡಿದ ಸುಲಭವಾಗಿ

'ಕೂಲಿ' ಮೈನಸ್ ಏನು?

ಇಟ್ಟ ನಂಬಿಕೆಯನ್ನು ಲೋಕೇಶ್ ಕನಕರಾಜ್ ಉಳಿಸಿಕೊಂಡಿಲ್ಲ. ಕಥೆ ಹಾಗೂ ಸ್ಕ್ರೀನ್‌ಪ್ಲೇ ಎರಡರಲ್ಲೂ ಧಮ್ ಇಲ್ಲ. ಅತಿಥಿ ಪಾತ್ರಗಳನ್ನು ಬೇಕಂತಲೇ ಸಿನಿಮಾದಲ್ಲಿ ತುರುಕಿದಂತೆ ಇದೆ. ಉಪ್ಪಿ ಎಂಟ್ರಿ ಸಖತ್ ಆಗಿದೆ. ಆದರೆ, ಅವರನ್ನು ಇನ್ನಷ್ಟು ಎಫೆಕ್ಟಿವ್ ಆಗಿ ಬಳಸಿಕೊಳ್ಳಬಹುದಿತ್ತು. ಅಲ್ಲಿ ಸೋತಿದ್ದಾರೆ. ಆಮಿರ್ ಖಾನ್ ಅಂತ ನಟನ ಅತಿಥಿ ಪಾತ್ರದಲ್ಲಿ ನಟಿಸುವುದೇ ಅಪರೂಪ. ಅಂತಹ ಅವಕಾಶವನ್ನು ಬಳಸಿಕೊಂಡಿಲ್ಲ. ಅಂತರಾಷ್ಟ್ರೀಯ ಡಾನ್ ಪಾತ್ರ ಮಾಡಿರುವ ಆಮಿರ್ ಖಾನ್ ಅನ್ನು ಜೋಕರ್ ರೀತಿ ಬಿಂಬಿಸಲಾಗಿದೆ.

ಕೊನೆಯಲ್ಲಿ 'ಕೂಲಿ'

'ಕೂಲಿ' ಕ್ಲೈಮ್ಯಾಕ್ಸ್‌ನಲ್ಲಿ ವಿಶೇಷತೆ ಏನಿಲ್ಲ. ಹೀಗಿದ್ದರೂ ಈ ಸಿನಿಮಾವನ್ನು ರಜನಿಕಾಂತ್‌ಗಾಗಿ ನೋಡಬಹುದು. ರಜನಿಯ ಡೈ ಹಾರ್ಡ್ ಫ್ಯಾನ್ಸ್‌ಗೆ ಈ ಸಿನಿಮಾ ಕಂಡಿತಾ ಇಷ್ಟ ಆಗುತ್ತೆ. ಕೊನೆಯಲ್ಲಿ ರಜನಿ, ಆಮಿರ್ ಖಾನ್ ಹಾಗೂ ಉಪೇಂದ್ರ ಮೂವರ ಬೀಡಿ ಸೀನ್ ನಿರಾಸೆಗೆ ಮುಲಾಮು ಹಚ್ಚಿ ಕಳಿಸುತ್ತೆ. ಒಮ್ಮೆ ನೋಡಲು ಅಡ್ಡಿಯಿಲ್ಲ. ಆದರೆ, ಎರಡು ಮೂರು ಸಾವಿರ ಕೊಟ್ಟು ನೋಡುವಷ್ಟೇನೂ ಇಲ್ಲ.

More from Filmibeat

English summary
Rajinikanth, Nagarjuna, Upendra starrer Coolie review and Rating in Kannada.
Read more about: rajinikanth upendra nagarjuna
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X