Bachelor Party X Review: ಸ್ವಲ್ಪ ಮಸ್ತಿ.. ಸ್ವಲ ಕಾಮಿಡಿ: ಬ್ಯಾಚುಲರ್ ಪಾರ್ಟಿ ಏನಂದ್ರು ನೆಟ್ಟಿಗರು?
ರಕ್ಷಿತ್ ಶೆಟ್ಟಿ ನಿರ್ಮಿಸಿರುವ 'ಬ್ಯಾಚುಲರ್ ಪಾರ್ಟಿ' ಸಿನಿಮಾ ಗ್ರ್ಯಾಂಡ್ ಆಗಿ ರಿಲೀಸ್ ಆಗಿದೆ. ದೂದ್ ಪೇಡಾ ದಿಗಂತ್, ಲೂಸ್ ಮಾದ ಯೋಗಿ ಹಾಗೂ ಅಚ್ಯುತ್ ಕುಮಾರ್ ಕಾಂಬಿನೇಷನ್ ಸಿನಿಮಾ ಬಿಡುಗಡೆಗೂ ಮುನ್ನ ಗಮನ ಸೆಳೆದಿತ್ತು. ಇದೇ ಮೊದಲ ಬಾರಿಗೆ ಸ್ಯಾಂಡಲ್‌ವುಡ್‌ನ ಕುಚಿಕು ಗೆಳೆಯರು ಒಂದೇ ಸಿನಿಮಾದಲ್ಲಿ ಕೆಲಸ ಮಾಡಿದ್ದಾರೆ.
ರಕ್ಷಿತ್ ಶೆಟ್ಟಿ ನಿರ್ಮಾಣ ಸಂಸ್ಥೆಯಲ್ಲಿ ಕೆಲಸ ಮಾಡಿ ಅನುಭವವಿರೋ ಅಭಿಜಿತ್ ಮಹೇಶ್ ಇದೇ ಮೊದಲ ಬಾರಿಗೆ ನಿರ್ದೇಶನ ಮಾಡಿದ್ದಾರೆ. ಹೀಗಾಗಿ ಸಿನಿಮಾ ಬಗ್ಗೆ ಸಹಜವಾಗಿ ಕುತೂಹಲ ಕೆರಳಿಸಿತ್ತು. ದಿಗಂತ್ ಕೆಮಿಸ್ಟ್ರಿ-ಲೂಸ್ ಮಾದ ಯೋಗಿ ಕಾಮಿಡಿ ಸೆನ್ಸ್ ಪ್ರೇಕ್ಷಕರನ್ನು ರಂಜಿಸುತ್ತಾ? ಅನ್ನೋ ಕುತೂಹಲಕ್ಕೆ ಈಗ ತೆರೆಬಿದ್ದಿದೆ.

ಅಂದ್ಹಾಗೆ 'ಬ್ಯಾಚುಲರ್ ಪಾರ್ಟಿ'ಗೂ ಹಾಗೂ ಕಿರಿಕ್ ಪಾರ್ಟಿಗೂ ಯಾವುದೇ ಸಂಬಂಧವಿಲ್ಲ ಅನ್ನೋದನ್ನು ಗಮನದಲ್ಲಿಟ್ಟುಕೊಂಡು ಸಿನಿಮಾ ನೋಡ್ಬೇಕು ಅಂತ ಚಿತ್ರತಂಡವೇ ಹೇಳಿಕೊಂಡಿದೆ. ಹೀಗಾಗಿ ನೆಟ್ಟಿಗರು 'ಬ್ಯಾಚುಲರ್ ಪಾರ್ಟಿ' ನೋಡಿ ಏನಂದ್ರು? ಅವರಿಗೆ ಸಿನಿಮಾ ಇಷ್ಟ ಆಯ್ತಾ ಇಲ್ವಾ? ಇದೆಲ್ಲವನ್ನು ತಿಳಿಯಲು ಮುಂದೆ ಓದಿ.
ಬ್ಯಾಚುಲರ್ ಪಾರ್ಟಿ ಡಿಸೆಂಟ್ ರೈಡ್
"ಬ್ಯಾಚುಲರ್ ಪಾರ್ಟಿ ಡಿಸೆಂಟ್ ಆಗಿದ್ದು, ನಗುವನ್ನು ತರಿಸುತ್ತೆ. ಬಹಳಷ್ಟು ಮೆಟಾ ಕಾಮೆಂಟರಿ ಮತ್ತು ಆಶ್ಚರ್ಯ ಎನ್ನುವಂತೆ ಅತಿಥಿ ಪಾತ್ರಗಳು ಬರುತ್ತವೆ. ಡೈಲಾಗ್ ಓಕೆ, ಸೌಂಡ್ ಹಾಗೂ ಮ್ಯೂಸಿಕ್ ಚೆನ್ನಾಗಿದೆ. ಛಾಯಾಗ್ರಹಣ ಅದ್ಭುತವಾಗಿದೆ. ಎಡಿಟಿಂಗ್ ಕೂಡ ಚೆನ್ನಾಗಿದೆ, ಉತ್ತಮ ಬರಹ, ನಿರ್ದೇಶನ ಇನ್ನೂ ಸ್ವಲ್ಪ ಚೆನ್ನಾಗಿ ಇರಬಹುದಿತ್ತು." ಎಂದು ನೆಟ್ಟಿಗರೊಬ್ಬರು ಹೇಳಿದ್ದಾರೆ.
#BachelorParty a decent fun ride with good laughs. A lot of meta commentary and surprising cameos😂 good performances, okayish dialogues, good sound and music, cinematography good, edited quite well, writing good, direction could have been more coherent felt janky at times. 2.9/5
— Screenplay_Is_Good (@DoUseBrainCells) January 26, 2024
ಕಿರಿಕ್ ಪಾರ್ಟಿಗೂ ಇದಕ್ಕೂ ಸಂಬಂಧವಿಲ್ಲ
"ಬ್ಯಾಚುಲರ್ ಪಾರ್ಟಿಗೂ ಕಿರಿಕ್ ಪಾರ್ಟಿಗೂ ಯಾವುದೇ ರೀತಿ ಸಂಬಂಧವಿಲ್ಲ. ನಿಮ್ಮ ಸುಂದರವಾದ ಮೆದುಳಿನಲ್ಲಿ ಈ ಆಲೋಚನೆ ಮಾಡುತ್ತಾ ಸಿನಿಮಾ ನೋಡುವುದಕ್ಕೆ ಹೋಗಬೇಡಿ." ಅಂತ ಇನ್ನೊಬ್ಬ ನೆಟ್ಟಿಗರು ಕಿರಿಕ್ ಪಾರ್ಟಿ ಸೀಕ್ವೆಲ್ ಅಂತ ಗೊಂದಲಕ್ಕೆ ಒಳಗಾಗಿದ್ದವರಿಗೆ ಕ್ಲಾರಿಟಿ ಕೊಟ್ಟಿದ್ದಾರೆ.
#BachelorParty has nothing to do with the Epic #KirikParty.
— Mōnk (@Dahi_Vada) January 25, 2024
Do not go with this thought in your beautiful brain! 😆
'ಬ್ಯಾಚುಲರ್ ಪಾರ್ಟಿ' ಸಖತ್ ಎಂಟರ್‌ಟೈನ್ಮೆಂಟ್
" ಬ್ಯಾಚುಲರ್ ಪಾರ್ಟಿ ಎಂಟರ್‌ಟೈನ್ಮೆಂಟ್ ಜೊತೆ ನಗುವಿನ ಪಯಣ. ಆದರೆ, ಸ್ಟೋರಿ ಮೇಲೆ ಇನ್ನೂ ಸ್ವಲ್ಪ ವರ್ಕ್ ಮಾಡಬೇಕಿತ್ತು. ಯೋಗಿ, ದಿಗಂತ್, ಅಚ್ಯುತಣ್ಣ ಮೂವರೂ ಅದ್ಭುತ. ಇಡೀ ಚಿತ್ರತಂಡಕ್ಕೆ ಆಲ್ ದಿ ಬೆಸ್ಟ್" ಎಂದು ನೆಟ್ಟಿಗರೊಬ್ಬರು ಕಮೆಂಟ್ ಮಾಡಿದ್ದಾರೆ.
One laughter ride with entertainment #BachelorParty
— Suhas_S (@Universal_Man28) January 26, 2024
Dir should have worked on the story lil bit more!! #Yogi #Diganth nd #Achyutanna trio seems good….Atb to the entire team💫💥 @ParamvahStudios @rakshitshetty #PremierShow pic.twitter.com/N5kp6JNUXO
ಒಳ್ಳೆ ಊಟ ಸಿಗಲಿಲ್ಲ
ಬ್ಯಾಚುಲರ್ ಪಾರ್ಟಿ ಕೆಲವು ನೆಟ್ಟಿಗರಿಗೆ ತುಂಬಾನೇ ಇಷ್ಟ ಆಗಿದೆ. ಮತ್ತೆ ಕೆಲವರಿಗೆ ಇಷ್ಟ ಆಗಿಲ್ಲ. "ಬ್ಯಾಚುಲರ್ ಪಾರ್ಟಿ ಒಂಥರಾ ನಿರಾಸೆಯ ಪಾರ್ಟಿ. ಪಾರ್ಟಿಯಲ್ಲಿ ಒಳ್ಳೆ ಊಟ ಸಿಗಲಿಲ್ಲ ...ಕಿಕ್ಕು ಏರಲಿಲ್ಲ... ಮತ್ತು ಬರಲಿಲ್ಲ." ಎಂದು ಮತ್ತೊಬ್ಬರ ನೆಟ್ಟಿಗರು ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
#BachelorParty
— Nagabharana Gubbi (@nagabharangubbi) January 25, 2024
Review 2/5 🌟
A Disappointed Party @ParamvahStudios
ಪಾರ್ಟಿಯಲ್ಲಿ ಒಳ್ಳೆ ಊಟ ಸಿಗಲಿಲ್ಲ ...ಕಿಕ್ಕು ಏರಲಿಲ್ಲ... ಮತ್ತು ಬರಲಿಲ್ಲ😇
#BachelorPartyReview #RakshithShetty #Kannada pic.twitter.com/ItbrccEDdq
"ಪೇಯ್ಡ್ ವಿಮರ್ಶೆ ಮೇಲೆ ಬ್ಯಾಚುಲರ್ ಪಾರ್ಟಿಗೆ ನಂಬಿಕೆಯಿಲ್ಲ. ಆರಾಮಾಗಿ ಈ ಸಿನಿಮಾವನ್ನು ಥಿಯೇಟರ್‌ನಲ್ಲಿ ನೋಡದೆ ಇರಬಹುದು. ಹಾಗೇ ಓಟಿಟಿಗಾಗಿ ಯಾಕಬಹುದು. ಮೊದಲಾರ್ಧ ಒಕೆ ಚೆನ್ನಾಗಿದೆ. ದ್ವಿತೀಯಾರ್ಧ ಕೆಟ್ಟದಾಗಿದೆ. ರಕ್ಷಿತ್ ಶೆಟ್ಟಿ ಇಂತಹ ಸಿನಿಮಾಗಳನ್ನು ಮಾಡಬಾರದ. ಇದು ಚಿತ್ರರಂಗದ ಹೆಸರು ಕೆಡಿಸುತ್ತೆ. ನಿಮ್ಮ ವೀಕ್ಷಕರನ್ನು ಲಘುವಾಗಿ ಪರಿಗಣಿಸಬೇಡಿ."
#BachelorParty Don't believe in paid reviews...Easily skip this movie in cinemas & wait for OTT. first half is okay but the second half is horrible. @rakshitshetty these kind of movies will pull down industry standards..Do not take your audience for granted.
— Santosh Kandagal (@Santucandy) January 25, 2024
ಕಾಂಬೋ ಸೋತಿದೆ
ಬ್ಯಾಚುಲರ್ ಪಾರ್ಟಿ ಸಿನಿಮಾದ ಹೀರೊಗಳಾದ ದಿಗಂತ್ ಹಾಗೂ ಲೂಸ್ ಮಾದ ಯೋಗಿ ಎಂಟರ್‌ಟೈನ್ ಮಾಡುವುದರಲ್ಲಿ ಸೋತಿದ್ದಾರೆ. ಈ ಮೂಲಕ ಇದೊಂದು ನಿರಾಶದಾಯಕ ಪಾರ್ಟಿ ಏನಿಸಿದೆ. ಇದು ಹಾಸ್ಯ ಸಿನಿಮಾ. ಆದಕ್ಕೆ ಹಾಸ್ಯಕ್ಕೆ ಸಂಬಂಧಿಸಿದ ಸಿನಿಮಾ ಎನಿಸಿಕೊಂಡರೂ, ಹಲವು ತಪ್ಪುಗಳಿಂದ ಕೂಡಿತ್ತು." ಎಂದು ಇನ್ನೊಬ್ಬರು ಕಮೆಂಟ್ ಮಾಡಿದ್ದಾರೆ.
My view on #BachelorParty
— Jai's Cinema World (@JaiCinemaWorld) January 25, 2024
@diganthmanchale @LooseMada_Yogi combo failed to create entertainment and ends up as a disappointed PARTY frm @ParamvahStudios
This movie touted as a comedy movie ends up with comedy of errors!
AVOIDABLE
@iAm1289 @rakshitshetty #BachelorPartyMovie pic.twitter.com/E4ALCa6SUv


Click it and Unblock the Notifications










