Peddi Movie Review:ಕ್ರೀಡೆ ಮತ್ತು ಭಾವನೆಗಳ ಅದ್ಭುತ ಸಂಗಮ.. ರಾಮ್ ಚರಣ್-ಶಿವಣ್ಣ ಕಾಂಬೋನೇ ಕಿಕ್!

Rating:
3.5/5

'ಗೇಮ್ ಚೇಂಜರ್' ಸೋಲಿನ ಬಳಿಕ ರಾಮ್ ಚರಣ್ ಮೆಗಾ ಹಿಟ್ ಸಿನಿಮಾವನ್ನು ಎದುರು ನೋಡುತ್ತಿದ್ದಾರೆ. 'ಉಪ್ಪೆನ' ಅಂತ ಸಿನಿಮಾಗೆ ಆಕ್ಷನ್ ಕಟ್ ಹೇಳಿ ರಾಷ್ಟ್ರಮಟ್ಟದಲ್ಲಿ ಗಮನ ಸೆಳೆದ ನಿರ್ದೇಶಕ ಬುಚ್ಚಿಬಾಬು ಸಾನಾ 'ಪೆದ್ದಿ' ಕಥೆಯನ್ನು ರೆಡಿ ಮಾಡಿದ್ದರು. ಗ್ಲೋಬಲ್ ಸ್ಟಾರ್ ಅನ್ನು ಪಕ್ಕಾ ಲೋಕಲ್ ರಗಡ್ ಹೀರೋ ಆಗಿ ತೋರಿಸೋಕೆ ಮುಂದೆ ಬಂದಿದ್ದರು. ಅದೀಗ ಥಿಯೇಟರ್‌ಗಳಲ್ಲಿ ಧೂಳೆಬ್ಬಿಸುತ್ತಿದೆ.

'ಪೆದ್ದಿ' ಬಿಡುಗಡೆಗೂ ಮುನ್ನ ರಾಮ್ ಚರಣ್, ಜಾಹ್ನವಿ ಕಪೂರ್ ಜೋಡಿ ಕಿಕ್ ಕೊಟ್ಟಿತ್ತು. ಇನ್ನೊಂದು ಕಡೆ ರಾಮ್ ಚರಣ್ ಹಾಗೂ ಶಿವಣ್ಣ ಕಾಂಬಿನೇಷನ್. ಈಗಾಗಲೇ ಸಿನಿಮಾ ಹಾಡುಗಳು, ದೃಶ್ಯದ ತುಣುಕುಗಳು ಮೆಚ್ಚುಗೆ ಗಿಟ್ಟಿಸಿಕೊಂಡಿದ್ದವು. ಹೀಗಾಗಿ 'ಪೆದ್ದಿ' ರಾಮ್ ಚರಣ್‌ ಅನ್ನು ಮತ್ತೊಮ್ಮೆ ಗ್ಲೋಬಲ್ ಸ್ಟಾರ್ ಮಾಡುತ್ತಾ? ಅನ್ನೋ ನಿರೀಕ್ಷೆಗಳನ್ನು ಹುಟ್ಟಾಕುವಲ್ಲಿ ಯಶಸ್ವಿಯಾಗಿತ್ತು.

Ram Charan  Jahnvi Kapoor  Shivarajkumar movie Peddi review and Rating in Kannada

ಸಿನಿಮಾದ ಪೇಯ್ಡ್ ಪ್ರೀಮಿಯರ್ ನೋಡಿದ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಕೆಲವು ವಿವಾದಾತ್ಮಕ ವಿಮರ್ಶೆಗಳು ಕಿಡ ಹೊತ್ತಿಸಿತ್ತು. ಅದಕ್ಕೆ ರಾಮ್ ಚರಣ್ ಅಭಿಮಾನಿಗಳು ಕೆಂಡಾಮಂಡಲವಾಗಿದ್ದರು. ಅಸಲಿಗೆ ರಾಮ್ ಚರಣ್, ಜಾಹ್ನವಿ ಕಪೂರ್, ಶಿವಣ್ಣ ಕಾಂಬಿನೇಷನ್ ಸಿನಿಮಾ ಹೇಗಿದೆ? ಅಸಲಿ ವಿಮರ್ಶೆ ಇಲ್ಲಿದೆ.

'ಪೆದ್ದಿ' ಕಥೆಯೇನು?

ಇದೊಂದು ಹಳ್ಳಿ ಭಾಗದ ರಗಡ್ ಸ್ಟೋರಿ. ರಾಮ್ ಚರಣ್ ಹಳ್ಳಿಯೊಂದರ ಸಾಮಾನ್ಯ ಯುವಕ. ಸ್ಥಳೀಯ ರಾಜಕೀಯ ವ್ಯಕ್ತಿಗಳ ಅವಮಾನದಿಂದ ತನ್ನ ಗ್ರಾಮ ಹಾಗೂ ಕುಟುಂಬವನ್ನು ರಕ್ಷಿಸಿಕೊಳ್ಳುವುದಕ್ಕೆ ಕ್ರೀಡಾ ಲೋಕಕ್ಕೆ ಧುಮುಕಬೇಕಾಗುತ್ತೆ. ಇದು ಕೇವಲ ವೈಯಕ್ತಿಕ ಸಾಧನೆಗಾಗಿ ಮಾತ್ರ ಅಲ್ಲದೇ, ಊರಿನ ಜನರ ಗೌರವ, ಆತ್ಮಾಭಿಮಾನಕ್ಕಾಗಿ ಕ್ರೀಡಾಂಗಣದಲ್ಲಿ ಹೋರಾಡುತ್ತಾನೆ. ಈ ವೇಳೆ ಆತನ ಬದುಕಿನಲ್ಲಿ ಎದುರಾಗುವ ಪ್ರೀತಿ ಹಾಗೂ ಭಾವನಾತ್ಮಕ ಸನ್ನಿವೇಶಗಳೇ ಈ ಸಿನಿಮಾ ಕಥಾವಸ್ತು.

Also Read
Peddi ‍‍X Review: ಫಸ್ಟ್ ಹಾಫ್ ಸೂಪರ್, ಆದ್ರೆ ಸೆಕೆಂಡ್ ಹಾಫ್? ರಾಮ್‌ಚರಣ್- ಶಿವಣ್ಣ ಜುಗಲ್ಬಂದಿ ಚಿಂದಿ
Peddi ‍‍X Review: ಫಸ್ಟ್ ಹಾಫ್ ಸೂಪರ್, ಆದ್ರೆ ಸೆಕೆಂಡ್ ಹಾಫ್? ರಾಮ್‌ಚರಣ್- ಶಿವಣ್ಣ ಜುಗಲ್ಬಂದಿ ಚಿಂದಿ

ರಾಮ್ ಚರಣ್ ಶೋ

'ಪೆದ್ದಿ' ಸಿನಿಮಾದ ಉದ್ದಕ್ಕೂ ಗಮನ ಸೆಳೆಯೋದು ರಾಮ್ ಚರಣ್. ಈ ಸಿನಿಮಾದಲ್ಲಿ ಎರಡು ಶೇಡ್‌ಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಹಳ್ಳಿ ಮುಗ್ಧ ಯುವಕನಾಗಿ ಕಂಡರೆ, ಇನ್ನೊಂದು ಕಡೆ ರೊಚ್ಚಿಗೆದ್ದ ಕ್ರೀಡಾಪಟುವಾಗಿ ವಿಶ್ವರೂಪ ತಾಳಿದ್ದಾರೆ. ವಿಶೇಷವಾಗಿ ಭಾವನಾತ್ಮಕ ದೃಶ್ಯಗಳಲ್ಲಿ ಮತ್ತು ಕ್ಲೈಮ್ಯಾಕ್ಸ್‌ನ ಕ್ರೀಡಾ ಸನ್ನಿವೇಶಗಳಲ್ಲಿ ಅವರ ನಟನೆ ಕಣ್ಣೀರು ತರಿಸುತ್ತೆ. ಈ ಪಾತ್ರದಲ್ಲಿ ತಮ್ಮ ದೇಹವನ್ನು ದಂಡಿಸಿರುವುದು ಅವರ ಅಭಿಮಾನಿಗಳು ಸೆಳೆಯುತ್ತೆ. ನಾಯಕಿ ಜಾನ್ವಿ ಕಪೂರ್ ಹಳ್ಳಿಯ ಹುಡುಗಿಯ ಪಾತ್ರಕ್ಕೆ ಹೊಂದಿಕೊಂಡಿದ್ದು, ತಮ್ಮ ಗ್ಲಾಮರ್ ಲುಕ್ ಹಾಗೂ ನಟನೆಯಿಂದ ಇಷ್ಟ ಆಗುತ್ತಾರೆ.

Ram Charan  Jahnvi Kapoor  Shivarajkumar movie Peddi review and Rating in Kannada

ಶಿವಣ್ಣ ಬೀಳುತ್ತೆ ಶಿಳ್ಳೆ

'ಪೆದ್ದಿ'ಯಲ್ಲಿ ಗೌರ್‌ ನಾಯ್ಡು ಪಾತ್ರದಲ್ಲಿ ಶಿವಣ್ಣ ಕಿಕ್ ಕೊಡುತ್ತಾರೆ. ಸಿನಿಮಾ ಆರಂಭ ಆದ 40 ನಿಮಿಷಗಳ ಬಳಿಕ ಎಂಟ್ರಿ ಕೊಟ್ಟರೆ, ಇಡೀ ಸಿನಿಮಾದಲ್ಲಿ ನೋಡಬಹುದು. ಕುಸ್ತಿ ತರಬೇತುದಾರನಾಗಿ ಶಿವಣ್ಣ ಇಷ್ಟ ಆಗುತ್ತಾರೆ. ಅದರಲ್ಲೂ ರಾಮ್ ಚರಣ್ ಹಾಗೂ ಶಿವಣ್ಣ ಕಾಂಬಿನೇಷನ್ ಪ್ರೇಕ್ಷಕರ ಕಣ್ಣುಗಳಿಗೆ ಹಬ್ಬ ಅಂತಲೇ ಹೇಳಬೇಕು.

ಟೆಕ್ನಿಕಲ್ ಹೈಲೈಟ್

ಬುಚ್ಚಿ ಬಾಬು ಸನಾ ಸಿನಿಮಾದಲ್ಲಿ ಕ್ರೀಡೆಯನ್ನು ಪ್ರಮುಖ ಅಂಶವಾಗಿ ಬಳಸಿಕೊಂಡಿದ್ದಾರೆ. ಹಾಗಂತ ಕ್ರೀಡೆಯನ್ನು ಕೇವಲ ಆಕ್ಷನ್ ಆಗಿ ಬಳಸದೆ, ಅದಕ್ಕೊಂದು ಬಲವಾದ ಎಮೋಷನಲ್ ಟಚ್ ಕೊಟ್ಟಿದ್ದಾರೆ. ಆದರೆ, ಸಿನಿಮಾದಲ್ಲಿ ಎ.ಆರ್. ರೆಹಮಾನ್ ಅವರ ಸಂಗೀತ ಮತ್ತು ಹಿನ್ನೆಲೆ ಸಂಗೀತ ಹೈಲೈಟ್. ಗ್ರಾಮೀಣ ಸೊಗಡಿನ ಹಾಡುಗಳು ಹಾಗೂ ಕ್ರೀಡಾ ಸನ್ನಿವೇಶಗಳ ವೇಳೆ ಬರುವ ಬಿಜಿಎಂ ಪ್ರೇಕ್ಷಕರಲ್ಲಿ ರೋಮಾಂಚನ ಮೂಡಿಸುತ್ತದೆ. ಇನ್ನು ಆರ್.ರತ್ನವೇಲು ಕ್ಯಾಮರಾ ವರ್ಕ್ ಅದ್ಭುತ.

ಪ್ಲಸ್ ಪಾಯಿಂಟ್‌

ರಾಮ್ ಚರಣ್ ಈ ಸಿನಿಮಾದ ಪ್ಲಸ್ ಪಾಯಿಂಟ್. ಇಡೀ ಸಿನಿಮಾವನ್ನು ತಮ್ಮ ಹೆಗಲ ಮೇಲೆ ಹೊತ್ತು ಮುನ್ನಡೆಸಿದ್ದಾರೆ. ಸಿನಿಮಾದ ಸೆಕೆಂಡ್ ಹಾಫ್ ಪ್ರೇಕ್ಷಕರನ್ನು ಹಿಡಿದಿಡುತ್ತೆ. ಅದರಲ್ಲೂ ಕ್ಲೈಮ್ಯಾಕ್ಸ್ ಅವರನ್ನು ಭಾವುಕರನ್ನಾಗಿಸುತ್ತೆ. ಕಥೆಯನ್ನು ಎಮೋಷನಲ್ ಆಗಿ ಕನೆಕ್ಟ್ ಮಾಡುವಲ್ಲಿ ನಿರ್ದೇಶಕ ಬುಚ್ಚಿ ಬಾಬು ಸನಾ ಗೆದ್ದಿದ್ದಾರೆ. ಹಾಡುಗಳು, ಹಿನ್ನೆಲೆ ಸಂಗೀತ ಸಿನಿಮಾ ಮತ್ತೊಂದು ಹೈಲೈಟ್.

ಮೈನಸ್ ಪಾಯಿಂಟ್‌

'ಪೆದ್ದಿ'ಯಲ್ಲೂ ಕೆಲವು ನೆಗೆಟಿವ್ ಪಾಯಿಂಟ್‌ಗಳು ಇವೆ. ಫಸ್ಟ್ ಹಾಫ್‌ ಎಳೆದಿದ್ದಾರೆ ಅಂತ ಅನಿಸುತ್ತೆ. ಮೊದಲಾರ್ಧದಲ್ಲಿ ಅಸಲಿ ಕಥೆಗೆ ಬರುವುದಕ್ಕೆ ಹೆಚ್ಚು ಸಮಯ ತೆಗೆದುಕೊಂಡಿದ್ದಾರೆ. ಇನ್ನು ಸಿನಿಮಾದ ಕೆಲವು ಸನ್ನಿವೇಶಗಳನ್ನು ಗೆಸ್ ಮಾಡಬಹುದು. ಕ್ರೀಡಾ ಪ್ರಧಾನ ಸಿನಿಮಾಗಳಲ್ಲಿ ಸಾಮಾನ್ಯವಾಗಿ ನೋಡುವುದಕ್ಕೆ ಸಿಗುವ 'ಸೋತು ಗೆಲ್ಲುವ' ಫಾರ್ಮುಲಾವನ್ನೇ ಇಲ್ಲೂ ಬಳಸಲಾಗಿದೆ.

ಕೊನೆಯಲ್ಲಿ...

'ಪೆದ್ದಿ' ಕೇವಲ ಮಾಸ್ ಮಸಾಲಾ ಸಿನಿಮಾಗಳ ಸಾಲಿಗೆ ಸೇರಿಸುವುದಕ್ಕೆ ಆಗುವುದಿಲ್ಲ. ಇದೊಂದು ತಾಯಿ-ಮಗನ ಕಥೆ. ಊರಿನ ಗೌರವದ ಕಥೆ.. ಆತ್ಮಾಭಿಮಾನದ ಕಥೆ.. ಫಸ್ಟ್ ಹಾಫ್ ನಿಧಾನ ಅನ್ನೋದು ಬಿಟ್ಟರೆ, ರಾಮ್ ಚರಣ್ ಹಾಗೂ ಶಿವಣ್ಣ ಪವರ್‌ಫುಲ್ ಪರ್ಫಾರ್ಮೆನ್ಸ್, ಎ.ಆರ್. ರೆಹಮಾನ್ ಮ್ಯೂಸಿಕ್‌ಗಾಗಿ ಥಿಯೇಟರ್‌ನಲ್ಲಿ ಕುಟುಂಬ ಸಮೇತ ನೋಡಬಹುದಾದ ಒಂದು ಉತ್ತಮ ಕ್ರೀಡಾ ಪ್ರಧಾನ ಸಿನಿಮಾ ಎನ್ನಬಹುದು.

English summary
Ram Charan, Jahnvi Kapoor, Shivarajkumar movie Peddi review and Rating in Kannada. Peddi is combination of sports and emotions
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X