Animal X Review "ವೈಲೆನ್ಸ್.. ಕ್ಲೈಮ್ಯಾಕ್ಸ್ ಸೀನ್.. ಆಕ್ಷನ್ ಮೆಚ್ಚಿದ ನೆಟ್ಟಿಗರು.. ರೇಟಿಂಗ್ ಎಷ್ಟು ಕೊಟ್ರು?
ರಣ್‌ಬೀರ್ ಕಪೂರ್, ರಶ್ಮಿಕಾ ಮಂದಣ್ಣ ಕಾಂಬಿನೇಷನ್ ಸಿನಿಮಾ 'ಎನಿಮಲ್'. ಬಾಲಿವುಡ್ ಮಂದಿ ಈ ಸಿನಿಮಾ ಮೇಲೆ ಇನ್ನಿಲ್ಲದ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಈ ವರ್ಷ ಬಾಕ್ಸಾಫೀಸ್‌ನಲ್ಲಿ ಧೂಳೆಬ್ಬಿಸಲೇ ಬೇಕು ಅಂತ ಪಣ ತೊಟ್ಟಿರೋ ಬಾಲಿವುಡ್ ಮಂದಿಗೆ 'ಎನಿಮಲ್' ಆಶಾದಾಯಕ ರೆಸ್ಪಾನ್ಸ್ ಕೊಟ್ಟಿದೆ.
ಈಗಾಗಲೇ ವಿಶ್ವದ ಹಲವೆಡೆ 'ಎನಿಮಲ್' ಪ್ರದರ್ಶನ ಕಂಡಿದೆ. ಸಿನಿಮಾ ನೋಡಿ ಹೊರಬಂದವರು 'ಎನಿಮಲ್' ನೋಡಿ ಮೆಚ್ಚಿಕೊಂಡಿದ್ದಾರೆ. ಸಂದೀಪ್ ರೆಡ್ಡಿ ವಂಗಾ ನಿರ್ದೇಶನಕ್ಕೆ ಬಹುಪರಾಕ್ ಹೇಳಿದ್ದಾರೆ. ರಣ್ಭೀರ್ ಕಪೂರ್, ಅನಿಲ್ ಕಪೂರ್, ಬಾಬಿ ಡಿಯೋಲ್ ನಟನೆಯನ್ನು ಹೊಗಳಿ ಕೊಂಡಾಡಿದ್ದಾರೆ.

'ಎನಿಮಲ್' ಸಿನಿಮಾದ ಫಸ್ಟ್ ಹಾಫ್ ಸ್ವಲ್ಪ ನಿಧಾನಗತಿಯಲ್ಲಿದೆ ಅಂತ ಅನಿಸಿದ್ದರೂ, ಸೆಕೆಂಡ್ ಹಾಫ್‌ನಲ್ಲಿ ವೇಗ ಕಂಡುಕೊಂಡಿದ್ದಾರೆ. ರಣ್‌ಬೀರ್ ಕಪೂರ್ ವೃತ್ತಿ ಬದುಕಿನಲ್ಲೇ ಅತ್ಯದ್ಭುತ ಸಿನಿಮಾ ಎಂದಿದ್ದಾರೆ. ಅನಿಲ್ ಕಪೂರ್ ಹಾಗೂ ಬಾಬಿ ಡಿಯೋಲ್‌ಗೆ ಫುಲ್ ಮಾರ್ಕ್ಸ್ ಕೊಟ್ಟಿದ್ದಾರೆ. ಸಿನಿಮಾ ನೆಟ್ಟಿಗರು ಎಕ್ಸ್ (ಟ್ವಿಟರ್) ನಲ್ಲಿ ಕೊಟ್ಟ ರೆಸ್ಪಾನ್ಸ್ ಹೀಗಿದೆ.
"ಕ್ಲೈಮ್ಯಾಕ್ಸ್ ಸೀನ್ ಮಂತ್ರಮುಗ್ಧರನ್ನಾಗಿಸುತ್ತೆ"
"ಗ್ಯಾಂಗ್ಸ್ ಆಫ್ ವಾಸ್ಸೆಪುರ್ ಸಿನಿಮಾದ ಬಳಿಕ ಎನಿಮಲ್ ಸಿನಿಮಾ ಭಾರತದ ಅತ್ಯದ್ಭುತ ಸಿನಿಮಾ ಆಗಲಿದೆ. ರಣ್‌ಬೀರ್ ಕಪೂರ್, ಅನಿಲ್ ಕಪೂರ ಇಬ್ಬರೂ ಉತ್ತಮವಾಗಿ ನಟಿಸಿದ್ದಾರೆ. ಬಾಬಿ ಡಿಯೋಲ್ ಅಂತೂ ಅದ್ಭುತ. ಆಕ್ಷನ್ ಸೀನ್‌ಗಳು ಎಪಿಕ್. ಕೊನೆಯ ಕ್ಲೈಮ್ಯಾಕ್ಸ್ ಸೀನ್ ಅಂತೂ ಮಂತ್ರಮುಗ್ಧರನ್ನಾಗಿಸುತ್ತೆ." ಎಂದು ನೆಟ್ಟಿಗರೊಬ್ಬರು ಹೇಳಿದ್ದಾರೆ.
ಬ್ಲಾಕ್ ಬಸ್ಟರ್ ಸಿನಿಮಾ ಎನಿಮಲ್
" ಒಂದೇ ಪದದಲ್ಲಿ ಹೇಳುವುದಾದರೆ ಬ್ಲಾಕ್‌ಬಸ್ಟರ್. ರಣ್‌ಬೀರ್ ಕಪೂರ್ ಹಿಂದೆಂದೂ ಕಾಣಿಸಿಕೊಳ್ಳದ ಪಾತ್ರದಲ್ಲಿ ನಟಿಸಿದ್ದಾರೆ. ಅವರ ವೃತ್ತಿ ಬದುಕಿನಲ್ಲೇ ಅದ್ಭುತ ಅಭಿನಯದ ಎಂದು ಹೇಳಿದ್ದಾರೆ. ರೇಟಿಂಗ್ 4.5 ಸ್ಟಾರ್" ಎಂದಿದ್ದಾರೆ.
ವೈಲೆನ್ಸ್ ಸಿನಿಮಾದ ಬ್ಯಾಕ್‌ಬೋನ್
"ಇಂತಹ ಕ್ರೂರವಾದ ಸಿನಿಮಾವನ್ನು ಹಿಂದೆಂದೂ ಮಾಡಿಯೇ ಇಲ್ಲ. ವೈಲೆನ್ಸ್ ಈ ಸಿನಿಮಾದ ಬ್ಯಾಕ್‌ಬೋನ್. ಅತ್ಯುತ್ತಮ ಹಾಡುಗಳು, ಅದ್ಭುತ ಬಿಜಿಎಂ ಮತ್ತು ಪವರ್‌ಫುಲ್ ಹಾಗೂ ಮೈನವಿರೇಳಿಸುವ ಆಕ್ಷನ್ ಸೀನ್‌ಗಳು ಈ ಸಿನಿಮಾದಲ್ಲಿವೆ" ಎಂದು ಮತ್ತಿಬ್ಬರು ಅಭಿಪ್ರಾಯ ಪಟ್ಟಿದ್ದಾರೆ. ರೇಟಿಂಗ್ 4/5" ಕೊಟ್ಟಿದ್ದಾರೆ.
ಸಿನಿಮಾ ಫಸ್ಟ್ ಹಾಫ್ ಸ್ಲೋ
"ಎನಿಮಲ್ ಸಿನಿಮಾದ ಸ್ಕ್ರೀನಿಂಗ್ ಅನ್ನು ಈಗ ತಾನೇ ಫಿನಿಶ್ ಮಾಡಿದೆ. ಇದು ವಂಗಾಸ್ ಫೈರ್. ಸಿನಿಮಾ ಫಸ್ಟ್ ಹಾಫ್ ಸ್ವಲ್ಪ ಸ್ಲೋ ಇದೆ. ಇಂಟರ್‌ವಲ್ ಬ್ಲಾಕ್ ಫೈಯರಿಂಗ್ ಆಗಿದೆ. ಸೆಂಕೆಂಡ್ ಹಾಫ್ ಹಿಡಿತದಲ್ಲಿದೆ. ಆಕ್ಷನ್ ಸೀನ್‌ಗಳು ಪಟಾಕಿ ಸಿಡಿದಂತೆ ಇವೆ. ರಣ್‌ಬೀರ್ ಕಪೂರ್ ಈ ಸಿನಿಮಾದಲ್ಲಿ ತಮ್ಮ ಅಭಿನಯವನ್ನು ಪ್ರೋವ್ ಮಾಡಿಕೊಂಡಿದ್ದಾರೆ. ಫಸ್ಟ್ ಹಾಫ್ ಲಾಂಗ್ ಇದೆ. ಆದರೂ, ಆರಂಭ ಮಿಸ್ ಮಾಡಿಕೊಳ್ಳಬೇಡಿ. ರೇಟಿಂಗ್ 3.5/5" ಎಂದಿದ್ದಾರೆ.


Click it and Unblock the Notifications











