Dhurandhar 2 X Review: 'ಧುರಂಧರ್ 2' ನೋಡಿದ ಪ್ರೇಕ್ಷಕರು ಹೇಳಿದ್ದೇನು? ಇಷ್ಟ ಆಯ್ತಾ? ಇಲ್ವಾ?
ಈ ವರ್ಷದ ಭಾರತದ ಮೋಸ್ಟ್ ಎಕ್ಸ್‌ಪೆಕ್ಟೆಡ್ ಸಿನಿಮಾ 'ಧುರಂಧರ್ 2' ರಿಲೀಸ್ ಆಗಿದೆ. ನಿನ್ನೆ (ಮಾರ್ಚ್ 18) ವಿಶ್ವದ ಬಹುತೇಕ ಭಾಗಗಳಲ್ಲಿ ಪೇಯ್ಡ್ ಪ್ರೀಮಿಯರ್ ಆಗಿದೆ. ಇದರಿಂದಲೇ ಸಿನಿಮಾ ದಾಖಲೆ ಕಲೆಕ್ಷನ್ ಮಾಡಿದ್ದು, ಸಿನಿಮಾ ಬಗ್ಗೆ ಕ್ರೇಜ್ ದುಪ್ಪಟ್ಟಾಗಿದೆ. ಈ ಸ್ಪ್ರೈ (SPY) ಸೀಕ್ವೆಲ್ ನೋಡಿ ಪ್ರೇಕ್ಷಕರು ಒಂದೊಂದು ರೀತಿ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ.
ರಣ್‌ವೀರ್ ಸಿಂಗ್, ಸಂಜಯ್ ದತ್ ಹಾಗೂ ಅರ್ಜುನ್ ರಾಮ್‌ಪಾಲ್ ಪ್ರಮುಖ ಪಾತ್ರದಲ್ಲಿ ನಟಿಸಿರುವ ಸಿನಿಮಾ ಹಲ್‌ಚಲ್ ಎಬ್ಬಿಸುತ್ತಿದೆ. ಆದಿತ್ಯ ಧರ್ ನಿರ್ದೇಶಿಸಿರುವ ಈ ಸಿನಿಮಾ ಬಾಕ್ಸಾಫೀಸ್‌ನಲ್ಲಿ ದಾಖಲೆ ಕಲೆಕ್ಷನ್ ಮಾಡುವ ಬಗ್ಗೆ ಟ್ರೇಡ್ ಎಕ್ಸ್‌ಪರ್ಟ್‌ಗಳು ಭವಿಷ್ಯ ನುಡಿದಿದ್ದಾರೆ. 'ಧುರಂಧರ್' ಸೃಷ್ಟಿಸಿದ ಕ್ರೇಜ್ ಪಾರ್ಟ್ 2 ಮುಂದುವರೆದಿದ್ದು, ಮುಗಿಬಿದ್ದು ಸಿನಿಮಾ ನೋಡುವುದಕ್ಕೆ ಮುಂದಾಗಿದ್ದಾರೆ.

'ಧುರಂಧರ್ 2' ಇಂದಿನಿಂದ (ಮಾರ್ಚ್ 19) ವಿಶ್ವದಾದ್ಯಂತ ರಿಲೀಸ್ ಆಗಿದೆ. ಸಿನಿಮಾದ ರೈನ್‌ಟೈಮ್ 3 ಗಂಟೆ 49 ನಿಮಿಷ ಇದ್ದರೂ, ಪ್ರೇಕ್ಷಕರು ಸಿನಿಮಾ ನೋಡುವುದಕ್ಕೆ ಉತ್ಸಾಹವನ್ನು ತೋರುತ್ತಿದ್ದಾರೆ. ಹಾಗಿದ್ದರೆ, ಈಗಾಗಲೇ ಸಿನಿಮಾ ನೋಡಿದವರು 'ಧುರಂಧರ್ 2' ಬಗ್ಗೆ ಏನಂತಿದ್ದಾರೆ? ಅವರಿಗೆ ಸಿನಿಮಾದಲ್ಲಿ ಏನೆಲ್ಲ ಇಷ್ಟ ಆಯ್ತು? ತಿಳಿಯುವುದಕ್ಕೆ ಮುಂದೆ ಓದಿ.
ಎಂತಹ ಅದ್ಭುತ ಸಿನಿಮಾ
"ಧುರಂಧರ್ 2 ಎಂತಹ ಅದ್ಭುತ ಸಿನಿಮಾ. ಆದಿತ್ಯ ಧರ್‌ಗೆ ಅಭಿನಂದನೆಗಳು. ಹಾಗೇ ಪವರ್‌ಫುಲ್ ಹಾಗೂ ಪ್ರಭಾವ ಬೀರುವಂತಹ ಸಿನಿಮಾವನ್ನು ಕೊಟ್ಟಿದ್ದಕ್ಕಾಗಿ ಯಾಮಿ ಗೌತಮ್‌ಗೆ ಧನ್ಯವಾದಗಳು. ಇದು ವಾಸ್ತವವನ್ನು ಅದ್ಭುತವಾಗಿ ಪ್ರತಿಬಿಂಬಿಸಿದ್ದು, ಇಂದಿನ ಜನರೇಷನ್ ಈ ಸಿನಿಮಾವನ್ನು ಅರ್ಥ ಮಾಡಿಕೊಳ್ಳುವುದಕ್ಕೆ ಸಹಾಯ ಮಾಡಿದೆ. ಹಾಗೇ ಯಾರು ಯಾವ ಕಡೆ ನಿಂತಿದ್ದಾರೆ ಅನ್ನೋದು ಗೊತ್ತಾಗುತ್ತೆ. ಇದು ನೋಡಲೇ ಬೇಕಾದ ಸಿನಿಮಾ" ಎಂದು ನೆಟ್ಟಿಗರೊಬ್ಬರು ಹೇಳಿದ್ದಾರೆ.
ರಾಜಕೀಯದಲ್ಲಿ ಮಾಸ್ಟರ್ ಕ್ಲಾಸ್
"ಧುರಂಧರ್ 2 ಸಿನಿಮಾ ರಾಜಕೀಯ ಹಾಗೂ ತೀವ್ರತೆಯನ್ನು ಸಾರುವುದರಲ್ಲಿ ಮಾಸ್ಟರ್‌ಕ್ಲಾಸ್. ಧುರಂಧರ್ ಮುಂದುವರೆದ ಭಾಗವನ್ನು ಪವರ್‌ಫುಲ್ ಆಗಿ ತೆಗೆದುಕೊಂಡು ಹೋಗಿದೆ. ಭಾವನಾತ್ಮಕ ಸನ್ನಿವೇಶಗಳು ಹಾಗೂ ಹಿಡಿದಿಡುವ ಸನ್ನಿವೇಶಗಳನ್ನು ಸಿನಿಮಾದ ಉದ್ದಕ್ಕೂ ಮುಂದುವರೆಸಿದೆ. ಈ ಸೀಕ್ವೆಲ್ ಕೊನೆಯವರೆಗೂ ನಿಮ್ಮನ್ನು ಎಂಗೇಜ್ ಆಗಿ ಇಡುತ್ತದೆ. ಎಂದು ಯೂಟ್ಯೂಬರ್ ಒಬ್ಬರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ದ್ವಿತೀಯಾರ್ಧ ಅದ್ಭುತವಾಗಿದೆ
"ಧುರಂಧರ್ 2 ಸಿನಿಮಾ ನಿಧಾನವಾಗಿ ಶುರುವಾಗುತ್ತೆ. ಆದರೆ, ಸೆಕೆಂಡ್ ಹಾಫ್‌ನಲ್ಲಿ ಹಿಡಿತವಿದೆ. ಅದರಲ್ಲೂ ಕೊನೆಯಲ್ಲಿ ಸಿಗುವ ಟ್ವಿಸ್ಟ್‌ಗಳು ನಿಜವಾಗಿಯೂ ಅದ್ಭುತವಾಗಿದೆ. ಹಾಗೇ ಸಿನಿಮಾದ ಪಾತ್ರಗಳು ಕೂಡ ರಿಯಲ್ ಲೈಫ್‌ಗೆ ಹತ್ತಿರವಾಗಿದೆ ಎನಿಸುತ್ತದೆ. ಅದರಲ್ಲೂ ನವಾಜ್ ಶರೀಷ್ ಪಾತ್ರ ಆಕ್ಟಿಂಗ್ ಮಾಡುತ್ತಿದ್ದಾರೆ ಅಂತ ಅನಿಸುವುದೇ ಇಲ್ಲ" ಎಂದು ಮತ್ತೊಬ್ಬ ನೆಟ್ಟಿಗರು ಅಭಿಪ್ರಾಯ ಪಟ್ಟಿದ್ದಾರೆ.
ಧುರಂಧರ್ 2 ಬ್ಲಾಕ್‌ಬಸ್ಟರ್ ಸಿನಿಮಾ
"ಧುರಂಧರ್ 2 ಬ್ಲಾಕ್‌ಬಸ್ಟರ್ ಸಿನಿಮಾ. ಇದು ಉತ್ತುಂಗದಲ್ಲಿದೆ. ರಣ್‌ವೀರ್ ಸಿಂಗ್ ಸಖತ್ ಆಗಿ ಮಿಂಚಿದ್ದಾರೆ. ಅದ್ಭುತ ಅಭಿನಯ. ಅವರ ಎನರ್ಜಿ, ಭಾವನೆ ಹಾಗೂ ತೆರೆಮೇಲೆ ಕಾಣಿಸಿಕೊಂಡ ರೀತಿ ನಿಜಕ್ಕೂ ಅದ್ಭುತವಾಗಿದೆ. ಇನ್ನೊಂದು ಲೆವೆಲ್‌ನಲ್ಲಿದೆ. ಸಿನಿಮಾದ ಪ್ರತಿಯೊಂದು ದೃಶ್ಯವೂ ಕೂಡ ಒಂದಕ್ಕೊಂದು ಸೇರಿಕೊಂಡಿದೆ. ಆದಿತ್ಯ ಧರ್ ಕಂಪ್ಲೀಟ್ ಸಿನಿಮ್ಯಾಟಿಕ್ ಹಾಗೂ ಮಾಸ್ಟರ್‌ಪೀಸ್ ಸಿನಿಮಾವನ್ನು ಕೊಟ್ಟಿದ್ದಾರೆ.
ಪ್ರೀತಿ ಜಿಂಟಾ ವಿಮರ್ಶೆ
"ಈಗ ತಾನೇ ಧುರಂಧರ್ 2 ಸಿನಿಮಾ ನೋಡಿದೆ. "ಸೇಡು ತೀರಿಸಿಕೊಂಡರೆ ಧುರಂಧರ್ ಹಾಗೆ ತೀರಿಸಿಕೊಳ್ಳಬೇಕು. ಇಲ್ಲಾ ಅಂತ ಅದಕ್ಕೆ ಹೋಗಲೇ ಬಾರು. ನಿರ್ದೇಶನ, ನಟನೆ, ಮ್ಯೂಸಿಕ್, ಎಡಿಟಿಂಗ್, ಸ್ಟೋರಿ, ಕಾಸ್ಟಿಂಗ್ ಸೇರಿದಂತೆ ಎಲ್ಲಾ ವಿಭಾಗಗಳಲ್ಲಿಯೂ ಅದ್ಭುತ ಕೆಲಸಗಳಾಗಿವೆ. ಈ ಸಿನಿಮಾವನ್ನು ನೋಡಿದ ಬಳಿಕ ನನ್ನ ತಾಯಿ ನನಗೆ ಮತ್ತೆ ಅವರ ಸ್ನೇಹಿತರೊಂದಿಗೆ ಈ ಸಿನಿಮಾವನ್ನು ನೋಡಬೇಕು ಅಂತ ಹೇಳಿದರು. ನನಗೂ ಕೂಡ ಅದೇ ಅನುಭವ ಆಯ್ತು" ಎಂದು ಪ್ರೀತಿ ಜಿಂಟಾ ಹೇಳಿದ್ದಾರೆ.


Click it and Unblock the Notifications











