Dhurandhar 2 Review: ಭಾರತದ ಮೋಸ್ಟ್‌ ಎಕ್ಸ್‌ಪೆಕ್ಟೆಡೆ ಸಿನಿಮಾ 'ಧುರಂದರ್ 2' ಹೇಗಿದೆ? ಪ್ಲಸ್ ಏನು? ಮೈಸನ್ ಏನು?

Rating:
4.0/5

ಭಾರತದ ಮೋಸ್ಟ್ ಎಕ್ಸ್‌ಪೆಕ್ಟೆಡ್ ಸಿನಿಮಾಗಳಲ್ಲಿ ಒಂದಾದ 'ಧುರಂಧರ್ 2' ಇಂದು (ಮಾರ್ಚ್ 18) ವಿಶ್ವದಾದ್ಯಂತ ಪ್ರೀಮಿಯರ್ ಶೋ ಕಂಡಿದೆ. ವಿಶ್ವದ ಮೂಲೆ ಮೂಲೆಯಲ್ಲೂ ಈ ಸಿನಿಮಾದ ಪ್ರೀಮಿಯರ್‌ಗೆ ಒಳ್ಳೆಯ ಒಪಿನಿಯನ್ ಸಿಕ್ಕಿದೆ. ಶೋಗಳು ಬಹುತೇಕ ಕಡೆ ಹೌಸ್‌ಫುಲ್ ಆಗಿವೆ. ಭಾಷೆಯ ಭೇದವನ್ನು ಮರೆತು ಸಿನಿಮಾವನ್ನು ನೋಡಿ ಬಂದಿದ್ದಾರೆ. 'ಧುರಂಧರ್' ಬಾಕ್ಸಾಫೀಸ್‌ನಲ್ಲಿ ಮೋಡಿ ಮಾಡಿದ ಬೆನ್ನಲ್ಲೇ ಪಾರ್ಟ್‌ 2ಗೆ ಕ್ರೇಜ್ ಹೆಚ್ಚಾಗಿದೆ.

ರಣ್‌ವೀರ್ ಸಿಂಗ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಈಗಾಗಲೇ ಟ್ರೈಲರ್‌ನಲ್ಲಿ ತೋರಿಸಿರುವಂತೆ ಪ್ರಮುಖ ಪಾತ್ರದ ಹಿನ್ನೆಲೆಯನ್ನು ಪಾರ್ಟ್ 2ನಲ್ಲಿ ಅನಾವಣ ಮಾಡಲಾಗಿದೆ. ಇದರೊಂದಿಗೆ ಕೆಲವು ಪ್ರಮುಖ ಅಂಶಗಳನ್ನು ಸಿನಿಮಾದಲ್ಲಿ ತೋರಿಸಲಾಗಿದೆ. ಅದಿತ್ಯ ಧರ್ ನಿರ್ದೇಶಿಸಿರುವ ಈ ಸಿನಿಮಾದ ಪ್ರೀಮಿಯರ್ ಶೋಗೆ ಮಸ್ತ್ ರೆಸ್ಪಾನ್ಸ್ ಸಿಕ್ಕಿದೆ. 'ಧುರಂಧರ್' ಮುಂದುವರೆದ ಭಾಗ ಆಗಿದ್ದರಿಂದ ಪ್ರೇಕ್ಷಕರು ಸಿನಿಮಾ ನೋಡುವುದಕ್ಕೆ ತುದಿಗಾಲಲ್ಲಿ ನಿಂತಿದ್ದಾರೆ.

Ranveer Singh starrer Dhurandhar 2 the Revenge movie review and rating in Kannada

ಪಾಕಿಸ್ತಾನದಲ್ಲಿ ಭಾರತದ ಗೂಢಾಚಾರಿಯ ಸಾಹಸಗಾಥೆಯನ್ನು 'ಧುರಂಧರ್‌'ನಲ್ಲಿ ಹೇಳಲಾಗಿತ್ತು. ಮುಂದುವರೆದ ಭಾಗವಾಗಿದ್ದಲ್ಲಿ ಇನ್ನೂ ಆಳವಾಗಿ ಕೆಲವು ವಿಷಯಗಳನ್ನು ತೋರಿಸಲಾಗಿದೆ. ಹಾಗಿದ್ದರೆ, 'ಧುರಂಧರ್ 2' ಕ್ರೇಜ್ ಹುಟ್ಟಾಕಿದಷ್ಟು ಅದ್ಭುತವಾಗಿದೆಯೇ? ಸಿನಿಮಾ ಸ್ಟೋರಿ ಲೈನ್ ಏನು? ಪ್ಲಸ್ ಏನು? ಮೈನಸ್ ಏನು? ಯಾರ ಪರ್ಫಾಮೆನ್ಸ್ ಹೇಗಿದೆ? ತಿಳಿಯುವುದಕ್ಕೆ ಮುಂದೆ ಓದಿ.

'ಧುರಂಧರ್ 2' ಹಿನ್ನೆಲೆ ಏನು?

ಇದು 'ಧುರಂಧರ್' ಮುಂದುವರೆದ ಭಾಗವಾಗಿದ್ದರಿಂದ ಈಗಾಗಲೇ ಟ್ರೈಲರ್‌ನಲ್ಲಿ ರಿವೀಲ್ ಮಾಡಿದಂತೆ ಪ್ರಮುಖ ಪಾತ್ರದ ಹಿನ್ನೆಲೆಯನ್ನು ತೋರಿಸಲಾಗಿದೆ. ಹೀರೋ ಜಸ್‌ಕಿರತ್ ಸಿಂಗ್ ರಂಗಿ (ರಣ್‌ವೀರ್ ಸಿಂಗ್) ಕುಟುಂಬದ ಸದಸ್ಯರೆಲ್ಲರೂ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುತ್ತಾರೆ. ಲೋಕಲ್ ಪೊಲಿಟಿಷಿಯನ್‌ನಿಂದ ಇವರ ಕುಟುಂಬ ಕಿರುಕುಳ ಅನುಭವಿಸುತ್ತೆ. ತನ್ನ ಕುಟುಂಬವನ್ನು ಸರ್ವನಾಶ ಮಾಡಿದವರನ್ನು ಸಾಯಿಸಿದ ಹೀರೋಗೆ ನ್ಯಾಯಾಲಯ ಮರಣದಂಡನೆ ನೀಡುತ್ತೆ. ಈ ವೇಳೆ ಒಂದು ಜೈಲಿನಿಂದ ಇನ್ನೊಂದು ಜೈಲಿಗೆ ಹೋಗುವಾಗ ಅಜಯ್ ಸಾನ್ಯಾಲ್ ಕಿಡ್ನಾಪ್ ಮಾಡಿಸುತ್ತಾರೆ. ಅಲ್ಲಿಂದ ನಾಯಕನನ್ನು ಪಾಕಿಸ್ತಾನಕ್ಕೆ ಕಳಿಸುತ್ತಾರೆ. ಜಸ್‌ಕಿರತ್ ಸಿಂಗ್ ರಂಗಿ ಹೇಗೆ ಪಾಕಿಸ್ತಾನಕ್ಕೆ ಹೋಗ್ತಾನೆ? ಹಂಜಾ ಅಲಿ ಮಜಾರಿಯಾಗಿ ಹೇಗೆ ಬದಲಾಗುತ್ತಾನೆ? ಪಾಕಿಸ್ತಾನಕ್ಕೆ ಹೋಗುವುದಕ್ಕೆ ರೀಸನ್ ಏನು? ರೆಹಮಾನ್ ಡಕಾಯಿತ್ ಸಾವಿನ ಬಳಿಕ ಏನಾಯ್ತು? ಅನ್ನೋದು ತೋರಿಸಲಾಗಿದೆ. ಇನ್ನೂ ನೋಟ್‌ ಬ್ಯಾನ್‌ಗೂ ಈ ಪಾತ್ರಕ್ಕೂ ಏನು ಲಿಂಕ್ ಅನ್ನೋದು ಸಿನಿಮಾದ ಮತ್ತೊಂದು ಹೈಲೈಟ್.

Also Read
Dhurandhar 2-Karnataka: ಹೆಚ್ಚೆಬ್ಬಿಸುತ್ತಿದೆ 'ಧುರಂಧರ್ 2'.. ರಿಲೀಸ್‌ಗೂ ಮುನ್ನವೇ ಕರ್ನಾಟಕದಲ್ಲಿ ಕೋಟಿ ಕೋಟಿ ಕಲೆಕ್ಷನ್
Dhurandhar 2-Karnataka: ಹೆಚ್ಚೆಬ್ಬಿಸುತ್ತಿದೆ 'ಧುರಂಧರ್ 2'.. ರಿಲೀಸ್‌ಗೂ ಮುನ್ನವೇ ಕರ್ನಾಟಕದಲ್ಲಿ ಕೋಟಿ ಕೋಟಿ ಕಲೆಕ್ಷನ್

ಪರ್ಮಾಮೆನ್ಸ್ ಹೇಗಿದೆ?

ಜಸ್‌ಕಿರತ್ ಸಿಂಗ್ ರಂಗಿ ಹಾಗೂ ಹಂಜಾ ಅಲಿ ಮಜಾರಿ ಪಾತ್ರದಲ್ಲಿ ರಣ್‌ವೀರ್ ಸಿಂಗ್ ಮಿಂಚಿದ್ದಾರೆ. ಎರಡು ಪಾತ್ರಗಳಲ್ಲಿ ಪ್ರೇಕ್ಷಕರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನೂ ಆಕ್ಷನ್ ಸೀಕ್ವೆನ್ಸ್‌ನಲ್ಲಿ ಚಿಂದಿ ಉಡಾಯಿಸಿದ್ದಾರೆ. ರಣ್‌ವೀರ್ ಸಿಂಗ್ ಅನ್ನು ಮೂರು ಶೇಡ್‌ನಲ್ಲಿ ತೋರಿಸಲಾಗಿದ್ದು, ಎಲ್ಲಾದರಲ್ಲೂ ಇಷ್ಟ ಆಗುತ್ತಾರೆ. ಇವರೊಂದಿಗೆ ಮೇಜರ್ ಇಕ್ಬಾಲ್ ಪಾತ್ರದಲ್ಲಿ ಅರ್ಜುನ್ ರಾಮ್‌ಪಾಲ್ ಇಷ್ಟ ಆಗುತ್ತಾರೆ. ಇವರ ಆಕ್ಷನ್ ಹಾಗೂ ಡೈಲಾಗ್ ಪ್ರೇಕ್ಷಕರಿಗೆ ಕಿಕ್ ಕೊಡುತ್ತೆ. ಇನ್ನು ಎಸ್‌ಪಿ ಚೌಧರಿ ಅಸ್ಲಾಮ್ ಪಾತ್ರದಲ್ಲಿ ಸಂಜಯ್ ದತ್ ರೋಲ್ ಕೂಡ ಗಮನ ಸೆಳೆಯುತ್ತಾರೆ.

ಟೆಕ್ನಿಕಲಿ ಸಿನಿಮಾ ಹೇಗಿದೆ?

ಆದಿತ್ಯ ಧರ್ 'ಧುರಂಧರ್ 2' ಮೂಲಕ ಮತ್ತೆ ಉತ್ತಮ ನಿರ್ದೇಶಕ ಅನ್ನೋದನ್ನು ಪ್ರೂವ್ ಮಾಡಿದ್ದಾರೆ. 3 ಗಂಟೆ 49 ನಿಮಿಷ ಇದ್ದರೂ ಎಲ್ಲೂ ಬೋರ್ ಹೊಡೆಸುವುದಿಲ್ಲ. ಕಥೆ-ಚಿತ್ರಕಥೆ ಟೈಟ್ ಆಗಿ ಮಾಡಿದ್ದಾರೆ. ಇನ್ನು ಮೇಕಿಂಗ್ ಕೂಡ ಅಷ್ಟೇ ಅದ್ಧೂರಿಯಾಗಿ ಮಾಡಿದ್ದಾರೆ. ಪಾಕಿಸ್ತಾನದ ಸೆಟ್‌ಗಳು ಒರಿಜಿನಲ್ ಎನ್ನುವಷ್ಟು ಗಮನ ಸೆಳೆಯುತ್ತವೆ. ಆಕ್ಷನ್ ಪ್ರಿಯರಿಗೆ ಕೆಲವು ಸೀಕ್ವೆನ್ಸ್‌ ಸಿಕ್ಕಾಪಟ್ಟೆ ಇಷ್ಟ ಆಗುತ್ತೆ. ಹಿನ್ನೆಲೆ ಸಂಗೀತದಲ್ಲಿ ಇನ್ನಷ್ಟು ಧಮ್ ಇದ್ದಿದ್ದರೆ ಚೆನ್ನಾಗಿರುತ್ತಿತ್ತು.

Ranveer Singh starrer Dhurandhar 2 the Revenge movie review and rating in Kannada

ಪಾಸಿಟಿವ್ ಏನು?

'ಧುರಂಧರ್ 2' ಸಿನಿಮಾದಲ್ಲಿ ಡೈಲಾಗ್‌ಗಳು ಪ್ರೇಕ್ಷಕರಿಂದ ಶಿಳ್ಳೆ ಗಿಟ್ಟಿಸಿಕೊಳ್ಳುತ್ತವೆ. ಇನ್ನು ಡೈರೆಕ್ಷನ್ ಸಿನಿಮಾದ ಪ್ಲಸ್ ಪಾಯಿಂಟ್‌ಗಳಲ್ಲಿ ಒಂದು. ಆದಿತ್ಯ ಧರ್ ಸ್ಕ್ರೀನ್‌ಪ್ಲೇ ಉತ್ತಮವಾಗಿದೆ. ಸಿನಿಮಾ ಮೇಕಿಂಗ್ ಕೂಡ ಅಷ್ಟೇ ಅಚ್ಚುಕಟ್ಟಾಗಿ ಮಾಡಿದ್ದಾರೆ. ಇದರೊಂದಿಗೆ ರಣ್‌ವೀರ್ ಸಿಂಗ್, ಸಂಜಯ್ ದತ್, ಅರ್ಜುನ್ ರಾಮ್‌ಪಾಲ್ ನಟನೆ ಈ ಸಿನಿಮಾ ಗೆಲ್ಲಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ.

ನೆಗೆಟಿವ್ ಏನು?

ಇಷ್ಟೆಲ್ಲ ಹೇಳಿದ ಮೇಲೆ ಸಿನಿಮಾದಲ್ಲಿ ನೆಗೆಟಿವ್ ಅಂಶಗಳು ಇಲ್ಲ ಅಂತಲ್ಲ. ಈ ಸಿನಿಮಾದಲ್ಲಿ ಪ್ರೇಕ್ಷಕರು ಅಕ್ಷಯ್ ಖನ್ನಾರನ್ನು ಮಿಸ್ ಮಾಡಿಕೊಳ್ತಾರೆ. ಇದು ಪ್ರೇಕ್ಷಕರಿಗೆ ನಿರಾಸೆ ಆಗುತ್ತೆ. ನಟಿ ಯಾಮಿ ಗೌತಮಿ ಇನ್ನೂ ಸ್ವಲ್ಪ ಹೊತ್ತು ತೆರೆಮೇಲೆ ಇರಬಹುದಿತ್ತು. ಕಣ್ಮುಚ್ಚಿ ಕಣ್ಬಿಡೋದರೊಳಗೆ ಮಾಯಾವಾಗಿ ಬಿಡುತ್ತಾರೆ. ಆರೇಳು ನಿಮಿಷಗೂ ಅಧಿಕ ಟೈಟಲ್ ಕಾರ್ಡ್ ಪ್ಲೇ ಇರೋದನ್ನು ಕಮ್ಮಿ ಮಾಡಬಹುದಿತ್ತು.

ಕೊನೆಯಲ್ಲಿ

ರಣ್‌ವೀರ್ ಸಿಂಗ್ 'ಧುರಂಧರ್ 2' ಸಿನಿಮಾದಲ್ಲಿ ಅತಿಯಾದ ಹಿಂಸೆ ಇದೆ. ಸಿನಿಮಾ ಹೆಚ್ಚು ಕಡಿಮೆ ನಾಲ್ಕು ಗಂಟೆಯಷ್ಟು ಉದ್ದವಿದೆ. ಆದರೂ ಕುಟುಂಬದೊಂದಿಗೆ ಕೂತು ನೋಡಬಹುದಾದ ಸಿನಿಮಾ ಎನ್ನಬಹುದು..

More from Filmibeat

English summary
Ranveer Singh starrer Dhurandhar 2 the Revenge movie review and rating in Kannada.
Read more about: ranveer singh arjun rampal
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X