Rocky Aur Rani Kii Prem Kahaani Review: ಪಂಜಾಬಿ ಪುತ್ರ.. ಬೆಂಗಾಲಿ ಬೇಬಿ.. ಫಸ್ಟ್ ಹಾಫ್ ಒಕೆ.. ಸೆಕೆಂಡ್ ಹಾಫ್ ಕಷ್ಟ

ಒಂದು ಕಾಲದಲ್ಲಿ ಟಿಪಿಕಲ್ ಕರಣ್ ಜೋಹರ್ ಫ್ಯಾಮಿಲಿ ಸಿನಿಮಾ ನೋಡೋಕೆ ಜನರು ಮುಗಿಬೀಳುತ್ತಿದ್ದರು. 'ಕುಚ್ ಕುಚ್ ಹೋತಾ ಹೇ', 'ಕಭಿ ಖುಷಿ ಕಭಿ ಗಮ್' ಅಂತಹ ಸಿನಿಮಾಗಳು ಶ್ರೀಮಂತ ವರ್ಗದ ಕುಟುಂಬದಲ್ಲಿ ನಡೆಯೋ ಕಲಹ, ಪ್ರೀತಿ, ವೈಮನಸ್ಸನ್ನು ತೋರಿಸಿದ್ದವು. ಜನರು ಮೆಚ್ಚಿಕೊಂಡಿದ್ದರು. ಆದ್ರೀಗ ಲಾಂಗ್ ಗ್ಯಾಪ್ ಕೊಟ್ಟು ಕರಣ್ ನಿರ್ದೇಶಿಸಿದ 'ರಾಕಿ ಔರ್ ರಾಣಿ ಕೀ ಪ್ರೇಮ್ ಕಹಾನಿ'ಯನ್ನೂ ಅಷ್ಟೇ ಇಷ್ಟ ಪಡುತ್ತಾರಾ?

'ರಾಕಿ ಔರ್ ರಾಣಿ ಕೀ ಪ್ರೇಮ್ ಕಹಾನಿ' ರಣ್‌ವೀರ್ ಸಿಂಗ್, ಆಲಿಯಾ ಭಟ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಕರಣ್ ಜೋಹರ್ ನಿರ್ದೇಶನ ಮಾಡಿದ್ದಾರೆ. ಈ ಕಾರಣಕ್ಕೆ ಈ ಸಿನಿಮಾ ಬಗ್ಗೆ ಹಿಂದಿ ಸಿನಿಮಾಗಳನ್ನು ಇಷ್ಟ ಪಡುವ ಪ್ರೇಕ್ಷಕರಿರುವ ಬೆಲ್ಟ್‌ಗಳಲ್ಲಿ ಕ್ರೇಜ್ ಇದೆ. ಆದರೆ, ಇಂದು (ಜುಲೈ 28) ತೆರೆಕಂಡಿರೋ ಈ ಸಿನಿಮಾ ಪ್ರೇಕ್ಷಕರನ್ನು ಮೆಚ್ಚುಗೆ ಗಳಿಸುತ್ತಾ? ಅನ್ನೋದೇ ಪ್ರಶ್ನೆ.

Ranveer Singh Starring Rocky Aur Rani Kii Prem Kahaani Movie Review in Kannada and Ratings

ಕರಣ್ ಜೋಹರ್ ಕಥೆ ಹೇಗಿದೆ?

ಇಬ್ಬರು ಪ್ರೇಮಿಗಳು.. ಬೇರೆ ಬೇರೆ ಸಂಪ್ರದಾಯ.. ಒಬ್ಬರು ಪಂಜಾಬಿ.. ಮತ್ತೊಬ್ಬರು ಬಂಗಾಳಿ.. ಮೂರು ತಿಂಗಳು ಅದಲು ಬದಲು ಮಾಡಿಕೊಂಡು ಸಂಪ್ರದಾಯವನ್ನು ಅರಿತುಕೊಳ್ಳಬೇಕು. ಕುಟುಂಬದ ಮನಸ್ಸನ್ನು ಗೆಲ್ಲಬೇಕು. ಇದನ್ನೇ ಹೆಚ್ಚು ಕಡಿಮೆ ಮೂರು ಗಂಟೆಗಳ ಕಾಲ (2 ಗಂಟೆ 48 ನಿಮಿಷ) ಕರಣ್ ಜೋಹರ್ ತೆರೆಮೇಲೆ ಎಳೆದು ತಂದಿದ್ದಾರೆ. ರಣ್‌ವೀರ್ ಸಿಂಗ್ ಪಂಜಾಬಿ ಪುತ್ರ. ಆಲಿಯಾ ಭಟ್ ಬೆಂಗಾಲಿ ಬೇಬಿ. ಇವರಿಬ್ಬರ ಲವ್ ಸ್ಟೋರಿಯೇ 'ರಾಕಿ ಔರ್ ರಾಣಿ ಕೀ ಪ್ರೇಮ್ ಕಹಾನಿ'.

Rating:
2.5/5

ಪಾತ್ರಗಳ ಪರ್ಫಾಮೆನ್ಸ್ ಹೇಗಿದೆ?

ರಣ್‌ವೀರ್ ಸಿಂಗ್ ಇದ್ದರೆ ಅಲ್ಲೊಂದು ಹುಚ್ಚ ತನ ಇದ್ದೇ ಇರುತ್ತೆ. ಅದು ಕರಣ್‌ ಜೋಹರ್ ಸಿನಿಮಾ ಆಗಿದ್ದರೂ ಅಷ್ಟೇ. ರಾಕಿ ರಾಂಧವನಾಗಿ ರಣ್‌ವೀರ್ ಸಿಂಗ್ ಇಂದಿನ ಯುವಕರಿಗೆ ಇಷ್ಟ ಆಗುತ್ತಾರೆ. ಇತ್ತ ಆಲಿಯಾ ಭಟ್ ಪಕ್ಕಾ ಕರಣ್‌ ಜೋಹರ್ ಸಿನಿಮಾ ನಾಯಕಿ ಅಂತ ಅನಿಸುತ್ತಾರೆ. ರಣ್‌ವೀರ್ ಹುಚ್ಚುತನದ ಜೊತೆ ಆಲಿಯಾ ಭಟ್ ಪೈಪೋಟಿಗೆ ಬಿದ್ದು ನಟಿಸಿದ್ದಾರೆ ಅಂತ ಅನಿಸುತ್ತೆ. ಈ ಸಿನಿಮಾದಲ್ಲಿ ಹಾಗೇ ಬಂದು ಹೀಗೆ ಹೋದರೂ, ಇಬ್ಬರು ಲೆಜೆಂಡರಿ ತಾರೆಯರು ಧರ್ಮೇಂದ್ರ ಹಾಗೂ ಶಬಾನಾ ಆಜ್ಮಿ ನಟನೆಯಲ್ಲಿ ತಮ್ಮನ್ನು ಮೀರಿಸೋರಿಲ್ಲ ಅನ್ನೋದನ್ನು ತೋರಿಸಿದ್ದಾರೆ. ಉಳಿದ ಪಾತ್ರಗಳು ಪಕ್ಕಾ ಕರಣ್ ಸಿನಿಮಾಗೆ ಅಂತಲೇ ಸೃಷ್ಟಿಸಲಾಗಿದೆ ಅಂತ ಅನಿಸುತ್ತೆ.

ಡೈರೆಕ್ಷನ್ ಹಾಗೂ ಮ್ಯೂಸಿಕ್ ಹೇಗಿದೆ?

ಕರಣ್ ಜೋಹರ್ ಸಿನಿಮಾದಲ್ಲಿ ಹಾಡುಗಳು ಪ್ರಮುಖ ಪಾತ್ರ ವಹಿಸುತ್ತವೆ. ಜೊತೆ ಕರಣ್ ನಿರ್ದೇಶನ ಕೂಡ. ಆದರೆ, ಈ ಬಾರಿ ಎರಡೂ ಹಳಿ ತಪ್ಪಿದೆ. ಕರಣ್‌ ಜೋಹರ್ ನಿರ್ದೇಶನದ ಗ್ರ್ಯಾಂಡ್ ಆಗಿದೆ ಅಂತ ಅನಿಸುತ್ತೆ. ಆದರೆ, ಕೆಲವರಿಗೆ ಖಂಡಿತಾ ಕಿರಿಕಿರಿಯಾಗುತ್ತೆ. ಸೆಕೆಂಡ್‌ ಹಾಫ್‌ನಲ್ಲಿ ಬರುವ ಎಮೋಷನಲ್‌ ಸೀನ್‌ಗಳಿಗೆ ಬೇಸತ್ತು ಹೋಗಬಹುದು. ಅದೇ ಇನ್ನೊಂದು ಕಡೆ ಪ್ರೀತಂ ಮ್ಯೂಸಿಕ್ ಕೂಡ ಈ ಸಿನಿಮಾದಲ್ಲಿ ಕಳೆದು ಹೋಗಿದೆ. "ಜುಮ್ಕಾ.." ಅನ್ನೋ ಹಾಡೊಂದು ಡ್ಯಾನ್ಸ್ ಪ್ರಿಯರ ಮನ ಗೆಲ್ಲಬಹುದು.

Ranveer Singh Starring Rocky Aur Rani Kii Prem Kahaani Movie Review in Kannada and Ratings

ಪಾಸಿಟಿವ್ ಹಾಗೂ ನೆಗೆಟಿವ್ ಏನು?

ಪಾಸಿಟಿವ್ ಅಂದರೆ, ಟಿಪಿಕಲ್ ಕರಣ್ ಜೋಹರ್ ಸಿನಿಮಾ ನೋಡಬೇಕು ಅಂತ ಬಯಸುತ್ತಿರೋರಿಗೆ 'ರಾಕಿ ಔರ್ ರಾಣಿ ಕೀ ಪ್ರೇಮ್ ಕಹಾನಿ' ಇಷ್ಟ ಆಗಬಹುದು. ಅದು ಬಿಟ್ಟರೆ ನೆಗೆಟಿವ್ ಹೆಚ್ಚು. ಸಿಕ್ಕಾಪಟ್ಟೆ ಪಾತ್ರಗಳು, ಅತಿಯಾದ ಎಮೋಷನ್ಸ್, ಹೈಡ್ರಾಮ ಈ ಸಿನಿಮಾದ ನೆಗೆಟಿವ್ ಪಾಯಿಂಟ್ಸ್. ಹಾಗೇ ಹೆಚ್ಚು ಕಡಿಮೆ 3 ಗಂಟೆ ಸಿನಿಮಾ ಆಗಿರೋದ್ರಿಂದ ಕೆಲವರಿಗೆ ಥಿಯೇಟರ್‌ನಿಂದ ಹೊರ ಬಂದ್ರೆ ಸಾಕು ಅನ್ನುವಷ್ಟು ತಾಳ್ಮೆ ಪರೀಕ್ಷೆ ಮಾಡುತ್ತೆ.

More from Filmibeat

English summary
Rocky Aur Rani Kii Prem Kahaani Ratings and Review in Kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X