The Girlfriend First Review: ಇಬ್ಬರು ಕನ್ನಡಿಗರ ತೆಲುಗು ಸಿನಿಮಾ ಹೇಗಿದೆ? ಫಸ್ಟ್ ರಿವ್ಯೂನಲ್ಲಿ ಏನಿದೆ?

ಅಲ್ಲು ಅರ್ಜುನ್ ತಂದೆಯವರ ನಿರ್ಮಾಣ ಸಂಸ್ಥೆ ಗೀತಾ ಆರ್ಟ್ಸ್ ಬ್ಯಾನರ್‌ನಲ್ಲಿ ರಶ್ಮಿಕಾ ಮಂದಣ್ಣ, ದೀಕ್ಷಿತ್ ಶೆಟ್ಟಿ ಪ್ರಮುಖ ಪಾತ್ರದಲ್ಲಿ ನಟಿಸಿರುವ ಸಿನಿಮಾ 'ದಿ ಗರ್ಲ್‌ಫ್ರೆಂಡ್'. ಈ ಸಿನಿಮಾ ಫಸ್ಟ್ ರಿವ್ಯೂ ಹೊರಬಿದ್ದಿದ್ದು ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ರಶ್ಮಿಕಾ ಮಂದಣ್ಣ ಹಾಗೂ ದೀಕ್ಷಿತ್ ಶೆಟ್ಟಿಯ ಭಾವನಾತ್ಮಕ ಸನ್ನಿವೇಶಗಳಿಗೆ ಸಿನಿಮಾವನ್ನು ಈಗಾಗಲೇ ನೋಡಿದವರು ಮನಸೋತಿದ್ದಾರೆ.

ಗೀತಾ ಆರ್ಟ್ಸ್ ಸಂಸ್ಥೆಯ ಮಾಲೀಕರಾದ ಅಲ್ಲು ಅರವಿಂದ್ ಬೆನ್ನೆಲುಬಾಗಿ ನಿಂತಿರುವ 'ದಿ ಗರ್ಲ್‌ಫ್ರೆಂಡ್' ಬಿಡುಗಡೆಗೂ ಮುನ್ನವೇ ಮೆಚ್ಚುಗೆ ಗಳಿಸಿದೆ. ನಟ ಹಾಗೂ ನಿರ್ದೇಶಕ ರಾಹುಲ್ ರವೀಂದ್ರನ್ ಈ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದಾರೆ. ವಿದ್ಯ ಕೊಪ್ಪಿನೀಡು ಜೊತೆ ಸೇರಿದ ಧೀರಜ್ ಮೊಗಿಲಿನೇನಿ ಎಂಬುವವರು ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ.

Rashmika Mandanna and Dikshit Shetty starrer The Girlfriend Telugu Movie First Review

ತೆಲುಗು ಮಂದಿಗೆ ರಶ್ಮಿಕಾ ಮಂದಣ್ಣ ಹೊಸರೇನಲ್ಲ. ಹಾಗೆ ದೀಕ್ಷಿತ್ ಶೆಟ್ಟಿ ಕೂಡ 'ದಸರಾ' ಸಿನಿಮಾ ಮೂಲಕ ಜನಪ್ರಿಯರಾಗಿದ್ದು, ಈ ಸಿನಿಮಾದಲ್ಲಿ ನಾಯಕನಾಗಿ ನಟಿಸಿದ್ದಾರೆ. ಇವರೊಂದಿಗೆ ಅನು ಇಮ್ಯಾನುಯೆಲ್, ರಾವ್ ರಮೇಶ್, ರೋಹಿಣಿ ಸೇರಿದಂತೆ ಜನಪ್ರಿಯ ತಾರೆಯರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಮೆಲೋಡಿ ಹಾಡುಗಳ ಸೆನ್ಸೇಷನ್ ಹೇಮ ಅಬ್ದುಲ್ ವಹಾಬ್ ಈ ಸಿನಿಮಾಗೆ ಸಂಗೀತ ಸಂಯೋಜನೆ ಮಾಡಿದ್ದಾರೆ.

'ದಿ ಗರ್ಲ್‌ಫ್ರೆಂಡ್' ಸಿನಿಮಾಗೆ ಪ್ರಶಾಂತ್ ಆರ್ ವಿಹಾರಿ ಹಿನ್ನೆಲೆ ಸಂಗೀತ ನೀಡಿದ್ದರೆ, ಕೃಷ್ಣನ್ ವಸಂತ್ ಕ್ಯಾಮರಾವರ್ಕ್ ಇದೆ. ಚೋಟಾ ಕೆ ಪ್ರಸಾದ್ ಸಿನಿಮಾಗೆ ಕತ್ತರಿ ಹಾಗೂ ಜೋಡಣೆ ಮಾಡಿದ್ದಾರೆ. ಈ ಸಿನಿಮಾ ನಾಳೆ (ನವೆಂಬರ್7) ಅದ್ದೂರಿಯಾಗಿ ಬಿಡುಗಡೆಯಾಗುತ್ತಿದೆ. ರಶ್ಮಿಕಾ ಮಂದಣ್ಣ ಹಾಗೂ ದೀಕ್ಷಿತ್ ಶೆಟ್ಟಿಯ ಲವ್ ಸ್ಟೋರಿ ಬಗ್ಗೆ ಸಿಕ್ಕಾಪಟ್ಟೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಇನ್ನು ಸಿನಿಮಾ ಎಳೆಯ ಕಡೆಗೆ ಬರೋದಾರೆ, ಭೂಮಿಕಾ ಅಲಿಯಾಸ್ ಭೂಮ ಅಂದರೆ ರಶ್ಮಿಕಾ ಮಂದಣ್ಣ ಹಾಗೂ ವಿಕ್ರಮ್ ಅಲಿಯಾಸ್ ದೀಕ್ಷಿತ್ ಶೆಟ್ಟಿ ನಡುವಿನ ಪ್ರೇಮ ಕಥೆಯನ್ನು ಹೇಳುತ್ತಿದೆ. ಹಾಗಂತ ಇಲ್ಲಿ ಕೇವಲ ಲವ್‌ ಸ್ಟೋರಿಯಷ್ಟೇ ಪ್ರಮುಖವಾಗಿಲ್ಲ. ಲವ್‌ಸ್ಟೋರಿ ಜೊತೆಗೆ ಅವರಿಬ್ಬರ ನಡುವಿನ ಸಂಬಂಧ, ಹೊಂದಾಣಿಗೆ, ಭಾವನೆಗಳು, ಅವರು ತೆಗೆದುಕೊಳ್ಳುವ ನಿರ್ಧಾರಗಳನ್ನು ತೆರೆಮೇಲೆ ತೆರೆದಿಡಲಾಗಿದೆ. ಹಾಗೇ ರಶ್ಮಿಕಾ ಹಾಗೂ ದೀಕ್ಷಿತ್ ಶೆಟ್ಟಿ ನಡುವಿನ ಕಿತ್ತಾಟದಲ್ಲಿ ಗೆಳತಿಯಾಗಿ ನಟಿಸಿರುವ ಅನು ಇಮ್ಯಾನುಯೆಲ್ ಪಾತ್ರ ಕೂತೂಹಲವನ್ನು ಕೆರಳಿಸುತ್ತದೆ.

Rashmika Mandanna and Dikshit Shetty starrer The Girlfriend Telugu Movie First Review

'ದಿ ಗರ್ಲ್‌ಫ್ರೆಂಡ್' ಸಿನಿಮಾ ಭೂಮ ಹಾಗೂ ವಿಕ್ರಮ್ ನಡುವಿನ ಸಂಬಂಧಕ್ಕೆ ಬ್ರೇಕ್ ಬಿದ್ದಿದ್ದೇಗೆ? ಅನ್ನೋದಕ್ಕೆ ಉತ್ತರ ಸಿಗಲಿದೆ. ಈ ಸಿನಿಮಾವನ್ನು ವೀಕ್ಷಿಸಿದ ಬಳಿಕ ಪ್ರಾದೇಶಿಕ ಸೆನ್ಸಾರ್ ಮಂಡಳಿಯ ಅಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆದರೆ, ಕೆಲವು ದೃಶ್ಯಗಳಿಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆಂದು ವರದಿಯಾಗಿದೆ. ರಶ್ಮಿಕಾ ಹಾಗೂ ದೀಕ್ಷಿತ್ ನಡುವಿನ ರೊಮ್ಯಾಂಟಿಕ್ ದೃಶ್ಯಗಳು, ಚುಂಬನದ ದೃಶ್ಯಗಳ ಕುರಿತು ಆಕ್ಷೇಪ ಎದ್ದರು ಎನ್ನಲಾಗಿದೆ. ಹೀಗಾಗಿ ಚುಂಬನದ ದೃಶ್ಯದ ಸಮಯವನ್ನು ಕಡಿತಗೊಳಿಸಲಾಗಿದೆ ಎನ್ನಲಾಗಿದೆ.

ಹಾಗೇ ಈ ಲವ್ ಸ್ಟೋರಿಯಲ್ಲಿ ಪೋಷಕರ ಭಾವನೆಗಳಿಗೆ ಧಕ್ಕೆ ತರುವಂತಹ ದೃಶ್ಯಗಳಿಗೂ ಕತ್ತರಿ ಪ್ರಯೋಗ ಆಗಿದೆ ಎನ್ನಲಾಗಿದೆ. 'ದಿ ಗರ್ಲ್‌ಫ್ರೆಂಡ್' ಸಿನಿಮಾದ ಕಥೆ ಯುವ ಜನತೆಗೆ ತಕ್ಕಂತಿದೆ. ಇಂದಿನ ಸಮಾಜಕ್ಕೆ ಉತ್ತಮ ಸಂದೇಶ ನೀಡುತ್ತದೆ. ರಶ್ಮಿಕಾ ಮಂದಣ್ಣ ಈ ಸಿನಿಮಾದ ಜೀವಾಳ. ದೀಕ್ಷಿತ್ ಶೆಟ್ಟಿ ತಮ್ಮ ಪಾತ್ರದಲ್ಲಿ ಮಿಂಚಿದ್ದಾರೆ. ರೋಹಿಣಿ, ರಾವ್ ರಮೇಶ್ ಮತ್ತು ಅನು ಇಮ್ಯಾನುಯೆಲ್ ಪಾತ್ರಗಳು ಪ್ರೇಕ್ಷಕರಿಗೆ ಇಷ್ಟವಾಗುತ್ತವೆ ಎಂದು ಸೆನ್ಸಾರ್ ಮಂಡಳಿ ಅಭಿಪ್ರಾಯ ಪಟ್ಟಿದೆ ಎನ್ನಲಾಗಿದೆ. ಈ ಸಿನಿಮಾ ಸದ್ಯ ಯು/ಎ ಸರ್ಟಿಫಿಕೇಟ್ ಸಿಕ್ಕಿದೆ.

More from Filmibeat

English summary
Rashmika Mandanna and Dikshit Shetty starrer The Girlfriend Telugu Movie First Review.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X