Thamma X Review: ರಶ್ಮಿಕಾ ಮಂದಣ್ಣ 'ಥಮ್ಮಾ' ನೋಡಿ ನೆಟ್ಟಿಗರು ಏನಂದ್ರು? ಗೆಲ್ಲುತ್ತಾ? ಮಲಗುತ್ತಾ?
ರಶ್ಮಿಕಾ ಮಂದಣ್ಣ, ಆಯುಷ್ಮಾನ್ ಖುರಾನಾ ಜೋಡಿ ಹಾರರ್ ಕಾಮಿಡಿ ಸಿನಿಮಾ 'ಥಮ್ಮಾ' ಇಂದು (ಅಕ್ಟೋಬರ್ 21) ವಿಶ್ವದಾದ್ಯಂತ ತೆರೆಕಂಡಿದೆ. 'ಸ್ತ್ರೀ 2' ಅಂತಹ ಮೆಗಾ ಬ್ಲಾಕ್‌ಬಸ್ಟರ್ ಸಿನಿಮಾ ನಿರ್ಮಾಣ ಮಾಡಿದ್ದ ಮ್ಯಾಡಾಕ್ ಸಂಸ್ಥೆ ಈ ಸಿನಿಮಾವನ್ನು ನಿರ್ಮಾಣ ಮಾಡಿದೆ. ಹೀಗಾಗಿ ನಿರೀಕ್ಷೆಗಳು ಹೆಚ್ಚಿತ್ತು. ಆ ನಿರೀಕ್ಷೆಯನ್ನು ಮ್ಯಾಡಾಕ್ ಉಳಿಸಿಕೊಂಡಿದೆ. ಈ ಸಿನಿಮಾ ಬಗ್ಗೆ ಎಲ್ಲಾ ಕಡೆ ಪಾಸಿಟಿವ್ ರೆಸ್ಪಾನ್ಸ್ ಸಿಗುತ್ತಿದೆ.
ಹಾರರ್ ಕಾಮಿಡಿ ಎಂದ ಕೂಡಲೇ ಭಯ ಹುಟ್ಟಿಸುವ ಸಿನಿಮಾ ಎಂದೇ ಭಾವಿಸಬೇಕಿಲ್ಲ. ಇಲ್ಲಿ ಹಾಸ್ಯಕ್ಕೂ ಹೆಚ್ಚು ಒತ್ತು ಕೊಡಲಾಗಿದೆ. ಜೊತೆ ಭಯವನ್ನೂ ಹುಟ್ಟಿಸುತ್ತೆ. ಟ್ವಿಸ್ಟ್ ಅಂಡ್ ಟರ್ನ್‌ಗಳಿವೆ. ಲವ್ ಸ್ಟೋರಿ, ಎಮೋಷನ್ಸ್ ಇದೆಯೆಂದು ಸಿನಿಮಾ ಬಗ್ಗೆ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. ಹಾಗೇ ಟ್ವಿಟರ್‌ನಲ್ಲಿಯೂ (X) ಒಳ್ಳೆಯ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. ಹಾಗಿದ್ದರೆ, ಎಕ್ಸ್‌ನಲ್ಲಿ ರಿವ್ಯೂ ಏನಿದೆ? ತಿಳಿಯುವುದಕ್ಕೆ ಮುಂದೆ ಓದಿ.

'ಥಮ್ಮಾ' ದೀಪಾವಳಿ ಧಮಾಕಾ
"ಥಮ್ಮಾ ಹೈ ವೋಲ್ಟೇಜ್ ಮತ್ತು ಮಾಸ್ ದೀಪಾವಳಿ ಧಮಾಕ. ಈ ಸಿನಿಮಾ ಮಾಡರ್ನ್ ಸಿನಿಮ್ಯಾಟಿಕ್ ಎನರ್ಜಿಯೊಂದಿಗೆ ಉಗ್ರಸ್ವರೂಪ ಗ್ರಾಮೀಣ ಕಥೆಯನ್ನು ಪ್ರೇಕ್ಷಕರ ಮುಂದೆ ಇಡಲಾಗಿದೆ. ನಿರ್ದೇಶಕ ಆದಿತ್ಯ ಸರ್ಪೋತ್‌ದರ್ ಅವರ ನಿರ್ದೇಶನ ಪವರ್‌ಫುಲ್ ಹಾಗೂ ಬೆಲೆ ಕಟ್ಟಲಾಗದ್ದು. ಈ ಸಿನಿಮದ ಹೈಲೈಟ್ ಅಂದರೆ, ಅತಿಥಿ ಪಾತ್ರಗಳು,ಅದ್ಭುತವಾದ ಆಕ್ಷನ್ ಸೀಕ್ವೆನ್ಸ್, ಹಾಸ್ಯ ಹಾಗೂ ಮ್ಯಾಡಾಕ್ ಸಂಸ್ಥೆಯ ಮೊದಲ ಲವ್ ಸ್ಟೋರಿ. ರಕ್ತ ಪಿಶಾಚಿಯಾಗಿ ಆಯುಷ್ಮಾನ್ ಖುರಾನಾ ಮನಸ್ಸು ಗೆಲ್ಲುತ್ತಾರೆ. ರಶ್ಮಿಕಾ ಮಂದಣ್ಣ ಸ್ಕ್ರೀನ್ ಮೇಲೆ ಅದ್ಭುತ. ಅದರಲ್ಲೂ ಇವರಿಬ್ಬರ ಲವ್ ಸ್ಟೋರಿ ಚೆನ್ನಾಗಿದೆ. ಸೂಪರ್‌ನ್ಯಾಚುಲರ್ ಪವರ್ ಇರುವ ಪಾತ್ರದಲ್ಲಿ ನವಾಜುದ್ದೀನಿ ಸಿದ್ಧಿಕಿ, ಒನ್‌ಲೈನ್ ಕಾಮಿಡಿಯಿಂದ ನಗಿಸುವ ಪರೇಶ್ ರಾವಲ್ ಇಷ್ಟ ಆಗುತ್ತಾರೆ. ಒಟ್ಟಾರೆ ಹೇಳಬೇಕಾದರೆ, ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಸೆಳೆಯುವ ಸಿನಿಮಾವಿದು." ಎಂದು ನೆಟ್ಟಿಗರೊಬ್ಬರು ಹೇಳಿದ್ದಾರೆ.
ಹಬ್ಬಕ್ಕೆ ಪರ್ಫೆಕ್ಟ್ ಸಿನಿಮಾ
"ಆಯುಷ್ಮಾನ್ ಖುರಾನಾ ಹಾಗೂ ರಶ್ಮಿಕಾ ಮಂದಣ್ಣ ಅವರ ಹಾರರ್-ಕಾಮಿಡಿ ಸಿನಿಮಾ ಹಬ್ಬಕ್ಕೆ ಪರ್ಫೆಕ್ಟ್ ಎಂಟರ್‌ಟೈನರ್. ಆರಂಭ ಸ್ವಲ್ಪ ನಿಧಾನ ಅಂತ ಅನಿಸುತ್ತೆ. ಆದರೆ, ಸೆಕೆಂಡ್ ಹಾಫ್ ಸಖತ್ ಆಗಿದೆ. ಅದ್ಭುತ ಅಭಿನಯ, ಮನಸೆಳೆಯುವ ಹಾಡುಗಳು ಮತ್ತು ಹಾಸ್ಯದಿಂದ ಕೂಡಿದ ಡೈಲಾಗ್‌ಗಳು ಇದರ ಹೈಲೈಟ್. ನೋಡಲೇಬೇಕಾದ ಸಿನಿಮಾ" ಎಂದು ಮತ್ತೊಬ್ಬರು ಹೇಳಿದ್ದಾರೆ.
ರಶ್ಮಿಕಾ ಮಂದಣ್ಣ ಸೂಪರ್ ಹಾಟ್
"ಒಂದೇ ಪದದಲ್ಲಿ ಹೇಳಬೇಕೆಂದರೆ ಇದು ಅದ್ಭುತ ಸಿನಿಮಾ. ನಿರ್ದೇಶನ ಚೆನ್ನಾಗಿ ಮಾಡಿದ್ದಾರೆ. ಸ್ಕ್ರೀನ್ ಪ್ಲೇ ಎಂಗೇಜಿಂಗ್ ಆಗಿದೆ. ಜೊತೆ ಹಾಡುಗಳು ಕೂಡ ಸಖತ್ ಆಗಿವೆ. ಆಯುಷ್ಮಾನ್ ಖುರಾನಾ ಅವರದ್ದು ಅತ್ಯುತ್ತಮ ನಟನೆ. ರಶ್ಮಿಕಾ ಮಂದಣ್ಣ ಸೂಪರ್ ಹಾಟ್ ಆಗಿ ಕಾಣಿಸುತ್ತಾರೆ. ಇದು ಬ್ಲಾಕ್ ಬಸ್ಟರ್ ಸಿನಿಮಾ" ಎಂದು ಮತ್ತೊಬ್ಬರು ಕಮೆಂಟ್ ಮಾಡಿದ್ದಾರೆ.
ಭಯ ಹುಟ್ಟಿಸುವ ಹಾರರ್-ಕಾಮಿಡಿ
ಮ್ಯಾಡಾಕ್ ಸಿನಿಮಾ ಇನ್ನೊಂದು ಅದ್ಭುತ ಹಾರರ್, ಸೂಪರ್‌ನ್ಯಾಚುರಲ್, ರೊಮ್ಯಾನ್ಸ್ ಹಾಗೂ ಟ್ವಿಸ್ಟ್ ಇರುವ ಎಂಟರ್‌ಟೈನಿಂಗ್ ಸಿನಿಮಾ ಕೊಟ್ಟಿದೆ. ನಿರ್ದೇಶಕ ಆದಿತ್ಯ ಸರ್ಪೋತ್‌ದರ್ ಮತ್ತೊಂದು ಗ್ರಾಮೀಣ ಕಥೆಯನ್ನು ತೆರೆಮೇಲೆ ತಂದಿತ್ತು. ಅದು ನಿಮ್ಮನ್ನು ಕೊನೆಯವರೆಗೂ ಹಿಡಿದಿಡುತ್ತೆ. ರೈಟಿಂಗ್ ಚೆನ್ನಾಗಿದೆ, ಡೈಲಾಗ್ ಹಾಸ್ಯಮಯವಾಗಿದೆ. ಹಾಡುಗಳು ಹಾಗೂ ಹಿನ್ನೆಲೆ ಸಂಗೀತ ಕೂಡ ಅದ್ಭುತವಾಗಿವೆ. ಆಯುಷ್ಮಾನ್ ಖುರಾನಾ, ರಶ್ಮಿಕಾ ಮಂದಣ್ಣ, ನವಾಜುದ್ದೀನ್ ಸಿದ್ಧಿಕಿ ಹಾಗೂ ಪರೇಶ್ ರಾವಲ್ ನಟನೆ ಅದ್ಬುತವಾಗಿದೆ. ಕೊನೆಯಲ್ಲಿ 'ಥಮ್ಮಾ' ಒಂದು ನುಣುಪಾದ, ಭಯ ಹುಟ್ಟಿಸುವ ಹಾರರ್-ಕಾಮಿಡಿ ಸಿನಿಮಾ." ಎಂದು ಹೇಳಿದ್ದಾರೆ.
ನಗು-ಭಾವನೆಗಳ ರೋಲರ್ ಕೋಸ್ಟರ್
"ಎಂತಹ ಅದ್ಭುತ ಸವಾರಿ. ಇದು ನಗು ಮತ್ತು ಭಾವನೆಗಳ ರೋಲರ್ ಕೋಸ್ಟರ್. ಆಯುಷ್ಮಾನ್ ಖುರಾನಾ ಎನರ್ಜಿ, ರಶ್ಮಿಕಾ ಮಂದಣ್ಣ ಹೃದಯ ಗೆದ್ದರು. ನವಾಜುದ್ದೀನಿ ಸಿದ್ಧಿಕಿ ವ್ಯಾಘ್ರ. ಪರೇಶ್ ರಾವ್ ಕಾಮಿಡಿ ಟೈಮಿಂಗ್ ಸಾರ್ವಕಾಲಿಕ" ಎಂದು ಇನ್ನೊಬ್ಬರು ಹೇಳಿದ್ದಾರೆ.


Click it and Unblock the Notifications











