Thamma First Review: ರಶ್ಮಿಕಾ ಮಂದಣ್ಣ 'ಥಮ್ಮಾ' ಸಿನಿಮಾ 'ಕಾಂತಾರ'ಗೆ ಟಕ್ಕರ್ ಕೊಡುತ್ತಾ? ಈ ವಿಮರ್ಶೆ ಏನು ಹೇಳುತ್ತೆ?

ಬಾಲಿವುಡ್‌ನಲ್ಲಿ ದೀಪಾವಳಿ ಹಬ್ಬಕ್ಕೆ ಒಂದಲ್ಲ ಒಂದು ಬಿಗ್ ಬಜೆಟ್ ಸಿನಿಮಾಗಳು ರಿಲೀಸ್ ಆಗುತ್ತವೆ. ಅದರಲ್ಲೂ ಬಾಲಿವುಡ್ ಸೂಪರ್‌ಸ್ಟಾರ್‌ಗಳ ಸಿನಿಮಾಗಳು ಮೊದಲೇ ಡೇಟ್ ಫಿಕ್ಸ್ ಮಾಡಿಕೊಂಡಿರುತ್ತವೆ. ಆದರೆ, ಈ ಬಾರಿ ದೀಪಾವಳಿ ಸೂಪರ್‌ಸ್ಟಾರ್‌ಗಳ್ಯಾರೂ ಅಖಾಡಕ್ಕೆ ಇಳಿಯುತ್ತಿಲ್ಲ. ಬೆಳಕಿನ ಹಬ್ಬಕ್ಕೆ ರಿಲೀಸ್ ಆಗುತ್ತಿರುವ ಬಾಲಿವುಡ್ ಸಿನಿಮಾಗಳಲ್ಲಿ ರಶ್ಮಿಕಾ ಮಂದಣ್ಣ- ಆಯುಷ್ಮಾನ್ ಖುರಾನಾ ನಟನೆಯ 'ಥಮ್ಮಾ' ಮೊದಲ ಸಾಲಿನಲ್ಲಿದೆ.

ದೀಪಾವಳಿ ಹಬ್ಬ ಬಾಲಿವುಡ್ ಮಂದಿ ಲಕ್ಕಿ ಇದ್ದಂತೆ. ಈ ಹಬ್ಬದಂದು ರಿಲೀಸ್ ಆಗುವ ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಭರ್ಜರಿ ಕಲೆಕ್ಷನ್ ಮಾಡುತ್ತವೆ. ಬಾಲಿವುಡ್ ಮಂದಿ ಈ ಡೇಟ್‌ಗಾಗಿ ಕಾದು ಕೂರುತ್ತಾರೆ. ಆದರೆ, ಈ ವರ್ಷದ ದೀಪಾವಳಿ ಹಬ್ಬಕ್ಕೆ ಕಡಿಮೆ ಸಿನಿಮಾಗಳು ರಿಲೀಸ್ ಆಗುತ್ತಿದ್ದು, ಅದರಲ್ಲೊಂದು ರಶ್ಮಿಕಾ ಮಂದಣ್ಣ ನಟನೆಯ 'ಥಮ್ಮಾ' ಕೂಡ ಒಂದು.

Rashmika Mandanna  Ayushmann Khurrana starrer Thamma is well-packaged entertainer review by Taran Adarsh

ಈಗಾಗಲೇ ಸಿನಿಮಾ ಬಗ್ಗೆ ಒಳ್ಳೆಯ ಅಭಿಪ್ರಾಯಗಳು ವ್ಯಕ್ತವಾಗುತ್ತಿದೆ. ಬಾಲಿವುಡ್‌ನ ಜನಪ್ರಿಯ ಕ್ರಿಟಿಕ್ ತರಾನ್ ಆದರ್ಶ್ ಈ ಸಿನಿಮಾವನ್ನು ವೀಕ್ಷಿಸಿದ್ದು, ತನ್ನ ಎಕ್ಸ್ ಖಾತೆಯಲ್ಲಿ ಸಿನಿಮಾವನ್ನು ಚುಟುಕಾಗಿ ವಿಮರ್ಶೆ ಮಾಡಿದ್ದಾರೆ. ರಶ್ಮಿಕಾ ಮಂದಣ್ಣ- ಆಯುಷ್ಮಾನ್ ಖುರಾನ ಕಾಂಬಿನೇಷನ್‌ನ ಮೊದಲ ಸಿನಿಮಾವನ್ನು ಹಾಡಿ ಹೊಗಳಿದ್ದಾರೆ. ಹಾಗಿದ್ದರೆ, ಮೊದಲ ವಿಮರ್ಶೆಯಲ್ಲಿರುವ ಪಾಸಿಟಿವ್ ಅಂಶಗಳು ಏನೇನು? ತಿಳಿಯುವುದಕ್ಕೆ ಮುಂದೆ ಓದಿ.

'ಥಮ್ಮಾ' ಹಾರರ್-ಕಾಮಿಡಿ ಜಾನರ್

ಇತ್ತೀಚೆಗೆ ಹಾರರ್ ಕಾಮಿಡಿ ಸಿನಿಮಾಗಳಿಗೆ ಎಲ್ಲಾ ಭಾಷೆಯಲ್ಲೂ ಮೆಚ್ಚುಗೆ ಸಿಗುತ್ತಿದೆ. ಈ ಬೆನ್ನಲ್ಲೇ ಮತ್ತೊಂದು ಸಿನಿಮಾ 'ಥಮ್ಮಾ' ಕೂಡ ಇದೇ ಜಾನರ್‌ಗೆ ಸೇರುತ್ತೆ. ಬಾಲಿವುಡ್‌ನ ಜನಪ್ರಿಯ ನಿರ್ಮಾಣ ಸಂಸ್ಥೆ ಮ್ಯಾಡಾಕ್ ಈ ಸಿನಿಮಾಗೆ ಹಣವನ್ನು ಹೂಡಿಕೆ ಮಾಡಿದೆ. 'ಸ್ತ್ರೀ 2', 'ಮುಂಜ್ಯ','ಭೆಡಿಯಾ'ದಂತಹ ಸಿನಿಮಾ ಹಾರರ್ ಸಿನಿಮಾಗಳ ಬಳಿಕ ನಿರ್ಮಾಣಗೊಂಡಿರುವ ಮತ್ತೊಂದು ಸಿನಿಮಾವೇ 'ಥಮ್ಮಾ'. ಹೀಗಾಗಿ ಈ ಸಿನಿಮಾ ಮೇಲೂ ನಿರೀಕ್ಷೆ ದುಪ್ಪಟ್ಟಾಗಿದೆ.

ಹೇಗಿದೆಯಂತೆ 'ಥಮ್ಮಾ'?

ತರಾನ್ ಆದರ್ಶ್ ಸಿನಿಮಾ ಬಗ್ಗೆ ಒಳ್ಳೆಯ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಆದಿತ್ಯ ಸರ್ಪೋತದಾರ್ ನಿರ್ದೇಶನಕ್ಕೆ ಬಹುಪರಾಕ್ ಹೇಳಿದ್ದಾರೆ. ಭಾರತದ ಗ್ರಾಮೀಣ ಪ್ರದೇಶದ ಕಥೆಗಳಿಂದ ಪ್ರೇರಣೆ ಪಡೆದು ಈ ಸಿನಿಮಾವನ್ನು ನಿರ್ಮಾಣ ಮಾಡಲಾಗಿದೆ. ಇಡೀ ಸಿನಿಮಾ ಪ್ರೇಕ್ಷಕರನ್ನು ಎಂಟರ್‌ಟೈನಿಂಗ್ ಆಗಿದೆ. ಹಾಗೇ ಸೀಟಿನ ತುದಿಯಲ್ಲಿ ಕೂರುವಂತೆ ಮಾಡುತ್ತೆ ಎಂದು ತಮ್ಮ ವಿಮರ್ಶೆಯಲ್ಲಿ ಹೇಳಿದ್ದಾರೆ.

'ಥಮ್ಮಾ' ಪಾಸಿಟಿವ್ ಅಂಶಗಳೇನು?

ತರಾನ್ ಆದರ್ಶ್ ಪ್ರಕಾರ, 'ಥಮ್ಮಾ' ಸಿನಿಮಾದಲ್ಲಿ ಮ್ಯೂಸಿಕ್ ಮತ್ತೊಂದು ಪ್ರಮುಖ ಅಂಶ. ಈಗಾಗಲೇ ಹಾಡುಗಳು ಜನಪ್ರಿಯವಾಗಿವೆ. ಅವುಗಳ ಜೊತೆಗೆ ಹಿನ್ನೆಲೆ ಸಂಗೀತ ಅದ್ಭುತವಾಗಿದೆ ಎಂದು ಹೇಳಿದ್ದಾರೆ. ಆಯುಷ್ಮಾನ್ ಖುರಾನ ನಟನೆಯನ್ನು ಮೆಚ್ಚಿಕೊಂಡಿದ್ದಾರೆ. ಭಯದಿಂದ ಕಾಮಿಡಿಗೆ ಅನಾಯಾಸವಾಗಿ ಶಿಫ್ಟ್ ಆಗುತ್ತಾರೆಂದು ಹೇಳಿದ್ದಾರೆ. ರಶ್ಮಿಕಾ ಮಂದಣ್ಣ ಅವರ ವೃತ್ತಿ ಬದುಕಿನ ಚಾಲೆಂಜಿಂಗ್ ರೋಲ್ ಅನ್ನು ಪಡೆದುಕೊಂಡಿದ್ದಾರೆ ಎಂದಿದ್ದಾರೆ. ನವಾಜುದ್ದೀನ್ ಸಿದ್ದಿಕಿ ಹಾಗೂ ಪರೇಶ್ ರಾವಲ್ ಪಾತ್ರಗಳು ಕೂಡ ಕಿಕ್ ಕೊಡುತ್ತವೆಂದು ಹೊಗಳಿದ್ದಾರೆ. ಸೆಕೆಂಡ್ ಹಾಫ್‌ನಲ್ಲಿ ಕೆಲವೆಡೆ ಸ್ವಲ್ಪ ನಿಧಾನ ಅಂತ ಅನಿಸಿದರೂ, ಅದು ನೂನ್ಯತೆ ಅಲ್ಲ ಎಂದಿದ್ದಾರೆ. ಕೊನೆಯದಾಗಿ ಸಿನಿಮಾ 4 ಸ್ಟಾರ್‌ಗಳನ್ನು ಕೊಟ್ಟು ಸಂಪೂರ್ಣ ಎಂಟರ್‌ಟೈನರ್ ಎಂದು ಹೇಳಿದ್ದಾರೆ.

ಅಡ್ವಾನ್ ಬುಕಿಂಗ್‌ಗೆ ನೀರಸ ಪ್ರತಿಕ್ರಿಯೆ

ಸಿನಿಮಾಗೆ ಒಳ್ಳೆಯ ಅಭಿಪ್ರಾಯವಿದ್ದರೂ, ಅಡ್ವಾನ್ಸ್ ಬುಕಿಂಗ್ ನೀರಸವಾಗಿದೆ. ದೀಪಾವಳಿಯ ಹಬ್ಬದಲ್ಲಿ ರಶ್ಮಿಕಾ ಮಂದಣ್ಣ- ಆಯುಷ್ಮಾನ್ ಖುರಾನ ಸಿನಿಮಾಗೆ ಅಡ್ವಾನ್ಸ್ ಬುಕಿಂಗ್‌ನಲ್ಲಿ ಒಳ್ಳೆಯ ರೆಸ್ಪಾನ್ಸ್ ಸಿಗುತ್ತೆಂದು ನಿರೀಕ್ಷೆ ಮಾಡಲಾಗಿತ್ತು. ಆದರೆ, ಕೇವಲ ₹4 ಕೋಟಿ ಆಗಿದೆ. ಹೆಚ್ಚೆಂದರೆ, ₹6 ಕೋಟಿ ಆಗಲಿದ್ದು, ಮೊದಲ ದಿನ ₹18 ರಿಂದ ₹20 ಕೋಟಿ ಕಲೆಕ್ಷನ್ ಆಗಬಹುದೆಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.

More from Filmibeat

English summary
Rashmika Mandanna, Ayushmann Khurrana starrer Thamma is well-packaged entertainer review by Taran Adarsh.
Read more about: rashmika mandanna movie review
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X