For Quick Alerts
  ALLOW NOTIFICATIONS  
  For Daily Alerts

  ತುಳು ಚಿತ್ರ ವಿಮರ್ಶೆ 'ಒರಿಯನ್ ತೂಂಡ ಒರಿಯಗಾಪುಜಿ'

  |

  Rating:
  3.5/5
  ಶ್ರೀ ಮಂಗಳಾ ಗಣೇಶ್ ಕಂಬೈನ್ಸ್ ಬ್ಯಾನರಡಿಯಲ್ಲಿ ಮೂಡಿ ಬಂದ ಮೊದಲ ತುಳು ಚಿತ್ರ 'ಒರಿಯನ್ ತೂಂಡ ಒರಿಯಗಾಪುಜಿ' (ಒಬ್ಬರನ್ನು ನೋಡಿದರೆ ಒಬ್ಬರಿಗಾಗಲ್ಲ). ಇದುವರೆಗೆ ತುಳುವಿನಲ್ಲಿ ಬಿಡುಗಡೆಗೊಂಡ ಚಿತ್ರಗಳ ಪೈಕಿ ಈ ಸಿನೆಮಾ ಕೊಂಚ ಡಿಫರೆಂಟ್ ಅನಿಸುವುದು ವಿಶೇಷ.

  ಚಿತ್ರದ ನಾಯಕ ಪ್ರೀತಂ (ಅರ್ಜುನ್ ಕಾಪಿಕಾಡ್) ಬಾಲಾಪರಾಧಿಯಾಗಿ ಜೈಲು ಸೇರಿ 14 ವರ್ಷಗಳ ನಂತರ ಹೊರಬರುವಾಗ ಚಿತ್ರದ ನಾಯಕಿ ಪ್ರೀತಿ (ಪ್ರಜ್ಜು ಪೂವಯ್ಯ) ಯನ್ನು ರೌಡಿಗಳು ಚೇಡಿಸುತ್ತಿರುತ್ತಾರೆ. ರೌಡಿಗಳಿಂದ ನಾಯಕಿಯನ್ನು ನಾಯಕ ರಕ್ಷಿಸುತ್ತಾನೆ, ಇದಕ್ಕೆ ಪ್ರತಿಯಾಗಿ ನಾಯಕಿ ತನ್ನ ಮನೆಯಲ್ಲೇ ನಾಯಕನಿಗೆ ಕಾರ್ ಡ್ರೈವರ್ ಕೆಲಸ ಕೊಡಿಸುತ್ತಾಳೆ.

  ನಾಯಕಿಯ ತಂದೆ ಸತ್ಯಪಾಲ್ (ಚೇತನ್ ರೈ ಮಾಣೀ) ಮಗಳನ್ನು ರಕ್ಷಿಸಿದ ಪ್ರೀತಂಗೆ ಮನೆಯಲ್ಲಿರಲು ಅವಕಾಶ ನೀಡಿ, ಜೊತೆಗೆ ಮಗಳನ್ನು ನೋಡಿಕೊಳ್ಳುವ ಜವಾಬ್ದಾರಿಯನ್ನು ನೀಡುತ್ತಾನೆ. (ಚಾಲಿಪೋಲಿಲು ಹಾಫ್ ಸೆಂಚುರಿ)

  ನಾಯಕಿಯ ಮೇಲೆ ಎರಡನೇ ಬಾರಿ ಅಟ್ಯಾಕ್ ಆದಾಗಲೂ ನಾಯಕ ಆಕೆಯನ್ನು ರಕ್ಷಿಸುತ್ತಾನೆ. ಪ್ರೀತಂ ನಡತೆಯನ್ನು ಮೆಚ್ಚಿದ ನಾಯಕಿಗೆ ಅವನ ಮೇಲೆ ಪ್ರೇಮಾಂಕುರವಾಗುತ್ತದೆ.

  ಆದರೆ ನಾಯಕ, ನಾಯಕಿ ಪ್ರೀತಿಯನ್ನು ಲವ್ ಮಾಡುತ್ತಾನಾ? ಚಿತ್ರದ ಮೊದಲದೃಶ್ಯದಲ್ಲಿ ನಡೆಯುವ ಕೊಲೆಯ ರಹಸ್ಯವೇನು? ನಾಯಕನ ತಾಯಿಯಾರು? ಮುಂತಾದ ಕುತೂಹಲಗಳನ್ನು ಚಿತ್ರಮಂದಿರದಲ್ಲೇ ನೋಡಿ ಆನಂದಿಸಿ.

  ನಾಯಕ ಅರ್ಜುನ್ ಕಾಪಿಕಾಡ್ ಮತ್ತು ನಾಯಕಿ

  ನಾಯಕ ಅರ್ಜುನ್ ಕಾಪಿಕಾಡ್ ಮತ್ತು ನಾಯಕಿ

  ಅರ್ಜುನ್ ಕಾಪಿಕಾಡಿಗೆ ಇದು ಮೂರನೇ ತುಳು ಚಿತ್ರ. ಮೊದಲ ಚಿತ್ರ 'ತೆಲಿಕೆದ ಬೊಳ್ಳಿ'ಯಲ್ಲಿ ಸಮರ್ಥ ನಾಯಕನೆನಿಸಿಕೊಂಡ ಅರ್ಜುನ್, ಮುಂಬಯಿಯಲ್ಲಿ ಡ್ಯಾನ್ಸ್ ಮತ್ತು ಫೈಟಿಂಗ್ ಕಲಿತು ತಂದೆ ದೇವದಾಸ್ ಕಾಪಿಕಾಡ್ ಮಾರ್ಗದರ್ಶನದಲ್ಲಿ ಪಳಗಿ ನಟನೆಯಲ್ಲಿ ಸೈಯೆನಿಸಿಕೊಂಡ ಯುವ ಪ್ರತಿಭೆ. ಕೊಡಗಿನ ಬೆಡಗಿ ಪ್ರಜ್ಜು ಪೂವಯ್ಯಗೆ ಈ ಹಿಂದೆ ಕನ್ನಡ ಮತ್ತು ತಮಿಳಿನಲ್ಲಿ ನಟಿಸಿದ ಅನುಭವವಿದೆ. ಈ ಚಿತ್ರದಲ್ಲಿ ಪ್ರಜ್ಜು ಬೋಲ್ಡ್ ಆಗಿ ನಟಿಸಿದ್ದಾರೆ.

  ಉತ್ತಮ ನಿರ್ದೇಶನ

  ಉತ್ತಮ ನಿರ್ದೇಶನ

  ನಿರ್ದೇಶಕ ಹ.ಸೂ ರಾಜಶೇಖರ್‌ ಅವರ ಮೈಂಡ್ ವರ್ಕ್ ಚಿತ್ರದಲ್ಲಿ ಚೆನ್ನಾಗಿ ನಡೆದಿದೆ, ಇದು ತುಳುವಿನಲ್ಲಿ ಅವರ 3ನೇ ಚಿತ್ರ. ಕನ್ನಡದವರಾದ ರಾಜಶೇಖರ್ ತುಳುಭಾಷೆ ಮತ್ತು ಇಲ್ಲಿನ ಪ್ರೇಕ್ಷಕರ ಅಭಿರುಚಿಗೆ ತಕ್ಕಂತೆ ಚಿತ್ರವನ್ನು ಅಚ್ಚುಕಟ್ಟಾಗಿ ತೆರೆಗೆ ತಂದಿದ್ದಾರೆ. ಗಂಗಾಧರ ಶೆಟ್ಟಿ ಅಳಕೆಯವರ ಕಥೆ, ಚಿತ್ರಕಥೆ, ಸಾಹಿತ್ಯ ಉತ್ತಮವಾಗಿದೆ.

  ಚಿತ್ರದ ಇತರ ಕಲಾವಿದರು

  ಚಿತ್ರದ ಇತರ ಕಲಾವಿದರು

  ಭೋಜರಾಜ್ ವಾಮಂಜೂರು, ಅರವಿಂದ ಬೋಳಾರ್, ಸುಂದರ ರೈ ಮಂದಾರ, ಸಾಯಿ ಕೃಷ್ಣ ಕುಡ್ಲ ಅವರ ಕಾಮಿಡಿ ಅಭಿನಯ ಮನೋಜ್ಞವಾಗಿದೆ. ಹಿತಮಿತವಾಗಿ ಸಂಭಾಷಣೆ ಪ್ರೇಕ್ಷಕನಿಗೆ ಹಿಡಿಸುತ್ತದೆ. ನಾಯಕಿಯ ಮನೆಯಲ್ಲಿ ಅಡುಗೆ ಸಹಾಯಕಿ ಪಾತ್ರದಲ್ಲಿ ರೇಖಾದಾಸ್ ನಟನೆ ಸೂಪರ್.

  ಮಿತ್ರಾ ನಟನೆ ಸೂಪರ್

  ಮಿತ್ರಾ ನಟನೆ ಸೂಪರ್

  ಕನ್ನಡದ ಕಾಮಿಡಿಕಿಂಗ್ ಸೀರಿಯಲ್ ನಟ ಮಿತ್ರಾ ನಟನೆ ಮತ್ತು ಕನ್ನಡ ಭಾಷೆಯ ಸಂಭಾಷಣೆ ತುಳುವರಿಗೆ ಹಿಡಿಸಿದೆ. ತುಳು ಗೊತ್ತಿಲ್ಲದೆ ಅದನ್ನು ಅಪಾರ್ಥ ಮಾಡಿಕೊಂಡು ನಗೆಪಟಾಲಿಗೆ ಒಳಗಾಗುವುದು ಪ್ರೇಕ್ಷಕರಿಗೆ ಮನರಂಜನೆ ನೀಡುತ್ತದೆ.

  ನಟಿ ಭವ್ಯಾ, ನಿರ್ಮಾಪಕ ಅಶೋಕ್ ಕುಮಾರ್, ಕ್ಯಾಮರಾ

  ನಟಿ ಭವ್ಯಾ, ನಿರ್ಮಾಪಕ ಅಶೋಕ್ ಕುಮಾರ್, ಕ್ಯಾಮರಾ

  ನಿರ್ಮಾಪಕ ಅಶೋಕ್ ಕುಮಾರ್, ಭವ್ಯ ಜೋಡಿಯಾಗಿ ಮೊದಲ ಬಾರಿ ನಟಿಸಿದ್ದಾರೆ. ಒರ್ವ ಉದ್ಯಮಿಯಾಗಿದ್ದರೂ ಅಶೋಕ್ ನಟನೆಯಲ್ಲೂ ಸೈ ಎನಿಸಿಕೊಂಡಿದ್ದಾರೆ. ಮಂಗಳೂರಿನ ಕೆಲವು ವಿಶೇಷ ಪ್ರಕೃತಿ ರಮಣೀಯ ಸ್ಥಳಗಳನ್ನು ನಾಗೇಶ್ ಆಚಾರ್ಯ ಮತ್ತು ಗೌರಿ ವೆಂಕಟೇಶ್ ಒಳ್ಳೆ ಸಮಯ ಪ್ರಜ್ಞೆಯಿಂದ ಸೆರೆ ಹಿಡಿದಿದ್ದಾರೆ.

  ಸಾಹಸ, ಹಾಡು, ಸಂಕಲನ

  ಸಾಹಸ, ಹಾಡು, ಸಂಕಲನ

  ರಾಜೇಶ್ ಕೃಷ್ಣನ್, ಹೇಮಂತ್, ಅಜಯ್ ವಾರಿಯರ್, ಅನುರಾಧ ಭಟ್ ಧ್ವನಿಯಲ್ಲಿ ಮೂಡಿಬಂದ ಆರು ಹಾಡುಗಳು ಪ್ರೇಕ್ಷಕನಿಗೆ ಮುದ ನೀಡುತ್ತದೆ. ವಿ.ಮನೋರ್ ಸಂಗೀತ, ವಿಜಯ ಭಾರತಿಯವರ ಹಿನ್ನೆಲೆ ಸಂಗೀತ, ಗಂಗಾಧರ ಶೆಟ್ಟಿಯವರ ರಾಗ ಸಂಯೋಜನೆ, ಮದನ್ ಹರಿಣಿಯವರ ನೃತ್ಯ ಸಂಯೋಜನೆ, ಥ್ರಿಲ್ಲರ್ ಮಂಜು ಸಾಹಸ, ಕೆಂಪರಾಜು ಅವರ ಸಂಕಲನ, ಚಿತ್ರಕ್ಕೆ ಪೂರಕವಾಗಿದೆ.

  English summary
  Review of Tulu movie Oriyan Toonda Oriyag Aapujji. Ha. Su Rajashekhar has directed the movie and Arjun Kappikad, Prajju Poovaiah, Bhojaraj Vamanjooru, Rekha Das, Mitra in the lead role.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X