Toxic Twitter Review:ನಾನೇನು ನೋಡಿದೆ..? ಉಸಿರಾಡಲಿಕ್ಕೆ ಕಷ್ಟ ಆಗ್ತಿದೆ; 'ಟಾಕ್ಸಿಕ್‌'ಗೆ ಟ್ವಿಟರ್‌ ರೆಸ್ಪಾನ್ಸ್ ಹೇಗಿದೆ?

'ಕೆಜಿಎಫ್ 2' ಬಳಿಕ ರಾಕಿಂಗ್ ಸ್ಟಾರ್ ಯಶ್ ದಿಢೀರನೇ ಸಿನಿಮಾ ಮಾಡುವುದಕ್ಕೆ ಹೋಗಲಿಲ್ಲ. ಒಳ್ಳೆಯ ಸ್ಕ್ರಿಪ್ಟ್‌ಗಾಗಿ ಕಾದು ಕೂತಿದ್ದರು. ಯಶಸ್ಸಿನ ಉತ್ತುಂಗದಲ್ಲಿ ಇರುವಾಗ ಯಶ್ ಸಿನಿಮಾಗಳನ್ನು ಮಾಡದೆ ಇರುವುದಕ್ಕೆ ಸಿನಿಮಾ ಮಂದಿನೇ ಬೇಸರ ಹೊರ ಹಾಕಿದ್ದರು. ಅಭಿಮಾನಿಗಳು ತಲೆ ಕೆಡಿಸಿಕೊಂಡಿದ್ದರು. ಆದರೆ, ಅದ್ಯಾವುದಕ್ಕೂ ಯಶ್ ಪ್ರತಿಕ್ರಿಯೆ ಕೊಡುವುದಕ್ಕೆ ಹೋಗಿರಲಿಲ್ಲ. ಈಗ ಬರ್ತ್‌ಡೇ ರಿಲೀಸ್ ಆಗಿರುವ 'ಟಾಕ್ಸಿಕ್' ಚಿಕ್ಕ ಟೀಸರ್ ಅದಕ್ಕೆಲ್ಲ ಉತ್ತರ ಕೊಟ್ಟಿದೆ.

'ಟಾಕ್ಸಿಕ್' ಸಿನಿಮಾ ಆರಂಭ ಆಗುವಾಗಲೇ ಇದೊಂದು ಡ್ರಗ್ ಮಾಫಿಯಾದ ಹಿನ್ನೆಲೆಯುಳ್ಳ ಕಥೆ ಎಂದು ಹೇಳಲಾಗಿತ್ತು. ಈಗ ಹೊರಬಿದ್ದಿರುವ 'ಟಾಕ್ಸಿಕ್' ತುಣುಕುಗಳು ಕೂಡ ಅದನ್ನೇ ಹೇಳುತ್ತಿವೆ. ಆದರೆ, ಇಷ್ಟು ದಿನ 'ಟಾಕ್ಸಿಕ್‌'ನಲ್ಲಿ ಯಶ್ ಹೇಗೆ ಕಾಣಿಸಿಕೊಳ್ಳಬಹುದು? ಲುಕ್, ಮ್ಯಾನರಿಸಂ ಹೇಗಿರುತ್ತೆ? ಅನ್ನೋ ಕುತೂಹಲವಿಟ್ಟುಕೊಂಡು ಓಡಾಡುತ್ತಿದ್ದ ಫ್ಯಾನ್ಸ್‌ಗೆ ಈ ಟೀಸರ್ ಕಿಕ್ ಕೊಟ್ಟಿದೆ.

Rocking star Yash s film Toxic teaser is out  here is Twitter Review

ಮಲಯಾಳಂ ಚಿತ್ರರಂಗದ ಗೀತು ಮೋಹನ್‌ದಾಸ್ 'ಟಾಕ್ಸಿಕ್'ಗೆ ಕಥೆ ಹಾಗೂ ನಿರ್ದೇಶನವನ್ನು ಮಾಡುತ್ತಿದ್ದಾರೆ. ಕೆವಿಎನ್ ಹಾಗೂ ಯಶ್ ಅವರ ಮಾನ್‌ಸ್ಟರ್ ಮೈಂಡ್ ಕ್ರಿಯೇಷನ್ ಸಂಸ್ಥೆಗಳು ಜಂಟಿಯಾಗಿ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದೆ. ಬಾಲಿವುಡ್ ಸೇರಿದಂತೆ ಭಾರತದ ಬೇರೆ ಬೇರೆ ಚಿತ್ರರಂಗದ ದಿಗ್ಗಜರು ಈ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಎಲ್ಲಕ್ಕಿಂತ ಹೆಚ್ಚಾಗಿ 'ಟಾಕ್ಸಿಕ್' ತುಣುಕುಗಳನ್ನು ನೋಡಿ ಸೋಶಿಯಲ್ ಮೀಡಿಯಾದಲ್ಲಿ ಕಿಚ್ಚು ಹಚ್ಚಿದೆ. ನೆಟ್ಟಿಗರು ಯಶ್ ಲುಕ್ ಹಾಗೂ ಮ್ಯಾನರಿಸಂಗೆ ಕ್ಲೀನ್ ಬೌಲ್ಡ್ ಆಗಿದ್ದಾರೆ. ಹಾಗಿದ್ದರೆ ಟ್ವಿಟರ್ (ಎಕ್ಸ್)ನಲ್ಲಿ ಪ್ರತಿಕ್ರಿಯೆ ಹೇಗಿದೆ ತಿಳಿಯಲು ಮುಂದೆ ಓದಿ.

ರೆಟ್ರೋ ಜಮಾನ ನೆನಪಾಗುತ್ತೆ

"ಟಾಕ್ಸಿಕ್ ಬರ್ತ್‌ಡೇ ಪೀಕ್ ಗ್ಲಿಂಪ್ಸ್ ನಮ್ಮನ್ನು ಮತ್ತೆ ರೆಟ್ರೋ ಜಮಾನಕ್ಕೆ ಕರೆದುಕೊಂಡು ಹೋಗಿದೆ. ಅಂದಿನ ಕ್ಲಬ್ ಸಂಸ್ಕೃತಿಯನ್ನು ನೆನೆಪಿಸಿದೆ. ಇದರಲ್ಲಿ ಸೆಕ್ಸಿ ಗ್ರಾಫಿಕ್ಸ್ ಅನ್ನು ನಿರೀಕ್ಷೆ ಮಾಡಬಹುದು. ಗ್ಲಿಂಪ್ಸ್‌ನಲ್ಲಿ ಕ್ಲಾಲಿಟಿ ಇದೆ. ಯಶ್ ಲುಕ್ ಹಾಗೂ ಮ್ಯಾನರಿಸಂ ಬೆಂಕಿ" ಎಂದು ನೆಟ್ಟಿಗರೊಬ್ಬರು 'ಟಾಕ್ಸಿಕ್' ತುಣುಕುಗಳನ್ನು ನೋಡಿ ಪ್ರತಿಕ್ರಿಯೆ ನೀಡಿದ್ದಾರೆ.

ಅಂತರಾಷ್ಟ್ರೀಯ ಡಾನ್

"ಟಾಕ್ಸಿಕ್ ಸಿನಿಮಾದಲ್ಲಿ ಯಶ್ ಅಂತರಾಷ್ಟ್ರೀಯ ಲೆವೆಲ್‌ನ ಡಾನ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸ್ಟೋರಿ 1940 ರಿಂದ 1970ರವರೆಗಿನ ಡ್ರಗ್ ಮಾಫಿಯಾ ಹಾಗೂ ಕಳ್ಳ ಸಾಗಾಣಿಕೆಯಂತಹ ಕರಾಳ ಜಗತ್ತಿನ ಮೇಲೆ ಬೆಳೆಕು ಚೆಲ್ಲಲಿದೆ. ಕ್ರಿಮಿನಲ್ ವರ್ಲ್ಡ್‌ ಅನ್ನು ಈ ಸಿನಿಮಾ ತೋರಿಸಬಹುದು" ಎಂದು ಮತ್ತೊಬ್ಬರ ನೆಟ್ಟಿಗರು ಟ್ವೀಟ್ ಮಾಡಿದ್ದಾರೆ.

ಉಸಿರಾಡುವುದಕ್ಕೆ ಕಷ್ಟ ಆಗ್ತಿದೆ

"ನಾನೀಗಷ್ಟೇ ಏನು ನೋಡಿದೆ? ಯಶ್ ಸ್ಕ್ರೀನ್ ಪ್ರೆಸೆನ್ಸ್ ನಿಮ್ಮ ಉಸಿರಾಡುವುದಕ್ಕೆ ಕಷ್ಟ ಪಡುವಂತೆ ಮಾಡುತ್ತೆ. ಇಷ್ಟು ದಿನ ಕಾದಿದ್ದಕ್ಕೂ ಸಾರ್ಧಕ ಆಯ್ತು. 10/10. ಹ್ಯಾಪಿ ಬರ್ತ್‌ಡೇ ರಾಕಿಂಗ್‌ಸ್ಟಾರ್ ಯಶ್." ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.

ಬಿರುಗಾಳಿಗಾಗಿ ಕಾಯ್ತಿರಿ

"ಟಾಕ್ಸಿಕ್ ಟೀಸರ್ ಇದೊಂದು ತುಣುಕು ಅಷ್ಟೇ ಅಲ್ಲ. ಇದೊಂದು ಸ್ಟೇಟ್ಮೆಂಟ್. ಯಶ್ ಪ್ರತಿಯೊಂದು ಫ್ರೇಮ್ ಮೇಲೂ ಗಮನ ಹರಿಸಿದ್ದಾರೆ. ದಾಖಲೆಗಳನ್ನು ಮುರಿಯುವಂತಹ ಥ್ರಿಲ್ಲರ್ ಅನ್ನು ಸೆಟ್ ಮಾಡುತ್ತಿದ್ದಾರೆ. ಬಿರುಗಾಳಿ ಬರುವುದನ್ನು ಎದುರು ನೋಡುತ್ತಿರಿ." ಎಂದು ಟಾಕ್ಸಿಕ್ ಬರ್ತ್‌ಡೇ ಪೀಕ್ ನೋಡಿ ಥ್ರಿಲ್ ಆಗಿರುವ ಅಭಿಮಾನಿಯೊಬ್ಬರು ಟ್ವೀಟ್ ಮಾಡಿದ್ದಾರೆ.

ಬಾಂಡ್ ವೈಬ್ಸ್ ಇದೆ

"ಟಾಕ್ಸಿಕ್ ಟೀಸರ್ ಹಾಲಿವುಡ್‌ ಲೆವೆಲ್ ಕ್ವಾಲಿಟಿಯಲ್ಲಿದೆ. ಬಾಂಡ್ ಸಿನಿಮಾ ವೈಬ್ಸ್ ಕೊಟ್ಟಂತಿದೆ. ಆದರೆ, ಇದರಲ್ಲಿ ಏನೋ ಮಿಸ್ ಆಗಿದೆ ಅಂತ ಅನಿಸುತ್ತಿದೆ." ಎಂದು ಮತ್ತೊಬ್ಬರ ನೆಟ್ಟಿಗರು ಟ್ವೀಟ್ ಮಾಡಿದ್ದಾರೆ.

ನಾನು ಇಂಟರ್‌ನ್ಯಾಷನಲ್

"ನಾನು ಏನು ಮಾಡಿದ್ರು ಸೆನ್ಸೇಷನಲ್ ಯಾಕಂದ್ರೆ ನಾನು ಇರುವೇ ಇಂಟರ್‌ನ್ಯಾಷನಲ್" ಅಂತ ಟಾಕ್ಸಿಕ್ ಬರ್ತ್‌ಡೇ ಪೀಕ್ ದೃಶ್ಯ ತುಣುಕುಗಳನ್ನು ನೋಡಿ ಥ್ರಿಲ್ ಆಗಿದ್ದಾರೆ. ಈಗಾಗಲೇ ಅವರ ಅಭಿಮಾನಿಗಳು ಇಂಟರ್‌ನ್ಯಾಷನಲ್ ಲೆವೆಲ್‌ನಲ್ಲಿ ತೆಗೆದುಕೊಂಡು ಹೋಗಿದ್ದಾರೆ.

More from Filmibeat

English summary
Rocking star Yash's film Toxic teaser is out; here is how netizens reacted on Twitter
Read more about: yash toxic filmibeat original
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X