RRR First Half Review: RRR ಮೊದಲಾರ್ಧ ಭರಪೂರ ಆಕ್ಷನ್ ಮಸ್ತ್ ಕಾಮಿಡಿ
'RRR' ರಾಜಮೌಳಿ ನಿರ್ದೇಶನದ ಮತ್ತೊಂದು ಅದ್ಧೂರಿ ಪ್ಯಾನ್ ಇಂಡಿಯಾ ಸಿನಿಮಾ. 'ಬಾಹುಬಲಿ' ಬಳಿಕ ರಾಜಮೌಳಿ ನಿರ್ದೇಶನದ ಮೆಗಾ ಮೂವಿ. ಟಾಲಿವುಡ್ ಇಬ್ಬರು ಸೂಪರ್‌ಸ್ಟಾರ್‌ಗಳು ಜೂ.ಎನ್‌ಟಿಆರ್ ಹಾಗೂ ರಾಮ್‌ಚರಣ್ ಇಬ್ಬರೂ ಒಂದೇ ಸ್ಕ್ರೀನ್ ಶೇರ್ ಮಾಡಿಕೊಂಡಿರುವುದು ಈ ಸಿನಿಮಾದ ಹೈಲೈಟ್. ಈ ಕಾರಣಕ್ಕೆ RRR ಸಿನಿಮಾ ಕುತೂಹಲ ಮೂಡಿಸಿದೆ.
RRR ಸಿನಿಮಾ ನೈಜ ಪಾತ್ರಗಳನ್ನಿಟ್ಟುಕೊಂಡು ಕಾಲ್ಪನಿಕ ಕಥೆ ಹೆಣೆದ ಸಿನಿಮಾ. ರಾಜಮೌಳಿ ನಿರ್ದೇಶನ, ವಿಜಯೇಂದ್ರ ಪ್ರಸಾದ್ ಕಥೆ. ಮತ್ತೆ ತೆರೆಮೇಲೆ ಅಪ್ಪ-ಮಗ ಜಾದು ಮಾಡುತ್ತಾರಾ? ಇಲ್ವಾ ಅನ್ನುವ ಕುತೂಹಲಕ್ಕೀಗ ತೆರೆಬಿದ್ದಿದೆ. ಸಿನಿಮಾದ ಮೊದಲಾರ್ಧ ಪ್ರೇಕ್ಷಕರ ಮನಸ್ಸು ಗೆಲ್ಲುವಲ್ಲಿ ಯಶಸ್ವಿಯಾಗಿದೆ. ರಾಜಮೌಳಿ ಫಸ್ಟ್ ಹಾಫ್‌ನಲ್ಲಿ ಗೆದ್ದು ಬೀಗಿದ್ದಾರೆ. ಹಾಗಿದ್ದರೆ, RRR ಸಿನಿಮಾ ಫಸ್ಟ್ ಹಾಫ್ ಹೈಲೈಟ್ ಏನು ಅಂತ ನೋಡೋಣ ಬನ್ನಿ.
ಫಸ್ಟ್ ಹಾಫ್ ಅದ್ಭುತ ಟ್ವಿಸ್ಟ್
ರಾಜಮೌಳಿ ಆಂಧ್ರದ ಇಬ್ಬರು ಸ್ವಾತಂತ್ರ್ಯ ಹೋರಾಟಗಾರರನ್ನು ತೆರೆಮೇಲೆ ತಂದಿದ್ದಾರೆ. ಅವರೇ ಕೋರಮ್ ಭೀಮ್ ಹಾಗೂ ಅಲ್ಲೂರಿ ಸೀತಾರಾಮ ರಾಜು. ಕೋಮರಂ ಭೀಮ್ ಪಾತ್ರದಲ್ಲಿ ಜೂ.ಎನ್‌ಟಿಆರ್ ನಟಿಸಿದ್ದರೆ, ಅಲ್ಲೂರಿ ಸೀತರಾಮ ರಾಜು ಪಾತ್ರದಲ್ಲಿ ರಾಮ್‌ಚರಣ್ ನಟಿಸಿದ್ದಾರೆ. ಇವರಿಬ್ಬರ ಎಂಟ್ರಿ ಸೀನ್‌ಗಳೇ ಅದ್ಭುತ ಎನಿಸುತ್ತವೆ. ಸಿನಿಮಾ ಮೊದಲಾರ್ಧ ಅತ್ಯದ್ಭುತ ಆಕ್ಷನ್ ಹಾಗೂ ಥ್ರಿಲ್ಲಿಂಗ್ ಸೀನ್‌ಗಳಿವೆ. ಇಂಟರ್‌ವಲ್‌ನಲ್ಲಿ ಕೊಡುವ ಟ್ವಿಸ್ಟ್ ಪ್ರೇಕ್ಷಕರನ್ನು ಚಿತ್ರಮಂದಿರದಲ್ಲಿ ಕೂರುವಂತೆ ಮಾಡುತ್ತೆ.
ಒಬ್ಬರಿಗಿಂತ ಒಬ್ಬರು ಮೇಲು
ರಾಜಮೌಳಿ ಗೆದ್ದಿರುವುದು ಇದೇ ಕಾರಣಕ್ಕೆ. ಜೂ. ಎನ್‌ಟಿಆರ್ ಹಾಗೂ ರಾಮ್‌ಚರಣ್ ಅಂತಹ ನಟರು ಇಲ್ಲಿ ಕಾಂಪಿಟೇಷನ್‌ಗೆ ಬಿದ್ದು ನಟಿಸಿದ್ದಾರೆ ಎನಿಸುತ್ತೆ. ಆಕ್ಷನ್ ಸೀನ್‌ಗಳಲ್ಲಿ, ಇಂಟ್ರುಡಕ್ಷನ್ ಸೀನ್‌ಗಳಲ್ಲಿ ಜೂ.ಎನ್‌ಟಿಆರ್ ಹಾಗೂ ರಾಮ್ ಚರಣ್ ಅತ್ಯದ್ಭುತ ಎನಿಸುತ್ತಾರೆ. ಇಬ್ಬರೂ ಪೈಪೋಟಿಗೆ ಬಿದ್ದು ನಟಿಸಿದ್ದಾರೆ ಎನಿಸುತ್ತೆ. ಈ ಕಾರಣಕ್ಕೆ ಈ ಇಬ್ಬರು ಸ್ಟಾರ್ ನಟರ ಅಭಿಮಾನಿಗಳ ಕಣ್ಣಿಗೆ RRR ಮುದು ನೀಡುವುದು ಗ್ಯಾರಂಟಿ.
ಫಸ್ಟ್ ಹಾಫ್ ಫೈಟ್, ಸಾಂಗ್ ಹೈಲೈಟ್
ರಾಜಮೌಳಿ RRR ಸಿನಿಮಾದ ಹೈಲೈಟ್ ಆಕ್ಷನ್ ಸೀನ್. ಫಸ್ಟ್ ಹಾಫ್ ಕೊನೆಯಲ್ಲಿ ಬರುವ ಆಕ್ಷನ್ ಸೀನ್ ಪ್ರೇಕ್ಷಕರನ್ನು ತುದಿಗಾಲಲ್ಲಿ ಕೂರುವಂತೆ ಮಾಡುತ್ತೆ. ಕಾಡುಮೃಗಗಳ ಜೊತೆ ಬ್ರಿಟಿಷರ ವಿರುದ್ಧ ನಡೆಯುವ ಫೈಟ್ ಪ್ರೇಕ್ಷಕರಿಗೆ ಥ್ರಿಲ್ಲಿಂಗ್ ಅಂತ ಅನಿಸುತ್ತೆ. ಇಲ್ಲಿವರೆಗೂ ಗೆಳೆಯರಾಗಿದ್ದ ಕೋಮರಂ ಭೀಮ್ ಹಾಗೂ ಅಲ್ಲೂರಿ ಸೀತಾರಾಮ ರಾಜು ಇಂಟರ್‌ವಲ್ ಬಳಿಕ ವೈರಿಗಳಾಗಿ ಕಾಣಿಸಿಕೊಳ್ಳಲಿದ್ದಾರೆ.
ಆಲಿಯಾ ಕ್ಷಣಾರ್ಧ, ಅಜಯ್ ಎಂಟ್ರಿ ಆಗಿಲ್ಲ
RRR ಸಿನಿಮಾದ ಮತ್ತೊಂದು ಹೈಲೈಟ್ ಅಂದ್ರೆ, ಇಬ್ಬರು ಬಾಲಿವುಡ್ ನಟರು. ಆಲಿಯಾ ಭಟ್ ಮೊದಲಾರ್ಧದಲ್ಲಿ ಎಂಟ್ರಿ ಕೊಟ್ಟಾಗಿದೆ. ಆದರೆ, ಯಾವಾಗ ಬಂದರು ಯಾವಾಗ ಹೋದರು ಅನ್ನುವುದು ಗೊತ್ತಾಗುವುದಿಲ್ಲ. ಇನ್ನು ಅಜಯ್ ದೇವಗನ್ ಮೊದಲಾರ್ಧದಲ್ಲಿ ಕಾಣಿಸಿಕೊಂಡಿಲ್ಲ. ಹೀಗಾಗಿ ಸೆಕೆಂಡ್ ಹಾಫ್‌ನಲ್ಲಿ ಅಜಯ್ ದೇವಗನ್ ಎಂಟ್ರಿ ನಿರೀಕ್ಷೆ ಮಾಡಬಹುದು.


Click it and Unblock the Notifications











