Salaar Trailer Twitter Review: "3000 ಕೋಟಿ.. ಉಗ್ರಂ ಸ್ಟೋರಿ+ ಕೆಜಿಎಫ್ ಸೆಟ್ಸ್= ಸಲಾರ್".. ಏನಂತಿದ್ದಾರೆ ನೆಟ್ಟಿಗರು?

ಇದೇ ಕ್ಷಣವನ್ನು ಕಣ್ತುಂಬಿಕೊಳ್ಳುವುದಕ್ಕೆ ಪ್ರಭಾಸ್ ಪ್ಯಾನ್ಸ್ ಕಾದು ಕೂತಿದ್ದರು. 'ಸಲಾರ್' ಟ್ರೈಲರ್ ಅದ್ಯಾವಾಗ ನೋಡುವುತ್ತೇವೋ ಅಂತ ವಿಲವಿಲ ಒದ್ದಾಡಿದ್ದರು. 'ಆದಿಪುರುಷ್' ಹೀನಾಯ ಸೋಲು ಕಂಡ ಬಳಿಕ 'ಸಲಾರ್' ಮೇಲೆ ನಿರೀಕ್ಷೆ ಇಟ್ಟಿಕೊಂಡಿದ್ದವರಿಗೆ ಕೊನೆಗೂ ಟ್ರೈಲರ್ ನೋಡುವುದಕ್ಕೆ ಸಿಕ್ಕಿದೆ. ನುಡಿದಂತೆ ಟ್ರೈಲರ್ ಮಾಸ್ ಪವರ್‌ಫುಲ್ ಟ್ರೈಲರ್ ರಿಲೀಸ್ ಆಗಿದೆ.

ಪ್ಯಾನ್ ಇಂಡಿಯಾ ಸೂಪರ್‌ಸ್ಟಾರ್ ಪ್ರಭಾಸ್, 'ಕೆಜಿಎಫ್' ನಿರ್ದೇಶಕ ಪ್ರಶಾಂತ್ ನೀಲ್, ಹೊಂಬಾಳೆ ಫಿಲ್ಮ್ಸ್, ಅದೇ ಕೆಜಿಎಫ್ ಟೀಮ್ ಒಟ್ಟಿಗೆ ಸೇರಿದ ಮೇಲೆ 'ಸಲಾರ್' ಅಬ್ಬರಿಸದೆ ಇರೋಕೆ ಸಾಧ್ಯವೇ.. ಇಂತಹದ್ದೇ ಒಂದು ಕಲ್ಪನೆಯಲ್ಲಿ ಇದ್ದವರಿಗೆ ಈ ಟ್ರೈಲರ್ ಕಿಕ್ ಕೊಟ್ಟಿದೆ. ಅದೇ ಬೇರೆ ಏನೋ ನಿರೀಕ್ಷೆ ಮಾಡಿದವರಿಗೆ ನಿರಾಸೆ ಮಾಡಿದೆ. ಟ್ರೈಲರ್ ನೋಡಿ ಟ್ವಿಟರ್‌ನಲ್ಲಿ ಏನಿದೆ ರಿಯಾಕ್ಷನ್? ತಿಳಿಯಲು ಮುಂದೆ ಓದಿ.

Salaar Trailer Twitter Review: What is Netizens reaction on Prabhas Prashanth Neel movie

"ಅದ್ಭುತ ಟ್ರೈಲರ್"

"ಸಲಾರ್ ಸೀಸ್ ಫೈಯರ್, ಹೌದು.. ಇದು ಅದ್ಭುತ ಟ್ರೈಲರ್. ರಗಡ್ ಆಗಿದೆ. ಪ್ರಭಾಸ್ ಈ ಸಿನಿಮಾ ಸಿಕ್ಕಾಪಟ್ಟೆ ಲೈವ್ಲಿಯಾಗಿ, ವಾಸ್ತವಕ್ಕೆ ಹತ್ತಿರವಿದ್ದಂತೆ ಕಾಣುತ್ತಾರೆ. ಪ್ರಶಾಂತ್ ನೀಲ್ ಕಟ್ಟುತ್ತಿರುವ ಪ್ರಪಂಚ ಮತ್ತಷ್ಟು ಕುತೂಹಲಕಾರಿಯಾಗಿದೆ. ಎಂದಿನಂತೆ ಛಾಯಾಗ್ರಹಣ ಹಾಗೂ ಸಿನಿಮಾ ಪ್ರತಿಯೊಂದು ಶಾಟ್‌ಗಳೂ ಕೂಲ್ ಆಗಿವೆ." ಎಂದು ನೆಟ್ಟಿಗರೊಬ್ಬರು ಟ್ವೀಟ್ ಮಾಡಿದ್ದಾರೆ.

"ಅದೇನ್ ಮಾಡಿದ್ದೀಯಾ ಗುರು"

"ಅದೇನ್ ಮಾಡಿದ್ದೀಯಾ ಗುರು.. ಸಲಾರ್ ಟ್ರೈಲರ್ ಡೇ.. ಪ್ರಶಾಂತ್ ನೀಲ್ ಆಕ್ಷನ್ ಹಾಗೂ ನಿರ್ದೇಶನದ ಬಗ್ಗೆ ಯಾರೂ ಏನೂ ಹೇಳುವುದಕ್ಕೆ ಆಗುವುದಿಲ್ಲ. ಫಸ್ಟ್‌ ಡೇ ಫಸ್ಟ್ ಶೋ ಟಿಕೆಟ್ ಬುಕ್ ಮಾಡಿದ್ದೇನೆ. ಇಡೀ ಫ್ಯಾಮಿಲಿ ಜೊತೆ ಸಿನಿಮಾ ನೋಡುತ್ತೇನೆ." ಎಂದು ಇನ್ನೊಬ್ಬರು ಟ್ವೀಟ್ ಮಾಡಿದ್ದಾರೆ.

"ಪ್ರಭಾಸ್ ಫ್ಯಾನ್ಸ್ ಇದ್ದೀರಾ?"

"ಪ್ರಭಾಸ್ ಫ್ಯಾನ್ಸ್ ಯಾರಾದರೂ ಇದ್ದೀರಾ? ಅದೇನ್ ಟ್ರೈಲರ್ ಗುರು. ಇದು ಬೆಸ್ಟ್ ಟ್ರೈಲರ್‌ಗಳಲ್ಲೊಂದು. ಇಂತಹ ಮಾಸ್ ಟ್ರೈಲರ್ ಅನ್ನೇ ನೋಡಿಲ್ಲ. ಸಲಾರ್ 1 ಎರಡೇ ವಾರಗಳಲ್ಲಿ ಮೂರು ಸಾವಿರ ಕೋಟಿ ಪಕ್ಕಾ ಆಗುತ್ತೆ. ಇದೇ ನಡೆಯೋದು ಬರೆದಿಟ್ಟುಕೊಳ್ಳಿ" ಎಂದು ನೆಟ್ಟಿಗರು ಟ್ವೀಟ್ ಮಾಡಿದ್ದಾರೆ.

"ಎಲ್ಲೋ ನೋಡಿದಂತೆ ಅನಿಸುತ್ತೆ"

"ಸಲಾರ್ ಟ್ರೈಲರ್ ಡಿಸೆಂಟ್ ಆಗಿದೆ. ಪ್ರಶಾಂತ್ ನೀಲ್ ಫ್ಯಾನ್ ಆಗಿ ಇನ್ನೂ ಹೆಚ್ಚು ನಿರೀಕ್ಷೆ ಮಾಡಿದ್ದೆ. ಪ್ರಭಾಸ್ ಮತ್ತು ಪೃಥ್ವಿರಾಜ್ ಸುಕುಮಾರ್ ಚೆನ್ನಾಗಿ ಕಾಣಿಸುತ್ತಾರೆ. ಆದರೆ, ಕೆಜಿಎಫ್ ಹಾಗೂ ರಾಕಿಭಾಯ್ ಹ್ಯಾಂಗೋವರ್‌ನಲ್ಲಿದ್ದಾರೆ ಅನಿಸುತ್ತೆ. ಸಿನಿಮಾದ ಮೇಕಿಂಗ್ ಸ್ಕೇಲ್, ಹಿನ್ನೆಲೆ ಸಂಗೀತ, ಆಕ್ಷನ್ ಪ್ರಿಯರಿಗಾಗಿ ಇರುವ ಸೀಕ್ವೆನ್ಸ್.. ನಾನು ಆಗಲೇ ಹೇಳಿದ ಹಾಗೆ ಎಲ್ಲೋ ನೋಡಿದಂತೆ ಭಾಸವಾಗುತ್ತವೆ." ಎಂದು ಮತ್ತೊಬ್ಬರು ಹೇಳಿದ್ದಾರೆ.

'ಉಗ್ರಂ' ರಿಮೇಕ್ ಟ್ರೈಲರ್

ಇನ್ನು ಕೆಲವರಿಗೆ 'ಸಲಾರ್' ಸಿನಿಮಾದ ಟ್ರೈಲರ್ ಇಷ್ಟ ಆಗಿಲ್ಲ. ಉಗ್ರಂ ಸಿನಿಮಾ ತುಣುಕನ್ನು ಹಾಗೂ ಸಲಾರ್ ಸಿನಿಮಾದ ತುಣುಕನ್ನು ಶೇರ್ ಮಾಡುತ್ತಿದ್ದಾರೆ. "ಒರಿಜಿನಲ್ ಉಗ್ರಂ ಟ್ರೈಲರ್.. ರಿಮೇಕ್ ಸಲಾರ್ ಟ್ರೈಲರ್" ಎಂದು ಎರಡೂ ತುಣುಕುಗಳನ್ನು ಶೇರ್ ಮಾಡುತ್ತಿದ್ದಾರೆ.

ಉಗ್ರಂ ಸ್ಟೋರಿ+ ಕೆಜಿಎಫ್ ಸೆಟ್ಸ್= ಸಲಾರ್ ಸೀಸ್‌ಫೈಯರ್

ಉಗ್ರಂ ಸ್ಟೋರಿ+ ಕೆಜಿಎಫ್ ಸೆಟ್ಸ್= ಸಲಾರ್ ಸೀಸ್‌ಫೈಯರ್. ಸಲಾರ್ ಟ್ರೈಲರ್ ನೋಡಿದ ಬಳಿಕ ಆತ್ಮತೃಪ್ತಿ ಅನ್ನೋದು ಸಿಕ್ಕಿಲ್ಲ. ಪ್ರಶಾಂತ್ ನೀಲ್ ಹಾಗೂ ಪ್ರಭಾಸ್ ಕಾಂಬೋದಿಂದ ಇದನ್ನು ಎಕ್ಸ್‌ಪೆಕ್ಟ್ ಮಾಡಿರಲಿಲ್ಲ. ನನಗೆ ಡಂಕಿ ಸಿಕ್ಕಾಪಟ್ಟೆ ಎಂಟರ್‌ಟೈನಿಂಗ್ ಆಗಿರುತ್ತೆ ಅಂತ ಅನಿಸುತ್ತಿದೆ. ನಾನು ಈಗಾಗಲೇ ಉಗ್ರಂ ನೋಡಿದ್ದೇನೆ." ಎಂದು ಬೇಸರ ವ್ಯಕ್ತಪಡಿಸುತ್ತಿದ್ದಾರೆ.

More from Filmibeat

English summary
Salaar Trailer Twitter Review: Here is Netizens reaction on Prabhas, Prashanth Neel movie.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X