Salaar Twitter Review: ಇಂಟರ್‌ವಲ್, ಕ್ಲೈಮ್ಯಾಕ್ಸ್ ಅದ್ಭುತ.. ಆದ್ರೂ ಯಾಕೋ ಸಮಾಧಾನ ಆಗ್ತಿಲ್ಲ!

ಪ್ರಭಾಸ್, ಪ್ರಶಾಂತ್ ನೀಲ್ ಕಾಂಬಿನೇಷನ್ ಸಿನಿಮಾ 'ಸಲಾರ್' ಇಂದು (ಡಿಸೆಂಬರ್ 22) ರಿಲೀಸ್ ಆಗಿದೆ. ಆಂಧ್ರ, ತೆಲಂಗಾಣದಲ್ಲಿ 'ಸಲಾರ್' ಸಿನಿಮಾ ನೋಡುವುದಕ್ಕೆ ಥಿಯೇಟರ್ ಮುಂದೆ ಫ್ಯಾನ್ಸ್ ಕಿಕ್ಕಿರಿದು ಸೇರಿದ್ದಾರೆ. ಮಧ್ಯರಾತ್ರಿ ಒಂದು ಗಂಟೆಯಿಂದಲೇ ಅಭಿಮಾನಿಗಳಿಗಾಗಿ ಸ್ಪೆಷಲ್ ಶೋ ಹಾಕಲಾಗಿದ್ದು, ಸಲಾರ್ ಅನ್ನು ಕಣ್ತುಂಬಿಕೊಂಡಿದ್ದಾರೆ.

ಈಗಾಗಲೇ 'ಸಲಾರ್' ಸಿನಿಮಾವನ್ನು ನೋಡಿದವರು ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಪ್ರಭಾಸ್, ಪೃಥ್ವಿರಾಜ್ ಸುಕುಮಾರನ್ ಹಾಗೂ ಪ್ರಶಾಂತ್ ನೀಲ್ ನಿರ್ದೇಶನದ ಬಗ್ಗೆ ಜನರು ಮಾತಾಡುತ್ತಿದ್ದಾರೆ. ಎಕ್ಸ್ ಖಾತೆಯಲ್ಲಿ (ಟ್ವಿಟರ್) ಸಲಾರ್ ಸಿನಿಮಾ ಬಗ್ಗೆ ಮುಕ್ತವಾಗಿ ಬರೆದುಕೊಂಡಿದ್ದಾರೆ. ಹಾಗಿದ್ದರೆ, ಟ್ವಿಟರ್‌ನಲ್ಲಿ (ಎಕ್ಸ್) ಸಲಾರ್ ಬಗ್ಗೆ ಪ್ರತಿಕ್ರಿಯೆ ಹೇಗಿದೆ ತಿಳಿಯುವುದಕ್ಕೆ ಮುಂದೆ ಓದಿ.

Salaar Twitter Review: What X Audience Says About Prabhass New Movie Directed by Prasanth Neel

ಪ್ರಭಾಸ್ ಬೆಸ್ಟ್ ಸಿನಿಮಾ

"ಸಲಾರ್ ಸಿನಿಮಾ ಪ್ರಭಾಸ್ ವೃತ್ತಿ ಬದುಕಿನಲ್ಲೇ ಬೆಸ್ಟ್ ಸಿನಿಮಾ. ಪ್ರಶಾಂತ್ ನೀಲ್ ಇಟ್ಟ ಗುರಿ ಸರಿಯಾಗಿಯೇ ತಲುಪಿದೆ. ಸಿನಿಮಾ ಕ್ಲೈಮ್ಯಾಕ್ಸ್ ಅದ್ಭುತವಾಗಿದೆ. ಸಿನಿಮಾದ ಕ್ಲೈಮ್ಯಾಕ್ಸ್ ಸ್ಪೆಷಲ್ ಅಂತ ಅನಿಸುತ್ತೆ" ಎಂದು ನೆಟ್ಟಿಗರೊಬ್ಬರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.


ಬರೀ ನಾಲ್ಕು ಫೈಟ್

" 2 ಗಂಟೆ 55 ನಿಮಿಷದ ಸಿನಿಮಾದಲ್ಲಿ ಕೇವಲ ನಾಲ್ಕು ಫೈಟ್‌ಗಳಿವೆ. ಹಾಗೇ ಸಿಕ್ಕಾಪಟ್ಟೆ ಡ್ರಾಮವಿದೆ. ಆದರೂ ಇಡೀ ಡ್ರಾಮದಲ್ಲಿ ಒಂದೇ ಒಂದು ಬೇಸರ ಮೂಡಿಸುವ ದೃಶ್ಯವಿಲ್ಲ. ಈ ಸಿನಿಮಾದಲ್ಲಿರುವ ಫೈಟ್ಸ್ ಹಾಗೂ ಎಲಿವೇಷನ್ ಸೀನ್‌ಗಳು ಬೋರ್ ಹೊಡೆಸುವುದಿಲ್ಲ. ನಿಮ್ಮ ದುಡ್ಡಿಗೆ ಮೋಸವಿಲ್ಲ." ಎಂದು ಇನ್ನೊಬ್ಬ ನೆಟ್ಟಿಗರು ಹೇಳಿದ್ದಾರೆ.


'ಸಲಾರ್' ಪ್ಲಸ್ ಪಾಯಿಂಟ್ ಏನು?

"ಸಲಾರ್ ಸಿನಿಮಾ ಪ್ಲಸ್ ಪಾಯಿಂಟ್ಸ್ ಹೀಗಿದೆ. ಕೋಟೆ ಕಟ್ಟುವಲ್ಲಿ ಪ್ರಶಾಂತ್ ನೀಲ್ ನಿರ್ದೇಶನ ಎದ್ದು ಕಾಣುತ್ತೆ. ಬಾಹುಬಲಿ ಸೀರಿಸ್ ಬಳಿಕ ಪ್ರಭಾಸ್ ಬೆಸ್ಟ್ ಸಿನಿಮಾವಿದು ಎಂದು ಹೇಳಬಹುದು. ಇಂಟರ್‌ವಲ್ ಅದ್ಭುತವಾಗಿದೆ. ದ್ವಿತೀಯಾರ್ಧದಲ್ಲಿ ಬರುವ ಹಿನ್ನೆಲೆ ಸಂಗೀತ ಸೂಪರ್. ಪೃಥ್ವಿರಾಜ್ ಸುಕುಮಾರನ್, ಪ್ರಶಾಂತ್ ನೀಲ್ ಪ್ರಪಂಚ ಈ ಸಿನಿಮಾದ ಹೈಲೈಟ್. ಮೈನಸ್ ಏನಂದ್ರೆ, ಫಸ್ಟ್ ಹಾಫ್ ಹಾಗೂ ಸೆಕೆಂಡ್ ಹಾಫ್ ಮಧ್ಯೆ ಸಿನಿಮಾ ನಿಧನಾಗತಿಯಲ್ಲಿ ಸಾಗುತ್ತೆ ಅನಿಸುತ್ತೆ.

ಪಾಸಿಟಿವ್, ನೆಗೆಟಿವ್ ಏನು?

ಕೆಲವರು 'ಸಲಾರ್' ಸಿನಿಮಾ ಪಾಸಿಟಿವ್ ಹಾಗೂ ನೆಗೆಟಿವ್ ಎರಡೂ ವಿಷಯಗಳ ಬಗ್ಗೆ ಮಾತಾಡಿದ್ದಾರೆ. " ಸಲಾರ್ ಸಿನಿಮಾದ ಪಾಸಿಟಿವ್ ಅಂಶಗಳು. ಆಕ್ಷನ್ ಸೀನ್‌ಗಳು, ಕಲ್ಲಿದ್ದಲು ಗಣಿಯಲ್ಲಿ ಪ್ರಭಾಸ್ ಎಲೆವೇಷನ್ ಸೀನ್‌ಗಳು, ಇಂಟರ್‌ವಲ್ ಹಾಗೂ ಕ್ಲೈಮ್ಯಾಕ್ಸ್ ಸೀನ್‌ಗಳು ಅದ್ಭುತವಾಗಿವೆ. ಹಾಗೇ ನೆಗೆಟಿವ್ ಅಂಶಗಳು ಏನಂದ್ರೆ, ಹಾಡುಗಳಿಲ್ಲ. ಕೆಜಿಎಫ್‌ನಲ್ಲಿ ಇರುವಂತೆ ಒಂದಾದರೂ ಎಲೆವೆಷನ್ ಸಾಂಗ್ ಇರಬೇಕಿತ್ತು. ಹಿನ್ನೆಲೆ ಸಂಗೀತ ಕಿರಿಕಿರಿ ಮಾಡುತ್ತೆ. ಪ್ರಶಾಂತ್ ನೀಲ್ ಟ್ರೇಡ್ ಮಾಕ್ ಡೈಲಾಗ್ ಮಿಸ್ ಆಗಿದೆ" ಎಂದು ಮತ್ತೊಬ್ಬರು ಟ್ವೀಟ್ ಮಾಡಿದ್ದಾರೆ.


ಪ್ರಭಾಸ್ ಕೆಟ್ಟ ಸಿನಿಮಾ

'ಸಲಾರ್' ಬಗ್ಗೆ ಪಾಸಿಟಿವ್ ಆಗಿ ಮಾತಾಡುವ ಹಾಗೆ ನೆಗೆಟಿವ್ ಕಮೆಂಟ್‌ಗಳನ್ನೂ ಮಾಡಿದ್ದಾರೆ. " ಸಲಾರ್ ಪ್ರಭಾಸ್ ವೃತ್ತಿ ಬದುಕಿನ ಅತ್ಯಂತ ಕೆಟ್ಟ ಸಿನಿಮಾ. ಪ್ರಶಾಂತ್ ನೀಲ್ ನಿರಾಸೆ ಮಾಡಿದ್ದಾರೆ. ಸರ್ವಕಾಲಿಕ ದುರಂತ. ನಾಳೆಯಿಂದ ನಿರ್ಮಾಪಕರು ಸುಳ್ಳಿ ವರದಿಗಳನ್ನು ಕೊಡುವುದಕ್ಕೆ ಶುರು ಮಾಡುತ್ತಾರೆ. ಸಲಾರ್ ಸಿನಿಮಾದಿಂದ ಅವರಿಗೆ ಸಿಕ್ಕಾಪಟ್ಟೆ ನಷ್ಟ ಆಗುತ್ತೆ." ಮತ್ತೊಬ್ಬರ ನೆಟ್ಟಿಗ ಕಮೆಂಟ್ ಮಾಡಿದ್ದಾರೆ.

More from Filmibeat

English summary
Explore What Audience Responses To Salaar Part 1 Ceasefire Movie On Twitter .
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X