Kisi Ka Bhai Twitter Review : ಫ್ಯಾಮಿಲಿ ಸಿನಿಮಾ.. ಸಲ್ಲು ಎಂಟ್ರಿ.. ಲಾಜಿಕ್ ಇಲ್ಲ.. ನೆಟ್ಟಿಗರ ಪ್ರತಿಕ್ರಿಯೆ ಏನು?
ಬಾಲಿವುಡ್ ಬಾಕ್ಸಾಫೀಸ್ ಸುಲ್ತಾನ್ ಸಲ್ಮಾನ್ ಖಾನ್ ಸಿನಿಮಾ ಇಂದು (ಏಪ್ರಿಲ್ 21) ಅದ್ಧೂರಿಯಾಗಿ ರಿಲೀಸ್ ಆಗಿದೆ. ಮಲ್ಟಿಸ್ಟಾರರ್ ಸಿನಿಮಾ 'ಕಿಸಿ ಕಾ ಭಾಯ್ ಕಿಸಿ ಕಿ ಜಾನ್' ರಿಲೀಸ್‌ಗೂ ಮುನ್ನವೇ ನಿರೀಕ್ಷೆಗಳನ್ನು ದುಪ್ಪಟ್ಟು ಮಾಡಿತ್ತು.
ಸಲ್ಮಾನ್ ಖಾನ್ ಜೊತೆ ಪೂಜಾ ಹೆಗ್ಡೆ, ದಗ್ಗುಬಾಟಿ ವೆಂಕಟೇಶ್, ಶೆಹನಾಜ್ ಗಿಲ್,ಪಾಲಕ್ ತಿವಾರಿ, ರಾಘವ್ ಜುಯಾಲ್, ಭೂಮಿಕಾ ಚಾವ್ಲಾ ಈ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಹೀಗಾಗಿ ಈ ಮಲ್ಟಿಸ್ಟಾರರ್ ಸಿನಿಮಾ ಮೇಲೆ ಕುತೂಹಲ ದುಪ್ಪಟ್ಟಾಗಿತ್ತು.

ಇದೂವರೆಗೂ ಈದ್‌ಗೆ ರಿಲೀಸ್ ಆಗಿರೋ ಸಲ್ಮಾನ್ ಖಾನ್ ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಧೂಳೆಬ್ಬಿಸಿವೆ. ಇಂದು(ಏಪ್ರಿಲ್ 21) ರಿಲೀಸ್ ಆಗಿರೋ 'ಕಿಸಿ ಕಾ ಭಾಯ್ ಕಿಸಿ ಕಿ ಜಾನ್' ಸಿನಿಮಾ ಕೂಡ ಬಾಕ್ಸಾಫೀಸ್‌ನಲ್ಲಿ ಗೆಲ್ಲುತ್ತಾ? ಅನ್ನೋ ಲೆಕ್ಕಾಚಾರ ಶುರುವಾಗಿದೆ. ಹಾಗಿದ್ದರೆ, ಈಗಾಗಲೇ ಸಿನಿಮಾ ನೋಡಿರೋರು ಟ್ವಿಟರ್‌ನಲ್ಲಿ ಯಾವ ರೀತಿ ಪ್ರತಿಕ್ರಿಯೆ ನೀಡುತ್ತಿದ್ದಾರೆ? ತಿಳಿಯಲು ಮುಂದೆ ಓದಿ..
ಪಕ್ಕಾ ಕೌಟುಂಬಿಕ ಸಿನಿಮಾ
"ಈಗ ತಾನೇ ಸಲ್ಮಾನ್ ಖಾನ್ ಅಭಿನಯದ 'ಕಿಸಿ ಕಾ ಭಾಯ್ ಕಿಸಿ ಕಿ ಜಾನ್' ಸಿನಿಮಾ ನೋಡಿದೆ. ಇದೊಂದು ಅದ್ಭುತ ಸಿನಿಮಾ. ಪಕ್ಕಾ ಕೌಟುಂಬಿಕ ಚಿತ್ರವಾಗಿದ್ದು, ನೋಡಲೇಬೇಕಾದ ಸಿನಿಮಾ. ಇಂತಹ ಬ್ಲಾಕ್‌ಬಸ್ಟರ್ ಹಿಟ್ ಸಿನಿಮಾವನ್ನು ಕೊಟ್ಟಿದ್ದಕ್ಕೆ ಚಿತ್ರತಂಡಕ್ಕೆ ಅಭಿನಂದನೆಗಳು" ಎಂದು ಟ್ವೀಟ್ ಮಾಡಿದ್ದಾರೆ.
ಸಲ್ಮಾನ್ ಖಾನ್ ಮಾಸ್ ಅವತಾರ
"ಆಕ್ಷನ್ ಉತ್ತಮವಾಗಿದೆ. ಫುಲ್ ಮಾಸ್ ಅವತಾರದಲ್ಲಿ ಸಲ್ಮಾನ್ ಖಾನ್. ಅದ್ಭುತ ಬಿಜಿಎಂ, ಪಕ್ಕಾ ಫ್ಯಾಮಿಲಿ ಎಂಟರ್‌ಟೈನ್ಮೆಂಟ್ ಸಿನಿಮಾ. ಉಳಿದ ಪಾತ್ರಗಳೂ ಕೂಡ ಅದ್ಭುತವಾಗಿವೆ."
ಸಲ್ಮಾನ್ ಖಾನ್ ಎಂಟ್ರಿ ಸೂಪರ್
"ಆಕ್ಷನ್, ಸಲ್ಮಾನ್ ಖಾನ್ ಎಂಟ್ರಿ, ರೊಮ್ಯಾನ್ಸ್, ಕಾಮಿಡಿ, ಸಹೋದರರ ಬಾಂಧವ್ಯ ನಿಜಕ್ಕೂ ಅದ್ಭುತವಾಗಿದೆ. ಇಡೀ ಸಿನಿಮಾ ಮಾಸ್ ಎಂಟರ್‌ಟೈನಿಂಗ್ ಸಿನಿಮಾ. ಆದರೆ, ಸಿನಿಮಾದಲ್ಲಿ ಮೆಸೇಜ್ ಇಲ್ಲ."
ಸಿನಿಮಾದಲ್ಲಿ ಲಾಜಿಕ್ ಇಲ್ಲ
" ಮತ್ತದೇ ಲಾಜಿಕ್ ಇಲ್ಲದ ಮಸಾಲಾ ಸಿನಿಮಾ. ಇದು ಕೇವಲ ಸಲ್ಮಾನ್ ಖಾನ್ ಸಿನಿಮಾ. ಮುಂದೆ ಏನಾಗುತ್ತೆ ಅನ್ನೋ ಕುತೂಹಲವೇ ಇಲ್ಲ. ಮಾಸ್ ಆಕ್ಷನ್, ಕಲರ್‌ಫುಲ್ ಸಿನಿಮಾ. ಭಾವನಾತ್ಮಕವಾಗಿ ಈ ಸಿನಿಮಾ ವೀಕ್ ಆಗಿದೆ. ಹಾಡುಗಳು ಚೆನ್ನಾಗಿವೆ. ಫ್ಯಾಮಿಲಿ ಕೂತು ಸಿನಿಮಾ ನೋಡಬಹುದು. ಇದು ಸಿಂಗಲ್ ಸ್ಕ್ರೀನ್ ಸಿನಿಮಾ"
ಹಣ ಕಳೆದುಕೊಳ್ಳಬೇಡಿ
"ಈ ಸಿನಿಮಾವನ್ನು ಒಮ್ಮೆಯೂ ನೋಡುವುದಕ್ಕೆ ಆಗುವುದಿಲ್ಲ. ನಿಮ್ಮ ಹಣವನ್ನು ವ್ಯರ್ಥ ಮಾಡಿಕೊಳ್ಳಬೇಡಿ. ಈ ಸಿನಿಮಾದಲ್ಲಿ ಸ್ಟೋರಿನೇ ಇಲ್ಲ. ಸಲ್ಮಾನ್ ಖಾನ್ ಕೆಟ್ಟದಾಗಿ ಆಕ್ಷನ್ ಮಾಡಿದ್ದಾರೆ. ಸಲ್ಮಾನ್ ಖಾನ್ ಹಾಗೂ ಪೂಜಾ ಹೆಗ್ಡೆ ನಡುವೆ ಕೆಟ್ಟ ಕೆಮಿಸ್ಟ್ರಿ ಇದೆ"


Click it and Unblock the Notifications











