»   » ಬ್ಯೂಟಿಫುಲ್ ಮನಸ್ಸುಗಳು' ಚಿತ್ರ ನೋಡಿದವರ ಟ್ವಿಟರ್ ಕಾಮೆಂಟ್ಸ್

ಬ್ಯೂಟಿಫುಲ್ ಮನಸ್ಸುಗಳು' ಚಿತ್ರ ನೋಡಿದವರ ಟ್ವಿಟರ್ ಕಾಮೆಂಟ್ಸ್

Posted By:
Subscribe to Filmibeat Kannada

ಅಭಿನಯ ಚುತುರ ಸತೀಶ್ ನಿನಾಸಂ ಮತ್ತು ನಟಿ ಶೃತಿ ಹರಿಹರನ್ ಅಭಿನಯದ 'ಬ್ಯೂಟಿಫುಲ್ ಮನಸ್ಸುಗಳು' ಚಿತ್ರ ಇಂದು ರಾಜ್ಯಾದಂತ ತೆರೆಕಂಡಿದೆ. ಹಿರಿಯ ನಟರಾದ ತಬಲ ನಾಣಿ ಮತ್ತು ಅಚ್ಯುತ್ ಕುಮಾರ್ ಸಹ ಈ ಚಿತ್ರದಲ್ಲಿ ನಟಿಸಿದ್ದಾರೆ.[ವಿಮರ್ಶೆ: 'ಬ್ಯೂಟಿಫುಲ್ ಮನಸ್ಸುಗಳು' ಪ್ರಸ್ತುತ ಸಮಾಜಕ್ಕೆ ಕನ್ನಡಿ]

ಜಯತೀರ್ಥ ರಚನೆ ಮಾಡಿ ಆಕ್ಷನ್ ಕಟ್ ಹೇಳಿರುವ ಈ ಚಿತ್ರ ಸತ್ಯ ಘಟನೆ ಆಧಾರಿತವಾಗಿದೆ ಎಂದು ಹೇಳಲಾಗಿದೆ. 'ಬ್ಯೂಟಿಫುಲ್ ಮನಸ್ಸುಗಳು' ಚಿತ್ರವನ್ನು ಫಸ್ಟ್ ಡೇ ಫಸ್ಟ್ ಶೋ ನೋಡಿದ ಸಿನಿ ಪ್ರೇಕ್ಷಕರು ಟ್ವಿಟರ್‌ ನಲ್ಲಿ ಏನಂದ್ರು ವಿಮರ್ಶೆಗಳನ್ನ ನೋಡೋಣ ಬನ್ನಿ.


ಚಿತ್ರ ತಪ್ಪ್ದೇ ನೋಡಿ

'ಬ್ಯೂಟಿಫುಲ್ ಮನಸ್ಸುಗಳು' ಚಿತ್ರ ಅಲ್ಲ, ಇದು ಒಂದು ಎಕ್ಸ್ ಪೀರಿಯನ್ಸ್. ತಪ್ಪದೇ ಸಿನಿಮಾ ನೋಡಿ' ಎಂದು ಸ್ಪರ್ಶ ಆರ್ ಕೆ ಟ್ವೀಟ್ ಮಾಡಿದ್ದಾರೆ.['ಬ್ಯೂಟಿಫುಲ್ ಮನಸ್ಸುಗಳು' ಚಿತ್ರಕ್ಕೆ ಕಿಚ್ಚ ಸುದೀಪ್ ವಿಮರ್ಶೆ..!]


ಬ್ಯೂಟಿಫುಲ್ ಮೆಸೇಜ್

'#BeautifulManassugalu ಬ್ಯೂಟಿಫುಲ್ ಮೆಸೇಜ್ ಹೊಂದಿರುವ ಬ್ಯೂಟಿಫುಲ್ ಸಿನಿಮಾ. ಹಾರ್ಡ್ ಹಿಟ್ಟಿಂಗ್, ಜಯತೀರ್ಥ ಅವರ ಚಿಂತನೆಗೆ ಪ್ರಚೋದಿಸುವಂತ ಸಿನಿಮಾ'.


ಅತ್ಯುತ್ತಮ ಅಭಿನಯ

'ಸತೀಶ್ ನಿನಾಸಂ ಮತ್ತು ಶೃತಿ ಹರಿಹರನ್ ರವರ ಅದ್ಭುತ ಅಭಿನಯ. ಸೂಪರ್ಬ್ ಸ್ಟೋರಿ, ಸ್ಕ್ರೀಲ್ ಪ್ಲೇ, ನೋಡಲೇ ಬೇಕಾದ ಸಿನಿಮಾ'.


ಬ್ರಿಲಿಯಂಟ್

'ಯೂ ಗಾಯ್ಸ್ ಬ್ರಿಲಿಯಂಟ್. ನಿಮಗೆ ತಲೆಬಾಗುತ್ತೇವೆ. ಈ ಸಿನಿಮಾ ನೀಡಿದ್ದಕ್ಕಾಗಿ ಧನ್ಯವಾದಗಳು. ಗುಡ್ ಲಕ್'.


ಎಮೋಶನಲ್ ಸಿನಿಮಾ

'ಬ್ಯೂಟಿಫುಲ್ ಮನಸ್ಸುಗಳು' ಎಮೋಶನಲ್ ಸಿನಿಮಾ. ನಾನು ಇಷ್ಟಪಟ್ಟೆ. ಸತೀಶ್ ಮತ್ತು ಶೃತಿ ಹರಿಹರನ್ ಉತ್ತಮ ಅಭಿನಯ ಮಾಡಿದ್ದಾರೆ. ಅಚ್ಯುತ್ ಬ್ರಿಲಿಯಂಟ್'.


ನೋಡಬಹುದಾದ ಸಿನಿಮಾ

'#BeautifulManasugalu ನೋಡಬಹುದಾದ ಸಿನಿಮಾ. ಕುರೂಪಿ ಮನಸ್ಸುಗಳಿಗೆ ನಾಟುವಂತಹ ಸಿನಿಮಾ. ಜಯತೀರ್ಥ ಉತ್ತಮವಾಗಿ ನಿರೂಪಿಸಿದ್ದಾರೆ. ಶೃತಿ ಹರಿಹರನ್ ಹೆಚ್ಚು ಆಕರ್ಷಕವಾಗಿ ಕಾಣಿಸಿಕೊಂಡಿದ್ದಾರೆ.


English summary
Sathish Neenasam, Sruthi Hariharan Starrer Kannada Movie 'Beautiful Manassugalu' has hit the screens today (January 20th). Here is the Twitter review of 'Beautiful Manassugalu'

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada