»   » ವಿಮರ್ಶೆ: 'ಬ್ಯೂಟಿಫುಲ್ ಮನಸ್ಸುಗಳು' ಪ್ರಸ್ತುತ ಸಮಾಜಕ್ಕೆ ಕನ್ನಡಿ

ವಿಮರ್ಶೆ: 'ಬ್ಯೂಟಿಫುಲ್ ಮನಸ್ಸುಗಳು' ಪ್ರಸ್ತುತ ಸಮಾಜಕ್ಕೆ ಕನ್ನಡಿ

Posted By:
Subscribe to Filmibeat Kannada

ಸಮಾಜದಲ್ಲಿ ಅದ್ಭುತವಾದ 'ಬ್ಯೂಟಿಫುಲ್ ಮನಸ್ಸುಗಳು' ತುಂಬಾ ಇವೆ. ಆದರೆ ಇವೆಲ್ಲಾ ಸಣ್ಣ ಸಣ್ಣ ಮಿಸ್‌ಟೇಕ್ ಗಳಿಂದ ಒಡೆದು ಹೋಗುತ್ತಿವೆ. ಕಾರಣ ಸಮಾಜದ ವ್ಯವಸ್ಥೆ. ಆ ಮನಸ್ಸುಗಳು ಒಂದಾಗುವಷ್ಟರಲ್ಲಿ ಎಷ್ಟೋ ಅನಾಹುತಗಳು ಆಗಿಬಿಡಬಹುದು. ಸೊಸೈಟಿಯಲ್ಲಿ ಇಂತಹ ಸಮಸ್ಯೆಗಳು ಮಧ್ಯಮ ವರ್ಗ ಮತ್ತು ಮೇಲ್ವರ್ಗದ ಎರಡು ಕುಟುಂಬಗಳ ತಪ್ಪಿದಲ್ಲ.['ಬ್ಯೂಟಿಫುಲ್ ಮನಸ್ಸುಗಳು' ಚಿತ್ರಕ್ಕೆ ಕಿಚ್ಚ ಸುದೀಪ್ ವಿಮರ್ಶೆ..!]


ಬ್ಯೂಟಿಫುಲ್ ಮನಸ್ಸುಗಳು (U/A): ನಿಮ್ಮ ಟಿಕೆಟ್‌ ಅನ್ನು ಈಗಲೇ ಬುಕ್ ಮಾಡಿಕೊಳ್ಳಿ!

ಮೇಲೆ ಹೇಳಿದ ಸಮಸ್ಯೆಗಳಿಗೆ ಮುಖ್ಯ ಕಾರಣ ಜ್ಞಾನಿಗಳು ತಿಳಿದು ಸಹ ಅಜ್ಞಾನಿಗಳಂತೆ ಮಾಡುತ್ತಿರುವ ಚಟುವಟಿಕೆಗಳು, ಎಂಬ ಸಾರಾಂಶವನ್ನು ಪ್ರಸ್ತುತ ಸಮಾಜಕ್ಕೆ ಕೈಗನ್ನಡಿಯಂತೆ 'ಬ್ಯೂಟಿಫುಲ್ ಮನಸ್ಸುಗಳು' ಚಿತ್ರದಲ್ಲಿ ತೋರಿಸಲಾಗಿದೆ.


Rating:
3.5/5

ಚಿತ್ರ - ಬ್ಯೂಟಿಫುಲ್ ಮನಸ್ಸುಗಳು
ನಿರ್ಮಾಣ - ಎಸ್ ಪ್ರಸನ್ನ
ರಚನೆ-ನಿರ್ದೇಶನ - ಜಯತೀರ್ಥ
ಸಂಗೀತ - ಬಿಜೆ ಭರತ್
ಛಾಯಾಗ್ರಹಣ - ಕಿರಣ್ ಹಂಪಾಪುರ
ತಾರಾಗಣ - ಸತೀಶ್ ನಿನಾಸಂ, ಶೃತಿ ಹರಿಹರನ್, ಅಚ್ಚುತ್ ಕುಮಾರ್, ತಬಲ ನಾಣಿ, ಸಂದೀಪ್, ಪ್ರಶಾಂತ್ ಸಿದ್ದಿ
ಬಿಡುಗಡೆ - ಜನವರಿ 20, 2017


ಕ್ಲೈಮ್ಯಾಕ್ಸ್ ವರೆಗೂ ತಿಳಿಯದ ಸಸ್ಪೆನ್ಸ್

'2013 ರಲ್ಲಿ ನಡೆದ ಸತ್ಯ ಘಟನೆ ಆಧಾರಿತ' ಎಂದು ದೊಡ್ಡ ಅಕ್ಷರಗಳು ತೆರೆ ಮೇಲೆ ಕಾಣುವ ಮೂಲಕ ಚಿತ್ರ ಆರಂಭವಾಗುತ್ತದೆ. ಹೌದ.. ಎನ್ನುವಷ್ಟೇರಲ್ಲೇ ಕಣ್ಣಮುಂದೆ ಡ್ಯಾನ್ಸ್ ಕ್ಲಾಸ್ ನಲ್ಲಿ ಸ್ಟೆಪ್ ಹಾಕುತ್ತಿರುವ ಸುಂದರ ಯುವತಿ ಕಿಡ್ ನ್ಯಾಪ್‌ ಮಾಡಲಾಗುತ್ತದೆ. ಆಕೆಯನ್ನು ಯಾರು? ಏಕೆ? ಕಿಡ್ ನ್ಯಾಪ್ ಮಾಡಿದ್ರು. ಆಕೆಗೆ ಏನ್‌ ಮಾಡ್ತಾರೆ ಎಂಬುದು ಕ್ಲೈಮ್ಯಾಕ್ಸ್ ವರೆಗೂ ಕಾಡುವ ಸಸ್ಪೆನ್ಸ್, ಪ್ರಶ್ನೆ ಎರಡೂ ಸಹ.['ಬ್ಯೂಟಿಫುಲ್ ಮನಸ್ಸು'ಗಳಿಗೆ 'ದರ್ಶನ್' ಅತಿಥಿ]


ಜ್ಞಾನಿಗಳ ತಪ್ಪಿನಿಂದ 'ಬ್ಯೂಟಿಫುಲ್ ಮನಸ್ಸುಗಳು' ಚಿದ್ರ

ಬಾರ್ ಓನರ್ ಮಗ ಪ್ರಶಾಂತ್(ಸತೀಶ್ ನಿನಾಸಂ)ಗೆ, ಬ್ಯೂಟಿ ಪಾರ್ಲರ್ ನಲ್ಲಿ ಕೆಲಸ ಮಾಡುವ ನಂದಿನಿ(ಶೃತಿ ಹರಿಹರನ್) ಮೇಲೆ ಲವ್ ಅಟ್ ಫಸ್ಟ್ ಸೈಟ್ ಆಗುತ್ತೆ. ಹೇಗೋ ಲವ್ ಟು ವೇ ಆಗಿ ಪ್ರೇಮಿಗಳು ಹಾರಾಡಿಕೊಂಡು ಇರುತ್ತಾರೆ. ಹೀಗಿರುವಾಗ ಪೊಲೀಸ್ ಅಧಿಕಾರಿ ರಾಜಶೇಖರ್(ಅಚ್ಯುತ್ ಕುಮಾರ್) ವೇಶ್ಯಾವಾಟಿಕೆ ದಂಧೆ ಪ್ರಕರಣದಲ್ಲಿ ಬ್ಯೂಟಿ ಪಾರ್ಲರ್ ಮೇಲೆ ರೈಡ್ ಮಾಡಿ ನಂದಿನಿ ಸೇರಿದಂತೆ ಓನರ್ ಸಹಿತ ಎಲ್ಲರನ್ನೂ ಬಂಧಿಸುತ್ತಾನೆ. ಇದು ಮಾಧ್ಯಮಗಳಲ್ಲಿ ಎಕ್ಸ್‌ ಕ್ಲೂಸಿವ್ ಸುದ್ದಿ ಸಹ ಆಗಿಬಿಡುತ್ತದೆ. ಮುಂದೇನಾಗುತ್ತದೆ ಎಂಬುದೇ ಕುತೂಹಲ. ಇದನ್ನ ಚಿತ್ರಮಂದಿರದಲ್ಲೇ ನೋಡಿ.


ಲಂಚ, ಮಾಧ್ಯಮ, ಪ್ರೀತಿ, ಮಿಸ್‌ಟೇಕ್‌

ಅಧಿಕಾರಿಗಳು ಲಂಚಕ್ಕಾಗಿ ಮಾಡುವ ಸಣ್ಣ ತಪ್ಪುಗಳಿಂದ ಆಗುವ ದೊಡ್ಡ ತಪ್ಪುಗಳು. ಮಾಧ್ಯಮಗಳಲ್ಲಿ ಅಪರಾಧ ಸುದ್ದಿಗಳ ವೈಭವೀಕರಣ ದಿಂದ ಆಗಬಹುದಾದ ಅನಾಹುತಗಳು, ಪ್ರೀತಿಯಲ್ಲಿ ಬಿದ್ದ 'ಬ್ಯೂಟಿಫುಲ್ ಮನಸ್ಸುಗಳು' ಮಿಸ್‌ಟೇಕ್‌ ಗಳಿಂದ ಹೇಗೆಲ್ಲಾ ಒಡೆದು ಹೋಗುತ್ತವೆ ಎಂಬ ಎಲ್ಲಾ ಅಂಶಗಳು ಚಿತ್ರದಲ್ಲಿವೆ.


ನಿನಾಸಂ ಸತೀಶ್ ಪಾತ್ರ ಹಿಂದಿನಂತೆಯೇ ಮುಂದುವರೆದಿದೆ

'ಲವ್ ಇನ್‌ ಮಂಡ್ಯ', 'ಲೂಸಿಯ' ಚಿತ್ರಗಳಲ್ಲಿ ಕಾಣಿಸಿಕೊಂಡಂತೆ ಹಿಂದಿನ ಸಿನಿಮಾಗಳ ಶೈಲಿಯಲ್ಲಿಯೇ ತಮ್ಮ ಡೈಲಾಗ್ ಡೆಲಿವರಿ ಮತ್ತು ಪಾತ್ರ ನಿರ್ವಹಣೆ ಎರಡರಲ್ಲೂ ಎಂದಿನಂತೆಯೇ ಅಭಿನಯ ಚುತುರ ಸತೀಶ್ ನಿನಾಸಂ ಪಾತ್ರ ಮುಂದುವರೆದಿದೆ. ಸೊಸೈಟಿಯಲ್ಲಿ ನಡೆಯುತ್ತಿರುವ ಪ್ರಸ್ತುತ ಘಟನೆ ಆಧಾರಿತ ಚಿತ್ರ ಆಗಿರುವುದರಿಂದ ನಾಯಕ ಒಬ್ಬನಿಗೆ ಹೆಚ್ಚು ಪ್ರಾಧಾನ್ಯತೆ ಕೊಟ್ಟಿಲ್ಲ ಎಂಬುದು ಕಂಡುಬಂದಿದೆ.ನಟಿ ಪಾತ್ರ ಹೇಗಿದೆ?

ನಗರವೊಂದರ ಮಧ್ಯಮ ವರ್ಗ ಕುಟುಂಬದ ಹೆಣ್ಣಾಗಿ ಶೃತಿ ಹರಿಹರನ್, 'ಕಾಸ್ಟ್ಯೂಮ್ ನಲ್ಲಿ, ಮೆಚ್ಯುರಿಟಿ ಗರ್ಲ್ ಆಗಿ, ಕುಟುಂಬದ ಜವಾಬ್ದಾರಿ ಹೊತ್ತ ಯುವತಿ ಆಗಿ, ಇನೋಸೆಂಟ್ ಮತ್ತು ತುಂಬಾ ಬ್ಯೂಟಿಫುಲ್ ಆಗಿ ತೆರೆ ಮೇಲೆ ಕಾಣಿಸಿಕೊಂಡಿದ್ದಾರೆ. ಅವರ ಪಾತ್ರಕ್ಕೆ ಫುಲ್ ಮಾರ್ಕ್ಸ್ ಕೊಡಬಹುದು.


ಇತರರು..

ತಬಲ ನಾಣಿ ಯವರು(ರಂಗಣ್ಣ) ಪಾತ್ರದಲ್ಲಿ ಬ್ಯೂಟಿಫುಲ್ ಮನಸ್ಸುಗಳು ಸಮಾಜದ ಎಲ್ಲಾ ಅಂಶಗಳ ಬಗ್ಗೆ ಹೇಗೆಲ್ಲಾ ಅಭಿಪ್ರಾಯಗಳನ್ನು ಹೊಂದಿರುತ್ತವೆ ಎಂಬುದನ್ನು ತಮ್ಮ ಡೈಲಾಗ್ ನಲ್ಲಿ ಹೇಳುವ ಮೂಲಕ ವಿಶೇಷ ಎನಿಸುತ್ತಾರೆ. ಅಚ್ಯುತ್ ಕುಮಾರ್ ಪೊಲೀಸ್ ಅಧಿಕಾರಿಯಾಗಿ, ಪ್ರಶಾಂತ್ ಸಿದ್ದಿ ನಟನ ಗೆಳೆಯನಾಗಿ, ಸಂದೀಪ್ ತಂಗಿಗೆ ಒಳ್ಳೆಯ ನಾಗಿ ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ.
ಟೆಕ್ನಿಕಲಿ 'ಬ್ಯೂಟಿಫುಲ್ ಮನಸ್ಸುಗಳು' ವೀಕ್

ಚಿತ್ರಕಥೆಗೆ ತಕ್ಕಂತೆ ಬೆಂಗಳೂರಿನಲ್ಲಿಯೇ ಹೆಚ್ಚಿನ ಚಿತ್ರೀಕರಣ ನಡೆದಿದ್ದರೂ ಸಹ, ಕ್ಯಾಮೆರಾ ವರ್ಕ್‌ ಮತ್ತು ಸಂಕಲನದಲ್ಲಿ ಎಡವಿದಂತೆ ಕಾಣುತ್ತದೆ. ಛಾಯಾಗ್ರಾಹಕ ಕಿರಣ್ ಹಂಪಾಪುರ ಹೆಚ್ಚು ಗಮನಹರಿಸಬೇಕಿತ್ತು.


ಯಾರೆಲ್ಲಾ ನೋಡಬಹುದಾದ ಚಿತ್ರ..

'ಬ್ಯೂಟಿಫುಲ್ ಮನಸ್ಸುಗಳು' ಬ್ಯೂಟಿಫುಲ್ ಆಗಿಯೇ ಇದ್ದು ಕ್ಲಾಸ್ ಮತ್ತು ಮಾಸ್ ಎಂಬ ಭೇದಭಾವ ಇಲ್ಲದೇ, ಕುಟುಂಬ ಸಮೇತ ಕೂತು ನೋಡಬಹುದಾದ ಸಿನಿಮಾ.


ಫೈನಲ್ ಸ್ಟೇಟ್ ಮೆಂಟ್

ಯಾವುದೋ ಖುಷಿಯಲ್ಲಿ ಎಲ್ಲರೂ ತಮ್ಮ ತಮ್ಮ ಅಭಿವೃದ್ದಿಗಾಗಿ (ವಿಶೇಷವಾಗಿ ಅಧಿಕಾರಿಗಳು ಲಂಚಕ್ಕಾಗಿ) ಅಜ್ಞಾನದಿಂದ ಮಾಡುವ ಹಲವು ಚಟುವಟಿಕೆಗಳಿಂದ ಆಗಬಹುದಾದ ಪರಿಣಾಮಗಳ ಮೇಲೆ ಬೆಳಕು ಚೆಲ್ಲುವ ಸಿನಿಮಾ 'ಬ್ಯೂಟಿಫುಲ್ ಮನಸ್ಸುಗಳು'. ಒಂದೊಳ್ಳೆ ಮೆಸೇಜ್ ಇರುವ ಈ ಸಿನಿಮಾವನ್ನು ಮುಕ್ತ ಮನಸ್ಸಿನಿಂದ ನೋಡಿ ಕನ್ನಡ ಸಿನಿಮಾಗಳನ್ನು ಪ್ರೋತ್ಸಾಹಿಸಿ..


English summary
Sathish Neenasam, Sruthi Hariharan Starrer Kannada Movie 'Beautiful Manassugalu' has hit the screens today (January 20th). Here is the complete review of 'Beautiful Manassugalu'

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada