»   » ಭಜರಂಗಿ ಟ್ವೀಟ್ ವಿಮರ್ಶೆ: ಜೈ ಭಜರಂಗಬಲಿ

ಭಜರಂಗಿ ಟ್ವೀಟ್ ವಿಮರ್ಶೆ: ಜೈ ಭಜರಂಗಬಲಿ

Posted By:
Subscribe to Filmibeat Kannada

ಹ್ಯಾಟಿಕ್ ಹೀರೋ ಶಿವರಾಜ್ ಕುಮಾರ್ ಚಿತ್ರವೊಂದಕ್ಕೆ ಇತ್ತೀಚಿನ ದಿನಗಳಲ್ಲಿ ಕಂಡು ಕೇಳರಿಯದ ಭಾರೀ ಓಪನಿಂಗ್ ಪಡೆದುಕೊಂಡಿರುವ ಚಿತ್ರ ಭಜರಂಗಿ. ಹರ್ಷ ನಿರ್ದೇಶನದ ಈ ಚಿತ್ರದಲ್ಲಿ ಶಿವಣ್ಣನಿಗೆ ನಾಯಕಿಯಾಗಿ ಐಂದ್ರಿತಾ ರೇ ಕಾಣಿಸಿ ಕೊಂಡಿದ್ದಾರೆ.

ಗೆಳೆಯ, ಬಿರುಗಾಳಿ, ಚಿಂಗಾರಿ ಚಿತ್ರದ ನಂತರ ಹರ್ಷ ನಿರ್ದೇಶಿಸುತ್ತಿರುವ ಈ ಚಿತ್ರ ಬಿಡುಗಡೆ ಮುನ್ನ ಭಾರೀ ಹೈಪ್ ಹುಟ್ಟು ಹಾಕಿತ್ತು. ಗಣಿನಾಡು ಬಳ್ಳಾರಿಯಲ್ಲಿ ಮಧ್ಯರಾತ್ರಿ ಎರಡು ಗಂಟೆಗೆ ಭಜರಂಗಿ ಮೊದಲ ಪ್ರದರ್ಶನ ಕಂಡಿದೆ. ಹೊಸಪೇಟೆ, ಉತ್ತರ ಕರ್ನಾಟಕದ ಭಾಗದಲ್ಲಿ ಚಿತ್ರಕ್ಕೆ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿದೆ. [ಚಿತ್ರರಂಗಕ್ಕೆ ಗುಡ್ ಬೈ ಹೇಳ್ತೀನಿ]

ಬೆಂಗಳೂರಿನ ತ್ರಿವೇಣಿ ಚಿತ್ರಮಂದಿರದಲ್ಲಿ ಬೆಳಗ್ಗೆ ಏಳು ಗಂಟೆಗೆ ಮೊದಲ ಪ್ರದರ್ಶನ ಆರಂಭವಾಗಿತ್ತು. ಬೆಂಗಳೂರು ನಗರದ ಮಲ್ಟಿ ಪ್ಲೆಕ್ಸ್ ಗಳಲ್ಲಿ ಭಜರಂಗಿ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಚಿತ್ರದ ಮೇಕಿಂಗ್, ಹರ್ಷ ನಿರ್ದೇಶನ, ಶಿವಣ್ಣ ಅಭಿನಯದ ಬಗ್ಗೆ ಮೆಚ್ಚುಗೆಯ ಮಾತು ವ್ಯಕ್ತವಾಗುತ್ತಿದೆ. (ಭಜರಂಗಿ ಚಿತ್ರದ ಗ್ಯಾಲರಿ)

ಟ್ವೀಟಿಗರು ಏನಂತಾರೆ? ಸ್ಲೈಡ್ ನೋಡಿ..

ಸಿನಿಲೋಕ

ಶಿವಣ್ಣ ಅಭಿಮಾನಿಗಳಿಗೆ ಹಬ್ಬ. Power packed commercial entertainer

ಶ್ಯಾಮ್ ಪ್ರಸಾದ್

ಭಜರಂಗಿ ಅತ್ಯುತ್ತಮ ಚಿತ್ರವೆಂದಿರುವ ಶ್ಯಾಮ್ ಪ್ರಸಾದ್ 3.5/5 ರೇಟಿಂಗ್ ನೀಡಿದ್ದಾರೆ.

ಶಶಿಪ್ರಸಾದ್

ಸ್ಯಾಂಡಲ್ ವುಡ್ ಅಭಿಮಾನಿಗಳು ನೋಡಲೇ ಬೇಕಾದ ಚಿತ್ರ 3/5

ಶಿವುಅಡ್ಡ

ಸೂಪರ್ ಚಿತ್ರ. ಎಲ್ಲಾ ಕಲಾವಿದರ ಉತ್ತಮ ನಟನೆ

ರಕ್ಷಿತ್ ಶೆಟ್ಟಿ

ಶಿವಣ್ಣ ಅಭಿಮಾನಿಗಳಿಗೆ ಹಬ್ಬವೋ ಹಬ್ಬ

English summary
Shivaraj Kumar starer Bhajarangi tweet review. Audience are happy with Bhajarangi
Please Wait while comments are loading...