'ಭೈರತಿ ರಣಗಲ್'ನ ಮತ್ತೊಂದು ಸಾಂಗ್ ರಿಲೀಸ್: ಸ್ಯಾಂಡಲ್‌ವುಡ್‌ಗೆ 'ಕಾವಲಿಗ'ನಾಗುತ್ತಾರಾ ಶಿವಣ್ಣ?
ಸೆಂಚುರಿ ಸ್ಟಾರ್ ಶಿವಣ್ಣ ನಟನೆಯ 'ಭೈರತಿ ರಣಗಲ್' ಸಿನಿಮಾಗಾಗಿ ಶಿವ ಸೈನ್ಯ ಕಾಯುತ್ತಿದೆ. 'ಮಫ್ತಿ' ಸಿನಿಮಾದ ಅವತಾರದಲ್ಲಿ ಮತ್ತೆ ಶಿವಣ್ಣನನ್ನು ನೋಡುವುದಕ್ಕೆ ಫ್ಯಾನ್ಸ್ ತುದಿಗಾಲಲ್ಲಿ ನಿಂತಿದ್ದಾರೆ. ಇದೇ ತಿಂಗಳು ಈ ಸಿನಿಮಾ ರಿಲೀಸ್ ಆಗಬೇಕಿತ್ತು. ಆದರೆ, ಧ್ರುವ ಸರ್ಜಾ 'ಮಾರ್ಟಿನ್' ತಮ್ಮ ಸಿನಿಮಾವನ್ನು ಒಂದು ತಿಂಗಳು ಮುಂದಕ್ಕೆ ಹಾಕಿದ್ದರು.
ಹಾಗಂತ ಶಿವಣ್ಣ ತಮ್ಮ ಅಭಿಮಾನಿಗಳಿಗೇನು ನಿರಾಸೆ ಮಾಡಿಲ್ಲ. ಮೋಸ್ಟ್ ಎಕ್ಸ್‌ಪೆಕ್ಟೆಡ್ 'ಭೈರತಿ ರಣಗಲ್' ಸಿನಿಮಾದ ಮತ್ತೊಂದು ಹಾಡನ್ನು ರಿಲೀಸ್ ಮಾಡಿದ್ದಾರೆ. ಇದೇ ಸಿನಿಮಾದ "ಕಾವಲಿಗ.." ಅನ್ನೋ ಹಾಡು ಈಗಾಗಲೇ ಹೊರಬಿದ್ದಿದ್ದರು. ಹಾಡು ಕೇಳಿ ಶಿವಣ್ಣ ಫ್ಯಾನ್ಸ್ ಅಷ್ಟೇ ಅಲ್ಲ, ಸಂಗೀತ ಪ್ರಿಯರು ಕೂಡ ದಿಲ್ ಖುಷ್ ಆಗಿದ್ದಾರೆ.

ನರ್ತನ್ ನಿರ್ದೇಶಿಸಿರುವ 'ಭೈರತಿ ರಣಗಲ್' ಸಿನಿಮಾ ಅವರೇ ನಿರ್ದೇಶಿಸಿದ 'ಮಫ್ತಿ' ಸಿನಿಮಾದ ಪ್ರೀಕ್ವೆಲ್. ಇಲ್ಲಿ ಶಿವಣ್ಣ ಪಾತ್ರವನ್ನು ದೃಷ್ಟಿಯಲ್ಲಿ ಇಟ್ಟಿಕೊಂಡು ಸಿನಿಮಾದ ಕಥೆಯನ್ನು ಹೆಣೆಯಲಾಗಿದೆ. ಈ ಕಾರಣಕ್ಕೆ ಭೈರತಿ ರಣಗಲ್ ಕಥೆಯನ್ನು ತೆರೆಮೇಲೆ ನೋಡುವುದಕ್ಕೆ ಕಾಯುತ್ತಿರುವಾಗಲೇ ಮತ್ತೊಂದು ಹಾಡು ರಿಲೀಸ್ ಆಗಿದೆ. ಈ ಹಾಡು ಭೈರತಿ ರಣಗಲ್ ಗುಣಗಾನ ಮಾಡುತ್ತಿದೆ.
ರವಿಬಸ್ರೂರು ಮ್ಯೂಸಿಕ್
'ಕೆಜಿಎಫ್', 'ಕೆಜಿಎಫ್ 2', 'ಸಲಾರ್' ಅಂತಹ ಆಕ್ಷನ್ ಸಿನಿಮಾಗಳಿಗೆ ಮ್ಯೂಸಿಕ್ ಕೊಟ್ಟಿರುವ ರವಿಬಸ್ರೂರು 'ಭೈರತಿ ರಣಗಲ್'ಗೂ ಟ್ಯೂನ್ ಹಾಕಿದ್ದಾರೆ. ಈ ಸಿನಿಮಾದಲ್ಲೂ ರವಿ ಬಸ್ರೂರು ಅವರ ಟಿಪಿಕಲ್ ಟ್ಯೂನ್ ಅನ್ನು ಕೇಳಬಹುದು. ಈ ಹಾಡು ಶಿವಣ್ಣನ ಪಾತ್ರದಂತೆ ಕಾಮ್ ಅಂಡ್ ಕಂಪೋಸಿಂಗ್ ಆಗಿದೆ. ಹಾಡು ಹೇಳಿದಾಗಲೂ ಅದೇ ಫೀಲಿಂಗ್ ಬರುತ್ತೆ.
ಸಾಹಿತ್ಯ ಹೈಲೈಟ್
'ಭೈರತಿ ರಣಗಲ್' ಸಿನಿಮಾದ "ಕಾವಲಿಗ.." ಹಾಡಿನ ಲಿರಿಕ್ಸ್ ಗಮನ ಸೆಳೆಯುತ್ತೆ. ಶಿವಣ್ಣ ಪಾತ್ರವನ್ನು ಹಾಡಿ ಹೊಗಳುವ ಸಾಹಿತ್ಯವಿದೆ. ಶಿವಣ್ಣ ವ್ಯಕ್ತಿತ್ವವನ್ನು ಇಟ್ಟುಕೊಂಡು ಹಾಡನ್ನು ಬರೆದಂತೆ ಇದೆ. ಒಳ್ಳೊಳ್ಳೆ ಸಾಲುಗಳನ್ನು ಸಾಯಿ ಸರವೇಶ್ ಬರೆದಿದ್ದಾರೆ. ರವಿಬಸ್ರೂರು ಟ್ಯೂನ್‌ಗೆ ತಕ್ಕಂತೆ ಸಿನಿಮಾ ಸಾಹಿತ್ಯ ಕೂಡ ಹಾಗೇ ಬ್ಲೆಂಡ್ ಆಗಿದೆ. ಈ ಕಾರಣಕ್ಕೆ ಸಿನಿಮಾದ ಹಾಡು ಇಷ್ಟ ಆಗುತ್ತೆ.

ವಿಜಯ್ ಪ್ರಕಾಶ್ ಧ್ವನಿ
ಒಂದ್ಕಡೆ ರವಿಬ್ರಸೂರು ಮ್ಯೂಸಿಕ್ ಆದರೆ, ಇನ್ನೊಂದು ಕಡೆ ಸಾಯಿ ಸರ್ವೇಶ್ ಅವರ ಸಾಹಿತ್ಯ. ಇವೆರಡರ ಜೊತೆಗೆ ವಿಜಯ್ ಪ್ರಕಾಶ್ ಅವರ ಧ್ವನಿ ಕೂಡ ಸಂಗೀತ ಪ್ರಿಯರನ್ನು ಸೆಳೆಯುತ್ತೆ. ಈಗಾಗಲೇ ಪಾತ್ರದ ಗುಣವನ್ನು ಹೇಳುವ ಹಾಡನ್ನು ವಿಜಯ್ ಪ್ರಕಾಶ್ ಈಗಾಗಲೇ ಹಾಡಿದ್ದಾರೆ. ಅಂತ ಹಾಡುಗಳ ಸಾಲಿಗೀಗ 'ಭೈರತಿ ರಣಗಲ್' ಸಿನಿಮಾದ "ಕಾವಲಿಗ.." ಕೂಡ ಸೇರಿಕೊಂಡಿದೆ.
ಮೇಕಿಂಗ್ ವಿಡಿಯೋ
ಈ ಹಾಡಿನಲ್ಲಿ ನರ್ತನ್ ಸಿನಿಮಾದ ಮೇಕಿಂಗ್ ಅನ್ನೂ ಸೇರಿಸಿದ್ದಾರೆ. ಶಿವಣ್ಣನ ಜೊತೆಗೆ ನಾಯಕಿ ರುಕ್ಷ್ಮಿಣಿ ವಸಂತ್ ಕೂಡ ಕಾಣಿಸಿಕೊಂಡಿದ್ದಾರೆ. ಜೊತೆ ಇನ್ನೂ ಕೆಲವು ಪ್ರಮುಖ ಪಾತ್ರಗಳನ್ನು ಈ ಮೇಕಿಂಗ್ ವಿಡಿಯೋದಲ್ಲಿ ರಿವೀಲ್ ಮಾಡಲಾಗಿದೆ. 'ಭೈರತಿ ರಣಗಲ್' ಸಿನಿಮಾ ಮುಂದಿನ ತಿಂಗಳು ನವೆಂಬರ್ 15ರಂದು ಕನ್ನಡ, ತೆಲುಗು, ತಮಿಳು ಸೇರಿದಂತೆ ಮೂರು ಭಾಷೆಗಳಲ್ಲಿ ರಿಲೀಸ್ ಆಗುತ್ತಿದೆ. ಈ ಸಿನಿಮಾದ ಹೊಸ ಹಾಡಂತೂ ಸಂಗೀತ ಪ್ರಿಯರಿಗೆ ಇಷ್ಟ ಆಗುತ್ತೆ. ಇದು ಕೇವಲ ಲಿರಿಕಲ್ ಸಾಂಗ್ ಆಗಿದ್ದು, ವಿಡಿಯೋ ಸಾಂಗ್ ಇನ್ನೂ ಹೊರಬೀಳಬೇಕಿದೆ. ಸಿನಿಮಾ ಬಿಡುಗಡೆ ವೇಳೆ ವಿಡಿಯೋ ಸಾಂಗ್ ಅನ್ನು ರಿಲೀಸ್ ಮಾಡಿದರೂ ಅಚ್ಚರಿಯಿಲ್ಲ.


Click it and Unblock the Notifications











