'ಜನ ನಾಯಗನ್' ಎದುರು ರಿಲೀಸ್ ಆಗುತ್ತಿರೋ 'ಪರಾಶಕ್ತಿ' ಮೊದಲ ವಿಮರ್ಶೆ ಏನು?

ದಳಪತಿ ವಿಜಯ್ ನಟನೆಯ ಕೊನೆಯ ಸಿನಿಮಾ 'ಜನ ನಾಯಗನ್' ಬಿಡುಗಡೆಯಾದ ಒಂದು ದಿನದ ಬಳಿಕ ಮತ್ತೊಂದು ತಮಿಳು ಸಿನಿಮಾ ರಿಲೀಸ್ ಆಗುತ್ತಿದೆ. ಅದುವೇ 'ಪರಾಶಕ್ತಿ'. ಈ ಸಿನಿಮಾ ಬಗ್ಗೆ ಈಗಾಗಲೇ ನಿರೀಕ್ಷೆಗಳು ಗರಿಗೆದರಿವೆ. ಶಿವಕಾರ್ತಿಕೇಯನ್ ನಟಿಸಿರುವ ಈ ಸಿನಿಮಾ ತಮಿಳು ನಾಡಿನಲ್ಲಿ ಸದ್ದು ಮಾಡುವ ಎಲ್ಲಾ ಸಾಧ್ಯತೆಗಳು ಇವೆ. ಅದಕ್ಕೆ ಕಾರಣ ಈಗಾಗಲೇ ಸಿನಿಮಾ ನೋಡಿರುವವರ ಅಭಿಪ್ರಾಯ.

ವಿಜಯ್ ಅಂತಹ ಸೂಪರ್‌ಸ್ಟಾರ್ ನಟಿಸಿರುವ ಸಿನಿಮಾದ ಎದುರು 'ಪರಾಶಕ್ತಿ' ರಿಲೀಸ್ ಮಾಡುವುದಕ್ಕೆ ನಿರ್ಧರಿಸಲಾಗಿದೆ. ಅಂದ್ಮೇಲೆ ಚಿತ್ರತಂಡ ಕಂಟೆಂಟ್ ಮೇಲೆ ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿರಬೇಕೆಂಬ ಚರ್ಚೆ ಕೂಡ ಚಿತ್ರರಂಗದಲ್ಲಿ ನಡೆಯುತ್ತಿದೆ. ತಮಿಳು ನಾಡಿನ ಬಹುತೇಕ ಸಿನಿ ಪ್ರಿಯರು ವಿಜಯ್ ಕೊನೆಯ ಸಿನಿಮಾ 'ಜನ ನಾಯಗನ್' ಕಡೆಗೆ ಮುಖ ಮಾಡಿರುವಾಗ 'ಪರಾಶಕ್ತಿ' ತಂಡ ಟಕ್ಕರ್ ಕೊಡುವುದಕ್ಕೆ ನಿರ್ಧರಿಸಿದ್ದಾರೆ.

Sivakarthikeyan  Jayam Ravi  Sreeleela starrer Parasakthi Movie First Review

'ಪರಾಶಕ್ತಿ' ಸಿನಿಮಾ ಸುಧಾ ಕೊಂಗರಾ ಆಕ್ಷನ್ ಕಟ್ ಹೇಳಿದ್ದಾರೆ. ಹೀಗಾಗಿ ಕಂಟೆಂಟ್ ಸಿಕ್ಕಾಪಟ್ಟೆ ಸ್ಟ್ರಾಂಗ್ ಆಗಿರುತ್ತೆ ಎಂದು ಸಿನಿಪ್ರಿಯರ ನಂಬಿಕೆ. ಅಂದ್ಹಾಗೆ ಈ ಸಿನಿಮಾ ಜನವರಿ 10ರಂದು ವಿಶ್ವದಾದ್ಯಂತ ತೆರೆಕಾಣುವುದಕ್ಕೆ ಸಜ್ಜಾಗಿ ನಿಂತಿದೆ. ಡಾನ್ ಪಿಕ್ಚರ್ಸ್ ಈ ಸಿನಿಮಾವನ್ನು ನಿರ್ಮಾಣ ಮಾಡಿದೆ. ಈ ಸಿನಿಮಾದಲ್ಲೂ ದೊಡ್ಡ ತಾರಾಗಣವೇ ಸೇರಿಕೊಂಡಿದೆ. ಹಾಗಿದ್ದರೆ, 'ಪರಾಶಕ್ತಿ'ಯ ಮೊದಲ ವಿಮರ್ಶೆ ಏನು ಹೇಳುತ್ತಿದೆ. ನೋಡೋಣ ಬನ್ನಿ.

ಈ ಸಿನಿಮಾದಲ್ಲಿ ಶಿವಕಾರ್ತಿಯೇನ್ ನಾಯಕನಾಗಿ ಪ್ರಮುಖ ಪಾತ್ರದಲ್ಲಿ ನಟಿಸಿದರೆ, ರವಿ ಮೋಹನ್, ಅಥರ್ವಾ, ಶ್ರೀಲೀಲಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಜಿ.ವಿ. ಪ್ರಕಾಶ್ ಕುಮಾರ್ ಸಂಗೀತ ನೀಡಿದ್ದು, ಇದು ನಟ ಶಿವಕಾರ್ತಿಕೇಯನ್ ಅವರ 25ನೇ ಹಾಗೂ ಜಿ.ವಿ. ಪ್ರಕಾಶ್ ಕುಮಾರ್ ಅವರ 100ನೇ ಸಂಗೀತ ನಿರ್ದೇಶನದ ಸಿನಿಮಾವಾಗಿದೆ.

'ಪರಾಶಕ್ತಿ' ಸಿನಿಮಾವನ್ನು ಆರಂಭದ ದಿನಗಳಲ್ಲಿ ಸೂರ್ಯ ನಟಿಸಬೇಕಿತ್ತು. ಹಾಗೇ ಕಥೆಯನ್ನು ಇಷ್ಟ ಪಟ್ಟು ಈ ಸಿನಿಮಾವನ್ನು ನಿರ್ಮಾಣ ಮಾಡುವುದಕ್ಕೆ ನಿರ್ಧರಿಸಿದ್ದರೂ, ಡೇಟ್ಸ್‌ ಹೊಂದಾಣಿಕೆ ಆಗದೇ ಇರುವುದರಿಂದ ಈ ಪ್ರಾಜೆಕ್ಟ್ ಅನ್ನು ಕೈ ಬಿಟ್ಟಿದ್ದರು. ಒಂದು ವೇಳೆ ಒಪ್ಪಿದಿದ್ದರೆ ಈ ಸಿನಿಮಾ ಸೂರ್ಯ ಪಾಲಾಗಿರುತ್ತಿತ್ತು. ಮತ್ತೊಂದು ಗಂಭೀರ ಕತೆಯುಳ್ಳ ಸಿನಿಮಾ ಸೂರ್ಯ ಬತ್ತಳಿಕೆಯಲ್ಲಿರುತ್ತಿತ್ತು.

ಇನ್ನು ಕಥೆಯ ಕಡೆಗೆ ಬರೋದಾರೆ, 1965ರ ತಮಿಳುನಾಡಿನ ಹಿಂದಿ ಹೇರಿಕೆ ವಿರೋಧಿಸಿ, ಭಾಷಾ ಚಳುವಳಿಯನ್ನು ಆಧರಿಸಿದ ಸಿನಿಮಾವೇ 'ಪರಶಕ್ತಿ'. ಇದು ಕೇವಲ ಕಂಟೆಂಡ್ ಓರಿಯೆಂಟೆಡ್ ಸಿನಿಮಾ ಅಷ್ಟೇ ಆಗಿರದೆ, ಕಮರ್ಶಿಯಲ್ ಯಶಸ್ಸು ಕಾಣುವ ಎಲ್ಲಾ ಎಲಿಮೆಂಟ್‌ಗಳನ್ನು ಇಲ್ಲಿ ಅಳವಡಿಸಲಾಗಿದೆ. ಸದ್ಯ ಭಾರತದಲ್ಲಿ ಈ ಸಿನಿಮಾದ ಸೆನ್ಸಾರ್ ಆಗಿಲ್ಲ ಎಂದು ಗೊತ್ತಾಗಲಿದೆ.

More from Filmibeat

Read more about: sreeleela review
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X