Bagheera Trailer;'ಬಘೀರ' ನಮ್ಮ ಕನ್ನಡದ ಸೂಪರ್ ಹೀರೋ ಬಗ್ಗೆ ನೆಟ್ಟಿಗರ ಕಾಮೆಂಟ್ ಏನು?
ರೋರಿಂಗ್ ಸ್ಟಾರ್ ಶ್ರೀಮುರಳಿ ಸಿನಿಮಾ ಹೆಚ್ಚು ಕಡಿಮೆ ಮೂರು ವರ್ಷಗಳ ಬಳಿಕ ರಿಲೀಸ್ ಆಗುತ್ತಿದೆ. ಇಷ್ಟು ದಿನ ಕಾದೂ ಕಾದು ಸುಸ್ತಾಗಿದ್ದ ಶ್ರೀಮುರಳಿ ಫ್ಯಾನ್ಸ್ ಮುಖಗಳಲ್ಲಿ ಖುಷಿ ಕಾಣುತ್ತಿದೆ. ಹೊಂಬಾಳೆ ಫಿಲ್ಮ್ಸ್ ನಿರ್ಮಿಸಿದ 'ಬಘೀರ' ಸಿನಿಮಾ ಕೊನೆಗೂ ರಿಲೀಸ್‌ಗೆ ರೆಡಿಯಾಗಿದೆ. ಇದೇ ದೀಪಾವಳಿ ಹಬ್ಬಕ್ಕೆ ಅಂದರೆ, ಅಕ್ಟೋಬರ್ 31ಕ್ಕೆ ಸಿನಿಮಾ ವಿಶ್ವದಾದ್ಯಂತ ಅದ್ಧೂರಿಯಾಗಿ ಬಿಡುಗಡೆಯಾಗುತ್ತಿದೆ.
ಲಕ್ಕಿ ಸಿನಿಮಾದ ನಿರ್ದೇಶಕ ಡಾ. ಸೂರಿ ಬಹಳ ದಿನಗಳ ಬಳಿಕ ಆಕ್ಷನ್ ಕಟ್ ಹೇಳಿರುವ ಸಿನಿಮಾ 'ಬಘೀರ'. ಕೆಲವು ದಿನಗಳ ಹಿಂದಷ್ಟೇ ಒಂದು ಹಾಡನ್ನು ರಿಲೀಸ್ ಮಾಡಲಾಗಿತ್ತು. ಈಗ ಬಹಳ ದಿನಗಳಿಂದ ಕಾಯುತ್ತಿದ್ದ ಫ್ಯಾನ್ಸ್‌ಗಾಗಿ ಟ್ರೈಲರ್ ಅನ್ನು ರಿಲೀಸ್ ಮಾಡಲಾಗಿದೆ. ಶ್ರೀಮುರಳಿ, ರುಕ್ಮಿಣಿ ವಸಂತ್, ಗರುಡಾ ರಾಮ್, ಸುಧಾರಾಣಿ, ಪ್ರಕಾಶ್ ರಾಜ್, ರಂಗಾಯಣ ರಘು ಪ್ರಮುಖ ಪಾತ್ರದಲ್ಲಿ ನಟಿಸಿರುವ ಈ ಸಿನಿಮಾ ಟ್ರೈಲರ್ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ.

ಇದೊಂದು ಸೂಪರ್ ಹೀರೋ ಸಿನಿಮಾ ಅನ್ನೋದನ್ನು 'ಬಘೀರ' ಟ್ರೈಲರ್ ನೋಡಿದರೆ ಗೊತ್ತಾಗುತ್ತೆ. ಶ್ರೀಮುರಳಿ ಎರಡು ಶೇಡ್‌ಗಳಲ್ಲಿ ಕಾಣಿಸಿಕೊಂಡಿದ್ದು, ಪ್ರಶಾಂತ್ ನೀಲ್ ಕಥೆ ಬರೆದಿದ್ದಾರೆ. ಅಜನೀಶ್ ಲೋಕನಾಥ್ ಮ್ಯೂಸಿಕ್ ಈ ಸಿನಿಮಾ ಹೈಲೈಟ್ ಎನಿಸುತ್ತಿದೆ. ಇನ್ನೂ 'ಬಘೀರ' ಟ್ರೈಲರ್ ನೋಡಿದವರು ಟ್ವಿಟರ್‌ನಲ್ಲಿ (X) ಏನು ಪ್ರತಿಕ್ರಿಯೆ ನೀಡುತ್ತಿದ್ದಾರೆ. ತಿಳಿಯಲು ಮುಂದೆ ಓದಿ.
ನಮ್ಮದೇ ಸೂಪರ್ ಹೀರೋ
"ಎಂತಹಾ ಅದ್ಭುತ ಟ್ರೈಲರ್! ಸೂಪರ್ ಆಗಿದೆ. ಒಟ್ಟಾರೆ ಕ್ವಾಲಿಟಿ ನೋಡಿ ನಿಜಕ್ಕೂ ಇಷ್ಟ ಆಗುತ್ತಿದೆ. ಆದರೆ, ಅಜನೀಶ್ ಲೋಕನಾಥ್ ಮ್ಯೂಸಿಕ್ ಅಂತೂ ಅದ್ಭುತವಾಗಿದೆ. ಹಾಗೇ ನಮ್ಮದೇ ಸೂಪರ್ ಹೀರೋ 'ಬಘೀರ' ಮಸ್ತ್ ಆಗಿದ್ದಾನೆ. ಬಘೀರ ಟ್ರೈಲರ್ ಹೀಗೆ ಅದ್ಭುತ. ಶ್ರೀಮುರಳಿ ಹೀಗೆ ಘರ್ಜಿಸುತ್ತಿರಿ" ಎಂದು ನೆಟ್ಟಿಗರೊಬ್ಬರು ಕಾಮೆಂಟ್ ಮಾಡಿದ್ದಾರೆ.
"ಭರಪೂರ ಆಕ್ಷನ್ ಇರುವ ಮಾಸ್ಟರ್ ಪೀಸ್"
"ಇದು ಆಕ್ಷನ್ ಟೈಮ್. ಬಘೀರ ಸಿನಿಮಾ ಟ್ರೈಲರ್ ಹೊರಬಿದ್ದಿದೆ. 'ಕೆಜಿಎಫ್' ಹಾಗೂ 'ಸಲಾರ್' ಸಿನಿಮಾದ ಹಿಂದಿರುವ ಹೊಂಬಾಳೆ ಫಿಲ್ಮ್ಸ್ ಹಾಗೂ ಪ್ರಶಾಂತ್ ನೀಲ್ ಈ ಕನಸಿಗೆ ಕಾರಣ ಕರ್ತರು. ಇದು ಇನ್ನೊಂದು ಭರಪೂರ ಆಕ್ಷನ್ ಇರುವ ಮಾಸ್ಟರ್ ಪೀಸ್. ಈ ಥ್ರಿಲ್ಲಿಂಗ್ ಅಡ್ವೆಂಚರ್‌ಗೆ ನೀವು ರೆಡಿಯಿದ್ದೀರಾ?" ಮತ್ತೊಬ್ಬ ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.
ಅಜ್ಜು ಭಾಯ್ ಮ್ಯೂಸಿಕ್ ಏನ್ ಗುರು?
"ಬಘೀರ ಟ್ರೈಲರ್ ಹೊರಬಿದ್ದಿದೆ. ಅಕ್ಟೋಬರ್ 31ಕ್ಕೆ ಘರ್ಜಿಸುವುದಕ್ಕೆ ರೆಡಿಯಾಗಿದೆ. ಬಘೀರನಾಗಿ ಶ್ರೀಮುರಳಿ ನಟಿಸಿದ್ದಾರೆ. ದೃಶ್ಯಗಳು ಉತ್ತುಂಗದಲ್ಲಿವೆ. ಅಜ್ಜು ಭಾಯ್ ಮ್ಯೂಸಿಕ್ ಏನ್ ಗುರು ಅದು ಫುಲ್ ಮಾಸ್ ಆಗಿದೆ. ರುಕ್ಮಿಣಿ ವಸಂತ್ ಕ್ಯೂಟ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಪ್ರಶಾಂತ್ ನೀಲ್ ಸ್ಟೋರಿ ಸಖತ್ ಆಗಿದೆ. ಅಗಸ್ತ್ಯ ಮತ್ತೆ ಬರುತ್ತಿದ್ದಾನೆ." ಎಂದು ಅಭಿಮಾನಿಯೊಬ್ಬರು ಕಾಮೆಂಟ್ ಮಾಡಿದ್ದಾರೆ.
"ಮ್ಯೂಸಿಕ್ ಸೌಂಡ್ ಮಾಡೋದು ಪಕ್ಕಾ"
"ಅಜನೀಶ್ ಲೋಕನಾಥ್ ಅವರೇ ಬಾಸ್ ಟ್ರೈಲರ್ ಓಎಸ್‌ಟಿ ರಿಲೀಸ್ ಮಾಡಿ ಆದಷ್ಟು ಬೇಗ. ಟ್ರೈಲರ್ ಅಲ್ಲಿರೋ ಬಿಜಿಎಂ ಒಬ್ಬ ವೀರನ ಅನುಭವವನ್ನು ಕೊಟ್ಟಿದೆ. ಮ್ಯೂಸಿಕ್ ಅಲ್ಲಿ ಈ ಸಿನಿಮಾ ಪಕ್ಕಾ ಸಿಕ್ಕಾಪಟ್ಟೆ ಸೌಂಡ್ ಮಾಡೋದು ಗ್ಯಾರಂಟಿ" ಎಂದು ಇನ್ನೊಬ್ಬರು ಕಾಮೆಂಟ್ ಮಾಡಿದ್ದಾರೆ.
"ಕಾಂತಾರ ಸಿನಿಮಾ ಬಳಿಕ ನಮ್ಮ ಮತ್ತೊಂದು ಅಂಡರ್ ಡಾಗ್ ಸಿನಿಮಾವನ್ನು ಲಾಂಚ್ ಮಾಡುವ ಸಮಯ. ಈ ಸಿನಿಮಾ ಕೂಡ ದೊಡ್ಡ ಮಟ್ಟಕ್ಕೆ ಸಕ್ಸಸ್ ಆಗುತ್ತೆ ಅನ್ನೋದು ನನ್ನ ನಂಬಿಕೆ. ಅಕ್ಟೋಬರ್ 31ಕ್ಕಾಗಿ ಕಾಯುತ್ತಿದ್ದೇನೆ." ಎಂದು ನೆಟ್ಟಿಗರೊಬ್ಬರು ಕಾಮೆಂಟ್ ಮಾಡಿದ್ದಾರೆ.


Click it and Unblock the Notifications










