Bagheera X Song Review: ರೋರಿಂಗ್ ಸ್ಟಾರ್ ರುಧಿರ ಧಾರಾ.. ಶ್ರೀಮುರಳಿ ಉಘೇ ಉಘೇ; ಹಾಡಿಗೆ ಹೇಗಿದೆ ರೆಸ್ಪಾನ್ಸ್?
ರೋರಿಂಗ್ ಸ್ಟಾರ್ ಶ್ರೀಮುರಳಿ ನಟನೆಯ 'ಬಘೀರ' ಸಿನಿಮಾ ಯಾವಾಗ ರಿಲೀಸ್ ಆಗುತ್ತೋ ಅಂತ ಪ್ಯಾನ್ಸ್ ಎದುರು ನೋಡುತ್ತಿದ್ದರು. ಹೆಚ್ಚು ಕಡಿಮೆ ಮೂರು ವರ್ಷಗಳಿಂದ ನಿರ್ಮಾಣ ಆಗುತ್ತಿದ್ದ ಈ ಸಿನಿಮಾ ಇದೇ ಅಕ್ಟೋಬರ್ 31ರಂದು ದೇಶಾದ್ಯಂತ ರಿಲೀಸ್ ಆಗುತ್ತಿದೆ. ಆರಂಭದಲ್ಲಿ ಇದನ್ನು ಪ್ಯಾನ್ ಇಂಡಿಯಾ ಸಿನಿಮಾ ಅಂತ ಬಿಂಬಿಸಲಾಗಿತ್ತು. ಆದ್ರೀಗ ಆಯ್ದ ಕೆಲವೇ ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ.
ಹೊಂಬಾಳೆ ಫಿಲ್ಮ್ಸ್ ನಿರ್ಮಾಣ ಮಾಡಿರುವುದರಿಂದ 'ಬಘೀರ' ಸಿನಿಮಾ ಬಗ್ಗೆ ನಿರೀಕ್ಷೆಗಳೇನು ಕಮ್ಮಿಯಿಲ್ಲ. ರಿಲೀಸ್‌ಗೆ ಇನ್ನೇನು 15 ದಿನಗಳು ಉಳಿದುಕೊಂಡಿವೆ. ಆದರೂ ಅಬ್ಬರದ ಪ್ರಚಾರ ಆರಂಭ ಆಗಿರಲಿಲ್ಲ. ಈಗ ಮೊದಲ ಹಾಡನ್ನು ರಿಲೀಸ್ ಮಾಡುವ ಮೂಲಕ ಪ್ರಚಾರವನ್ನು ಶುರುವಿಟ್ಟುಕೊಂಡಿದ್ದಾರೆ. ಇಂದು (ಅಕ್ಟೋಬರ್ 17) "ರುಧೀರ ಧಾರಾ.." ಅನ್ನೋ ಸಾಂಗ್ ಅನ್ನು ರಿಲೀಸ್ ಮಾಡಲಾಗಿದೆ.

'ಬಘೀರ' ಸಿನಿಮಾಗೆ ಅಜನೀಶ್ ಲೋಕನಾಥ್ ಟ್ಯೂನ್ ಹಾಕಿದ್ದಾರೆ. ಶ್ರೀಮುರಳಿಯ ಪಾತ್ರವನ್ನು ಝಲಕ್ ಅನ್ನು ಬಿಚ್ಚಿಟ್ಟಿರುವ ಈ ಹಾಡು ಸಂಗೀತ ಪ್ರಿಯರಿಗೆ ಕಿಕ್ ಕೊಡುತ್ತಿದೆ. ಈ ಸಿನಿಮಾದ ರುಧಿರ ಧಾರಾ ಹಾಡಿಗೆ ಅನಿರುದ್ಧ್ ಶಾಸ್ತ್ರಿ ಧ್ವನಿ ನೀಡಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ ನೀಡಿರುವ ಈ ಹಾಡು ಕನ್ನಡ ಹಾಗೂ ತೆಲುಗು ಎರಡೂ ಭಾಷೆಗಳಲ್ಲಿ ರಿಲೀಸ್ ಮಾಡಲಾಗಿದೆ. ಪ್ರಶಾಂತ್ ನೀಲ್ ಬರೆದಿರುವ ಕಥೆಗೆ ಡಾ.ಸೂರಿ ನಿರ್ದೇಶನ ಮಾಡಿದ್ದಾರೆ. ಸದ್ಯ 'ಬಘೀರ' ಸಿನಿಮಾದ ಮೊದಲ ಹಾಡನ್ನು ನೋಡಿ ಟ್ವಿಟರ್‌ನಲ್ಲಿ (ಎಕ್ಸ್) ಪ್ರೇಕ್ಷಕರು ಯಾವ ರೀತಿ ರೆಸ್ಪಾನ್ಸ್ ಮಾಡುತ್ತಿದ್ದಾರೆ ಅನ್ನೋದನ್ನು ತಿಳಿಯಲು ಮುಂದೆ ಓದಿ.
ಮತ್ತೆ ಮರಳಿದ ಶ್ರೀಮುರಳಿ
"ಬಘೀರ ಸಿನಿಮಾದ ಮೊದಲ ಹಾಡನ್ನು ಕೇಳಿದ ಬಳಿಕ ಸಿನಿಮಾದಲ್ಲಿ ಅದ್ಭುತ ಕಂಟೆಂಟ್ ಇದೆ ಅನಿಸುತ್ತಿದೆ. ಹಾಗೇ ಇದೊಂದು ಆಕ್ಷನ್ ಬ್ಲಾಕ್ ಬಸ್ಟರ್ ಆಗುತ್ತೆ. ಹಲವು ವರ್ಷಗಳ ಬಳಿಕ ಶ್ರೀಮುರಳಿ ಮತ್ತೆ ಮರಳಿರುವುದು ಖುಷಿಕೊಟ್ಟಿದೆ. ಫ್ಯಾನ್ ವಾರ್ ಅನ್ನು ಮರೆತು ಬಿಡಿ ಬಘೀರ ಸಿನಿಮಾಗೆ ಬೆಂಬಲ ಕೊಡಿ" ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.
ರುಧಿರ ಧಾರಾ.. ಉಘೇ ಉಘೇ
"ಯಾವಾಗ ಅಜನೀಶ್ ಲೋಕನಾಥ್ ಗಾಡ್ ಲೆವೆಲ್ ಮ್ಯೂಸಿಕ್‌ಗೆ ಎಂಟ್ರಿ ಕೊಡುತ್ತಾರೋ ಆಗ ಬರುತ್ತೆ, ರುಧಿರ ಧಾರಾ... ಉಘೇ ಉಘೇ ... ಮಾರ ಮಾರ" ಎಂದು ಬರೆದು ಸಿನಿಮಾಗಾಗಿ ಕಾಯುತ್ತಿರುವುದಾಗಿ ನೆಟ್ಟಿಗರೊಬ್ಬರು ಕಾಮೆಂಟ್ ಮಾಡಿದ್ದಾರೆ. ಮೊದಲ ಹಾಡು ಲಿರಿಕಲ್ ವಿಡಿಯೋ ಆಗಿದ್ದರೂ ಶ್ರೀಮುರಳಿ ಫ್ಯಾನ್ಸ್‌ಗೆ ಹಾಗೂ ಅಭಿಮಾನಿಗಳಿಗೆ ಸಖತ್ ಕಿಕ್ ಕೊಟ್ಟಿದೆ.
'ಬಘೀರ' ಸಾಂಗ್ ಆವರೇಜ್
"ಬಘೀರ ಸಿನಿಮಾದ ಹಾಡು ಆವರೇಜ್ ಆಗಿದೆ. ಪ್ರಶಾಂತ್ ನೀಲ್ ಈ ಸಿನಿಮಾದಲ್ಲಿ ಸೇರಿಕೊಂಡ ಬಳಿಕ ನಿರೀಕ್ಷೆ ಹೆಚ್ಚಿತ್ತು. ಅದ್ಭುತವಾದ ಹಾಡನ್ನು ಎಕ್ಸ್‌ಪೆಕ್ಟ್ ಮಾಡುತ್ತಿದ್ದೆವು." ಎಂದು ಇನ್ನೊಬ್ಬರು ಕಾಮೆಂಟ್ ಮಾಡಿದ್ದಾರೆ. ಲಿರಿಕಲ್ ಸಾಂಗ್ ಆಗಿದ್ದರಿಂದ 'ಬಘೀರ' ಮೊದಲ ಹಾಡು ಕೆಲವರಿಗೆ ಆವರೇಜ್ ಅಂತ ಅನಿಸಿದೆ. ಆದರೆ, ಸಿನಿಮಾದ ಕಥೆ ಡಿಮ್ಯಾಂಡ್ ಮಾಡಿದಂತೆ ಹಾಡನ್ನು ಕಂಪೋಸ್ ಮಾಡಿರುವ ಸಾಧ್ಯತೆಯಿದೆ.
ಭಸ್ಮ ಮಾಡೋ ಶಂಕರ
ರೋರಿಂಗ್ ಸ್ಟಾರ್ ಶ್ರೀಮುರಳಿ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ. ಹಾಗೇ ಪ್ರಶಾಂತ್ ನೀಲ್ ಸಿನಿಮಾಗಳನ್ನು ಇಷ್ಟ ಪಡುವವರು 'ಬಘೀರ' ಸಾಂಗ್ ಖುಷಿ ಕೊಟ್ಟಿದೆ. ಅದರಲ್ಲೂ ಕೆಲವರಿಗೆ ಸಿನಿಮಾದ ಲಿರಿಕಲ್ ಸಾಂಗ್ ಕಿಕ್ ಕೊಟ್ಟಿದೆ. "ಭಯವಿಟ್ರೆ ಭಯಂಕರ ಭಸ್ಮ ಮಾಡೋ ಶಂಕರ.. ರಾಮ ಗುಣಗಳಿರುವ ಇವನೇ ರಾವಣಾಸುರ.. ಆಲ್ ದಿ ಬೆಸ್ಟ್ ಶ್ರೀ ಮುರಳಿ ಸರ್" ಎಂದು ನೆಟ್ಟಿಗರು ಹೇಳಿದ್ದಾರೆ.
ಲಿರಿಕಲ್ ಸಾಂಗ್ ಅನ್ಸಲ್ಲ
"ಶ್ರೀಮುರಳಿ ನಟಿಸಿದ ಬಘೀರ ಮೊದಲ ಹಾಡಿನ ವಿಡಿಯೋ ಲಿರಿಕಲ್ ಸಾಂಗ್ ಅಂತ ಅನಿಸುವುದಿಲ್ಲ. ಈ ಎಲ್ಲಾ ಅನಿಮೇಷನ್ ನೋಡಿದರೆ, ವಿಡಿಯೋ ಹಾಡಿನಂತೆ ಭಾಸವಾಗುತ್ತೆ. ಇದು ಪ್ರಶಾಂತ್ ನೀಲ್ ಅವರ ಟ್ರೇಡ್ ಮಾರ್ಕ್. ಡಾರ್ಕ್ ಥೀಮ್ ಟಚ್ ಮಾಡಿದ್ದನ್ನು ನೋಡಬಹುದು." ಎಂದು ಕಾಮೆಂಟ್ ಮಾಡುತ್ತಿದ್ದಾರೆ.


Click it and Unblock the Notifications











