Mango Pachcha Review: ಕಿಚ್ಚನ ಹೆಸರು ಉಳಿಸಬಹುದೇ 'ಮ್ಯಾಂಗೋ ಪಚ್ಚ'? ಮಾರ್ಕ್ಸ್ ಎಷ್ಟು?

Rating:
3.0/5

ಕನ್ನಡ ಚಿತ್ರರಂಗದಲ್ಲಿ ಹೀರೋಗಳ ಕೊರತೆ ಕಾಡುತ್ತಿರೋದು ಇಂದಿನಿಂದ ಅಲ್ಲ. ಈಗಂತೂ ಹೊಸ ಹೀರೋಗಳಿಗಾಗಿ ಇಡೀ ಚಿತ್ರರಂಗವೇ ಕಾದು ಕೂರುವಂತಹ ಸ್ಥಿತಿ ನಿರ್ಮಾಣ ಆಗಿದೆ. ಇಂತಹ ಸಮಯದಲ್ಲೇ 'ಮ್ಯಾಂಗೋ ಪಚ್ಚ' ಸಿನಿಮಾ ಮೂಲಕ ಕಿಚ್ಚ ಸುದೀಪ್ ಅಕ್ಕನ ಮಗ ಸಂಚಿತ್ ಸಂಜೀವ್ ಸ್ಯಾಂಡಲ್‌ವುಡ್‌ಗೆ ಗ್ರ್ಯಾಂಡ್ ಎಂಟ್ರಿ ಕೊಟ್ಟಿದ್ದಾರೆ.

ಸುದೀಪ್‌ಗೆ ಆರಂಭದ ದಿನಗಳಲ್ಲಿ 'ಹುಚ್ಚ' ಸಿನಿಮಾ ಕಿಚ್ಚ ಎಂಬ ಬಿರುದು ಕೊಟ್ಟಂತೆ ಸಂಚಿತ್ ಸಂಜೀವ್‌ಗೆ 'ಪಚ್ಚ' ಎಂಬ ಹೆಸರು ತಂದು ಕೊಡುತ್ತಾ? ಕನ್ನಡ ಚಿತ್ರರಂಗದಲ್ಲಿ ಕಿಚ್ಚನಂತೆ ಸೂಪರ್‌ಸ್ಟಾರ್ ಆಗಿ ಮೆರೆಯಬಹುದಾ? ಈ ಪ್ರಶ್ನೆಗಳಿಗೆ ಉತ್ತರ ಹುಡುಕುತ್ತಿದ್ದ ಕಿಚ್ಚನ ಅಭಿಮಾನಿಗಳಿಗೆ ಇಂದು (ಜೂನ್ 5) ತೆರೆಕಂಡಿರೋ 'ಮ್ಯಾಂಗೋ ಪಚ್ಚ' ಸಿನಿಮಾ ಉತ್ತರ ಕೊಟ್ಟಿದೆ. ಹಾಗಿದ್ದರೆ 'ಮ್ಯಾಂಗೋ ಪಚ್ಚ' ಸಿನಿಮಾದ ಕಥೆ ಏನು? ಸಿನಿಮಾದ ಪ್ಲಸ್ ಏನು? ಮೈನಸ್ ಏನು? ತಿಳಿಯುವುದಕ್ಕೆ ಮುಂದೆ ಓದಿ.

Sudeep nephew Sanchith Sanjeev starrer Debut movie Mango Pachcha Review and Rating in Kannada

'ಪಚ್ಚ'ನ ಕಥೆಯೇನು?

'ಮ್ಯಾಂಗೋ ಪಚ್ಚ'ನ ಕಥೆ 2000ನೇ ಇಸವಿಯಲ್ಲಿ ತೆರೆದುಕೊಳ್ಳುತ್ತೆ. ಅಂದಿನ ಕಾಲ ಘಟ್ಟದಲ್ಲಿ ನಡೆದ ನೈಜ ಘಟನೆಗಳನ್ನು ಇಟ್ಟುಕೊಂಡು ಕಥೆಯನ್ನು ಹೆಣೆಯಲಾಗಿದೆ. ಪಚ್ಚ ಅಲಿಯಾಸ್ ಪ್ರಶಾಂತ ಸಾಮಾನ್ಯ ಕುಟುಂಬದ ಹುಡುಗ. ಹೀಗಾಗಿ ಹಣ ಸಂಪಾದನೆ ಮಾಡುವುದಕ್ಕೆ ಸಿಡಿ ಹಾಗೂ ಡಿವಿಡಿ ಅಂಗಡಿ ಇಟ್ಟುಕೊಂಡು ಜೀವನ ಸಾಗಿಸುತ್ತಿರುತ್ತಾನೆ. ಹೆಚ್ಚು ಹಣ ಸಂಪಾದನೆಗೆ ಸಿಡಿ ಅಂಗಡಿ ಜೊತೆ ಪೈರಸಿ ದಂಧೆಯನ್ನ ಮಾಡುತ್ತಿರುತ್ತಾನೆ. ಅದ್ಯಾವಾಗ ತಂದೆ ತೀರಿಕೊಳ್ಳುತ್ತಾರೋ ಅಲ್ಲಿಂದ ಪಚ್ಚನ ಬದುಕೇ ಬದಲಾಗಿ ಬಿಡುತ್ತೆ. ತಾನು ಪ್ರೀತಿಸಿದ ಹುಡುಗಿಯೊಂದಿಗೆ ಮದುವೆ ಆಗಬೇಕು ಅನ್ನುವಾಗಲೇ ಪಚ್ಚ ಮತ್ತು ಆತನ ಮಲ ಸಹೋದರ ನಾಗಪ್ಪ (ಮಯೂರ್ ಪಟೇಲ್) ಗಾಂಜಾ ಮತ್ತು ಮಾದಕ ವಸ್ತುಗಳ ದಂಧೆಗೆ ಇಳಿಯಬೇಕಾಗುತ್ತದೆ. ಇಲ್ಲಿಂದ ಸಾಮಾನ್ಯ ಹುಡುಗನೊಬ್ಬ ಮೈಸೂರಿನ ಅಂಡರ್‌ವರ್ಲ್ಡ್ ಮಾಫಿಯಾಗೆ ಎಂಟ್ರಿ ಕೊಡುತ್ತಾನೆ. ಅದೇ ಮುಂದೇನಾಗುತ್ತೆ ಅನ್ನೋದೇ ಕಥೆ.

ಪರ್ಫಾಮೆನ್ಸ್ ಹೇಗಿದೆ?

'ಪಚ್ಚ'ನಾಗಿ ಸಂಚಿತ್ ಸಂಜೀವ್ ಅಭಿನಯ ಪ್ರಾಮಿಸಿಂಗ್ ಆಗಿದೆ. ಕೆಲವು ದೃಶ್ಯಗಳಲ್ಲಿ ಕಿಚ್ಚನನ್ನೇ ಹೋಲುತ್ತಿದ್ದಾರಲ್ಲ ಅಂತನೂ ಅನಿಸದೆ ಇರುವುದಿಲ್ಲ. ಚೊಚ್ಚಲ ಸಿನಿಮಾದಲ್ಲಿಯೇ ಆಂಗ್ರಿ ಯಂಗ್ ಮ್ಯಾನ್ ಲುಕ್ ಕೊಟ್ಟಿದ್ದಾರೆ. ಮಾಸ್ ಪಾತ್ರಕ್ಕೆ ಬೇಕಾದ ಅಂಶಗಳನ್ನು ಕರಗತ ಮಾಡಿಕೊಂಡೇ ಎಂಟ್ರಿ ಕೊಟ್ಟಿದ್ದಾರೆ. ಆ್ಯಕ್ಷನ್ ಸೀನ್‌ಗಳಲ್ಲಂತೂ ಸಿಕ್ಕಾಪಟ್ಟೆ ಇಷ್ಟ ಆಗುತ್ತಾರೆ. ನಾಯಕಿ ಕಾಜಲ್ ಕುಂದರ್ ಅಭಿನಯಕ್ಕೆ ಜೈ ಎನ್ನಬಹುದು. ಪಚ್ಚನ ಮಲ ಸಹೋದರನಾಗಿ ಮಯೂರ್ ಪಟೇಲ್, ತಾಯಿಯಾಗಿ ಹರಿಣಿ ಶ್ರೀಕಾಂತ್ ಇಷ್ಟ ಆಗುತ್ತಾರೆ. ಉಳಿದಂತೆ ಪ್ರಶಾಂತ್ ಹಿರೇಮಠ್ ಪಾತ್ರ ಶಿಳ್ಳೆಗಳು ಬರುತ್ತವೆ.

Also Read
Mango Pachcha X Review ; ಸುದೀಪ್ ಕಾರ್ಬನ್ ಕಾಪಿಯಂತೆ ಸಂಚಿತ್ ಸಂಜೀವ್, ಹೆಂಗೈತೆ ಮ್ಯಾಂಗೋ ಪಚ್ಚಾ?ಇಲ್ಲಿದೆ ಪಬ್ಲಿಕ್ ರಿವ್ಯೂ
Mango Pachcha X Review ; ಸುದೀಪ್ ಕಾರ್ಬನ್ ಕಾಪಿಯಂತೆ ಸಂಚಿತ್ ಸಂಜೀವ್, ಹೆಂಗೈತೆ ಮ್ಯಾಂಗೋ ಪಚ್ಚಾ?ಇಲ್ಲಿದೆ ಪಬ್ಲಿಕ್ ರಿವ್ಯೂ

ಟೆಕ್ನಿಕಲಿ ಸಿನಿಮಾ ಹೇಗಿದೆ?

ನಿರ್ದೇಶಕ ವಿವೇಕ ಅವರ ಚೊಚ್ಚಲ ಸಿನಿಮಾವಿದು. ಹೀಗಿದ್ದರೂ, ಸಿನಿಮಾ ಅಚ್ಚು ಕಟ್ಟಾಗಿ ಬಂದಿದೆ. ಇನ್ನು ಕಲಾ ನಿರ್ದೇಶಕ ವಿಶ್ವಾಸ್ ಕಶ್ಯಪ್ ಅವರ ಕೈ ಚಳಕ ಮೆಚ್ಚುವಂತಿದೆ. 2000ನೇ ಇಸವಿಯ ಮೈಸೂರು, ಅಂದಿನ ಸಿಡಿ ಅಂಗಡಿಗಳು, ಹಳೆಯ ಕಾರು ಮತ್ತು ಬೈಕ್‌ಗಳು ನೈಜತೆಯನ್ನು ಕಾಪಾಡಿವೆ. ಇನ್ನು ಚರಣ್ ರಾಜ್ ಅವರ ಹಿನ್ನೆಲೆ ಸಂಗೀತ ಸಖತ್ ಆಗಿದೆ. ಶೇಖರ್ ಚಂದ್ರ ಕ್ಯಾಮರಾ ವರ್ಕ್ ಕೂಡ ಅಷ್ಟೇ ಚೆನ್ನಾಗಿದೆ.

Sudeep nephew Sanchith Sanjeev starrer Debut movie Mango Pachcha Review and Rating in Kannada

ಪ್ಲಸ್ ಪಾಯಿಂಟ್ ಏನು?

'ಮ್ಯಾಂಗೋ ಪಚ್ಚ' ಸಿನಿಮಾದ ಹೈಲೈಟ್ ಅಂದರೆ, ಅದು ಸಂಚಿತ್ ಸಂಜೀವ್ ನಟನೆ. ಬಳಿಕ ವಿಶ್ವಾಸ್ ಕಶ್ಯಪ್ ಅವರ ಆರ್ಟ್ ವರ್ಕ್. ಆನಂತರ ಮೈಸೂರಿನ ಅಂಡರ್‌ವರ್ಲ್ಡ್‌ಗೆ ಕಿಕ್ ಕೊಡುವ ಚರಣ್ ರಾಜ್ ಅವರ ಹಿನ್ನೆಲೆ ಸಂಗೀತ. ಮ್ಯಾಂಗೋ ಪಚ್ಚ ಸಿನಿಮಾ ಸಿನಿಮಾದ ಪ್ಲಾಸ್ ಪಾಯಿಂಟ್ ಎನ್ನಬಹುದು.

ಮೈನಸ್ ಪಾಯಿಂಟ್ಸ್

ವಿವೇಕ ಈ ಕಥೆಯ ಮೇಲೆ ಇನ್ನಷ್ಟು ಡಿಟೇಲಿಂಗ್ ಮಾಡಬೇಕಿತ್ತು. ಅಲ್ಲದೇ, ಸಿನಿಮಾದ ರನ್‌ಟೈಮ್ ಕೇವಲ 1 ಗಂಟೆ 35 ನಿಮಿಷ ಇರೋದ್ರಿಂದ ಪಟ ಪಟ ಅಂತ ಹೋಗುತ್ತಿದೆಯಲ್ಲ ಅಂತ ಅನಿಸುತ್ತೆ. ಹೀಗಾಗಿ ಲವ್ ಸ್ಟೋರಿ ಮತ್ತು ತಾಯಿಯ ಸೆಂಟಿಮೆಂಟ್‌ ಸೀನ್‌ಗಳಲ್ಲಿ ಭಾವನೆಗಳ ಆಳವಾಗಿ ಪರಿಣಾಮ ಬೀರುವುದಿಲ್ಲ. ನಾಯಕಿ ಕಾಜಲ್ ಕುಂದರ್ ಮತ್ತು ಉಗ್ರಂ ಮಂಜು ಪಾತ್ರಗಳನ್ನು ಎಫೆಕ್ಟಿವ್ ಆಗಿ ಬಳಸಿಕೊಳ್ಳುವಲ್ಲಿ ನಿರ್ದೇಶಕರು ಹಿಂದೆ ಬಿದ್ದಿದ್ದಾರೆ.

ಕೊನೆಯಲ್ಲಿ..

'ಮ್ಯಾಂಗೋ ಪಚ್ಚ' ಮಾಸ್ ಆ್ಯಕ್ಷನ್ ಹಿನ್ನೆಲೆಯುಳ್ಳ ಕ್ರೈಮ್ ಡ್ರಾಮಾ. ಸಿನಿಮಾ ಕೇವಲ ಒಂದೂವರೆ ಗಂಟೆಯದ್ದಾಗಿದ್ದರಿಂದ ಬೋರ್ ಹೊಡೆಯುವುದಿಲ್ಲ. ಹಾಗಂತ ದೊಡ್ಡ ಮಟ್ಟದ ನಿರೀಕ್ಷೆ ಇಟ್ಟುಕೊಳ್ಳಬೇಕಿಲ್ಲ. ಸಂಚಿತ್ ಸಂಜೀವ್ ತಮ್ಮ ಮೊದಲ ಚಿತ್ರದಲ್ಲೇ ಭರವಸೆ ಮೂಡಿಸುವ ಗೆದ್ದಿದ್ದಾರೆ. ಕಿಚ್ಚ ಇಮೇಜ್ ಅನ್ನು ಉಳಿಸುವಲ್ಲಿಯೂ ಯಶಸ್ವಿಯಾಗಿದ್ದಾರೆ.

English summary
Sudeep nephew Sanchith Sanjeev starrer Debut movie Mango Pachcha Review and Rating in Kannada.
Read more about: sudeep kannada movie review
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X