Amruthaanjan Review By Kirik Keerthi: ಬೆಳ್ಳಿ ಪರದೆ ಮೇಲೆ ಯೂಟ್ಯೂಬ್ ತಾರೆಯ ಕಾಮಿಡಿ ದರ್ಬಾರ್!

Rating:
4.0/5

2026 ಪ್ರತಿ ವರ್ಷದಂತೆ ಕನ್ನಡ ಚಿತ್ರರಂಗಕ್ಕೆ ಹೇಳಿಕೊಳ್ಳುವಂತಹ ಆರಂಭವೇನು ಸಿಕ್ಕಿಲ್ಲ. ಈ ತಿಂಗಳು ನಿರೀಕ್ಷೆ ಮಾಡಿದ್ದ ಎರಡು ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡಲಿಲ್ಲ. ಆದರೆ, ತಿಂಗಳ ಕೊನೆಯಲ್ಲಿ ಯೂಟ್ಯೂಬ್ ಸ್ಟಾರ್‌ಗಳ ಸಿನಿಮಾ 'ಅಮೃತ ಅಂಜನ್' ಸಿನಿಮಾ ಥಿಯೇಟರ್‌ಗೆ ಲಗ್ಗೆ ಇಲ್ಲಿದೆ. ಇಲ್ಲಿವರೆಗೂ ಯೂಟ್ಯೂನ್‌ಗಳಲ್ಲಿ ಶಾರ್ಟ್ ಫಿಲ್ಮ್ ಮಾಡುತ್ತಿದ್ದವರು ಸಿನಿಮಾ ಮಾಡಿದ್ದು, ಇವರ ಫಾಲೋವರ್ಸ್‌ಗೆ ಮನರಂಜನೆ ನೀಡುವುದಕ್ಕೆ ಹೊರಟಿದ್ದಾರೆ.

ಈಗಾಗಲೇ ಸುಧಾಕರ್ ಗೌಡ, ಪಾಯಲ್ ಚೆಂಗಪ್ಪ, ಗೌರವ್ ಶೆಟ್ಟಿ, ಶ್ರೀ ಭವ್ಯಾ, ಕಾರ್ತಿಕ್ ರುವಾರಿ, ಪಲ್ಲವಿ ಪರ್ವ ಯೂಟ್ಯೂಬ್‌ ಹಾಗೂ ಸೋಶಿಯಲ್ ಮೀಡಿಯಾಗಳಲ್ಲಿ ಸೂಪರ್‌ ಸ್ಟಾರ್‌ಗಳಾಗಿದ್ದಾರೆ. ಈಗ ಇದೇ ಜನಪ್ರಿಯತೆಯನ್ನು ಇಟ್ಟುಕೊಂಡು ಸಿನಿಮಾಗೂ ಎಂಟ್ರಿ ಕೊಟ್ಟಿದ್ದಾರೆ. ಯೂಟ್ಯೂನ್‌ನಲ್ಲಿ ಸಂಚಲನ ಸೃಷ್ಟಿಸಿರುವ ಈ ಸ್ಟಾರ್‌ಗಳ ಸಿನಿಮಾ ವೀಕ್ಷಿಸಿದ ಕಿರಿಕ್ ಕೀರ್ತಿ ಹೀಗಂತಾರೆ.

Sudhakar Gowda  Payal Chengappa  Gowrav Shetty movie Amruthaanjan review by Kirik Keerthi

"2025ರ ಮೋಸ್ಟ್ ಎಂಟರ್‌ಟೈನಿಂಗ್ ಕಾಮಿಡಿ ಅಂದರೆ 'ಸು ಫ್ರಮ್ ಸೋ'. ಇದನ್ನು ನಾನು ಮಾತ್ರ ಅಲ್ಲ. ಇಡೀ ಕರ್ನಾಟಕವೇ ಒಪ್ಪಿಕೊಂಡಿತು. ಈಗ 2026ರ ಆರಂಭದಲ್ಲಿಯೇ ಔಟ್ ಅಂಡ್ ಔಟ್ ಕಾಮಿಡಿ ಇರುವ ಸಿನಿಮಾವಿದು. ಥಿಯೇಟರ್‌ಲ್ಲಿ ಕೂತು ಮನಸಾರೆ ನಗಬಹುದಾದ ಸಿನಿಮಾ ಅಂದರೆ 'ಅಮೃತ ಅಂಜನ್'. ಒಂದು ಕಾಮಿಡಿ ಸೀರಿಸ್‌ ಅನ್ನು ಮಾಡಿದ್ದ ಟೀಂ ಒಂದು ಸಿನಿಮಾವನ್ನು ಹೇಗೆ ಮಾಡುತ್ತೆ ಎಂಬ ಕುತೂಹಲ ಮತ್ತು ಅನುಮಾನ ಎರಡೂ ಇತ್ತು. ಕಾಮಿಡಿಯನ್ನಷ್ಟೇ ಪ್ರಧಾನವಾಗಿ ಇಟ್ಟುಕೊಳ್ಳದೆ, ಸಂಬಂಧಗಳ ನಿಟ್ಟಿನಲ್ಲಿ ಸಿನಿಮಾ ತೋರಿಸಿಕೊಂಡು ಹೋಗಿದ್ದಾರೆ" ಎಂದು ಕಿರಿಕ್ ಕೀರ್ತಿ ಅಭಿಪ್ರಾಯ ಪಟ್ಟಿದ್ದಾರೆ. ಫಿಲ್ಮಿಬೀಟ್ ಕನ್ನಡಕ್ಕೆ ಈ ಸಿನಿಮಾ ಬಗ್ಗೆ ವಿಶೇಷವಾಗಿ ವಿಮರ್ಶೆ ಕೂಡ ಮಾಡಿದ್ದಾರೆ. ಸಿನಿಮಾ ಕಥೆ, ಪರ್ಫಾಮೆನ್ಸ್, ಪ್ಲಸ್-ಮೈನಸ್ ಜೊತೆ ರೇಟಿಂಗ್ ಕೂಡ ಕೊಟ್ಟಿದ್ದಾರೆ.

'ಅಮೃತ ಅಂಜನ್' ಕಥೆಯೇನು?

ಮಕ್ಕಳು ತಂದೆ-ತಾಯಿ ಮಾತನ್ನು ಕೇಳದೆ ಇದ್ದರೆ ಏನಾಗುತ್ತೆ? ಒಂದು ಪ್ರೀತಿಗೆ ತಂದೆ-ತಾಯಿಗೆ ಅವಮಾನ, ನೋವು ಆಗುವ ಹಾಗೆ ನಡೆದುಕೊಂಡರೆ ಆ ಪ್ರೀತಿ ಹೇಗೆ ಗಟ್ಟಿಯಾಗಿ ನಿಲ್ಲುವುದಿಲ್ಲ ಅನ್ನೋದನ್ನು ತೋರಿಸಿದ್ದಾರೆ. ಅಪ್ಪ-ಮಗನ ನಡುವಿನ ಸಂಬಂಧ ಎಷ್ಟು ಗಟ್ಟಿಯಾಗಿರುತ್ತೆ? ಮಗನಿಗೋಸ್ಕರ ಒಬ್ಬ ತಂದೆ ಏನೆಲ್ಲ ಮಾಡುತ್ತಾನೆ ಅನ್ನೋದನ್ನು ಸಿನಿಮಾದಲ್ಲಿ ತೋರಿಸಲಾಗಿದೆ. ಕಾಮಿಡಿ ಜೊತೆ ಎಮೋಷನ್‌ ಅನ್ನು ಕ್ಯಾರಿ ಮಾಡಿದ್ದಾರೆ.

Sudhakar Gowda  Payal Chengappa  Gowrav Shetty movie Amruthaanjan review by Kirik Keerthi

ಪರ್ಫಾಮೆನ್ಸ್ ಹೇಗಿದೆ?

ಸುಧಾಕರ್ ಗೌಡ ಹಾಗೂ ಪಾಯಲ್ ಚೆಂಗಪ್ಪ ಯೂಟ್ಯೂಬ್‌ ಆಕ್ಟಿಂಗ್‌ನಿಂದ ಹೊರಬಂದು ಸಿನಿಮಾದ ಆಕ್ಟಿಂಗ್‌ಗೆ ಹೇಗೆ ಬೇಕೋ ಅದನ್ನು ಕೊಟ್ಟಿದ್ದಾರೆ. ಕಾರ್ತಿಕ್ ರುವಾರಿ ಈ ಸಿನಿಮಾದ ಮತ್ತೊಂದು ಕೀ-ರೋಲ್. ಸುಧಾಕರ್ ಹಾಗೂ ಪಾಯಲ್ ಚೆಂಗಪ್ಪ ನಡುವೆ ಕಾರ್ತಿಕ್ ರುವಾರಿ ಪಾತ್ರ ತುಂಬಾನೇ ಚೆನ್ನಾಗಿ ವರ್ಕ್ ಆಗಿದೆ. ಇಡೀ ಸಿನಿಮಾ ಒಂದು ಟ್ರ್ಯಾಕ್‌ನಲ್ಲಿ ಹೋಗುತ್ತಿದ್ದಾಗ ಎಲ್ಲೋ ಬೋರ್ ಹೊಡೆಯುತ್ತಿದೆ ಎನಿಸಿದಾಗ ನಮ್ಮನ್ನು ಸಿಕ್ಕಾಪಟ್ಟೆ ನಗಿಸೋದು ಶ್ರೀಭವ್ಯಾ ಮತ್ತು ಗೌರವ್ ಶೆಟ್ಟಿ. ಇಡೀ ಥಿಯೇಟರ್ ಅನ್ನು ಹೊಟ್ಟೆ ಹುಣ್ಣಾಗಿಸುವಂತೆ ನಗಿಸೋದು ಈ ಎರಡು ಪಾತ್ರಗಳು. ಇವರಿಬ್ಬರೂ ಸಿನಿಮಾವನ್ನು ಜೀವಂತವಾಗಿ ಇರಿಸುತ್ತಾರೆ. ಹಾಗೇ ಪಲ್ಲವಿ ಪರ್ವ ಕೂಡ ಚಿಕ್ಕ ಪಾತ್ರವಾದರೂ ಗಮನ ಸೆಳೆಯುತ್ತಾರೆ.

ಟೆಕ್ನಿಕಲ್ ಹೈಲೈಟ್ ಏನು?

'ಅಮೃತ ಅಂಜನ್' ಸಿನಿಮಾವನ್ನು ನಿರ್ದೇಶನ ಮಾಡಿದ್ದು ಜ್ಯೋತಿರಾವ್ ಮೋಹಿತ್. ಪ್ರೇಕ್ಷಕರಿಗೆ ಏನು ಬೇಕು ಅನ್ನೋದನ್ನು ಅರ್ಥ ಮಾಡಿಕೊಂಡು ಸಿನಿಮ ಮಾಡಿದ್ದಾರೆ. ಸಿನಿಮಾದಲ್ಲಿ ಏನೋ ದೊಡ್ಡ ಮೆಸೇಜ್ ಕೊಡುವುದಕ್ಕೆ ಹೋಗಬೇಕು, ಸಿನಿಮಾವನ್ನು ಶುರು ಮಾಡಿದರೆ ಹೀಗೆ ಎಂಡ್ ಮಾಡಬೇಕು, ಸಿನಿಮಾ ಮುಗಿಸಿಕೊಂಡು ಹೋಗಬೇಕಾದರೆ ಸಮಾಧಾನದಿಂದ ಹೋಗಬೇಕು ಅನ್ನೋದನ್ನು ಗಮನದಲ್ಲಿಟ್ಟುಕೊಂಡು ನಿರ್ದೇಶಿಸಿದ್ದಾರೆ. ಹಿನ್ನಲೆ ಸಂಗೀತದಲ್ಲಿ ಹೊಸ ಪ್ರಯತ್ನ ಆಗಿದೆ. ಸೋಶಿಯಲ್ ಮೀಡಿಯಾ ಬಿಜಿಎಂ ಅನ್ನು ಥಿಯೇಟರ್‌ಗೆ ತಂದು ಅದರಲ್ಲಿ ಮೆಚ್ಚಿಸುವ ಕೆಲಸ ಮಾಡಿದ್ದಾರೆ.

ಪ್ಲಸ್ ಏನು?

ಈ ಸಿನಿಮಾದ ಪ್ಲಸ್ ಪಾಯಿಂಟ್ ಸಿನಿಮಾ ಕಾಮಿಡಿ. ಹಾಗೇ ಗೌರವ್ ಶೆಟ್ಟಿ ಹಾಗೂ ಶ್ರೀ ಭವ್ಯಾ ಅಂತ ಹೇಳಬಹುದು. ಸಿನಿಮಾ ಟ್ರ್ಯಾಕ್ ಜೊತೆಗೆ ಇವರ ಕಾಮಿಡಿ ಸೀನ್‌ಗಳು, ಅವರ ಮ್ಯಾನರಿಸಂ ಎಲ್ಲವೂ ಸಿನಿಮಾದ ಪ್ಲಸ್ ಪಾಯಿಂಟ್ ಆಗುತ್ತೆ.

ಮೈನಸ್ ಏನು?

'ಅಮೃತ ಅಂಜನ್' ಸಿನಿಮಾದ ಕ್ಲೈಮ್ಯಾಕ್ಸ್ ಅನ್ನು ಇನ್ನೂ ಸುಂದರ ಮಾಡಬಹುದಿತ್ತು. ಅದು ಬಿಟ್ಟರೆ, ಸಿನಿಮಾ ಕಥೆ, ಟೆಕ್ನಿಕಲ್ ವಿಷಯಗಳನ್ನು ಪಕ್ಕಕ್ಕೆ ಇಟ್ಟು ನೋಡಿದರೆ, ಪ್ರೇಕ್ಷಕರನ್ನು ಹೊಟ್ಟೆ ಹುಣ್ಣಾಗಿಸುವಂತೆ ನಗಿಸುತ್ತದೆ.

More from Filmibeat

English summary
Sudhakar Gowda, Payal Chengappa, Gowrav Shetty movie Amruthaanjan review by Kirik Keerthi;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X