Border X Review: 'ಬಾರ್ಡರ್ 2' ನೋಡಿ ಭಾವುಕರಾದ ನೆಟ್ಟಿಗರಿಂದ ಫುಲ್ ಮಾರ್ಕ್ಸ್.. ಏನಿದೆ ಹೈಲೈಟ್ಸ್?
ಬಾಲಿವುಡ್‌ನಲ್ಲಿ ದೇಶ ಭಕ್ತಿಯನ್ನು ಸಾರುವ ಮತ್ತೊಂದು ಸಿನಿಮಾ ರಿಲೀಸ್ ಆಗಿದೆ. ಅದುವೇ ಸನ್ನಿ ಡಿಯೋಲ್, ವರುಣ್ ಧವನ್, ದಿಲ್ಜಿತ್, ಅಹಾನ್ ಶೆಟ್ಟಿ ಪ್ರಮುಖ ಪಾತ್ರದಲ್ಲಿ ನಟಿಸಿರುವ 'ಬಾರ್ಡರ್ 2'. 1997ರಲ್ಲಿ ತೆರೆಕಂಡಿದ್ದ ಮೆಗಾ ಬ್ಲಾಕ್‌ಬಸ್ಟರ್ 'ಬಾರ್ಡರ್' ಸಿನಿಮಾದ ಸೀಕ್ವೆಲ್ ಇದು. ಈ ಸಿನಿಮಾ ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟಾಕಿ ಇಂದು (ಜನವರಿ 23) ವಿಶ್ವದಾದ್ಯಂತ ತೆರೆಕಂಡಿದೆ.
'ಬಾರ್ಡರ್ 2' ಸಿನಿಮಾವನ್ನು ಅನುರಾಗ್ ಸಿಂಗ್ ನಿರ್ದೇಶನ ಮಾಡಿದ್ದಾರೆ. ಇದು 1971ರ ಭಾರತ ಹಾಗೂ ಪಾಕಿಸ್ತಾನ್ ನಡುವಿನ ಯುದ್ಧದ ಹಿನ್ನೆಲೆಯನ್ನು ಇಟ್ಟುಕೊಂಡು ಕಥೆಯನ್ನು ಹೆಣೆಯಲಾಗಿದೆ. ಹೀಗಾಗಿ ಸಿನಿಮಾ ಭಾರತೀಯರ ಮನ ಗೆಲ್ಲುವುದು ನೂರಕ್ಕೆ ನೂರು ಪಕ್ಕಾ ಅಂತ ಟ್ರೇಡ್ ಎಕ್ಸ್‌ಪರ್ಟ್‌ಗಳು ಭವಿಷ್ಯ ನುಡಿದಿದ್ದಾರೆ.

ಸನ್ನಿ ಡಿಯೋಲ್, ವರುಣ್ ಧವನ್, ದಿಲ್ಜಿತ್, ಅಹಾನ್ ಶೆಟ್ಟಿ ಜೊತೆಗೆ ಮೋನಾ ಸಿಂಗ್, ಸೋನಮ್ ಬಾಜ್ವಾ, ಮೇಧಾ ರಾಣಾ, ಅನ್ಯಾ ಸಿಂಗ್ ಸೇರಿದಂತೆ ಹಲವು ಮಂದಿ ನಟಿಸಿದ್ದಾರೆ. ಈ ಸಿನಿಮಾ ಭಾರತೀಯರಲ್ಲಿ ಯೋಧರ ದೇಶಭಕ್ತಿ, ತ್ಯಾಗದ ಬೆಲೆಯನ್ನು ತೋರಿಸಲಿದೆ. ಈಗಾಗಲೇ 'ಬಾರ್ಡರ್ 2' ನೋಡಿದವರಿಂದ ಪ್ರತಿಕ್ರಿಯೆ ಹೇಗಿದೆ? ತಿಳಿಯುವುದಕ್ಕೆ ಮುಂದೆ ಓದಿ.
ಹೆಮ್ಮೆಯಿಂದ ಹೃದಯ ಹಿಂಡುತ್ತೆ.
"ಬಾರ್ಡರ್ 2.. ಔಟ್‌ಸ್ಟ್ಯಾಂಡಿಂಗ್ ಬ್ಲಾಕ್‌ಬಸ್ಟರ್. ಪವರ್, ದೇಶಭಕ್ತಿ, ಗೌರವವನ್ನು ಹೆಚ್ಚಿಸುತ್ತೆ. ಬಾರ್ಡರ್ 2 ಸಿನಿಮಾ ಹೆಮ್ಮೆಯಿಂದಲೇ ನಿಮ್ಮ ಹೃದಯವನ್ನು ಹಿಂಡುತ್ತೆ. ಈ ಸಿನಿಮಾ ದೇಶ ಹಾಗೂ ದೇಶವನ್ನು ಕಾಯುವ ಯೋಧರಿಗೆ ಗೌರವವನ್ನು ಸಲ್ಲಿಸುತ್ತೆ. ಎಲ್ಲೂ ನೋಡಬೇಕೆಂದು ಶಿಫಾರಸ್ಸು ಮಾಡುತ್ತೇನೆ." ಎಂದು ಪೇಜ್ ಒಂದು 5ಕ್ಕೆ 4.5 ರೇಟಿಂಗ್ ಕೊಟ್ಟಿದೆ.
ಎಂತಹ ಮಾಸ್ಟರ್ ಪೀಸ್
"ಬಾರ್ಡರ್ 2.. ಜೆಪಿ ದತ್ತ, ನಿಧಿ ದತ್ತ, ಅನುರಾಗ್ ಸಿಂಗ್ ನೀವೆಲ್ಲ ಸೇರಿ ಎಂತಹ ಮಾಸ್ಟರ್ ಪೀಸ್ ಅನ್ನು ಸೃಷ್ಟಿ ಮಾಡಿದ್ದೀರಿ. ಚಿತ್ರಮಂದಿರದಲ್ಲಿ ಕಣ್ಣೀರು ಬಂದು ಬಿಡ್ತು. ನಾನು ಫಸ್ಟ್ ಡೇ..ಫಸ್ಟ್ ಶೋ ನೋಡಿದೆ. ಇಡೀ ಚಿತ್ರಮಂದಿರ ಸಂದೇಸೆ ಆಥೆ ಹೇ ಹಾಡಿಗೆ ಕುಣಿಯುತ್ತಿತ್ತು. ಸೋನು ನಿಗಂ, ಅರಿಜಿತ್ ಸಿಂಗ್ ನೀವು ನಿಜಕ್ಕೂ ಜಾದು ಮಾಡಿಬಿಟ್ಟಿರಿ" ಎಂದು ನೆಟ್ಟಿಗರೊಬ್ಬರು ಬರೆದುಕೊಂಡಿದ್ದಾರೆ.
ಭೂಸೇನೆ, ನೌಕಾಸೇನೆ, ವಾಯು ಸೇನೆಗೆ ಅರ್ಪಣೆ
"ಬಾರ್ಡರ್ 2 ಸಿನಿಮಾ ಔಟ್ ಅಂಡ್ ಔಟ್ ಭೂಸೇನೆ, ನೌಕಾಸೇನೆ, ವಾಯು ಸೇನೆಗೆ ಅರ್ಪಿಸಲಾಗಿದೆ. ಸ್ಕ್ರೀನ್ ಪ್ಲೇ, ಡೈಲಾಗ್‌ಗಳು ಹಾಗೂ ಯುದ್ಧದ ಸನ್ನಿವೇಶಗಳು ಅದ್ಭುತವಾಗಿವೆ. ಎಲ್ಲರೂ ಅದ್ಭುತವಾದ ಆಕ್ಟಿಂಗ್ ಮಾಡಿದ್ದಾರೆ. ಸನ್ನಿ ಡಿಯೋಲ್ ಈ ಸಿನಿಮಾದ ಹೃದಯವಿದ್ದಂತೆ. ಎಲ್ಲರಿಗೂ ಆಜ್ಞೆಯನ್ನು ನೀಡುವ ಡೈಲಾಗ್‌ಗಳು ಕಿಕ್ ಕೊಡುತ್ತವೆ. ಎಲ್ಲರೂ ಈ ಸಿನಿಮಾವನ್ನು ನೋಡಲೇಬೇಕು" ಎಂದು ಇನ್ನೊಬ್ಬರು ಹೇಳಿದ್ದಾರೆ.
ಅತೀ ಪವರ್‌ಫುಲ್ ಸಿನಿಮಾ
"ಬಾರ್ಡರ್ 2 ಇದೊಂದು ಸಿನಿಮಾ ದೃಶ್ಯಕಾವ್ಯ. ಸಿನಿಮಾ ನೋಡುವಾಗ ರಕ್ತದೊತ್ತಡವನ್ನ ಹೆಚ್ಚಿಸುತ್ತೆ. ರಗಡ್ ಭಾವನೆಗಳು ಇವೆ. ಇದೊಂದು ದೇಶಭಕ್ತಿಯನ್ನು ಸಾರುವ ಮಾಸ್ಟರ್ ಕ್ಲಾಸ್ ಸಿನಿಮಾ. ನಮ್ಮ ದೇಶದ ಸೈನಿಕರು ಧೈರ್ಯವನ್ನು ಸಾರಿ ಹೇಳುವ ಸಿನಿಮಾ. ಈ ಸಿನಿಮಾದ ಪ್ರತಿಯೊಂದು ದೃಶ್ಯದಲ್ಲಿಯೂ ಸನ್ನಿ ಡಿಯೋಲ್ ತಮ್ಮ ಗಾಢ ಅಭಿನಯವನ್ನು ತೋರಿಸಿದ್ದಾರೆ.
ಸಿನಿಮಾ ನಿಜವಾಗಲೂ ಅದ್ಭುತವಾಗಿದೆ
"ಬಾರ್ಡರ್ 2 ಸಿನಿಮಾ ನೋಡಿದೆ. ಕೆಲವು ಕಡೆ ವಿಎಫ್‌ಎಕ್ಸ್ ಸಮಸ್ಯೆಯಿದೆ ಎನಿಸಿದರೂ, ಇದೊಂದು ಅದ್ಭುತ ಸಿನಿಮಾ ಎನ್ನಲಾಗಿದೆ. ಈ ಸಿನಿಮಾ ಸರಿಯಾದ ಭಾವನೆಗಳನ್ನು ವ್ಯಕ್ತಪಡಿಸುವುದರಿಂದ ಬಾಕ್ಸಾಫೀಸ್‌ನಲ್ಲಿ ಬ್ಲಾಕ್‌ಬಸ್ಟರ್ ಅಂತ ಸಾಬೀತಾಗುತ್ತೆ." ಇನ್ನೊಬ್ಬರು ಹೇಳಿದ್ದಾರೆ.


Click it and Unblock the Notifications











