'ವೆಟ್ಟೈಯಾನ್' ಟ್ರೇಲರ್ ಔಟ್; ರಜನಿಕಾಂತ್- ಅಮಿತಾಭ್ ಬಚ್ಚನ್ ಸಂಘರ್ಷವೇ ಹೈಲೈಟ್

ಸೂಪರ್‌ಸ್ಟಾರ್ ರಜನಿಕಾಂತ್ ಅನಾರೋಗ್ಯ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇನ್ನೂ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಮನೆಗೆ ಹೋಗಿಲ್ಲ. ಇಂತಹ ಸಮಯದಲ್ಲಿ 'ವೆಟ್ಟೈಯಾನ್' ಸಿನಿಮಾ ಟ್ರೇಲರ್ ರಿಲೀಸ್ ಆಗುತ್ತೋ ಇಲ್ಲವೋ ಅಂತ ಅಭಿಮಾನಿಗಳು ಗೊಂದಲಕ್ಕೀಡಲಾಗಿದ್ದರು. ಆದರೆ, ಮೊದಲೇ ಚಿತ್ರತಂಡ ಡೇಟ್ ಅನೌನ್ಸ್ ಮಾಡಿದಂತೆ ರಜನಿ ಸಿನಿಮಾ ಟ್ರೇಲರ್ ರಿಲೀಸ್ ಆಗಿದೆ.

ಲೈಕಾ ಪ್ರೊಡಕ್ಷನ್ಸ್‌ ಮಾಲೀಕ ಸುಭಾಸ್ಕರನ್ ನಿರ್ಮಾಣದ 'ವೆಟ್ಟೈಯಾನ್' ಸ್ಟಾರ್ ಕಾಸ್ಟ್‌ನಿಂದ ಕುತೂಹಲವನ್ನು ಹೆಚ್ಚಿಸಿತ್ತು. ಸೂಪರ್‌ಸ್ಟಾರ್ ರಜನಿಕಾಂತ್ ಜೊತೆ ಬಾಲಿವುಡ್ ಮೆಗಾಸ್ಟಾರ್ ಅಮಿತಾಭ್ ಬಚ್ಚನ್ ನಟಿಸುತ್ತಿರುವುದೇ ಸಿನಿಮಾದ ಪ್ಲಸ್ ಪಾಯಿಂಟ್. ಬಹಳ ದಿನಗಳ ಬಳಿಕ ಈ ಇಬ್ಬರು ಸೂಪರ್‌ಸ್ಟಾರ್‌ಗಳನ್ನು ಒಂದೇ ಸ್ಕ್ರೀನ್‌ನಲ್ಲಿ ನೋಡುವುದಕ್ಕೆ ಫ್ಯಾನ್ಸ್ ತುದಿಗಾಲಲ್ಲಿ ನಿಂತಿದ್ದರು. ಅದಕ್ಕೆ ತಕ್ಕಂತೆ ಚಿಕ್ಕದೊಂದು ಝಲಕ್ ಇಲ್ಲಿದೆ.

Super Star Rajinikanth Vettaiyan movie trailer review in Kannada

ರಜನಿಕಾಂತ್ ಈ ಸಿನಿಮಾದಲ್ಲಿ ಪೊಲೀಸ್ ಅಧಿಕಾರಿಯಾಗಿ ನಟಿಸುತ್ತಿದ್ದಾರೆ. ಅದೇ ಅಮಿತಾಭ್ ಬಚ್ಚನ್ ನ್ಯಾಯಾಧೀಶರಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಟ್ರೇಲರ್ ನೋಡಿದ್ದಾಗ 'ವೆಟ್ಟೈಯಾನ್' ಇಬ್ಬರು ಮಹಾನ್ ನಟರ ನಡುವಿನ ಸಂಘರ್ಷ ಅಂತ ಭಾಸವಾಗುತ್ತೆ. ಈ ಸಿನಿಮಾ ಪೊಲೀಸ್ ಹಾಗೂ ಕಾನೂನಿನ ನಡುವಿನ ಸಮರ ಇರಬಹುದಾ? ಅನ್ನೋದು ಅನುಮಾನ ಹುಟ್ಟುತ್ತೆ.

'ವೆಟ್ಟೈಯಾನ್' ಟ್ರೇಲರ್ ಹೇಗಿದೆ?

'ಜೈ ಭೀಮ್' ಅಂತ ಸಿನಿಮಾ ನಿರ್ದೇಶಿಸಿರುವ ಟಿ ಜೆ ಜ್ಞಾನವೇಲು ಆಕ್ಷನ್ ಕಟ್ ಹೇಳಿದ್ದಾರೆ. ಹೀಗಾಗಿ ಟ್ರೇಲರ್ ನೋಡಿದವರು ಇದು ರಜನಿಕಾಂತ್ ಸಿನಿಮಾನಾ? ಇಲ್ಲ ಜ್ಞಾನವೇಲು ಸಿನಿಮಾನಾ? ಅನ್ನೋ ಗೊಂದಲಕ್ಕೆ ಬೀಳುವುದು ನಿಜ. ಸೂಪರ್‌ಸ್ಟಾರ್ ರಜನಿಕಾಂತ್ ಸಿನಿಮಾ ಅಂದರೆ, ಸ್ಟೈಲಿಶ್ ಆಗಿರುತ್ತೆ. ಶಿಳ್ಳೆ ಹಾಡುವಂತಹ ಡೈಲಾಗ್ ಇರುತ್ತೆ. ಕಲ್ಪನೆಗೂ ಮೀರಿದ ಆಕ್ಷನ್ ಇರುತ್ತೆ. ಆದರೆ, 'ವೆಟ್ಟೈಯಾನ್' ಟ್ರೇಲರ್ ಸಾಧಾರಣ ಅಂತ ಅನಿಸುತ್ತೆ.

ಟ್ರೇಲರ್‌ನಲ್ಲಿ ಬಿಲ್ಡಪ್ ಇಲ್ಲ

'ವೆಟ್ಟೈಯಾನ್' ಸಿನಿಮಾ ಟ್ರೇಲರ್ ಕೊಂಚ ತಡವಾಗಿತ್ತು. ಇದು ಸೂಪರ್‌ಸ್ಟಾರ್ ಅಭಿಮಾನಿಗಳನ್ನು ಕೆರಳಿಸಿತ್ತು. ಕೊನೆಗೂ ಟ್ರೇಲರ್ ರಿಲೀಸ್ ಆಗುತ್ತಿದ್ದಂತೆ ಅವರಿಗೆ ನಿರಾಸೆ ಕಾದಿತ್ತು. ಯಾಕಂದ್ರೆ ಈ ಸಿನಿಮಾದ ಟ್ರೇಲರ್‌ನಲ್ಲಿ ರಜನಿಕಾಂತ್‌ಗೆ ಬಿಲ್ಡಪ್ ಇಲ್ಲ. ಟ್ರೇಲರ್ ತುಂಬಾನೇ ಸಾಧಾರಾಣ ಅಂತ ಅನಿಸುತ್ತಿದೆ. ಅನಿರುದ್ಧ್ ಮ್ಯೂಸಿಕ್ ಕೂಡ ಅಷ್ಟಕ್ಕಷ್ಟೇ. ಹಿನ್ನೆಲೆ ಸಂಗೀತ ಅಭಿಮಾನಿಗಳನ್ನು ಸಿನಿಮಾ ನೋಡುವಂತೆ ಕೆರಳಿಸಿಲ್ಲ.

Super Star Rajinikanth Vettaiyan movie trailer review in Kannada

ಟ್ರೇಲರ್‌ನಲ್ಲಿ ಏನಿದೆ?

ಮಹಿಳೆಯ ವಿರುದ್ಧ ಎಸಗಿದ ಅಪರಾಧಕ್ಕೆ ಕ್ರಮ ತೆಗೆದುಕೊಳ್ಳುವಂತೆ ಪೊಲೀಸರ ಮೇಲೆ ಒತ್ತಡ ಹಾಕಲಾಗುತ್ತಿದೆ. ಈ ವೇಳೆ ರಜನಿಕಾಂತ್ ಅವರೆಲ್ಲರನ್ನೂ ಮೂರು ದಿನದಲ್ಲಿ ಎನ್‌ಕೌಂಟರ್ ಮಾಡುತ್ತೇನೆಂದು ಎಂಟ್ರಿ ಕೊಡುತ್ತಾರೆ. ಇತ್ತ ಅನ್ಯಾಯದ ವಿರುದ್ಧ ನ್ಯಾಯ ಸಿಗಬೇಕು. ಆದರೆ, ಅನ್ಯಾಯದ ವಿರುದ್ಧ ಮತ್ತೊಂದು ಅನ್ಯಾಯ ಆಗಬಾರದು ಎಂದು ಅಮಿತಾಭ್ ಬಚ್ಚನ್ ಪಾಠ ಮಾಡುವ ದೃಶ್ಯವಿದೆ. ಇದು ರಜನಿಕಾಂತ್ ಹಾಗೂ ಅಮಿತಾಭ್ ಬಚ್ಚನ್ ನಡುವಿನ ಸಂಘರ್ಷಕ್ಕೆ ಮುನ್ನುಡಿ ಬರೆದಿದೆ. ಆದರೆ, ಕಾನ್ಪೆಪ್ಟ್ ಚೆನ್ನಾಗಿದ್ದರೂ, ಟ್ರೇಲರ್‌ನಲ್ಲಿ ತೋರಿಸಿದ ರೀತಿ ಎಫೆಕ್ಟಿವ್ ಆಗಿಲ್ಲ ಅಂತ ಅನಿಸುತ್ತೆ.

ಬಿಲ್ಡಪ್ ಇಲ್ಲದ ಸಿನಿಮಾ ನೋಡುತ್ತಾರಾ?

ಟ್ರೇಲರ್ ನೋಡಿದ ಮೇಲೆ 'ವೆಟ್ಟೈಯಾನ್' ಸಿನಿಮಾ ಯಾರದ್ದು ಅನ್ನುವ ಪ್ರಶ್ನೆ ಅಂತೂ ಮೂಡುತ್ತೆ. ನಿರ್ದೇಶಕ ಜ್ಞಾನವೇಲು ತನ್ನ ಸ್ಟೈಲ್‌ನಲ್ಲಿ ಸಿನಿಮಾ ಮಾಡಿರಬಹುದು ಎಂದು ಅನುಮಾನ ಹುಟ್ಟುತ್ತೆ. ಹೀಗಾಗಿ ಮೊದಲ ದಿನ ಸೂಪರ್‌ಸ್ಟಾರ್ ರಜನಿಕಾಂತ್ ಸಿನಿಮಾ ಅಂತ ಅಂದುಕೊಂಡು ಥಿಯೇಟರ್‌ಗೆ ಬರೋದು ಅನುಮಾನ. ಒಂದು ವೇಳೆ ಫಸ್ಟ್ ಡೇ ಫಸ್ಟ್ ಶೋ ಉತ್ತಮ ರೆಸ್ಪಾನ್ಸ್ ಸಿಕ್ಕರೆ, ಬಾಕ್ಸಾಫೀಸ್‌ನಲ್ಲಿ ಧೂಳೆಬ್ಬಿಸಬಹುದು. ಏನಕ್ಕೂ ಅಕ್ಟೋಬರ್ 10ರವರೆಗೂ ಕಾಯಲೇಬೇಕು. ಸದ್ಯ ಟ್ರೇಲರ್‌ಗೆ ಫ್ಯಾನ್ಸ್ ಇನ್ನೂ ಹೇಗೆ ಪ್ರತಿಕ್ರಿಯೆ ನೀಡುತ್ತಾರೆ ಅನ್ನೋ ಕುತೂಹಲವಿದೆ. ಒಟ್ನಲ್ಲಿ ರಜನಿ ವಿರೋಧಿಸುವವರೆಗೆ ಹಬ್ಬ ಅನ್ನಬಹುದು.

More from Filmibeat

English summary
Super Star Rajinikanth Vettaiyan movie trailer review in Kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X