Vettaiyan First Review:ರಜನಿ 'ವೆಟ್ಟೈಯಾನ್'ಗೆ ವಿಶ್ವದ ಮೊದಲ ವಿಮರ್ಶೆ; ಗೆದ್ದುಬಿಟ್ರಾ ಸೂಪರ್‌ಸ್ಟಾರ್?

ಸೂಪರ್‌ಸ್ಟಾರ್ ರಜನಿಕಾಂತ್ ಆರೋಗ್ಯದಲ್ಲಿ ಏರುಪೇರಾಗಿದ್ದು ಅಭಿಮಾನಿಗಳಲ್ಲಿ ಆತಂಕ ಮೂಡಿಸಿತ್ತು. 'ವೆಟ್ಟೈಯಾನ್' ಬಿಡುಗಡೆ ಹೊಸ್ತಿಲಲ್ಲೇ ರಜನಿ ಆರೋಗ್ಯ ಹದಗೆಟ್ಟಿದ್ದು ಸಿನಿಮಾ ಮೇಲೂ ಪರಿಣಾಮ ಬೀರಬಹುದು ಎಂದುಕೊಂಡಿದ್ದರು. ಸೂಪರ್‌ಸ್ಟಾರ್ ಗುಣಮುಖರಾಗಿ ಮನೆಗೆ ಮರಳಿದ್ದಾರೆ.

ರಜನಿ ಆಸ್ಪತ್ರೆಯಲ್ಲಿದ್ದಾಗಲೇ 'ವೆಟ್ಟೈಯಾನ್' ಸಿನಿಮಾ ಟ್ರೈಲರ್ ರಿಲೀಸ್ ಆಗಿತ್ತು. ಈ ಟ್ರೈಲರ್‌ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಇದು ರಜನಿ ಸಿನಿಮಾ ಇದ್ದಂತೆ ಇಲ್ಲ ಅನ್ನೋ ಅಭಿಪ್ರಾಯ ವ್ಯಕ್ತವಾಗಿತ್ತು. ಮತ್ತೆ ಕೆಲವರು ಇದು ರಜನಿಕಾಂತ್ ಸಿನಿಮಾ ಅಲ್ಲ. ನಿರ್ದೇಶಕ ಟಿ ಜೆ ಜ್ಞಾನವೇಲು ಸಿನಿಮಾ ಅಂತ ಅಭಿಪ್ರಾಯ ಪಟ್ಟಿದ್ದರು.

Superstar Rajinikanth Starrer Vettaiyan movie First Review by Anirudh Ravichander

ರಜನಿಕಾಂತ್ 170ನೇ ಸಿನಿಮಾ ಆಗಿದ್ದರಿಂದ ಪ್ರೇಕ್ಷಕರ ನಿರೀಕ್ಷೆ ದುಪ್ಪಟ್ಟು ಇದೆ. ಅಲ್ಲದೆ ದೊಡ್ಡ ಸ್ಟಾರ್ ಕಾಸ್ಟ್ ಸಿನಿಮಾದಲ್ಲಿದೆ. ಟ್ರೈಲರ್‌ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾದ ಬೆನ್ನಲ್ಲೇ ಮೊದಲ ವಿಮರ್ಶೆ ಹೊರಬಿದ್ದಿದೆ. ರಜನಿ 'ವೆಟ್ಟೈಯಾನ್' ನೋಡಿ ಗೆಲುವಿನ ಸೂಚನೆ ಕೊಟ್ಟಿದ್ದಾರೆ. ಅಷ್ಟಕ್ಕೂ ಮೊದಲ ವಿಮರ್ಶೆ ಮಾಡಿದ್ದು ಯಾರು? ಸಿನಿಮಾ ಬಗ್ಗೆ ಅವರು ಹೇಳಿದ್ದೇನು? ತಿಳಿಯಲು ಮುಂದೆ ಓದಿ.

'ವೆಟ್ಟೈಯಾನ್' ಸಿನಿಮಾದಲ್ಲಿ ರಜನಿಕಾಂತ್ ಜೊತೆಗೆ ಅಮಿತಾಭ್ ಬಚ್ಚನ್, ಫಹಾದ್ ಫಾಸಿಲ್, ರಾಣಾ ದಗ್ಗುಬಾಟಿ, ಮಂಜು ವಾರಿಯರ್, ರಿತಿಕಾ ಸಿಂಗ್ ಸೇರಿದಂತೆ ದೊಡ್ಡ ಸ್ಟಾರ್‌ಕಾಸ್ಟ್ ಈ ಸಿನಿಮಾದಲ್ಲಿದೆ. ಆದರೆ, ರಜನಿಕಾಂತ್ ಹಾಗೂ ಅಮಿತಾಭ್ ಬಚ್ಚನ್ ಮುಖಾ ಮುಖಿ ಈ ಸಿನಿಮಾ ಹೈಲೈಟ್ ಎನ್ನಲಾಗುತ್ತಿದೆ. ವಿಜಯದಶಮಿಗೆ ಇಬ್ಬರ ಸಮರ ತೆರೆಮೇಲೆ ಮೋಡಿ ಮಾಡುತ್ತೆ ಅನ್ನೋ ಭರವಸೆಯಲ್ಲಿ ಫ್ಯಾನ್ಸ್ ಇದ್ದಾರೆ.

ರಜನಿತ 'ವೆಟ್ಟೈಯಾನ್' ಈ ವರ್ಷದ ಮೋಸ್ಟ್ ಎಕ್ಸ್‌ಪೆಕ್ಟೆಡ್ ಸಿನಿಮಾ ಅನ್ನೋದರಲ್ಲಿ ಅನುಮಾನವಿಲ್ಲ. ಮೂರು ದಶಕಗಳಲ್ಲಿ ರಜನಿಕಾಂತ್ ಹಾಗೂ ಅಮಿತಾಭ್ ಬಚ್ಚನ್ ಮತ್ತೆ ಒಂದೇ ಸಿನಿಮಾದಲ್ಲಿ ನಟಿಸಿರುವುದು ಅಭಿಮಾನಿಗಳಿಗೆ ಕಿಕ್ ಕೊಟ್ಟಿದೆ. ಈ ಸಿನಿಮಾದಲ್ಲಿ ನಿವೃತ್ತ ಐಪಿಎಸ್ ಅಧಿಕಾರಿ ಅಜಿತ್ ಪಾತ್ರದಲ್ಲಿ ರಜನಿಕಾಂತ್ ನಟಿಸಿದ್ದಾರೆ. ಸಮಾಜದ ವ್ಯವಸ್ಥೆ ವಿರುದ್ಧ ಹೋರಾಡುವ ಪಾತ್ರದಲ್ಲಿ ರಜನಿ ಕಾಣಿಸಿಕೊಂಡಿದ್ದಾರೆ. ಇನ್ನು ಅಮಿತಾಭ್ ಬಚ್ಚನ್ ಸತ್ಯದೇವ್ ಪಾತ್ರದಲ್ಲಿ ನಟಿಸಿದ್ದಾರೆ.

ಟ್ರೈಲರ್ ನೋಡಿದರೆ, ಸಿನಿಮಾದಲ್ಲಿ ರಜನಿಕಾಂತ್ ಹಾಗೂ ಅಮಿತಾಭ್ ಬಚ್ಚನ್ ನಡುವಿನ ಸಮರ ಪ್ರೇಕ್ಷಕರಿಗೆ ಕಿಕ್ ಕೊಡುತ್ತೆ. ಅಲ್ಲದೆ, ಇದು ರಜನಿ ಸಿನಿಮಾ ಅನ್ನುವುದಕ್ಕಿಂತ ಹೆಚ್ಚಾಗಿ 'ಜೈ ಭೀಮ್' ಅಂತಹ ಸಿನಿಮಾ ನಿರ್ದೇಶಿಸಿದ್ದ ಟಿ ಜೆ ಜ್ಞಾನವೇಲ್ ಸಿನಿಮಾ ಅಂತ ಗೆಸ್ ಮಾಡುತ್ತಿದ್ದಾರೆ. ಈ ಗೊಂದಲಗಳ ಮಧ್ಯೆ ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್ ಮೊದಲ ವಿಮರ್ಶೆ ಬರೆದಿದ್ದಾರೆ.

ಅನಿರುದ್ಧ್ ರವಿಚಂದರ್ ತನ್ನ ಎಕ್ಸ್ ಖಾತೆಯಲ್ಲಿ 'ವೆಟ್ಟೈಯಾನ್' ಸಿನಿಮಾ ಬಗ್ಗೆ ಒಂದೇ ಒಂದು ಪದವನ್ನು ಬಳಸದೆ ವಿಮರ್ಶೆ ಬರೆದಿದ್ದಾರೆ. ಈ ಮೂಲಕ 'ವೆಟ್ಟೈಯಾನ್' ಗೆದ್ದಿದೆ ಎಂದು ಹೇಳಿಕೊಂಡಿದ್ದಾರೆ. ಇಮೋಜಿಗಳ ಮೂಲಕ 'ವೆಟ್ಟೈಯಾನ್' ವಿಮರ್ಶೆ ಬರೆದಿದ್ದಾರೆ. ಇದರಲ್ಲಿ ಆರೋ ಬೋರ್ಡ್, ಕ್ಲಾಪ್ ಬೋರ್ಡ್, ಚಪ್ಪಾಳೆ ಹಾಗೂ ಟ್ರೋಫಿಯನ್ನು ಇಟ್ಟು 'ವೆಟ್ಟೈಯಾನ್' ಬಗ್ಗೆ ತಮ್ಮದೇ ಸ್ಟೈಲ್‌ನಲ್ಲಿ ವಿಮರ್ಶೆ ಮಾಡಿದ್ದಾರೆ.

ತಮಿಳಿನ ಹಿರಿಯ ಪತ್ರಕರ್ತ ರಮೇಶ್ ಬಾಲ ಕೂಡ ಇದನ್ನು "ವಿಶ್ವದ ಮೊದಲ ವೆಟ್ಟೈಯಾನ್ ವಿಮರ್ಶೆ ಹೊರಬಿದ್ದಿದೆ" ಎಂದು ಎಕ್ಸ್‌ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ರಜನಿಕಾಂತ್ ಅನಾರೋಗ್ಯ ಹಿನ್ನೆಲೆ 'ವೆಟ್ಟೈಯಾನ್' ಪ್ರಚಾರದಲ್ಲಿ ಭಾಗವಹಿಸುವುದು ಅನುಮಾನ. ಟ್ರೈಲರ್ ರಜನಿ ಸ್ಟೈಲ್‌ನಲ್ಲಿ ಇಲ್ಲದೇ ಹೋದರೂ ಫ್ಯಾನ್ಸ್ ಕ್ರೇಜ್ ಮಾತ್ರ ಕಮ್ಮಿಯಾಗಿಲ್ಲ.

More from Filmibeat

English summary
Superstar Rajinikanth Starrer Vettaiyan movie First Review by Anirudh Ravichander:
Read more about: rajinikanth review filmibeat news
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X