Karuppu Movie Review: ಸೂರ್ಯ ಫ್ಯಾನ್ಸ್‌ಗೆ 'ಕರುಪ್ಪು' ಮಸ್ಟ್‌ವಾಚ್; ಉಳಿದವರಿಗೆ ಹುರುಳಿಲ್ಲದ ಕಥೆ!

Rating:
3.0/5

ತಮಿಳಿನಲ್ಲಿ ಈ ವಾರ ಸ್ಟಾರ್ ಸಿನಿಮಾ ರಿಲೀಸ್ ಆಗಿದೆ. ಅದುವೇ ಸೂರ್ಯ, ತ್ರಿಶಾ ಕೃಷ್ಣನ್ ನಟನೆಯ 'ಕರುಪ್ಪು'. ಬಿಡುಗಡೆ ಹೊಸ್ತಿಲಲ್ಲಿ ಫೈನಾನ್ಷಿಯಲ್ ಸಮಸ್ಯೆಗಳನ್ನು ಎದುರಿಸಿದ್ದ 'ಕರುಪ್ಪು' ಬಿಡುಗಡೆ ಆಗುವುದೇ ಅನುಮಾನ ಎಂದು ಹೇಳಲಾಗಿತ್ತು. ಕೊನೆಯ ಕ್ಷಣದಲ್ಲಿ ಸಿನಿಮಾ ರಿಲೀಸ್ ಆಗುತ್ತೋ ಇಲ್ಲವೋ ಅಂತ ಸೂರ್ಯ ಅಭಿಮಾನಿಗಳಲ್ಲಿ ಆತಂಕ ಮನೆ ಮಾಡಿತ್ತು. ಆದರೂ, ಹರಸಾಹಸ ಮಾಡಿ ಸಿನಿಮಾವನ್ನು ಬಿಡುಗಡೆ ಮಾಡಲಾಗಿದೆ.

ಇತ್ತೀಚೆಗೆ ಸೂರ್ಯ ಆಯ್ಕೆ ಮಾಡಿಕೊಳ್ಳುವ ಸಿನಿಮಾಗಳಲ್ಲಿ ಕೇವಲ ಮಾಸ್ ಎಲಿಮೆಂಟ್ಸ್ ಅಷ್ಟೇ ಇರುವುದಿಲ್ಲ. ಕಥೆಯಲ್ಲೊಂದು ತೂಕವಿರುತ್ತೆ. ತಮಿಳಿನ ರೆಗ್ಯೂಲರ್ ಮಾಸ್ ಹೀರೋಗಳಿಗಿಂತ ವಿಭಿನ್ನವಾಗಿ ನಿಲ್ಲುವ ಸೂರ್ಯ 'ಕರುಪ್ಪು' ಮೂಲಕ ಏನು ಹೇಳುವುದಕ್ಕೆ ಹೊರಟಿದ್ದಾರೆ ಅನ್ನೋದನ್ನು ಫ್ಯಾನ್ಸ್ ಎದುರು ನೋಡುತ್ತಿದ್ದರು. ಇನ್ನೊಂದು ಕಡೆ ಒಂದರ ಹಿಂದೊಂದು ಸೋಲುಗಳನ್ನು ಕಂಡಿರೋ ಸೂರ್ಯಗೆ ಇದು ಗೆಲ್ಲಲೇ ಬೇಕಾದ ಅನಿವಾರ್ಯತೆಯಿದೆ.

Suriya  Trisha Krishnan starrer Karuppu Movie Review and Rating in Kannada

ತಮಿಳು ಚಿತ್ರರಂಗದ ಸಿಂಗಂ ಈ ಬಾರಿಯಾದರೂ ಗೆಲ್ಲುತ್ತಾರಾ? ಮತ್ತೆ ಸೂರ್ಯ ಹಾಗೂ ತ್ರಿಶಾ ಕೃಷ್ಣನ್ ಕಾಂಬಿನೇಷನ್ ವರ್ಕ್ ಆಗುತ್ತಾ? ಆರ್‌ಜೆ ಬಾಲಾಜಿ ನಿರ್ದೇಶನ ಮ್ಯಾಜಿಕ್ ಮಾಡುತ್ತಾ? 'ಕರುಪ್ಪು' ಸಿನಿಮಾದ ಪ್ಲಸ್ ಪಾಯಿಂಟ್ ಏನು? ಮೈನಸ್ ಪಾಯಿಂಟ್ ಏನು? ತಿಳಿಯುವುದಕ್ಕೆ ಮುಂದೆ ಓದಿ.

'ಕರುಪ್ಪು' ಕಥೆಯೇನು?

ರಾಬರಿ ಕೇಸ್‌ನಿಂದ ಸಿನಿಮಾ ಆರಂಭ ಆಗುತ್ತೆ. ನಿಧಾನವಾಗಿ ಕಥೆ ಭ್ರಷ್ಟಾಚಾರ ಹಾಗೂ ಪೊಲೀಸ್ ವ್ಯವಸ್ಥೆಯ ಮೇಲೆ ಬೆಳಕು ಚೆಲ್ಲುತ್ತಾ ಹೋಗುತ್ತೆ. ಈ ಸಿನಿಮಾದ ಕೇಂದ್ರ ಬಿಂದು ವೆಟ್ಟೈ ಕರುಪ್ಪು. ಈ ದೈವದ ಸುತ್ತ ಕಥೆ ಸುತ್ತುತ್ತೆ. ವಕೀಲ ಬೇಬಿ ಕಣ್ಣನ್ (ಆರ್.ಜೆ. ಬಾಲಾಜಿ) ಕೋರ್ಟ್‌ನ ಆವರಣವನ್ನು ತನ್ನ ಕಪಿಮುಷ್ಠಿಯಲ್ಲಿ ಇಟ್ಟುಕೊಂಡಿರುತ್ತಾನೆ. ಇಲ್ಲಿ ಜನರು ನ್ಯಾಯಕ್ಕಾಗಿ ಕರುಪ್ಪನ ಮೊರೆ ಹೋಗುತ್ತಾರೆ. ತನ್ನ ಕಣ್ಣಿನ ಎದುರು ನಡೆಯುತ್ತಿರುವ ಅನ್ಯಾಯವನ್ನು ಸಹಿಸದ ವೆಟ್ಟೈ ಕರುಪ್ಪು ದೈವವೇ ವಕೀಲ ಸರವಣನೆಂಬ ಮನುಷ್ಯನ ರೂಪ ತಾಳಿ ನ್ಯಾಯ ವದಗಿಸುತ್ತಾನೆ. ಈ ಸರವಣನ ಪಾತ್ರದಲ್ಲಿ ಸೂರ್ಯ ನಟಿಸಿದ್ದಾರೆ.

ಪ್ಲಸ್‌ ಪಾಯಿಂಟ್ ಏನು?

'ಕರುಪ್ಪು' ಸಿನಿಮಾ ಮೊದಲ ಪ್ಲಸ್‌ ಪಾಯಿಂಟ್ ಅಂದರೆ ಸೂರ್ಯ. ಸೂರ್ಯ ಕೇವಲ ನಟನಾಗಿ ಕಾಣಿಸಿಕೊಳ್ಳದೇ, ತನ್ನ ಪಾತ್ರದಲ್ಲಿ ಪರಕಾಯ ಪ್ರವೇಶ ಮಾಡಿದ್ದಾರೆ. ತನ್ನ ಭುಜದ ಮೇಲೆ ಇಡೀ ಸಿನಿಮಾವನ್ನು ತೆಗೆದುಕೊಂಡು ಹೋಗಿದ್ದಾರೆ. ಅನ್ಯಾಯದ ವಿರುದ್ಧ ಹೋರಾಡುವ ದೃಶ್ಯವಿರಲಿ, ಭಾವನಾತ್ಮಕ ಸನ್ನಿವೇಶವೇ ಇರಲಿ ಸೂರ್ಯ ಭೇಷ್ ಎನಿಸಿಕೊಳ್ಳುತ್ತಾರೆ. ತ್ರಿಶಾ ಪಾತ್ರ ಕೂಡ ಗಮನ ಸೆಳೆಯುತ್ತೆ. ಇಬ್ಬರ ಸ್ಕ್ರೀನ್‌ ಮೇಲೆ ಇದ್ದರೆ, ಪ್ರೇಕ್ಷಕರಿಗೆ ಹಬ್ಬ ಗ್ಯಾರಂಟಿ.

Suriya  Trisha Krishnan starrer Karuppu Movie Review and Rating in Kannada

ಮೈನಸ್ ಪಾಯಿಂಟ್ ಏನು?

ಸೂರ್ಯ ನಟನೆ ಸಿನಿಮಾದ ಪ್ಲಸ್ ಪಾಯಿಂಟ್ ಆಗಿದ್ದರೂ, ಸಿನಿಮಾದ ಕಥೆ ಹಾಗೂ ಚಿತ್ರಕಥೆಯಲ್ಲಿ ಹೊಸತನವೇನು ಇಲ್ಲ. ಆರ್‌ಜೆ ಬಾಲಾಜಿ ಸ್ಕ್ರೀನ್‌ಪ್ಲೇ ಹೆಣೆಯುವಲ್ಲಿ ಸೋತಿದ್ದಾರೆ. ಹಳೆ ಕಥೆಗೆ ತೇಪೆ ಹಚ್ಚಿ ನೀಡದಂತೆ ಇದೆ. ಸೂರ್ಯ ಅಂತ ಸ್ಟಾರ್‌ ನಟನನ್ನು ಇಟ್ಟುಕೊಂಡು ಅದ್ಭುತ ಸಿನಿಮಾವನ್ನು ನೀಡಬಹುದಾಗಿತ್ತು. ಅದರಲ್ಲಿ ನಿರ್ದೇಶಕ ಆರ್‌ಜೆ ಬಾಲಾಜಿ ಸೋತಿದ್ದಾರೆ. ನಿಧಾನಗತಿಯ ನಿರೂಪಣೆ, ಅನಗತ್ಯ ದೃಶ್ಯಗಳು ಸಿನಿಮಾದ ಮೈನಸ್ ಪಾಯಿಂಟ್.

ಏನಿವಾಗ?

'ಕರುಪ್ಪು' ಹಿನ್ನೆಲೆ ಸಂಗೀತ ಚೆನ್ನಾಗಿದೆ. ಆದರೆ, ಹಾಡುಗಳು ಮಾತ್ರ ಕಿಕ್ ಕೊಡುವುದಿಲ್ಲ. ಕ್ಯಾಮರಾ ವರ್ಕ್ ಅಚ್ಚುಕಟ್ಟಾಗಿದೆ. ಸೂರ್ಯ ಈ ಸಿನಿಮಾದಲ್ಲಿ ಅದ್ಭುತ ಪರ್ಫಾಮೆನ್ಸ್ ನೀಡಿದ್ದಾರೆ. ಅವರಿಗಾಗಿ ಈ ಸಿನಿಮಾವನ್ನು ಒಮ್ಮೆ ನೋಡಬಹುದು. ಒಂದೊಳ್ಳೆ ಕಥೆ ಹಾಗೂ ಚಿತ್ರಕಥೆ ಇದ್ದಿದ್ದರೆ, 'ಕರುಪ್ಪು' ಈ ವರ್ಷ ಸೂಪರ್‌ಹಿಟ್ ಸಿನಿಮಾಗಳ ಲಿಸ್ಟ್‌ ಸೇರುತ್ತಿತ್ತು. ಹೀಗಾಗಿ ಸೂರ್ಯನ ಫ್ಯಾನ್ಸ್‌ಗೆ ಮಸ್ಟ್‌ವಾಚ್.. ಆದರೆ, ಉಳಿದವರಿಗೆ ಆವರೇಜ್.

English summary
Suriya, Trisha Krishnan starrer Karuppu Movie Review and Rating in Kannada.
Read more about: suriya trisha movie review
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X