Lust Stories 2 Twitter Review: "ಏನಿಲ್ಲ ಏನಿಲ್ಲ.. ಕಾಜೊಲ್‌ಗೆ ಬೇಕಿರಲಿಲ್ಲ" ನೆಟ್ಟಿಗರ ಖಡಕ್ ವಿಮರ್ಶೆ

ಕಳೆದ ಒಂದು ತಿಂಗಳಿಂದ ನೆಟ್‌ಫ್ಲಿಕ್ಸ್‌ನ ಈ ಸಿನಿಮಾ ಬಗ್ಗೆನೇ ಚರ್ಚೆಯಾಗುತ್ತಿತ್ತು. ಈ ಹಿಂದೆ ತೆರೆಕಂಡಿದ್ದ 'ಲಸ್ಟ್ ಸ್ಟೋರೀಸ್' ಸಿನಿಮಾ ಹಲವರ ಮೆಚ್ಚುಗೆ ಗಳಿಸಿತ್ತು. ಕೆಲವರಿಂದ ವಿರೋಧವನ್ನು ಎದುರಿಸಿತ್ತು. ಇದರ ಬೆನ್ನಲೇ ಮತ್ತೊಂದು ಸಿನಿಮಾವನ್ನು ಓಟಿಟಿ ವೀಕ್ಷಕರ ಮುಂದಿಟ್ಟಿದೆ. ಅದುವೇ 'ಲಸ್ಟ್ ಸ್ಟೋರೀಸ್ 2'.

ಜೂನ್ 29ರಿಂದ 'ಲಸ್ಟ್ ಸ್ಟೋರೀಸ್ 2' ಸಿನಿಮಾ ಸ್ಟ್ರೀಮಿಂಗ್ ಆಗುತ್ತಿದೆ. ಈಗಾಗಲೇ ತಮನ್ನಾ, ವಿಜಯ್ ವರ್ಮಾ, ಮೃಣಾಲ್ ಠಾಕೂರ್, ಕಾಜೊಲ್ ಹಾಗೂ ನೀನಾ ಗುಪ್ತಾ ನಟಿಸಿರುವ ಈ ಸಿನಿಮಾ ಬಗ್ಗೆ ಗಂಭೀರ ಚರ್ಚೆಯಾಗಿತ್ತು. ಬೆಡ್ ರೂಮ್ ಸೀನ್, ಹಸಿಬಿಸಿ ದೃಶ್ಯಗಳ ಬಗ್ಗೆ ಕಮೆಂಟ್ ಮಾಡಲಾಗಿತ್ತು.

Tamannaah Bhatia, Mrunal Thakur, Kajol Starrer Lust Stories 2 Twitter Review in Kannada

ಕೂತೂಹಲದಿಂದಲೇ 'ಲಸ್ಟ್ ಸ್ಟೋರೀಸ್ 2' ನೋಡಿದ ವೀಕ್ಷಕರು ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ಅದರಲ್ಲೂ ಕಾಜೊಲ್ ಬಗ್ಗೆ ಹೆಚ್ಚು ಕಮೆಂಟ್ ಬಂದಿದೆ. ಹಾಗಿದ್ರೆ, ನೆಟ್ಟಿಗರು ಈ ಸಿನಿಮಾ ಬಗ್ಗೆ ಏನಂದಿದ್ದಾರೆ? ಹೇಗೆಲ್ಲಾ ವಿಮರ್ಶೆ ಮಾಡಿದ್ದಾರೆ ಅನ್ನೋದನ್ನು ನೋಡೋಣ.

ಹಸಿಬಿಸಿ ದೃಶ್ಯಕ್ಕಿಂತ ಕಥೆಯೇ ಮೇಲು

"ಲಸ್ಟ್‌ ಸ್ಟೋರೀಸ್ 2 ವಿಮರ್ಶೆ: ಹಸಿಬಿಸಿ ದೃಶ್ಯಗಳಿಗಿಂತ ಸಿನಿಮಾ ಕಥೆ ಎಷ್ಟೋ ಚೆನ್ನಾಗಿದೆ. ಅದರಲ್ಲೂ ಸುಜೊಯ್ ಘೋಶ್ ಅವರ ಕಥೆ ಹಾಗೂ ನಿರ್ದೇಶನ ಅದ್ಭುತವಾಗಿದೆ." ಎಂದು 5ಕ್ಕೆ 4 ಸ್ಟಾರ್ ಕೊಟ್ಟಿದ್ದಾರೆ.


ಅಂತಹ ಅವಶ್ಯಕತೆ ಏನಿತ್ತು?

" ಕಾಜೋಲ್ ಮೇಡಂ ಅಂತಹ ಅವಶ್ಯಕತೆ ಏನಿತ್ತು. ಚಿಕ್ಕಂದಿನಿಂದಲೂ ನೀವೇ ನನ್ನ ಫೇವರಿಟ್ ಹಾಗೂ ಬ್ಯೂಟಿಫುಲ್ ನಟಿಯಾಗಿದ್ರಿ. ಆದರೆ, ಈಗ ಏನಿದು? ಇದು ನನ್ನ ಹೃದಯವನ್ನು ಚೂರು ಮಾಡಿದೆ. ಅಜಯ್ ದೇವಗನ್ ಇದೂವರೆಗೂ ಯಾವುದೇ ನಟಿಯರೊಂದಿಗೆ ಹೀಗೆಲ್ಲ ಸಿನಿಮಾದಲ್ಲಿ ನಡೆದುಕೊಂಡಿಲ್ಲ. ಅದೂ ಒಬ್ಬ ಮುದುಕನೊಂದಿಗೆ ಹೇಗೆ?" ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಮೃಧುವಾದ ನೀಲಿ ಚಿತ್ರ ಯಾಕೆ?

"ಕಾಜೊಲ್ ದಿಲ್ವಾಲೆ ದುಲ್ಹನಿಯಾ ಲೇ ಜಾಯೆಂಗೆ, ಕುಚ್‌ ಕುಚ್‌ ಹೋತಾ ಹೇ, ಕಭಿ ಖುಷಿ ಕಭಿ ಘಮ್, ಫನಾ, ಗುಪ್ತ್ ಅಂತ ಸಿನಿಮಾಗಳಲ್ಲಿ ನಟಿಸಿದ್ದಾರೆ. ಈಗ್ಯಾಕೆ ಇಂತಹ ಸಾಫ್ಟ್ ಪೋರ್ನ್ ಸಿನಿಮಾಗಳು. ಈ ಸಿನಿಮಾದಲ್ಲಿರುವ ಬೇರೆ ನಟರು ಬ್ರಿ ಗ್ರೇಡ್ ನಟರು. ಅವರಿಗೆ ಇಂತಹ ಪಾತ್ರಗಳಿಂದ ಏನೂ ಆಗಬೇಕಿಲ್ಲ. ಕಾಜೊಲ್ ಇಂತಹ ಪಾತ್ರಗಳಿಂದ ತಮ್ಮ ಇಮೇಜ್ ಅನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ" ಎಂದು ಮತ್ತೊಬ್ಬರು ಬೇಸರ ವ್ಯಕ್ತಪಡಿಸಿದ್ದಾರೆ.


ಸರಿಹೊಂದದ ಸೀಕ್ವೆಲ್

"ಲಸ್ಟ್ ಸ್ಟೋರೀಸ್ 2 ವಿಮರ್ಶೆ:ಸರಿಹೊಂದದ ಸೀಕ್ವೆಲ್ **, 1 ಆರ್. ಬಾಲ್ಕಿ: ಸೆಕ್ಸ್ ವಿಷಯಗಳನ್ನು ತುಂಬಾನೇ ಎಳೆಯುವುದಕ್ಕೆ ಯತ್ನಿಸಿದ್ದಾರೆ. 2. ಕೊಂಕಣ್ ಸೇನ್ ಶರ್ಮಾ: ಸ್ಟೋರಿಯನ್ನು ಚೆನ್ನಾಗಿ ತೆರೆಮೇಲೆ ತಂದಿದ್ದಾರೆ. 3. ಸುಜೊಯ್ ಘೋಶ್: ಕಥೆಯ ಮೇಲೆ ಭಯಾನಕ ಪ್ರಯೋಗ ಮಾಡಿದ್ದಾರೆ. 4. ಅಮಿತ್ ಶರ್ಮಾ: ಸರ್ಪ್ರೈಸಿಂಗ್ ಟ್ವಿಸ್ಟ್" ಎಂದು ತಮ್ಮ ಅಭಿಯಾತವನ್ನು ಹಂಚಿಕೊಂಡಿದ್ದಾರೆ.

More from Filmibeat

English summary
Tamannaah Bhatia, Mrunal Thakur, Kajol Starrer Lust Stories 2 Twitter Review in Kannada, know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X