Jana Nayagan Trailer X Review: 'ಜನ ನಾಯಗನ್' ಬಾಲಯ್ಯನ ಭಗವಂತ್ ಕೇಸರಿ ರಿಮೇಕಾ? ನೆಟ್ಟಿಗರು ಏನಂದ್ರು?
ದಳಪತಿ ವಿಜಯ್ ರಾಜಕೀಯಕ್ಕೆ ಅಧಿಕೃತವಾಗಿ ಎಂಟ್ರಿ ಕೊಟ್ಟಾಗಿದೆ. ಹೀಗಾಗಿ 'ಜನ ನಾಯಗನ್' ಅವರು ನಟಿಸುತ್ತಿರುವ ಕೊನೆಯ ಸಿನಿಮಾ ಆಗಲಿದೆ. ರಾಜಕೀಯದಲ್ಲಿ ಅವರಿಗೆ ಯಶಸ್ಸು ಹೇಗೆ ಸಿಗುತ್ತೆ ಅನ್ನೋದರ ಮೇಲೆ ಅವರ ಮುಂದಿನ ಸಿನಿಮಾ ಭವಿಷ್ಯ ನಿರ್ಧಾರವಾಗುತ್ತೆ. ಆದರೂ, ವಿಜಯ್ ತನ್ನ ರಾಜಕೀಯ ನಡೆಯಿಂದ ಹಿಂದೆ ಸರಿಯುವುದಿಲ್ಲ ಎಂದು ಕಟ್ಟಿಯಾಗಿ ನಿರ್ಧಾರ ಮಾಡಿಯೇ ಮುನ್ನುಗ್ಗಿದ್ದಾರೆ. ಹೀಗಾಗಿ 'ಜನ ನಾಯಗನ್' ಅವರ ಕೊನೆಯ ಸಿನಿಮಾ ಅಂದುಕೊಳ್ಳಬಹುದು.
ಈ ಕಾರಣಕ್ಕೆ 'ಜನ ನಾಯಗನ್' ಮೇಲೆ ಎಲ್ಲಾ ಚಿತ್ರರಂಗದ ಕಣ್ಣು ಇದೆ. ಈ ಸಿನಿಮಾ ವಿಜಯ್ ರಾಜಕೀಯ ಭವಿಷ್ಯಕ್ಕೆ ಯಾವ ಮಟ್ಟಕ್ಕೆ ಸಹಾಯ ಮಾಡುತ್ತೆ ಅನ್ನೋದನ್ನು ಎದುರು ನೋಡಲಾಗುತ್ತಿದೆ. ಕೆವಿಎನ್ ಪ್ರೊಡಕ್ಷನ್ಸ್ ನಿರ್ಮಾಣ ಮಾಡಿರುವ ಈ ಸಿನಿಮಾ ವಿಜಯ್ ರಾಜಕೀಯ ಎಂಟ್ರಿಗೆ ಮೆಟ್ಟಿಲಾಗುತ್ತಾ? ಇಲ್ಲವೇ ಏಟು ಕೊಡುತ್ತಾ? ಅನ್ನೋದು ಇನ್ನು ಕೆಲವೇ ದಿನಗಳಲ್ಲಿ ಗೊತ್ತಾಗುತ್ತೆ.

ಇನ್ನು 'ಜನ ನಾಯಗನ್' ಸಿನಿಮಾದ ಟ್ರೈಲರ್ ರಿಲೀಸ್ ಆಗುತ್ತಿದ್ದಂತೆ ಮಿಶ್ರ ಪ್ರತಿಕ್ರಿಯೆ ಬಂದಿದೆ. ಈ ಸಿನಿಮಾ ತೆಲುಗಿನ 'ಭಗವಂತ್ ಕೇಸರಿ'ಯಂತೆಯೇ ಕಾಣುತ್ತಿದೆ ಎಂದು ಟೀಕೆಗಳು ಕೇಳಿ ಬರುತ್ತಿದೆ. ಹಾಗಿದ್ರೆ, ವಿಜಯ್ ಕೊನೆಯ ಸಿನಿಮಾ ರಿಮೇಕ್ ಮಾಡಿದರೇ? ಇಲ್ಲ ಟ್ರೈಲರ್‌ನಲ್ಲಿ ಸಾಮ್ಯತೆ ಇದೆಯೇ? ಈ ಟ್ರೈಲರ್ ನೋಡಿ ನೆಟ್ಟಿಗರು ಏನಂತಿದ್ದಾರೆ? ಅನ್ನೋದನ್ನು ತಿಳಿಯುವುದಕ್ಕೆ ಮುಂದೆ ಓದಿ.
ಮೈ ಝುಂ ಎನಿಸುತ್ತಿದೆ ಟ್ರೈಲರ್
"ಜನ ನಾಯಗನ್ ಸಿನಿಮಾದ ಇಡೀ ಟ್ರೈಲರ್ ಮೈ ಝುಂ ಎನಿಸಿತು. ಜನವರಿ 9ರವರೆಗೂ ಕಾಯುವುದಕ್ಕೆ ಸಾಧ್ಯವಿಲ್ಲ. ಬೆಳ್ಳಿ ತೆರೆಯ ಮೇಲೆ ದಳಪತಿ ವಿಜಯ್ ಅನ್ನು ಜನ ನಾಯಗನ್ ಆಗಿ ನೋಡುವುದಕ್ಕೆ ಕಾಯುತ್ತಿದ್ದೇವೆ." ಅಭಿಮಾನಿಯೊಬ್ಬ ಟ್ರೈಲರ್ ಅನ್ನು ಹಾಡಿ ಹೊಗಳಿದ್ದಾನೆ.
"ಭಗವಂತ್ ಕೇಸರಿ ರಿಮೇಕ್ ಅಲ್ಲ"
"ಜನ ನಾಯಗನ್ ಟ್ರೈಲರ್ ನೋಡಿದ ಬಳಿಕ ಇದು ಭಗವಂತ್ ಕೇಸರಿ ಸಿನಿಮಾ ರಿಮೇಕ್ ಅಲ್ಲ ಅನ್ನೋದು ಗೊತ್ತಾಗುತ್ತೆ. ಬದಲಾಗಿ ಭಗವಂತ್ ಕೇಸರಿ ಸಿನಿಮಾದ ಎರಡು ಮೂರು ಸೀನ್‌ಗಳನ್ನು ಬಳಸಿಕೊಂಡಿದ್ದಾರೆ ಅಷ್ಟೇ." ಎಂದು ನೆಟ್ಟಿಗರೊಬ್ಬರು ಎಕ್ಸ್‌ನಲ್ಲಿ ಪೋಸ್ಟ್ ಮಾಡಿ ದಳಪತಿ ವಿಜಯ್‌ಗೆ ಬೆಂಬಲ ಸೂಚಿಸಿದ್ದಾರೆ.
"ಏನೋ ಮಿಸ್ ಆಗಿದೆ"
"ಜನ ನಾಯಗನ್ ಟ್ರೈಲರ್ ನೋಡಿದ ಬಳಿಕ ನನಗೆ ಏನೋ ಮಿಸ್ ಮಾಡಿಕೊಂಡಿದ್ದೇವೆ ಅಂತ ಅನಿಸುತ್ತಿದೆ. ಅದು ಎಕ್ಸ್‌ಪ್ರೆಷನ್ ಆಗಿರಬಹುದು. ಇದು ದಳಪತಿ ವಿಜಯ್‌ಗೆ ಚಿತ್ರರಂಗದಿಂದ ಬೀಳ್ಕೊಡುಗೆ ಕೊಡುವಂತಹ ಸಿನಿಮಾ ಖಂಡಿತಾ ಅಲ್ಲ." ಎಂದು ಇನ್ನೊಬ್ಬರ ನೆಟ್ಟಿಗ ಸಿನಿಮಾ ಟ್ರೈಲರ್ ಬಗ್ಗೆ ಅಸಮಧಾನವನ್ನು ಹೊರ ಹಾಕಿದ್ದಾರೆ. ಟ್ರೈಲರ್ ಚೆನ್ನಾಗಿಲ್ಲ ಅನ್ನೋದನ್ನು ಓಪನ್ ಆಗಿ ಹೇಳಿದ್ದಾರೆ.
ಬಾಬಿ ಡಿಯೋಲ್ ಹೈಲೈಟ್
ದಳಪತಿ ವಿಜಯ್ ನಟಿಸುತ್ತಿರುವ ಕೊನೆಯ ಸಿನಿಮಾ 'ಜನ ನಾಯಗನ್'ನಲ್ಲಿ ಬಾಲಿವುಡ್ ನಟ ಬಾಬಿ ಡಿಯೋಲ್ ಖಳ ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ನಟನ ಅಪಿಯರೆನ್ಸ್ ಬಗ್ಗೆ ಜನರು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಮಾಡುತ್ತಿದ್ದಾರೆ. "ಜನ ನಾಯಗನ್ ಸಿನಿಮಾದ ಟ್ರೈಲರ್‌ನಲ್ಲಿ ಬಾಬಿ ಡಿಯೋಲ್ ಇಡೀ ಸ್ಕ್ರೀನ್ ಅನ್ನು ಆವರಿಸಿಕೊಂಡಿದ್ದಾರೆ." ಎಂದು ನೆಟ್ಟಿಗರೊಬ್ಬರು ಟ್ವೀಟ್ ಮಾಡಿದ್ದಾರೆ.
"ಇದು ಸಿನಿಮಾಗಿಂತಲೂ ಹೆಚ್ಚು"
"ಈ ಕಥೆಯ ಅಭಿಮಾನಿಯಾಗಿರುವುದು ಬೇರೆ.. ಆದರೆ ಈ ಟ್ರೈಲರ್‌ನಲ್ಲಿ ನನ್ನನ್ನು ನೋಡುವುದೇ ಕೃತಜ್ಞತೆಯ ಸೂಚಿಸುವುದಕ್ಕಾಗಿ. ಅದನ್ನು ನಾನು ಸಂಪೂರ್ಣವಾಗಿ ನಿಮಗೆ ವಿವರಿಸುವುದಕ್ಕೆ ಸಾಧ್ಯವಿಲ್ಲ. ಇದು ಸಿನಿಮಾಗಿಂತಲೂ ಹೆಚ್ಚು. ಇದೊಂದು ಕನಸು. ನನಗೆ ಈ ಮಾಸ್ಟರ್‌ಫೀಸ್‌ನ ಭಾಗವಾಗಿರುವುದಕ್ಕೆ ನನಗೆ ಹೆಮ್ಮೆಯಾಗುತ್ತಿದೆ. ಜನ ನಾಯಗನ್ ಟ್ರೈಲರ್ ಅದ್ಬುತ" ಎಂದು ನೆಟ್ಟಿಗರೊಬ್ಬರು ಬರೆದುಕೊಂಡಿದ್ದಾರೆ.


Click it and Unblock the Notifications











