G.O.A.T Twitter Review: ದಳಪತಿ ವಿಜಯ್ 'ಗೋಟ್' ಫಸ್ಟ್ ಹಾಫ್ ಓಕೆ, ಕ್ಲೈಮ್ಯಾಕ್ಸ್ ಓಕೆ; ಸೆಕೆಂಡ್ ಹಾಫ್ ಕಥೆಯೇನು?
ತಮಿಳಿನ ಮೋಸ್ಟ್ ಎಕ್ಸ್‌ಪೆಕ್ಟೆಡ್ ಸಿನಿಮಾ 'ಗೋಟ್' (G.O.A.T) ವಿಶ್ವದಾದ್ಯಂತ ಅದ್ಧೂರಿಯಾಗಿ ರಿಲೀಸ್ ಆಗಿದೆ. ದಳಪತಿ ವಿಜಯ್ ಈ ಸಿನಿಮಾ ದ್ವಿಪಾತ್ರದಲ್ಲಿ ನಟಿಸುತ್ತಿದ್ದಾರೆ. ಹೀಗಾಗಿ ಅವರ ಕ್ರೇಜಿ ಫ್ಯಾನ್ಸ್ ಈ ಸಿನಿಮಾ ನೋಡುವುದಕ್ಕೆ ತುದಿಗಾಲಲ್ಲಿ ನಿಂತಿದೆ. ನಿರೀಕ್ಷೆಯಂತೆ ಅಭಿಮಾನಿಗಳಿಗಾಗಿ ಬೆಳ್ಳಂಬೆಳಗ್ಗೆನೇ ಫ್ಯಾನ್ಸ್ ಶೋ ಅನ್ನು ಕೂಡ ಇಡಲಾಗಿತ್ತು.
ತಮಿಳುನಾಡಿನಲ್ಲಿ ರಾತ್ರಿ ಎರಡು ಗಂಟೆಯಿಂದಲೇ ಫ್ಯಾನ್ಸ್ ಶೋ ಇಡಲಾಗಿತ್ತು. ಆ ಎಲ್ಲಾ ಶೋಗಳೂ ಹೌಸ್‌ಫುಲ್ ಪ್ರದರ್ಶನ ಕಂಡಿವೆ. ಇನ್ನು ಈ ದಿನದ ಅಡ್ವಾನ್ಸ್ ಬುಕಿಂಗ್ ಕೂಡ ಜೋರಾಗಿಯೇ ಆಗಿದೆ. ಈ ಕಾರಣಕ್ಕೆ ಮೊದಲ ದಿನವೇ ಭರ್ಜರಿ ಕಲೆಕ್ಷನ್ ಆಗಬಹುದೆಂದು ನಿರೀಕ್ಷೆ ಮಾಡಲಾಗಿದೆ. ಅದರಲ್ಲೂ ವೆಂಕಟ್ ಪ್ರಭು ನಿರ್ದೇಶಿಸಿರುವ ಸಿನಿಮಾ ಆಗಿರುವುದರಿಂದ 'ಗೋಟ್' (G.O.A.T)ಬಗ್ಗೆ ಅಗತ್ಯಕ್ಕಿಂತ ಹೆಚ್ಚು ನಿರೀಕ್ಷೆನೇ ಇತ್ತು.

ಇನ್ನೊಂದು ಕಡೆ ದಳಪತಿ ವಿಜಯ್ ರಾಜಕೀಯಕ್ಕೆ ಧುಮುಕಿದ್ದಾರೆ. ಈ ಕಾರಣಕ್ಕೆ 'ಗೋಟ್' (G.O.A.T) ಬಿಟ್ಟು ಇನ್ನೊಂದು ಸಿನಿಮಾದಲ್ಲಿ ನಟಿಸಬಹುದು ಎಂಬ ಮಾತು ಕೇಳಿ ಬರುತ್ತಿತ್ತು. ಕೆಲವು ದಿನಗಳಿಂದ 'ಗೋಟ್' (G.O.A.T) ಕೊನೆಯ ಸಿನಿಮಾ ಅಂತನೂ ಸುದ್ದಿಯಾಗಿದೆ. ಹಾಗಿದ್ದರೆ, ದಳಪತಿ ವಿಜಯ್ ಅಭಿಮಾನಿಗಳಿಗೆ ಈ ಸಿನಿಮಾ ಇಷ್ಟ ಆಯ್ತಾ? ಟ್ವಿಟರ್ ಹಾಗೂ ಎಕ್ಸ್ ಖಾತೆಯಲ್ಲಿ ವಿಜಯ್ ಫ್ಯಾನ್ಸ್ ರೆಸ್ಪಾನ್ಸ್ ಹೇಗಿದೆ?
ಫಸ್ಟ್ ಹಾಫ್ ಪೀಕ್
"ಗೋಟ್ ಸಿನಿಮಾ ಎಲ್ಲಾ ನಿರೀಕ್ಷೆಗಳನ್ನೂ ಈಡೇರಿಸಿದೆ. ಇದೊಂದು ಕಮರ್ಷಿಯಲ್ ಸಿನಿಮಾ ಆಗಿದ್ದು ಅದ್ಭುತವಾಗಿದೆ. ಫಸ್ಟ್ ಹಾಫ್ ಎಂಗೇಜಿಂಗ್ ಆಗಿದೆ. ಸೆಕೆಂಡ್ ಹಾಫ್ ಪೀಕ್‌ನಲ್ಲಿದೆ. ಕ್ಲೈಮ್ಯಾಕ್ಸ್ ಬ್ಯಾಂಗ್ ಆಗಿದೆ. ಕೊನೆಯಲ್ಲಿ ಅತಿಥಿ ಪಾತ್ರಗಳು ಕುಡ ಇಂಟ್ರೆಸ್ಟಿಂಗ್ ಆಗಿದೆ. ಒಟ್ಟಾರೆ ಸಿನಿಮಾ ಸೂಪರ್ ಆಗಿದ್ದು, ಈ ಸಿನಿಮಾವನ್ನು ದಳಪತಿ ವಿಜಯ್ ಶೋ ಎನ್ನಬಹುದು." ಎಂದು ಮತ್ತೊಬ್ಬ ಅಭಿಮಾನಿ ಪೋಸ್ಟ್ ಮಾಡಿದ್ದಾರೆ.
ದ್ವಿತಿಯಾರ್ಧ ಹೇಗಿದೆ?
ದಳಪತಿ ವಿಜಯ್ 'ಗೋಟ್' (G.O.A.T) ಸಿನಿಮಾಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸಿನಿಮಾದ ಮೊದಲಾರ್ಧ ಅಭಿಮಾನಿಗಳಿಗೆ ಹಬ್ಬ. ಆದರೆ, ವಿಜಯ್ ಸ್ಟಾರ್ ಪವರ್ ಜಡ ಹಿಡಿದ ಕಥೆಯನ್ನು ಉಳಿಸಲು ಸಾಧ್ಯವಿಲ್ಲ. ಸೆಕೆಂಡ್ ಹಾಫ್ ಅದ್ಭುತವಾಗಿ ಸಾಗಬೇಕಿದೆ" ಎಂದು ಇನ್ನೊಬ್ಬರು ನೆಟ್ಟಿಗರು ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ಗೋಟ್ ಹೈಲೈಟ್ ಏನು?
'ಗೋಟ್' (G.O.A.T) ಸಿನಿಮಾ ನೋಡಿದ ಕೆಲವು ನೆಟ್ಟಿಗರು ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಕೆಲವರು ಸಿನಿಮಾದ ನೆಗೆಟಿವ್ ಅಂಶಗಳನ್ನು ಹೈಲೈಟ್ ಮಾಡುತ್ತಿದ್ದಾರೆ. ಬೇರೆ ಸಿನಿಮಾಗಳ ಛಾಯೆ ಕಾಣಿಸುತ್ತಿದೆ ಎಂದು ಪಟ್ಟು ಮಾಡುತ್ತಿದ್ದಾರೆ. "ವಿಜಯಕಾಂತ್ ರೆಫರೆನ್ಸ್ ಇದೆ. ತ್ರಿಶಾ ಹಾಡೊಂದರಲ್ಲಿ ಡ್ಯಾನ್ಸ್ ಮಾಡಿದ್ದಾರೆ. ಕೆಲವು ಎಕೆ (ಅಜಿತ್ ಕುಮಾರ್) ರೆಫರೆನ್ಸ್ ಇದೆ. ಅತಿಥಿ ಪಾತ್ರದಲ್ಲಿ ಶಿವಕಾರ್ತಿಕೇಯನ್ ಕಾಣಿಸಿಕೊಂಡಿದ್ದಾರೆ." ಎಂದು ನೆಟ್ಟಿಗರೊಬ್ಬರು ಕಾಮೆಂಟ್ ಮಾಡಿದ್ದಾರೆ.
"ಮಾಮೂಲಿ ಸಂಭ್ರಮವೂ ಇಲ್ಲ"
ದಳಪತಿ ವಿಜಯ್ ಸಿನಿಮಾ ರಿಲೀಸ್ ಆಗುತ್ತಿದ್ದರೆ, ಅಭಿಮಾನಿಗಳು ಥಿಯೇಟರ್ ಮುಂದೆ ಮುಗಿಬೀಳುತ್ತಾರೆ. 'ಗೋಟ್' (G.O.A.T) ಸಿನಿಮಾ ತೆಲುಗಿನಲ್ಲೂ ರಿಲೀಸ್ ಆಗಿದ್ದು, ಸಿನಿಮಾ ನೋಡಿದ ಅಭಿಮಾನಿಗಳು ಕಾಮೆಂಟ್ ಮಾಡುವುದಕ್ಕೆ ಶುರು ಮಾಡಿದ್ದಾರೆ. "ಲಿಯೋ ವೇಳೆ ಸಿಕ್ಕ ಮಾಮೂಲಿ ಸಂಭ್ರಮ ಕೂಡ ಅಲ್ಲ. ತಮಿಳು ಸಿನಿಮಾಗೆ ಮೊದಲ ಬಾರಿಗೆ ಬೆಳಿಗ್ಗೆ 6:30 ಶೋಗೆ ಹೈಪ್ ಇತ್ತು. ಆದರೆ ಈಗ ಅದರ ಕಾಲು ಭಾಗವೂ ಇಲ್ಲ" ಎಂದು ತೆಲುಗು ಸಿನಿಪ್ರೇಮಿಯೊಬ್ಬರು ಗೋಟ್ ನೋಡಿ ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.


Click it and Unblock the Notifications











