Twitter Review: ವಿವಾದಾತ್ಮಕ ಸಿನಿಮಾ 'ದಿ ಕೇರಳ ಸ್ಟೋರಿ'ಗೆ ಹೇಗಿದೆ ರೆಸ್ಪಾನ್ಸ್? ನೆಟ್ಟಿಗರು ಹೇಳಿದ್ದೇನು?
ವಿವಾದಾತ್ಮಕ ಸಿನಿಮಾ 'ದಿ ಕೇರಳ ಸ್ಟೋರಿ' ಇಂದು (ಮೇ 5) ದೇಶ್ಯಾದಂತ ರಿಲೀಸ್ ಆಗಿದೆ. ಟೀಸರ್, ಟ್ರೈಲರ್ ಮೂಲಕವೇ ವಿವಾದ ಸೃಷ್ಟಿಸಿದ್ದ ಸಿನಿಮಾ ತೀವ್ರ ವಿರೋಧದ ನಡುವೆಯೂ ರಿಲೀಸ್ ಆಗಿದೆ. ಸಿನಿಮಾ ಬಿಡುಗಡೆಗೂ ಮುನ್ನ ಕೇರಳ ಸೇರಿದಂತೆ ಹಲವೆಡೆ ವಿರೋಧ ವ್ಯಕ್ತವಾಗಿತ್ತು.
ಸುದೀಪ್ತೋ ಸೇನ್ ನಿರ್ದೇಶಿಸಿರೋ ಈ ಸಿನಿಮಾದಲ್ಲಿ ಅದಾ ಶರ್ಮಾ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಆರಂಭದಲ್ಲಿ ಕೇರಳದಲ್ಲಿ ನಾಪತ್ತೆಯಾದ 32 ಸಾವಿರ ಯುವತಿಯರ ಕಥೆ ಎಂದು ಚಿತ್ರತಂಡ ಹೇಳಿತ್ತಾದರೂ, ಬಳಿಕ ಮೂವರು ಯುವತಿಯರ ಕಥೆಯೆಂದು ವಿವರಣೆ ನೀಡಿತ್ತು. ಹೀಗಾಗಿ ಈ ಸಿನಿಮಾದಲ್ಲಿ ಎಷ್ಟು ಸತ್ಯಾಂಶವಿದೆ ಅನ್ನೋದನ್ನು ಪ್ರಶ್ನೆ ಮಾಡಲಾಗಿತ್ತು.

ಕೇರಳ, ತಮಿಳುನಾಡು ಸೇರಿದಂತೆ ದಕ್ಷಿಣ ಭಾರತದಲ್ಲಿ ರಾಜ್ಯಗಳಲ್ಲಿ ಕೆಲವೇ ಚಿತ್ರಮಂದಿರಗಳಲ್ಲಿ ಸಿನಿಮಾ ರಿಲೀಸ್ ಆಗಿದೆ. ಈಗಾಗಲೇ 'ದಿ ಕೇರಳ ಸ್ಟೋರಿ' ನೋಡಿರೋ ಪ್ರೇಕ್ಷಕರು ಟ್ವಿಟರ್‌ನಲ್ಲಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಹಾಗಿದ್ರೆ, ಈ ವಿವಾದಾತ್ಮಕ ಸಿನಿಮಾ ಬಗ್ಗೆ ಹೇಗಿದೆ ರೆಸ್ಪಾನ್ಸ್? ತಿಳಿಯಲು ಮುಂದೆ ಓದಿ.
"ಬೆನ್ನು ಮೂಳೆಯನ್ನು ತಣ್ಣಗಾಗಿಸುತ್ತೆ"
'ದಿ ಕೇರಳ ಸ್ಟೋರಿ' ಒಂದು ಅಭಿಪ್ರಾಯಗಳನ್ನು ಪ್ರಚೋದಿಸುವ, ಬೆನ್ನುಮೂಳೆಯನ್ನು ತಣ್ಣಗಾಗಿಸುವ ಸಿನಿಮಾ. ಅದು ನೈಜತೆ ದೃಶ್ಯಗಳೊಂದಿಗೆ ನಿಮ್ಮನ್ನು ಬೆಚ್ಚಿಬೀಳಿಸುತ್ತದೆ. ಒಂದು ಧರ್ಮವು ಆಧ್ಯಾತ್ಮಿಕತೆಯನ್ನು ಉತ್ತೇಜಿಸದೆ, ಮತಾಂತರದ ಮೇಲೆ ಕೇಂದ್ರೀಕರಿಸಿದರೆ ಅದು ಧರ್ಮವಲ್ಲ. ಆದೊಂದು ಪೈಶಾಚಿಕ ಕೆಲಸ." ಎಂದು ನೆಟ್ಟಿಗರೊಬ್ಬರು ಟ್ವೀಟ್ ಮಾಡಿದ್ದಾರೆ.
"ಇದು ಕೇವಲ ಪ್ರಚಾರ ಅಲ್ಲ"
ಈಗಷ್ಟೇ 'ದಿ ಕೇರಳ ಸ್ಟೋರಿ' ನೋಡಿದೆ. ಈ ಸಿನಿಮಾ ಅಪ ಪ್ರಚಾರವಲ್ಲ. ಇದು ನೈಜ ಘಟನೆಯನ್ನು ಆಧರಿಸಿದ ಸಿನಿಮಾ. ಹಲವು ನ್ಯೂಸ್‌ಪೇಪರ್‌ಗಳು, ವರದಿಗಳು ಇದನ್ನು ಒಪ್ಪಿಕೊಂಡಿವೆ. ನೋಡಲೇ ಬೇಕಾದ ಸಿನಿಮಾ" ಎಂದು ಮತ್ತೊಬ್ಬರ ನೆಟ್ಟಿಗರು ಪ್ರತಿಕ್ರಿಯೆ ನೀಡಿದ್ದಾರೆ.
"ಅದಾ ಶರ್ಮಾ ಅದ್ಭುತ"
"ಅತ್ಯದ್ಭುತ.. ಅತ್ಯದ್ಭುತ.. ಅತ್ಯದ್ಭುತ.. ನೋಡಲೇ ಬೇಕಾದ ಸಿನಿಮಾ" ಎಂದು ಒಬ್ಬರು ಟ್ವೀಟ್ ಮಾಡಿದ್ದಾರೆ. ಮತ್ತೊಬ್ಬರು "ನಾನು ಎಲ್ಲರೂ ಈ ಸಿನಿಮಾವನ್ನು ನೋಡಿ ಎಂದು ಕೇಳಿಕೊಳ್ಳುತ್ತೇನೆ. ಇಂತಹ ಬಲೆಗೆ ಹುಡುಗಿಯರು ಬೀಳದಂತೆ ಪಾಠ ಕಲಿಸಿದೆ. ಬೇರಿನಿಂದಲೂ ಹಿಂದೂ ಧರ್ಮದ ಪಾಠ ಮಾಡುತ್ತೆ. ದಯವಿಟ್ಟು ಈ ಸಿನಿಮಾ ಚಿತ್ರಮಂದಿರದಲ್ಲಿ ನೋಡಿ. ಅದಾ ಶರ್ಮಾ ಅದ್ಭುತ." ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

"ಇದು ಅಪಪ್ರಚಾರದ ಭಾಗ"
"ಕೆಲವರಿಗೆ ಈ ಸಿನಿಮಾ ಇಷ್ಟ ಆಗಿಲ್ಲ. " ದಿ ಕೇರಳ ಸ್ಟೋರಿ ಸಿನಿಮಾ ಕರುಣಾಜನಕವಾಗಿದೆ. ಒಂದು ಸರಳ ಕಾರಣಕ್ಕಾಗಿ ಅಪಪ್ರಚಾರ ಮಾಡಲಾಗುತ್ತಿದೆ. ಚುನಾವಣೆಯ ಕಾರಣಕ್ಕಾಗಿ ಒಂದು ರಾಜ್ಯ ಹಾಗೂ ಸಮುದಾಯವನ್ನು ನಿಂದಿಸಲಾಗಿದೆ. ಇಂತಹ ಸಿನಿಮಾ ಮಾಡುವಾಗ ಕೊಂಚ ಸೂಕ್ಷ್ಮವಾಗಿ ಆಲೋಚಿಸಬೇಕು." ಎಂದು ಟ್ವೀಟ್ ಮಾಡಿದ್ದು, ಸಿನಿಮಾ 0.5 ಸ್ಟಾರ್ ರೇಟಿಂಗ್ ಕೊಟ್ಟಿದ್ದಾರೆ
ಮಾಡರ್ನ್ ಇಂಡಿಯಾದ ಮಾನವ ದುರಂತ
ಟ್ರೇಡ್ ಎಕ್ಸ್‌ಪರ್ಟ್ ಸಮಿತ್ ಕಡೆಲ್ ಸಿನಿಮಾಗೆ 4 ಸ್ಟಾರ್ ರೇಟಿಂಗ್ ಕೊಟ್ಟಿದ್ದಾರೆ. " ದಿ ಕೇರಳ ಸ್ಟೋರಿ ಆಧುನಿಕ ಭಾರತದ ಅತ್ಯಂತ ಕೆಟ್ಟ ದುರಂತವನ್ನು ಡೀಲ್ ಮಾಡುತ್ತಿದೆ. ಕೇರಳದ ಹಲವು ಹುಡುಗಿಯರ ಭಯಾನಕ, ಗೊಂದಲದ ಹಾಗೂ ಕರುಳು ಹಿಂಡುವ ಕಥೆ. ಇವರನ್ನು ಮೂಲಭೂತವಾದಿಗಳ ಬಲೆಗೆ ಬಿದ್ದು, ಬಲವಂತಾಗಿ ಭಯೋತ್ಪಾದನೆ ಅನ್ನೋ ವ್ಯವಸ್ಥೆಗೆ ತಳ್ಳಿದ್ದಾರೆ." ಎಂದು ಟ್ವೀಟ್ ಮಾಡಿದ್ದಾರೆ.


Click it and Unblock the Notifications











